Just In
- 32 min ago
ಕೈಗೆಟುಕುವ ಬೆಲೆ, ಹಲವು ಫೀಚರ್ಸ್ಗಳೊಂದಿಗೆ ಲಭ್ಯವಿರುವ ಟಾಪ್ 5 ಅಡ್ವೆಂಚರ್ ಬೈಕ್ಗಳಿವು!
- 36 min ago
ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ಟೊಯೊಟಾ ಹೈರೈಡರ್ ಎಸ್ಯುವಿ
- 51 min ago
ಎಂಜಿ ಮೊದಲ ಕಮ್ಯೂನಿಟಿ ಇವಿ ಚಾರ್ಜರ್ ಆರಂಭ- 1 ಸಾವಿರ ನಿಲ್ದಾಣಗಳನ್ನು ಆರಂಭಿಸುವ ಗುರಿ..
- 2 hrs ago
ಕಾರಿಗೆ ಆ್ಯಸಿಡ್ ಎರಚಿದ ಆರೋಪ: ಮಹಿಳೆ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್
Don't Miss!
- Education
NEET UG Exam 2022 : ನೀಟ್ ಮುಂದೂಡಿಕೆಗೆ ಒತ್ತಾಯ !...ಪರೀಕ್ಷೆಯ ಸಂಪೂರ್ಣ ವಿವರ
- Technology
ಡೇಟಾ ಲಿಮಿಟ್ ಬಯಸದ ಗ್ರಾಹಕರಿಗೆ ಬಿಎಸ್ಎನ್ಎಲ್ನ ಈ ಪ್ಲಾನ್ ಬೆಸ್ಟ್!
- Sports
Ind vs Eng: ರೋಹಿತ್ ಶರ್ಮಾಗೆ ಕೊರೊನಾ; ಇಂಗ್ಲೆಂಡ್ಗೆ ಹಾರಿದ ಕರ್ನಾಟಕ ಆಟಗಾರ
- News
ನಗರದ ವಿವಿಧೆಡೆ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿ ಆಚರಣೆ
- Finance
ಜಿಎಸ್ಟಿ ಕೌನ್ಸಿಲ್ ಸಭೆ: ಟಾಪ್ ಅಜೆಂಡಾ ಏನಿದೆ?
- Movies
ಮೊದಲ ಮಗುವಿನ ನಿರೀಕ್ಷೆಯಲ್ಲಿ ಆಲಿಯಾ-ರಣ್ಬೀರ್: ಬೇಬಿ ಕಮಿಂಗ್ ಸೂನ್ ಎಂದ ನಟಿ!
- Lifestyle
ನಮಗೆ ಸೂಕ್ತವಾದ ಮೆನ್ಸ್ಟ್ರಲ್ ಕಪ್ ಸೈಜ್ ಯಾವುದೆಂದು ತಿಳಿಯುವುದು ಹೇಗೆ?
- Travel
ಕರ್ನಾಟಕದಲ್ಲಿರುವ ಈ 5 ಹೆಸರಾಂತ ವಿಷ್ಣುದೇವರ ದೇವಾಲಯಗಳಿಗೆ ಭೇಟಿ ಕೊಟ್ಟು ಧನ್ಯರಾಗಿ!
ಭಾರತದಲ್ಲಿ ತನ್ನ ಪ್ರಧಾನ ಕಛೇರಿಯ ಸ್ಥಾಪನೆಯನ್ನು ಖಚಿತಪಡಿಸಿದ ಫಿಷ್ಕರ್ ಇಂಡಿಯಾ
Fisker Inc ಭಾರತದಲ್ಲಿ ತನ್ನ ಪ್ರಧಾನ ಕಛೇರಿಯನ್ನು ತೆರೆಯಲು ಸಿದ್ಧವಾಗಿದೆ. ಅಮೆರಿಕಾದ ಈ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯು ತನ್ನ ಭಾರತೀಯ ಪ್ರಧಾನ ಕಛೇರಿಗಾಗಿ ಹೈದರಾಬಾದ್ ಅನ್ನು ಆಯ್ಕೆ ಮಾಡಿಕೊಂಡಿದೆ. ಇದರ ಭಾರತೀಯ ಅಂಗ ಸಂಸ್ಥೆಗೆ ಫಿಸ್ಕರ್ ವಿಗ್ಯಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂದು ನಾಮಕರಣ ಮಾಡಿದೆ.

