6 ದಿನಗಳಲ್ಲಿ 2,203 ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ ಬಿವೈಡಿ ಇ6 ಎಲೆಕ್ಟ್ರಿಕ್ ಎಂಪಿವಿ

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಿರುವ ಬಿವೈಡಿ ಕಂಪನಿಯು ಹೊಸ ಇವಿ6 ಎಂಪಿವಿ ಮೂಲಕ ಭಾರತದಲ್ಲೂ ಹೊಸ ದಾಖಲೆಗೆ ಕಾರಣವಾಗಿದ್ದು, ಇವಿ6 ಕಾರು ಮಾದರಿಯು 6 ದಿನಗಳಲ್ಲಿ ಒಟ್ಟು 2,203 ಕಿ.ಮೀ ದೂರ ಕ್ರಮಿಸಿದೆ.

6 ದಿನಗಳಲ್ಲಿ 2,203 ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ ಬಿವೈಡಿ ಇ6 ಎಲೆಕ್ಟ್ರಿಕ್ ಎಂಪಿವಿ

ಬಿವೈಡಿ ಹೊಸ ಕಾರು ಇ6 ಎಲೆಕ್ಟ್ರಿಕ್ ಎಂಪಿವಿ ಕಾರು ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಅತ್ಯಧಿಕ ಮೈಲೇಜ್ ರೇಂಜ್ ಫೀಚರ್ಸ್ ಹೊಂದಿದ್ದು, ರಾಷ್ಟ್ರೀಯ ದಾಖಲೆಗಾಗಿ ಕಂಪನಿಯು ಇತ್ತೀಚೆಗೆ ಹೊಸ ಕಾರು ಮಾದರಿಯ ಮೂಲಕ ದೆಹಲಿಯಿಂದ ಮುಂಬೈಗೆ ಪ್ರಯಾಣ ಕೈಗೊಂಡಿತ್ತು. ರಾಷ್ಟ್ರೀಯ ಉದ್ಯಾನವನಗಳ ಸುತ್ತಲಿನ ಪರಿಸರ-ಸೂಕ್ಷ್ಮ ವಲಯಗಳ ಮೂಲಕ ಹಾದುಹೋಗುವ ಮೂಲಕ ನಾಲ್ಕು ರಾಜ್ಯಗಳನ್ನು ದಾಟಿ ಗುರಿತಲುಪಿದ ಹೊಸ ಕಾರು ಅತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಮಟ್ಟದ ದೂರ ಕ್ರಮಿಸುವಲ್ಲಿ ಯಶಸ್ವಿಯಾಗಿದೆ.

6 ದಿನಗಳಲ್ಲಿ 2,203 ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ ಬಿವೈಡಿ ಇ6 ಎಲೆಕ್ಟ್ರಿಕ್ ಎಂಪಿವಿ

ಸಾಮಾನ್ಯ ಕಾರುಗಳ ಮೂಲಕ 2203 ಪ್ರಯಾಣವನ್ನು ಅತಿ ಕಡಿಮೆ ಅವಧಿಯಲ್ಲಿ ಮಾಡಬಹುದಾದರೂ ಎಲೆಕ್ಟ್ರಿಕ್ ಕಾರು ಮಾದರಿಯ ಮೂಲಕ ಈ ದೂರುವನ್ನು ಕ್ರಮಿಸುವುದು ಸುಲಭವಲ್ಲ.

6 ದಿನಗಳಲ್ಲಿ 2,203 ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ ಬಿವೈಡಿ ಇ6 ಎಲೆಕ್ಟ್ರಿಕ್ ಎಂಪಿವಿ

ಪ್ರಯಾಣದೊಂದಿಗೆ ಎಲೆಕ್ಟ್ರಿಕ್ ಕಾರು ಮಾದರಿಗೆ ಸೂಕ್ತವಾದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುವುದು ಅತ್ಯಅವಶ್ಯಕವಾಗಿದ್ದು, ಪ್ರತಿ ಚಾರ್ಜ್‌ನಲ್ಲೂ ಗರಿಷ್ಠ ಪ್ರಮಾಣದ ದೂರ ಕ್ರಮಿಸುವ ಮೂಲಕ 9 ಪ್ರಮುಖ ನಗರಗಳನ್ನು ದಾಟಿ ರಾಷ್ಟ್ರೀಯ ರಾಜಧಾನಿಯನ್ನು ತಲುಪಿತು.

