Just In
- 16 min ago
ಕೈಗೆಟುಕುವ ಬೆಲೆ, ಹಲವು ಫೀಚರ್ಸ್ಗಳೊಂದಿಗೆ ಲಭ್ಯವಿರುವ ಟಾಪ್ 5 ಅಡ್ವೆಂಚರ್ ಬೈಕ್ಗಳಿವು!
- 19 min ago
ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ಟೊಯೊಟಾ ಹೈರೈಡರ್ ಎಸ್ಯುವಿ
- 35 min ago
ಎಂಜಿ ಮೊದಲ ಕಮ್ಯೂನಿಟಿ ಇವಿ ಚಾರ್ಜರ್ ಆರಂಭ- 1 ಸಾವಿರ ನಿಲ್ದಾಣಗಳನ್ನು ಆರಂಭಿಸುವ ಗುರಿ..
- 2 hrs ago
ಕಾರಿಗೆ ಆ್ಯಸಿಡ್ ಎರಚಿದ ಆರೋಪ: ಮಹಿಳೆ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್
Don't Miss!
- Education
NEET UG Exam 2022 : ನೀಟ್ ಮುಂದೂಡಿಕೆಗೆ ಒತ್ತಾಯ !...ಪರೀಕ್ಷೆಯ ಸಂಪೂರ್ಣ ವಿವರ
- Technology
ಡೇಟಾ ಲಿಮಿಟ್ ಬಯಸದ ಗ್ರಾಹಕರಿಗೆ ಬಿಎಸ್ಎನ್ಎಲ್ನ ಈ ಪ್ಲಾನ್ ಬೆಸ್ಟ್!
- Sports
Ind vs Eng: ರೋಹಿತ್ ಶರ್ಮಾಗೆ ಕೊರೊನಾ; ಇಂಗ್ಲೆಂಡ್ಗೆ ಹಾರಿದ ಕರ್ನಾಟಕ ಆಟಗಾರ
- News
ನಗರದ ವಿವಿಧೆಡೆ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿ ಆಚರಣೆ
- Finance
ಜಿಎಸ್ಟಿ ಕೌನ್ಸಿಲ್ ಸಭೆ: ಟಾಪ್ ಅಜೆಂಡಾ ಏನಿದೆ?
- Movies
ಮೊದಲ ಮಗುವಿನ ನಿರೀಕ್ಷೆಯಲ್ಲಿ ಆಲಿಯಾ-ರಣ್ಬೀರ್: ಬೇಬಿ ಕಮಿಂಗ್ ಸೂನ್ ಎಂದ ನಟಿ!
- Lifestyle
ನಮಗೆ ಸೂಕ್ತವಾದ ಮೆನ್ಸ್ಟ್ರಲ್ ಕಪ್ ಸೈಜ್ ಯಾವುದೆಂದು ತಿಳಿಯುವುದು ಹೇಗೆ?
- Travel
ಕರ್ನಾಟಕದಲ್ಲಿರುವ ಈ 5 ಹೆಸರಾಂತ ವಿಷ್ಣುದೇವರ ದೇವಾಲಯಗಳಿಗೆ ಭೇಟಿ ಕೊಟ್ಟು ಧನ್ಯರಾಗಿ!
ಹೊಸ ರೂಪದಲ್ಲಿ ಅನಾವರಣವಾಗಲಿದೆ ನ್ಯೂ ಜನರೇಷನ್ ಫೋರ್ಡ್ ಎಂಡೀವರ್ ಎಸ್‍ಯುವಿ
ಅಮೆರಿಕ ಮೂಲದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಫೋರ್ಡ್(Ford) ತನ್ನ ಎವರೆಸ್ಟ್ (ಎಂಡೀವರ್) ಎಸ್‍ಯುವಿಯ ನ್ಯೂ ಜನರೇಷನ್ ಮಾದರಿಯನ್ನು ಪರಿಚಯಿಸಲು ಸಿದ್ಧವಾಗಿದೆ. ಈ ನ್ಯೂ ಜನರೇಷನ್ ಫೋರ್ಡ್ ಎಂಡೀವರ್ ಅಥವಾ ಎವರೆಸ್ಟ್ ಎಸ್‍ಯುವಿಯ ಹೊಸ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಈ ನ್ಯೂ ಜನರೇಷನ್ ಫೋರ್ಡ್ ಎಂಡೀವರ್ ಎಸ್‍ಯುವಿಯು ಮಾರ್ಚ್ 1 ರಂದು ಅನಾವರಣವಾಗಲಿದೆ. ಈ ಹೊಸ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಯಾವುದೇ ಮಾಹಿತಿಗಳನ್ನು ಕಂಪನಿ ಬಹಿರಂಗಪಡಿಸಿಲ್ಲ, ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ. ಆದರೆ ಈ ವರ್ಷದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು. ಇನ್ನು ಟೀಸರ್ ನಲ್ಲಿ ಎಸ್‍ಯುವಿ ಬಾಕ್ಸಿ ಮತ್ತು ನೇರವಾದ ನಿಲುವು ಹೊಂದಿದೆ. ಹೊಸ ಎಂಡೀವರ್‌ನ ಮುಂಭಾಗದ ಫಾಸಿಕವು ಹೊಸ ರೇಂಜರ್‌ನಿಂದ ಪ್ರೇರಿತವಾಗಿದೆ.