ಬ್ರ್ಯಾಂಡ್‌ನ ಹೈದರಾಬಾದ್ ಪ್ರಧಾನ ಕಛೇರಿಯಲ್ಲಿರುವ ಉದ್ಯೋಗಿಗಳು ಕ್ಯಾಲಿಫೋರ್ನಿಯಾದ ಎಂಜಿನಿಯರಿಂಗ್ ಮತ್ತು ಉತ್ಪನ್ನ ಅಭಿವೃದ್ಧಿ ತಂಡಗಳೊಂದಿಗೆ ಕೆಲಸ ಮಾಡಲಿದ್ದಾರೆ. ಇಡೀ ಪ್ರಪಂಚವು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡಿದ್ದು, ಭವಿಷ್ಯದಲ್ಲಿ ಇವಿ ವಾಹನಗಳಿಗೆ ಬೇಡಿಕೆ ಹೆಚ್ಚಾಗುವ ಮುನ್ಸೂಚನೆ ಅರಿತ ಎಲ್ಲಾ ವಾಹನ ತಯಾರಕರು ಎಲೆಕ್ಟ್ರಿಕ್ ಮಾರ್ಗದಲ್ಲಿ ಹೋಗಲು ಬಯಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಹಲವರು ವಾಹನ ತಯಾರಕರು ಈಗಾಗಲೇ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿ ಯಶಸ್ಸನ್ನು ಕಂಡರೆ, ಉಳಿದವರು ತಮ್ಮ ಮಾದರಿಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರತರಾಗದ್ದಾರೆ. ಗ್ರಾಹಕ ತಂತ್ರಜ್ಞಾನ ತಯಾರಕರು ಸಹ EV ವ್ಯಾಪಾರಕ್ಕೆ ಬರಲು ಬಯಸುತ್ತಿದ್ದಾರೆ. ಈ ನಡುವೆ EV ವಲಯದಲ್ಲಿ ದೀರ್ಘಕಾಲದವರೆಗೆ ಇರುವ ಕೆಲವು ಬ್ರ್ಯಾಂಡ್‌ಗಳಲ್ಲಿ ಫಿಸ್ಕರ್ ಕೂಡ ಒಂದಾಗಿದೆ.

ಫಿಸ್ಕರ್ ಇಂಕ್ ಅನ್ನು 2016 ರಲ್ಲಿ ಹೆನ್ರಿಕ್ ಫಿಸ್ಕರ್ ಮತ್ತು ಅವರ ಪತ್ನಿ ಗೀತಾ ಗುಪ್ತಾ-ಫಿಸ್ಕರ್ ಸ್ಥಾಪಿಸಿದರು. ಅದಕ್ಕೂ ಮೊದಲು ಬ್ರಾಂಡ್ ಅನ್ನು ಹೆನ್ರಿಕ್ ಫಿಸ್ಕರ್ ಒಬ್ಬರೇ ಮೊದಲ ಬಾರಿಗೆ 2007 ರಲ್ಲಿ ಫಿಸ್ಕರ್ ಆಟೋಮೋಟಿವ್ ಎಂಬ ಹೆಸರಿನಲ್ಲಿ ಪ್ರಾರಂಭಿಸಲಾಯಿತು. ಆ ವೇಳೆ ಫಿಸ್ಕರ್ ಕರ್ಮ ಎಂಬ ಎಲೆಕ್ಟ್ರಿಕ್ ಕಾರನ್ನು ಉತ್ಪಾದಿಸಿತ್ತು.

ಕರ್ಮವು ಎಲೆಕ್ಟ್ರಿಕ್ ಕಾರ್ಯಕ್ಷಮತೆಯ ಕಾರ್ ಆಗಿದ್ದು ಇದು ಫಿಸ್ಕರ್‌ನ ಖ್ಯಾತಿಯನ್ನು ಹೆಚ್ಚಿಸಿತ್ತು. ಕರ್ಮ ಹೆಸರನ್ನು ಖಚಿತಪಡಿಸಿಕೊಳ್ಳುವ ಮೊದಲೇ ಇದರ ಹಕ್ಕುಗಳು ಪ್ರಪಂಚದಾದ್ಯಂತ 2,000 ಕ್ಕೂ ಹೆಚ್ಚು ಫಿಸ್ಕರ್ ಕರ್ಮಾ EV ಗಳನ್ನು ಮಾರಾಟ ಮಾಡಲಾಗಿತ್ತು. ಬಳಿಕ ಅದರ ಎಲ್ಲಾ ವಿನ್ಯಾಸ ಮತ್ತು ತಂತ್ರಜ್ಞಾನವನ್ನು 2014 ರಲ್ಲಿ ಚೈನೀಸ್ ಕಂಪನಿಯೊಂದು ಖರೀದಿಸಿತು. ನಂತರ 2016 ರಲ್ಲಿ ಫಿಸ್ಕರ್ ಇಂಕ್ ಅಸ್ತಿತ್ವಕ್ಕೆ ಬಂದು ಹೊಸ ಇವಿಗಳ ಪರಿಚಯದಿಂದ ತ್ವರಿತವಾಗಿ ಅಭಿವೃದ್ಧಿ ಸಾಧಿಸಿತು.