6 ದಿನಗಳಲ್ಲಿ 2,203 ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ ಬಿವೈಡಿ ಇ6 ಎಲೆಕ್ಟ್ರಿಕ್ ಎಂಪಿವಿ

ಕಡಿಮೆ ಅವಧಿಯಲ್ಲಿ ಹೆಚ್ಚು ಕಿ.ಮೀ ಕ್ರಮಿಸಿದ ಬಿವೈಡಿ ಇ6 ಮಾದರಿಯು ಸದ್ಯ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮೆಚ್ಚುಗೆ ಕಾರಣವಾಗಿದ್ದು, ಇವಿ ಕಾರುಗಳ ಮಾರಾಟದಲ್ಲಿ ಸದ್ಯ ಇ6 ಮಾದರಿಯು ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ.

6 ದಿನಗಳಲ್ಲಿ 2,203 ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ ಬಿವೈಡಿ ಇ6 ಎಲೆಕ್ಟ್ರಿಕ್ ಎಂಪಿವಿ

ಹೊಸ ಇ6 ಕಾರು ಮಾದರಿಗಳೊಂದಿಗೆ ಕಂಪನಿಯು ಇದುವರೆಗೆ ವಿಶ್ವಾದ್ಯಂತ ಸುಮಾರು 4.7 ಕೋಟಿ ಕಿಲೋಮೀಟರ್‌ಗಿಂತಲೂ ಹೆಚ್ಚು ಕ್ರಮಿಸಿದ್ದು, ಇ6 ಕಾರುಗಳ ಒಟ್ಟು ಪ್ರಯಾಣದ ಸಮಯದಲ್ಲಿ ಸರಿಸುಮಾರು 4.13 ಲಕ್ಷ ಗ್ರಾಂಗಳಷ್ಟು ಇಂಗಾಲದ ಹೊರಸೂಸುವಿಕೆಯನ್ನು ತಡೆದಿರುವಾಗಿ ಬಿವೈಡಿ ಕಂಪನಿಯು ಹೇಳಿಕೊಂಡಿದೆ.

6 ದಿನಗಳಲ್ಲಿ 2,203 ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ ಬಿವೈಡಿ ಇ6 ಎಲೆಕ್ಟ್ರಿಕ್ ಎಂಪಿವಿ

ಬಿವೈಡಿ ಇ6 ಕಾರಿನ ಕುರಿತು ಮಾತನಾಡುವುದಾದರೆ ಹೊಸ ಎಲೆಕ್ಟ್ರಿಕ್ ಎಂಯುವಿಯು ಭಾರತದಲ್ಲಿ ವಾಹನ ತಯಾರಕರ ಬ್ಲೇಡ್ ಬ್ಯಾಟರಿ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಮೊದಲ ಪ್ರೀಮಿಯಂ ಇವಿ ಕಾರು ಮಾದರಿಯಾಗಿದ್ದು, ಈ ತಂತ್ರಜ್ಞಾನವು ಜಾಗತಿಕವಾಗಿ ಗುರುತಿಸಲ್ಪಟ್ಟಿದೆ ಮತ್ತು ಅದರ ಸುರಕ್ಷತೆ, ಶ್ರೇಣಿ ಮತ್ತು ಚಾರ್ಜಿಂಗ್ ಮಿತಿಗಳಿಗಾಗಿ ಹೆಚ್ಚು ಮೆಚ್ಚುಗೆ ಪಡೆದಿದೆ.

6 ದಿನಗಳಲ್ಲಿ 2,203 ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ ಬಿವೈಡಿ ಇ6 ಎಲೆಕ್ಟ್ರಿಕ್ ಎಂಪಿವಿ

ಬ್ಲೇಡ್ ಬ್ಯಾಟರಿ ಪ್ಯಾಕ್‌ನ ದೀರ್ಘಾಯುಷ್ಯದ ರಹಸ್ಯವೆಂದರೆ ಲಿಥಿಯಂ ಐರನ್ ಫಾಸ್ಫೇಟ್ ತಂತ್ರಜ್ಞಾನದ ಬಳಕೆಯು ಗಮನಸೆಳೆದಿದ್ದ, ಇದು ಪರಿಮಾಣದ ಶಕ್ತಿಯ ಸಾಂದ್ರತೆಯನ್ನು ಶೇಕಡಾ 50 ರಷ್ಟು ಸುಧಾರಿಸುತ್ತದೆ. ಹೀಗಾಗಿ ಹೊಸ ಕಾರು ದೀರ್ಘಾವಧಿಯ ಪ್ರಯಾಣದಲ್ಲೂ ಯಾವುದೇ ಬ್ಯಾಟರಿ ಸಮಸ್ಯೆಗಳನ್ನು ಎದುರಿಸಿಲ್ಲ ಎನ್ನಬಹುದು.

