ಹೊಸ ವರ್ಷಕ್ಕೆ ಬಿಡುಗಡೆ, ವಿತರಣೆಯಾಗಲಿರುವ ಎಲೆಕ್ಟ್ರಿಕ್ ಕಾರುಗಳು: ಮಹೀಂದ್ರಾದಿಂದ ಟಾಟಾವರೆಗೆ..

ಹೊಸ ವರ್ಷಕ್ಕೆ ಅನೇಕ ವಾಹನ ತಯಾರಿಕ ಕಂಪನಿಗಳು, ತಮ್ಮ ಹ್ಯಾಚ್‌ಬ್ಯಾಕ್, ಎಸ್‌ಯುವಿಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಬೇರೆ ಕಂಪನಿ ವಾಹನಗಳಿಗೆ ಪೈಪೋಟಿ ನೀಡಲು ವಿವಿಧ ವೈಶಿಷ್ಟ್ಯ, ಆಕರ್ಷಕ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಜನವರಿ 2023ರಲ್ಲಿ ಯಾವ ಕಾರುಗಳು ಬಿಡುಗಡೆ, ವಿತರಣೆಯಾಗಲಿವೆ ಇಲ್ಲಿದೆ ಮಾಹಿತಿ.

ಮಹೀಂದ್ರಾ XUV400 (EV):
ಭಾರತದಲ್ಲಿ ಮಹೀಂದ್ರಾ ಕೆಲವು ತಿಂಗಳ ಹಿಂದೆ XUV400 ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅನಾವರಣಗೊಳಿಸಿತ್ತು. ಅದರ ಬೆಲೆಯನ್ನು ಮುಂದಿನ ತಿಂಗಳು ಪ್ರಕಟಿಸಲಾಗುತ್ತದೆ ಎಂದು ವರದಿಯಾಗಿದೆ. ಇದು MG ZS EV, BYD Atto 3 ಮತ್ತು Tata Nexon EV Max ನಂತಹ ಕಾರುಗಳಿಗೆ ಭಾರೀ ಪೈಪೋಟಿ ನೀಡಲಿದೆ. ಐದು-ಆಸನಗಳನ್ನು ಹೊಂದಿರುವ ಈ ಎಸ್‌ಯುವಿ SsangYong Tivoliನ X100 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, ಇದು 4.2 ಮೀಟರ್ ಉದ್ದವನ್ನು ಹೊಂದಿದೆ. XUV300ಗೆ ಹೋಲಿಸಿದರೆ ದೊಡ್ಡ ಬೂಟ್ ಸ್ಪೇಸ್ ಅನ್ನು ಹೊಂದಿದೆ.

ಮಹೀಂದ್ರಾ XUV400ನಲ್ಲಿ 39.4 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, 150 bhp ಪವರ್ ಮತ್ತು 310 Nm ಟಾರ್ಕ್ ಉತ್ಪಾದಿಸಲು ಸಾಮರ್ಥ್ಯವಿರುವ ಎಲೆಕ್ಟ್ರಿಕ್ ಮೋಟಾರ್ ಅನ್ನು ಅಳವಡಿಸಲಾಗಿದೆ. 150 kmph ಟಾಪ್ ಸ್ವೀಡ್ ಅನ್ನು ಹೊಂದಿದ್ದು, 8.3 ಸೆಕೆಂಡುಗಳಲ್ಲಿ 0- 100 kmph ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗುತ್ತದೆ. ಈ ಎಸ್‌ಯುವಿ ಒಂದೇ ಚಾರ್ಜ್‌ನಲ್ಲಿ 456 ಕಿ.ಮೀ ಮೈಲೇಜ್ ನೀಡಲಿದೆ. ಫನ್, ಫಾಸ್ಟ್ ಮತ್ತು ಫಿಯರ್‌ಲೆಸ್ ಎಂಬ ಮೂರು ಡ್ರೈವ್ ಮೋಡ್‌ ಆಯ್ಕೆಗಳನ್ನು ಹೊಂದಿದೆ.

BYD Atto 3 (EV):
ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ BYD Atto 3 ಖರೀದಿಗೆ ಲಭ್ಯವಿದೆ. ಇದೊಂದು ಎಲೆಕ್ಟ್ರಿಕ್ ಎಸ್‌ಯುವಿ ಆಗಿದ್ದು, ಇದರ ಬೆಲೆ ರೂ. 34 ಲಕ್ಷ (ಎಕ್ಸ್ ಶೋ ರೂಂ) ಇದೆ. ಐದು-ಆಸನಗಳನ್ನು ಹೊಂದಿರುವ ಈ ಎಸ್‌ಯುವಿಯ ವಿತರಣೆಯು ಗ್ರಾಹಕರಿಗೆ ಜನವರಿ 2023ರಿಂದ ಪ್ರಾರಂಭವಾಗುತ್ತದೆ. ಇದನ್ನು ಒಮ್ಮೆ ಸಂಪೂರ್ಣವಾಗಿ ಚಾರ್ಜ್‌ ಮಾಡಿದರೆ 521 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ ಇದು ಕೇವಲ 7.3 ಸೆಕೆಂಡುಗಳಲ್ಲಿ 0- 100 kmph ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದೆ ಎಂದು ಹೇಳಬಹುದು.