ಈ ಫೋರ್ಡ್ ಎಸ್‍ಯುವಿಯಲ್ಲಿ ಲಂಬವಾದ ಸ್ಲ್ಯಾಟ್‌ನೊಂದಿಗೆ 3D ಗ್ರಿಲ್ ಮತ್ತು ಸಿಗ್ನೇಚರ್ ಲೋಗೋ, ಸಿ-ಆಕಾರದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಸಿಲ್ವರ್ ಬಣ್ಣದ ಬ್ಯಾಷ್‌ನೊಂದಿಗೆ ಬೀಫಿಯರ್ ಬಂಪರ್ ಅನ್ನು ಒಳಗೊಂಡಿದೆ. ಇದರ ಅಪ್ ರೈಟ್ ಪಿಲ್ಲರ್ ಗಳು, ಅಲಾಯ್ ವ್ಹೀಲ್ ಗಳು, ರೂಫ್ ರೈಲ್ಸ್ ಮತ್ತು ರ್ಯಾಕ್ ಮಾಡಿದ ವಿಂಡ್‌ಶೀಲ್ಡ್‌ನೊಂದಿಗೆ ಸೈಡ್ ಪ್ರೊಫೈಲ್ ಅನ್ನು ನವೀಕರಿಸಲಾಗಿದೆ,

ನ್ಯೂ ಜನರೇಷನ್ ಮಾದರಿಯು ಸಿ-ಆಕಾರದ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ಹೈ ಮೌಂಟೆಡ್ ಬ್ರೇಕ್ ಲೈಟ್, ರೂಫ್ ಮೌಂಟೆಡ್ ಸ್ಪಾಯ್ಲರ್ ಮತ್ತು ದೊಡ್ಡ ಗ್ರೀನ್ ಹೌಸ್ ಹೊಂದಿದೆ. ಈ ನ್ಯೂ ಜನರೇಷನ್ ಫೋರ್ಡ್ ಎವರೆಸ್ಟ್ ಅಥವಾ ಎಂಡೀವರ್ ಎಸ್‍ಯುವಿಯಲ್ಲಿ ಇತ್ತೀಚಿನ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಕನಕ್ಟಿವಿಟಿ ಕಾರ್ ಟೆಕ್ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ.

