Just In
Don't Miss!
- News
ಜಾತಿ ನಿಂದನೆ ಪ್ರಕರಣ: ಬಸವರಾಜ ಹೊರಟ್ಟಿ ವಿರುದ್ಧ ತನಿಖಾ ವರದಿ ಸಲ್ಲಿಕೆ
- Sports
ಐರ್ಲೆಂಡ್ನ ಹ್ಯಾರಿ ಟೆಕ್ಟರ್ಗೆ ಬ್ಯಾಟ್ ಗಿಫ್ಟ್ ನೀಡಿದ ಹಾರ್ದಿಕ್ ಪಾಂಡ್ಯ
- Movies
ಸಿಧು ಮೂಸೆವಾಲಾ ಹಾಡಿದ್ದ ಕೊನೆಯ ಹಾಡು ಬಿಡುಗಡೆ ಆದ ಮೂರೇ ದಿನಕ್ಕೆ ಡಿಲೀಟ್!
- Lifestyle
ನಿಮ್ಮಿಬ್ಬರ ಸಂಬಂಧ ಹೀಗಿದ್ದರೆ ಒಟ್ಟಿಗಿದ್ದು ಪಡುವ ನರಕಕ್ಕಿಂತ ಗುಡ್ಬೈ ಹೇಳುವುದೇ ಬೆಸ್ಟ್!
- Finance
ಜೂ.27ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Education
UAS Dharwad Recruitment 2022 : ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ಜು.2ಕ್ಕೆ ನೇರ ಸಂದರ್ಶನ
- Technology
‘ಫಾಸ್ಟ್ಯಾಗ್' ನಲ್ಲಿರುವ ಹಣವನ್ನು ಕದಿಯಬಹುದಾ? ವೈರಲ್ ವೀಡಿಯೊದ ಅಸಲಿಯತೆ ಏನು?
- Travel
ನಾಡ ಹಬ್ಬ ಮೈಸೂರು ದಸರಾ - ನವರಾತ್ರಿ ಉತ್ಸವ 2022
2022 ಆಡಿ ಎ8 ಅನಾವರಣ- ಹಳೆಯ ಸ್ಟೈಲಿಷ್ ಲುಕ್ ಜೊತೆಗೆ ಹೊಸ ಫೀಚರ್ಸ್ ಜೋಡಣೆ!
ಆಡಿ ಎ8 ಸೆಡಾನ್ ಹೊಸ ಫೇಸ್‌ಲಿಫ್ಟ್ ಆವೃತ್ತಿಯು ಹಳೆಯ ಸ್ಟೈಲಿಷ್ ಲುಕ್ ಜೊತೆಗೆ ಪರಿಣಾಮಕಾರಿಯಾದ 48-ವೋಲ್ಟ್ ಮೈಲ್ಡ್-ಹೈಬ್ರಿಡ್ ಪವರ್‌ಟ್ರೇನ್ ನೊಂದಿಗೆ ನಿರ್ಮಾಣವಾಗಿದ್ದು, ಹೊಸ ಕಾರು ಮಾದರಿಯಲ್ಲಿ ಕಂಪನಿಯು ಮೂರು ಎಂಜಿನ್ ಆಯ್ಕೆಯನ್ನು ನೀಡಿದೆ.

ಹೊಸ ಆಡಿ ಎ8 ನ ಹೊಸ ಫೇಸ್‌ಲಿಫ್ಟ್ ಆವೃತ್ತಿಯು ಕಂಪನಿಯ ಮೊದಲ ಸೆಡಾನ್ ಮಾದರಿಯಾಗಿ 3.0-ಲೀಟರ್ ಟರ್ಬೋಚಾರ್ಜ್ ವಿ6 ಟಿಡಿಐ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಇದರ ದಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಮತ್ತಷ್ಟು ಸುಧಾರಿಸಲು 48-ವೋಲ್ಟ್ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲದೇ 286 ಬಿಎಚ್‌ಪಿ ಗರಿಷ್ಠ ಶಕ್ತಿ ಮತ್ತು 600 ಎನ್‌ಎಮ್ ಗರಿಷ್ಠ ಟಾರ್ಕ್ ಅನ್ನು ಉತ್ಪದಿಸಬಲ್ಲದು.