BYD Atto 3 ಕಾರಿನಲ್ಲಿ ಪ್ರಸಿದ್ಧವಾದ ಬ್ಲೇಡ್ ಬ್ಯಾಟರಿ ತಂತ್ರಜ್ಞಾನದೊಂದಿಗೆ 60 kWh ಬ್ಯಾಟರಿ ಪ್ಯಾಕ್ ಅನ್ನು ಬಳಸಲಾಗಿದೆ. ಇದು 201 bhp ಪವರ್ ಮತ್ತು 310 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಈ ಎಸ್‌ಯುವಿಯಲ್ಲಿ ಶಾಶ್ವತ ಮ್ಯಾಗ್ನೆಟ್ ಸಿಂಕ್ರೊನಸ್ ಇ-ಮೋಟರ್ ಅನ್ನು ಬಳಸಲಾಗಿದೆ. ಇದು ತಿರುಗಿಸಬಹುದಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಒಳಭಾಗದಲ್ಲಿ ಸಾಕಷ್ಟು ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ. ಇದರಿಂದ ಈ ಕಾರು ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ.

MG ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಫೇಸ್‌ಲಿಫ್ಟ್ (EV):
MG ಮೋಟಾರ್ ಇಂಡಿಯಾ ಮುಂದಿನ ತಿಂಗಳು ಭಾರತದ ಮಾರುಕಟ್ಟೆಯಲ್ಲಿ ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್‌ನ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಅನಾವರಣಗೊಳಿಸುವ ಸಾಧ್ಯತೆಯಿದೆ. ಇದನ್ನು 2-ಡೋರ್ ಏರ್ ಇವಿ ಜೊತೆಗೆ ದೆಹಲಿಯಲ್ಲಿ ನಡೆಯುವ 2023 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಬಹುದು. ಮಧ್ಯಮ ಗಾತ್ರದ ಈ ಎಸ್‌ಯುವಿಗಳು ಮರುವಿನ್ಯಾಸಗೊಳಿಸಲಾದ ಗ್ರಿಲ್ ಮತ್ತು ನವೀಕರಿಸಿದ ಬಂಪರ್ ಅನ್ನು ಹೊಂದಿವೆ. ಅಲ್ಲದೆ, ಒಳಾಂಗಣದಲ್ಲಿ ಜನ್ iSmart ತಂತ್ರಜ್ಞಾನದೊಂದಿಗೆ 14-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿರಲಿವೆ.

ಟಾಟಾ ಟಿಯಾಗೊ (EV):
ಟಾಟಾ ಮೋಟಾರ್ಸ್ ತನ್ನ ಬಹುನಿರೀಕ್ಷಿತ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಟಿಯಾಗೊ EV ಅನ್ನು ಕೆಲವು ತಿಂಗಳ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿತ್ತು. ಅದರ ವಿತರಣೆಗಳು ಮುಂದಿನ ತಿಂಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಇದರ ಬೆಲೆ ರೂ.8.49 ಲಕ್ಷ ಮತ್ತು ರೂ.11.79 ಲಕ್ಷ (ಎಕ್ಸ್ ಶೋ ರೂಂ) ಇರಲಿದೆ. Tata Tiago EVಗಾಗಿ ಬುಕಿಂಗ್ ಪ್ರಕ್ರಿಯೆಗಳು ಸಹ ಭರದಿಂದ ಸಾಗುತ್ತಿವೆ. ಐದು ಆಸನಗಳು ಎರಡು ಬ್ಯಾಟರಿ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದ್ದು, ಒಂದೇ ಚಾರ್ಜ್‌ನಲ್ಲಿ 315 ಕಿ.ಮೀ ವರೆಗೆ ಮೈಲೇಜ್ ನೀಡಲಿದೆ.

ಸಿಟ್ರೊಯೆನ್ C3 (EV):
ಸಿಟ್ರೊಯೆನ್ ಭಾರತ ಮಾರುಕಟ್ಟೆಗೆ ಪ್ರೀಮಿಯಂ C5 ಏರ್‌ಕ್ರಾಸ್‌ನೊಂದಿಗೆ ಎಂಟ್ರಿ ಕೊಟ್ಟಿತ್ತು. ಈ ವರ್ಷ, C3 ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಹೆಚ್ಚಿನ ಕಾರ್ಯಕ್ಷಮತೆಯಿಂದ ಗ್ರಾಹಕರನ್ನು ಸೆಳೆಯಿತು. C3ಯ ಎಲೆಕ್ಟ್ರಿಕ್ ರೂಪಾಂತರವನ್ನು ಸಿಟ್ರೊಯೆನ್ ದೇಶದಲ್ಲಿ ಮುಂಬರುವ ತಿಂಗಳು ಬಿಡುಗಡೆ ಮಾಡಬಹುದು. ಇದು eCMP ಆರ್ಕಿಟೆಕ್ಚರ್ ಅನ್ನು ಆಧರಿಸಿದೆ ಎಂದು ನಿರೀಕ್ಷಿಸಲಾಗಿದ್ದು, ತಾಂತ್ರಿಕ ವೈಶಿಷ್ಟ್ಯಗಳ ಬಗ್ಗೆ ಇನ್ನೂ ತಿಳಿದಿಲ್ಲವಾದರೂ, ಇದು ಒಂದು ಬಾರಿ ಪೂರ್ತಿ ಚಾರ್ಜ್ ಮಾಡಿದರೆ ಸುಮಾರು 300 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

Most Read Articles

Kannada
English summary
Electric cars to be launched and delivered in new year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X