ಇದರೊಂದಿಗೆ ದೊಡ್ಡ ಪಾನರೋಮಿಕ್ ನ್‌ರೂಫ್‌ನೊಂದಿಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಬರುವ ನಿರೀಕ್ಷೆಯಿದೆ. ಈ ಹೊಸ ಎಸ್‍ಯುವಿಯಲ್ಲಿ ADAS (ಸುಧಾರಿತ ಡ್ರೈವಿಂಗ್ ಅಸಿಸ್ಟ್ ಸಿಸ್ಟಂ) ಯೊಂದಿಗೆ ಬರಬಹುದು.

ಜಾಗತಿಕವಾಗಿ, ಹೊಸ ಫೋರ್ಡ್ ಎಂಡೀವರ್ (ಎವರೆಸ್ಟ್) ಎಸ್‍ಯುವಿಯು 2.0 ಲೀಟರ್ 4-ಸಿಲಿಂಡರ್ ಟ್ವಿನ್-ಟರ್ಬೊ EcoBlue ಡೀಸೆಲ್ ಮತ್ತು 3.0 ಲೀಟರ್ ವಿ6 ಟರ್ಬೊ ಡೀಸೆಲ್ ಎಂಜಿನ್‌ನೊಂದಿಗೆ ಲಭ್ಯವಾಗಲಿದೆ. ಇದರಲ್ಲಿ 2.0 ಲೀಟರ್ ಎಂಜಿನ್ 210 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ,

ಇನ್ನು 3.0 ಲೀಟರ್ ಎಂಜಿನ್ 254 ಬಿಹೆಚ್‍ಪಿ ಪವರ್ ಮತ್ತು 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎರಡೂ ಎಂಜಿನ್ ಗಳೊಂದಿಗೆ 10-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ಭಾರತದಲ್ಲಿ ಉತ್ಪಾದನೆಯನ್ನು ನಿಲ್ಲಿಸುವ ಮುನ್ನ ಫೋರ್ಡ್ ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿ ಎಂಡೀವರ್ ಎಸ್‍ಯುವಿಯನ್ನು ಉಳಿಸಲು ಪ್ರಯತ್ನಿಸಿತು. ಫೋರ್ಡ್ ಮತ್ತೊಂದು ಕಾರು ತಯಾರಕರೊಂದಿಗೆ ಒಪ್ಪಂದದ ಆಧಾರದ ಮೇಲೆ ಎಂಡೀವರ್ ಅನ್ನು ಉತ್ಪಾದಿಸಲು ಪ್ರಯತ್ನಿಸಿತು. ಆದರೆ ಈ ಒಪ್ಪಂದ ಪ್ರಯತ್ನಯು ವಿಫಲವಾಯ್ತು. ಇದರಿಂದ ಎಂಡೀವರ್ ಎಸ್‍ಯುವಿಯನ್ನು ಭಾರತದಲ್ಲಿ ಉಳಿಸುವಲ್ಲಿ ವಿಫಲವಾಗಿತ್ತು.

ಹೊಸ ವರದಿ ಪ್ರಕಾರ, ಫೋರ್ಡ್ ಎಂಡೀವರ್ ಎಸ್‍ಯುವಿಯನ್ನು ಭಾರತಕ್ಕೆ ಮರಳಿ ತರಲು ಫೋರ್ಡ್ ಚಿಂತಿಸುತ್ತಿದೆ. ಚೆನ್ನೈನಲ್ಲಿನ ಅದರ ಉತ್ಪಾದನಾ ಘಟಕದ ಹೊರತಾಗಿ, ಎಂಡೀವರ್ ಅನ್ನು ಥೈಲ್ಯಾಂಡ್, ವಿಯೆಟ್ನಾಂ ಮತ್ತು ಚೀನಾದಲ್ಲಿ ಉತ್ಪಾದಿಸಲಾಗುತ್ತಿದೆ. ಅಲ್ಲಿ ಈ ಎಸ್‍ಯುವಿ ಮಾದರಿಗೆ ಎವರೆಸ್ಟ್ ಹೆಸರಿನಲ್ಲಿ ಮಾರಾಟ ಮಾಡುಲಾಗುತ್ತಿದೆ. ಆದರೆ ಭಾರತಕ್ಕೆ ಮರಳಿ ಬರುವ ಸಾಧ್ಯತೆ ಕಡಿಮೆಯಾಗಿದೆ,