ಮತ್ತೊಂದು ಎಂಜಿನ್ ಪೆಟ್ರೋಲ್ ಎಂಜಿನ್ ಮಾದರಿಯಾಗಿದ್ದು, ಇದು ಪ್ಲಗ್-ಇನ್ ಹೈಬ್ರಿಡ್ ಯುನಿಟ್ ಆಗಿದೆ. ಇದು 340ಬಿಎಚ್‌ಪಿ ಪ್ರೇರಿತ 3.0-ಲೀಟರ್ ಟಿಎಫ್ಎಸ್ಐ ಟರ್ಬೋಚಾರ್ಜ್ ವಿ6 ಎಂಜಿನ್ ಜೊತೆಗೆ 500ಎನ್ಎಂ ಟಾರ್ಕ್ ಅನ್ನು ಒಳಗೊಂಡಿದೆ.

ಸಂಯೋಜಿತವಾಗಿ ಹೊಸ ಆಡಿ A8 ನ ಫೇಸ್‌ಲಿಫ್ಟ್ ಆವೃತ್ತಿಯಲ್ಲಿರುವ ಪ್ಲಗ್-ಇನ್ ಹೈಬ್ರಿಡ್ ಪವರ್‌ಟ್ರೇನ್ ಮಾದರಿಯು 443-ಬಿಎಚ್‌ಪಿ ಮತ್ತು 700ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸಬಲ್ಲದು. ಈ ಮೂಲಕ ಹೊಸ ಎಂಜಿನ್ ಮಾದರಿಯು 135 ಕಿ.ಮೀ ವೇಗದಲ್ಲೂ 61 ಕಿ.ಮೀ ವರೆಗೆ ಯಾವುದೇ ಸದ್ದಿಲ್ಲದೇ ಚಲಿಸಬಲ್ಲದು.

ಇದರ ಅದ್ಬುತ ಪರ್ಫಾಮೆನ್ಸ್‌ಗಾಗಿ 14.4kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಮತ್ತು 136 ಬಿಎಚ್‌ಪಿ ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್, (PSM) ವಿದ್ಯುತ್ ಮೋಟಾರ್ ಅನ್ನು ಅಳವಡಿಸಲಾಗಿದ್ದು, ಮೂರನೇ ಮಾದರಿಯು ಮತ್ತಷ್ಟು ಪ್ರಬಲ ಮಾದರಿಯಾಗಿದೆ.

ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ನೀಡಲಾದ ಕೊನೆಯ ಎಂಜಿನ್ ಪ್ರಬಲವಾದ 4.0-ಲೀಟರ್ ವಿ8 ಎಂಜಿನ್ ಆಗಿದೆ. ಇದು ಸೂಪರ್ ಕಾರು ಮಾದರಿಯೆಂತೆ 571 ಬಿಎಚ್‌ಪಿ ಗರಿಷ್ಠ ಶಕ್ತಿ ಮತ್ತು ಪಿಕ್ಅಪ್ ಟ್ರಕ್ ಮಾದರಿಗಳಂತೆ 800ಎನ್‌ಎಂ ಪಿಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಈ ಕಾರ್ಯಕ್ಷಮತೆ ಸುಧಾರಣೆಗಳ ಹೊರತಾಗಿ ಹೊಸ ಆಡಿ ಎ8ನ ಅತ್ಯಾಧುನಿಕ ಸ್ಪೇಸ್-ಫ್ರೇಮ್ ನಿರ್ಮಾಣಕ್ಕಾಗಿ ಶೇ. 58ರಷ್ಟು ಅಲ್ಯೂಮಿನಿಯಂ ಅನ್ನು ಬಳಸಲಾಗಿದೆ. ಈ ಮೂಲಕ ಇಂಜಿನಿಯರ್‌ಗಳು ಆಡಿ ಎ8ನ ಹಿಂದಿನ ಆವೃತ್ತಿಗಿಂತಲೂ ಹಗುರವಾದ ಹಾಗೂ ಅಧಿಕ ಪರ್ಫಾಮೆನ್ಸ್ ನೀಡುವಂತೆ ತಯಾರಿಸಿದ್ದಾರೆ.