6 ದಿನಗಳಲ್ಲಿ 2,203 ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ ಬಿವೈಡಿ ಇ6 ಎಲೆಕ್ಟ್ರಿಕ್ ಎಂಪಿವಿ

ಸದ್ಯ ಭಾರತದಲ್ಲಿ ಬಿವೈಡಿ ಕಂಪನಿಯು ಹೊಸ ಇ6 ಎಲೆಕ್ಟ್ರಿಕ್ ಎಂಪಿವಿ ಕಾರು ಮಾದರಿಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 29.15 ಲಕ್ಷಕ್ಕೆ ಮಾರಾಟಗೊಳಿಸುತ್ತಿದ್ದು, ಹೊಸ ಎಲೆಕ್ಟ್ರಿಕ್ ಕಾರನ್ನು ಕಂಪನಿಯು ಸದ್ಯ ಬಿ2ಬಿ ಉದ್ದೇಶಗಳಿಗೆ ಮಾತ್ರ ಮಾರಾಟ ಮಾಡುತ್ತಿದೆ.

6 ದಿನಗಳಲ್ಲಿ 2,203 ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ ಬಿವೈಡಿ ಇ6 ಎಲೆಕ್ಟ್ರಿಕ್ ಎಂಪಿವಿ

ಬಿ2ಬಿ(ಬ್ಯುಸಿನೆಸ್ ಟು ಬ್ಯುಸಿನೆಸ್) ಉದ್ದೇಶಗಳಿಗಾಗಿ ಮಾತ್ರವೇ ಪರಿಚಯಿಸಲಾಗಿರುವ ಹೊಸ ಇ6 ಕಾರನ್ನು ಫ್ಲೀಟ್ ಆಪರೇಟರ್‌ಗಳು, ಹೋಟೆಲ್ ಉದ್ಯಮಗಳಿಗೆ ಮತ್ತು ಇತರೆ ಕಾರ್ಪೊರೇಟ್ ಸಂಸ್ಥೆಗಳು ಮಾತ್ರ ಖರೀದಿಸಬಹುದಾಗಿದ್ದು, ಮುಂಬರುವ ಕೆಲ ತಿಂಗಳ ನಂತರ ಹೊಸ ಕಾರನ್ನು ವ್ಯಯಕ್ತಿಕ ಕಾರು ಬಳಕೆದಾರರಿಗೂ ಕೂಡಾ ಖರೀದಿಸುವ ಅವಕಾಶ ನೀಡುವುದಾಗಿ ಕಂಪನಿಯು ಮಾಹಿತಿ ನೀಡಿದೆ.

6 ದಿನಗಳಲ್ಲಿ 2,203 ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ ಬಿವೈಡಿ ಇ6 ಎಲೆಕ್ಟ್ರಿಕ್ ಎಂಪಿವಿ

ಬಿವೈಡಿ ಕಂಪನಿಯು ನಮ್ಮ ಬೆಂಗಳೂರಿನಲ್ಲಿ ಪಿಪಿಎಸ್ ಮೋಟಾರ್ಸ್ ಗ್ರೂಪ್ಸ್ ಜೊತೆಗೂಡಿ ಹೊಸ ಕಾರು ಮಾರಾಟ ಆರಂಭಿಸಿದ್ದು, ಚೆನ್ನೈನಲ್ಲಿ ಕೆಯುಎನ್ ಆಟೋ ಗ್ರೂಪ್, ಹೈದ್ರಾಬಾದ್‌ನಲ್ಲಿ ಮ್ಯಾಡಿ ಗ್ರೂಪ್, ಅಹಮದಾಬಾದ್‌ನಲ್ಲಿ ಕಾರ್ಗೊ ಮೋಟಾರ್ಸ್, ಕೊಚ್ಚಿಯಲ್ಲಿ ಇವಿಎಂ ಆಟೋಕಾರ್ಫ್ಟ್, ದೆಹಲಿಯಲ್ಲಿ ಲ್ಯಾಂಡ್‌ಮಾರ್ಕ್ ಆಟೋಮೊಬೈಲ್ಸ್ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿದೆ.

6 ದಿನಗಳಲ್ಲಿ 2,203 ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ ಬಿವೈಡಿ ಇ6 ಎಲೆಕ್ಟ್ರಿಕ್ ಎಂಪಿವಿ

ಮಲ್ಟಿ ಪರ್ಪಸ್ ವೆಹಿಕಲ್(ಎಂಪಿವಿ) ಮಾದರಿಯಾಗಿರುವ ಇ6 ಇವಿ ಕಾರು 6 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, 71.6kWh 'ಬ್ಲೇಡ್' ಲಿಥಿಯಂ ಫೆರೋ ಫಾಸ್ಫೇಟ್ (LiFePO4) ಬ್ಯಾಟರಿ ಪ್ಯಾಕ್‌ ಜೋಡಣೆ ಹೊಂದಿದೆ.