ಭಾರತದಲ್ಲೂ ಫಿಸ್ಕರ್ ಓಷನ್ ಅನ್ನು ಬಿಡುಗಡೆ ಮಾಡುವುದಾಗಿ ಈ ಹಿಂದೆಯೇ ಘೋಷಿಸಲಾಗಿತ್ತು. ಫಿಸ್ಕರ್ ಓಷನ್ ಬ್ರ್ಯಾಂಡ್‌ನ ಮೊದಲ ಎಲೆಕ್ಟ್ರಿಕ್ SUV ಆಗಿದ್ದು, ಅದರ ಉತ್ಪಾದನೆಯು ನವೆಂಬರ್ 2022 ರಲ್ಲಿ ಪ್ರಾರಂಭವಾಗಲಿದೆ. ಉತ್ಪಾದನೆ ಪ್ರಾರಂಭವಾಗುವ ಮೊದಲೇ, ಫಿಸ್ಕರ್ ಓಷನ್ 40,000 ಬುಕಿಂಗ್‌ಗಳನ್ನು ಗಳಿಸಿದೆ.

ಈಗ, ಬ್ರ್ಯಾಂಡ್ ತನ್ನ ಹೊಸ ಪ್ರಧಾನ ಕಛೇರಿಯನ್ನು ಹೈದರಾಬಾದ್‌ನಲ್ಲಿ ಸ್ಥಾಪಿಸುವುದಾಗಿ ಘೋಷಿಸಿದೆ. ಫಿಸ್ಕರ್ ಹೈದರಾಬಾದ್‌ನಲ್ಲಿ ತನ್ನ ಹೊಸ ಸೌಲಭ್ಯಕ್ಕಾಗಿ 200ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದ್ದು, ಈ ಸಂಬಂಧ ನೇಮಕಾತಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ ಎಂದು ವರದಿಗಳು ತಿಳಿಸಿವೆ.

ಕೆಲವೇ ವಾರಗಳ ಹಿಂದೆ ತೆಲಂಗಾಣದ ಐಟಿ ಮತ್ತು ಕೈಗಾರಿಕಾ ಸಚಿವ ಕೆ.ಟಿ.ರಾಮರಾವ್ ಅವರು ಅಮೆರಿಕದಲ್ಲಿ ಫಿಸ್ಕರ್‌ನ ಉನ್ನತ ಆಡಳಿತ ಮಂಡಳಿಯನ್ನು ಭೇಟಿ ಮಾಡಿದ್ದರು. ಆಗ ಸಚಿವರು ರಾಜ್ಯದಲ್ಲಿ ಫಿಸ್ಕರ್ ಅನ್ನು ಸ್ಥಾಪಿಸಲು ಆಹ್ವಾನಿಸಿದ್ದರು. ಹೈದರಾಬಾದ್‌ನಲ್ಲಿ ಹೆಚ್ಚಿನ ಸಂಖ್ಯೆಯ ಟೆಕ್ಕಿಗಳಿದ್ದಾರೆ, ಆದ್ದರಿಂದ ಹೈದರಾಬಾದ್ ಅನ್ನು ಆದರ್ಶ ಸ್ಥಳವಾಗಿ ಆಯ್ಕೆ ಮಾಡಿಕೊಳ್ಳುವುದು ಸೂಕ್ತವೆಂದು ಹೇಳಿದ್ದರು.

Fiskerನ ಭಾರತೀಯ ಪ್ರಧಾನ ಕಛೇರಿಯು ಬ್ರ್ಯಾಂಡ್‌ನ ಭವಿಷ್ಯದ EVಗಳಿಗಾಗಿ ಸಾಫ್ಟ್‌ವೇರ್ ಮತ್ತು ವರ್ಚುವಲ್ ವಾಹನ ಅಭಿವೃದ್ಧಿಯಲ್ಲಿ ಕೆಲಸ ಮಾಡುತ್ತದೆ. ಬ್ರ್ಯಾಂಡ್ ಪ್ರಸ್ತುತ ಸುಮಾರು 450 ಉದ್ಯೋಗಿಗಳನ್ನು ಹೊಂದಿದೆ. ಇದು ಭಾರತ ಮತ್ತು ಯುರೋಪ್‌ನಲ್ಲಿ ನೇಮಕಾತಿ ಪೂರ್ಣಗೊಂಡ ನಂತರ ವರ್ಷದ ಅಂತ್ಯದ ವೇಳೆಗೆ ಸುಮಾರು 800 ಉದ್ಯೋಗಿಗಳಿಗೆ ಹೆಚ್ಚಾಗುವ ನಿರೀಕ್ಷೆಯಿದೆ.