ಇದರ ಡಿಸೈನ್ ಬಗ್ಗೆ ಹೇಳುವುದಾದರೆ ಸ್ಟೈಲಿಶ್ ಹಾಗೂ ಹೆಚ್ಚು ಫ್ಯೂಚರಿಸ್ಟಿಕ್ ಆಗಿ ಕಾಣುತ್ತದೆ, ಅಂದರೆ ಮೂರು ಆಯಾಮದ ಕ್ರೋಮ್ ಅಂಶಗಳೊಂದಿಗೆ ಮರುವಿನ್ಯಾಸಗೊಳಿಸಲಾದ ಲಾರ್ಜ್ ಸಿಂಗಲ್-ಪೀಸ್ ಫ್ರಂಟ್ ಗ್ರಿಲ್, ಕಡಿಮೆ ರೂಫ್‌ಲೈನ್, ಮರುವಿನ್ಯಾಸಗೊಳಿಸಲಾದ ಏರ್ ಇನ್‌ಟೇಕ್‌ಗಳು ಮತ್ತು ಅಗಲವಾದ ಚಕ್ರ ಕಮಾನುಗಳನ್ನು ಒಳಗೊಂಡು ಆಕರ್ಷಕವಾಗಿ ಕಾಣುತ್ತದೆ.

ಹೊರಭಾಗದ ಈ ಬದಲಾವಣೆಗಳನ್ನು ಹೊರತುಪಡಿಸಿದರೆ ಡಿಜಿಟಲ್ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಇವು 1.3 ಮಿಲಿಯನ್ ಮೈಕ್ರೋಮಿರರ್‌ಗಳನ್ನು ಒಳಗೊಂಡ ಚಿಪ್‌ಗಳ ಮೂಲಕ ಪ್ರತಿ ಸೆಕೆಂಡಿಗೆ ಐದು ಸಾವಿರ ಬಾರಿ ದೃಷ್ಟಿಕೋನವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ.

ಜರ್ಮನ್ ವಾಹನ ತಯಾರಕ ಕಂಪನಿಗೆ ಇದು ಪ್ರಮುಖ ಸೆಡಾನ್ ಆಗಿರುವುದರಿಂದ 2022ರ ಆಡಿ ಎ8 ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಟೆಕ್ ಸೌಲಭ್ಯ ಹೊಂದಿರುವ ಕಾರುಗಳಲ್ಲಿ ಒಂದಾಗಿದ್ದು, 40 ಡ್ರೈವರ್ ಅಸಿಸ್ಟಂಟ್ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಮುಖ್ಯವಾಗಿ ಮೈ ಆಡಿ (MyAudi) ಅಪ್ಲಿಕೇಶನ್ ಮೂಲಕ ರಿಮೋಟ್ ಕಂಟ್ರೋಲ್‌ನಿಂದ ಪಾರ್ಕಿಂಗ್ ಪೈಲಟ್ ಕಾರ್ಯದಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಒಳಭಾಗದ ಡಿಸೈನ್ ನೋಡುವುದಾದರೆ ಎಲ್ಇಡಿ ಆಂಬಿಯೆಂಟ್ ಲೈಟಿಂಗ್, ಮಸಾಜ್ ಸೀಟ್‌ಗಳು, ಬ್ಯಾಕ್ ಸೀಟ್ ಪ್ರಯಾಣಿಕರಿಗೆ ಎರಡು 10.1-ಇಂಚಿನ ಸ್ಕ್ರೀನ್‌ಗಳು ಹಾಗೂ ಹಿಂಭಾಗದ ವಿವಿಧ ಕಾರ್ಯಗಳನ್ನು ಹೊಂದಿಸಲು 5.7-ಇಂಚಿನ ಒಎಲ್ಇಡಿ ಸ್ಕ್ರೀನ್ ನೀಡಲಾಗಿದೆ.

ಇವುಗಳ ಜೊತೆಗೆ ಸೂಪರ್-ಸ್ಮೂತ್ ರೈಡ್ ಹಾಗೂ ಉತ್ತಮ ಸಸ್ಪೆನ್ಶನ್‌ಗಾಗಿ 360-ಡಿಗ್ರಿ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಇದು ಮುಂಬರುವ ಹಂಪ್ಸ್ ಮತ್ತು ಹಳ್ಳಗಳಿಂದ ಉಂಟಾಗುವ ಅಪಾಯವನ್ನು ಗುರುತಿಸಿ ಕಾರನ್ನು 8 ಸೆ.ಮೀ ವರೆಗೆ ಲಿಫ್ಟ್ ಮಾಡಿ ಅಪಾಯ ತಪ್ಪಿಸುತ್ತದೆ.

ಒಟ್ಟಾರೆಯಾಗಿ ಹೊಸ ಆಡಿ ಎ8 ಬಗ್ಗೆ ಹೇಳುವುದಾದರೆ ತನ್ನ ಹಳೆಯ ಸ್ಟೈಲಿಷ್ ಲುಕ್ ಜೊತೆಗೆ ಹೊಸ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಯುವ ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿದೆ ಎನ್ನಬಹುದು.