6 ದಿನಗಳಲ್ಲಿ 2,203 ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ ಬಿವೈಡಿ ಇ6 ಎಲೆಕ್ಟ್ರಿಕ್ ಎಂಪಿವಿ

ಹೊಸ ಕಾರಿನಲ್ಲಿ ಬ್ಲೇಡ್ ಲಿಥಿಯಂ ಫೆರೋ ಫಾಸ್ಫೇಟ್ ಬ್ಯಾಟರಿ ಪ್ಯಾಕ್‌ AC ಮತ್ತು DC ಚಾರ್ಜಿಂಗ್ ಮಾನದಂಡಗಳನ್ನು ಬೆಂಬಲಿಸಲಿದ್ದು, WLTP ಮಾನದಂಡಗಳ ಪ್ರಕಾರ ಹೊಸ ಕಾರು ಪ್ರತಿ ಚಾರ್ಜ್‌ಗೆ ಕನಿಷ್ಠ 415 ಕಿ.ಮೀ ನಿಂದ ಗರಿಷ್ಠ 520 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ. ಹೊಸ ಕಾರಿನ ಮೈಲೇಜ್ ಪ್ರಮಾಣವು ಕಾರಿನಲ್ಲಿರುವ ವಿವಿಧ ಡ್ರೈವಿಂಗ್ ಮೋಡ್ ಆಧರಿಸಿ ನಿರ್ಧಾರವಾಗಲಿದ್ದು, ಹೊಸ ಕಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಅತ್ಯುತ್ತಮ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

6 ದಿನಗಳಲ್ಲಿ 2,203 ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ ಬಿವೈಡಿ ಇ6 ಎಲೆಕ್ಟ್ರಿಕ್ ಎಂಪಿವಿ

ಹೊಸ ಕಾರಿನಲ್ಲಿರುವ ಎಸಿ ಚಾರ್ಜರ್ ಮೂಲಕ ಚಾರ್ಜ್ ಮಾಡಿದಾಗ ಪೂರ್ತಿಯಾಗಿ ಚಾರ್ಜ್ ಆಗಲು ಗರಿಷ್ಠ 6 ಗಂಟೆಗಳ ಕಾಲ ಸಮಯ ತೆಗೆದುಕೊಳ್ಳಲಿದ್ದರೆ ಡಿಸಿ ಚಾರ್ಜರ್ ಮೂಲಕ ಚಾರ್ಜ್ ಮಾಡಿದರೆ ಕೇವಲ 35 ನಿಮಿಷಗಳಲ್ಲಿ ಶೇ.80ರಷ್ಟು ಚಾರ್ಜ್ ಆಗಲಿದೆ.

ಇ6 ಕಾರಿನಲ್ಲಿರುವ ಕೋಬಾಲ್ಟ್-ಮುಕ್ತ LiFePO4 ಬ್ಯಾಟರಿ ಪ್ಯಾಕ್ ಹೆಚ್ಚು ಸುರಕ್ಷಿತವಾಗಿದ್ದು, ಸ್ಫೋಟ ಮುಕ್ತವಾಗಿರುವ ಈ ಬ್ಯಾಟರಿ ಹೆಚ್ಚು ವಿಶ್ವಾರ್ಹತೆ ಮತ್ತು ಆರ್ಥಿಕ ಕಾರ್ಯಸಾಧ್ಯತೆ ಮೇಲೆ ಅಭಿವೃದ್ದಿಗೊಂಡಿದೆ. ಅತ್ಯುತ್ತಮ-ಇನ್-ಕ್ಲಾಸ್ ವೈಶಿಷ್ಟ್ಯಗಳೊಂದಿಗೆ ಉತ್ತಮವಾದ ಚಾಲನಾ ಅನುಭವವನ್ನು ಒದಗಿಸುವ ಹೊಸ ಕಾರು 4,695 ಎಂಎಂ ಉದ್ದ, 1,810 ಎಂಎಂ ಅಗಲ ಮತ್ತು 1,670 ಎಂಎಂ ಎತ್ತರ ಹೊಂದಿದ್ದು, 570 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಪಡೆದುಕೊಂಡಿದೆ.

Most Read Articles

Kannada
English summary
Byd e6 covered 2203 km distance on battery power enters india book of records
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X