ಫಿಸ್ಕರ್ ಇಂಕ್‌ನ ಅಧ್ಯಕ್ಷ ಮತ್ತು ಸಿಇಒ ಹೆನ್ರಿಕ್ ಫಿಸ್ಕರ್, "ಭಾರತಕ್ಕೆ ನಮ್ಮ ವಿಸ್ತರಣೆಯು ಕಾರ್ಯತಂತ್ರದ ಮಾರುಕಟ್ಟೆ ಅವಕಾಶ ಮತ್ತು ನಮ್ಮ ಜಾಗತಿಕ ಎಂಜಿನಿಯರಿಂಗ್ ಸಾಮರ್ಥ್ಯಗಳಿಗೆ ಗಮನಾರ್ಹ ಉತ್ತೇಜನವನ್ನು ಪ್ರತಿನಿಧಿಸುತ್ತದೆ. ನಾವು ಈಗಾಗಲೇ ಭಾರತದಲ್ಲಿ ಸ್ಥಳೀಯ ನೇಮಕಾತಿಯನ್ನು ಪ್ರಾರಂಭಿಸಿದ್ದೇವೆ. ಕೆಲವೇ ವಾರಗಳಲ್ಲಿ ಪೂರ್ಣವಾಗಿ ಕಾರ್ಯನಿರ್ವಹಿಸಲು ಮತ್ತು ಬಹು ಉತ್ಪನ್ನ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಹೈದರಾಬಾದ್‌ನಲ್ಲಿ ನಮ್ಮ ಹೊಸ ತಂಡವನ್ನು ನಿರೀಕ್ಷಿಸುತ್ತೇವೆ."

ಭಾರತದಲ್ಲಿನ ನಮ್ಮ ಪ್ರತಿಭೆಗಳ ಸಂಗ್ರಹವು ಭಾರತದಲ್ಲಿ ಫಿಸ್ಕರ್ ಓಷನ್ ಮತ್ತು ಫಿಸ್ಕರ್ ಪಿಯರ್ ಅನ್ನು ಪ್ರಾರಂಭಿಸಲು ನಮಗೆ ದಾರಿ ಮಾಡಿಕೊಡಲಿದೆ ಎಂದು ಅವರು ಹೇಳಿದರು. ಈ ಹೇಳಿಕೆಯೊಂದಿಗೆ, ಫಿಸ್ಕರ್‌ನ ಎರಡು ಹೊಸ EV ಗಳ ಬಿಡುಗಡೆಯನ್ನು ಭಾರತೀಯ ಮಾರುಕಟ್ಟೆಗೆ ಖಚಿತಪಡಿಸಲಾಗಿದೆ. ಆದಾಗ್ಯೂ, ಈ ಎರಡು EV ಗಳ ಬಿಡುಗಡೆಗೆ ಇನ್ನೂ ಯಾವುದೇ ಟೈಮ್‌ಲೈನ್ ಫಿಕ್ಸ್ ಆಗಿಲ್ಲ.

ಫಿಸ್ಕರ್ ಮುಖ್ಯವಾಹಿನಿಯ ವಾಹನದಲ್ಲಿ ಉತ್ತಮ ಮಟ್ಟದ ಕಾರ್ಯಕ್ಷಮತೆ ಮತ್ತು ಶ್ರೇಣಿಯನ್ನು ಪರಿಚಯಿಸಿದ ವಿಶ್ವದ ಮೊದಲ EV ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಶೀಘ್ರದಲ್ಲೇ, ಫಿಸ್ಕರ್‌ನ ಭಾರತ ಪ್ರವೇಶದಿಂದಾಗಿ ನಾವು ಭಾರತದಲ್ಲಿ ಇದೇ ಮಟ್ಟದ ಕಾರ್ಯಕ್ಷಮತೆಗೆ ಪ್ರವೇಶವನ್ನು ಪಡೆಯುತ್ತೇವೆ. ಹೈದರಾಬಾದ್‌ನಲ್ಲಿ ಪ್ರಧಾನ ಕಚೇರಿಯನ್ನು ಸ್ಥಾಪಿಸುವುದರೊಂದಿಗೆ, ಫಿಸ್ಕರ್‌ನ ಭಾರತೀಯ ಕಾರ್ಯಾಚರಣೆಗಳು ಸುಲಭವಾಗಲಿವೆ ಎಂದು ಕಂಪನಿ ತಿಳಿಸಿದೆ.