ಇನ್ನು ಫೋರ್ಡ್ ಎಂಡೀವರ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಫುಲ್ ಸೈಜ್ ಎಸ್‍ಯುವಿಯಾಗಿತ್ತು, ಇದು ಕಳೆದ 18 ವರ್ಷಗಳಿಂದ ಭಾರತದಲ್ಲಿ ಮಾರಾಟವಾಗುತ್ತಿದೆ ಮತ್ತು ಅದರ ವಿಭಾಗದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದೆ.ಈ ಎಂಡೀವರ್ ಎಸ್‍ಯುವಿಯು 2003ರಲ್ಲಿ ಬಿಡುಗಡೆಯಾದಾಗ ಭಾರತದಲ್ಲಿ ಫೋರ್ಡ್‌ನ ಮೊದಲ ಎಸ್‌ಯುವಿ ಕೊಡುಗೆಯಾಗಿತ್ತು ಮತ್ತು ಎರಡನೇ ತಲೆಮಾರಿನವರು 2016 ರಲ್ಲಿ ಬಿಡುಗಡೆಗೊಂಡಿತ್ತು.

ಭಾರತದಲ್ಲಿ ಮಾರಾಟದಲ್ಲಿದ್ದ ಪ್ರೀಮಿಯಂ ಎಸ್‌ಯುವಿಯಲ್ಲಿ 2.0 ಲೀಟರ್ ಇಕೋಬ್ಲೂ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿತ್ತು. ಈ ಎಂಜಿನ್ 168 ಬಿಹೆಚ್‍ಪಿ ಪವರ್ ಮತ್ತು 420 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನೊಂದಿಗೆ 10 ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಅನ್ನು ಅಳವಡಿಸಲಿದೆ. ಈ ಹೊಸ ಎಸ್‍ಯುವಿಯು ಭಾರತಕ್ಕೆ ಬಂದರೂ ಸಹ, ಮಾದರಿಯನ್ನು ಸಂಪೂರ್ಣವಾಗಿ ನಿರ್ಮಿಸಿದ ಘಟಕ (CBU) ಮಾರ್ಗದ ಮೂಲಕ ತರಲಾಗುತ್ತದೆ. ಇದು ಟೊಯೊಟಾ ಫಾರ್ಚುನರ್ ಮತ್ತು ಎಂಜಿ ಗ್ಲೋಸ್ಟರ್‌ಗಿಂತ ಎಸ್‌ಯುವಿ ಮಾರ್ಗವನ್ನು ಹೆಚ್ಚು ದುಬಾರಿಯಾಗಿಸುತ್ತದೆ.

ಈ ಫೋರ್ಡ್ ಎಂಡೀವರ್ ಸಮರ್ಥ ಆನ್ ರೋಡ್ ಮತ್ತು ಆಪ್ ರೋಡ್ ಎಸ್‍ಯುವಿಯಾಗಿದೆ. ಅಫ್-ರೋಡ್ ವಿಭಾಗದಲ್ಲಿಯು ಫೋರ್ಡ್ ಎಂಡೀವರ್ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ ಎಸ್‍ಯುವಿಯಾಗಿದೆ. ಫೋರ್ಡ್ ಎಂಡೀವರ್ ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್, ಮಹೀಂದ್ರಾ ಅಲ್ಟುರಾಸ್ ಜಿ4, ಎಂಜಿ ಗ್ಲೋಸ್ಟರ್ ಮತ್ತು ಇಸುಝು ಎಂಯು-ಎಕ್ಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡಲಾಗುತ್ತಿತ್ತು.