ದೇಶದ ಮೊದಲ 150kWh ಡಿಸಿ ಇವಿ ಫಾಸ್ಟ್ ಚಾರ್ಜರ್ ಸ್ಥಾಪಿಸಿದ ಕಿಯಾ ಇಂಡಿಯಾ

ದೇಶದಲ್ಲಿ ಇವಿ ಕಾರು ಮಾರಾಟವು ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಇತ್ತೀಚೆಗೆ ಕಿಯಾ ಕಂಪನಿಯು ಕೂಡಾ ತನ್ನ ಹೊಸ ಇವಿ6 ಮಾದರಿಯ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ. ಹೊಸ ಇವಿ ಕಾರು ಮಾದರಿಗಾಗಿ ಕಂಪನಿಯು ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಸಹ ನಿರ್ಮಾಣ ಮಾಡುತ್ತಿದ್ದು, ಕಂಪನಿಯು ಇದೀಗ ದೇಶದ 150kWh ಡಿಸಿ ಇವಿ ಫಾಸ್ಟ್ ಚಾರ್ಜರ್ ಸ್ಥಾಪನೆ ಮಾಡಿದೆ.

ದೇಶದ ಮೊದಲ 150kWh ಡಿಸಿ ಇವಿ ಫಾಸ್ಟ್ ಚಾರ್ಜರ್ ಸ್ಥಾಪಿಸಿದ ಕಿಯಾ ಇಂಡಿಯಾ

ಕಿಯಾ ಕಂಪನಿಯು ದೇಶದ ಪ್ರಮುಖ ಮಾಹಾನಗರಗಳಲ್ಲಿ ಹೊಸ ಇವಿ6 ಕಾರು ಮಾರಾಟ ಮಾರಾಟ ಆರಂಭಿಸುವುದರ ಜೊತೆಗೆ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಸಹ ಸ್ಥಾಪಿಸುತ್ತಿದ್ದು, ಗುರುಗ್ರಾಮ್‌ನಲ್ಲಿರುವ ಧಿಂಗ್ರಾ ಡೀಲರ್‌ಶಿಪ್‌ನಲ್ಲಿ ಕಂಪನಿಯು ತನ್ನ ಮೊದಲ 150kWh ಸಾಮರ್ಥ್ಯದ ಡಿಸಿ ಫಾಸ್ಟ್ ಚಾರ್ಜರ್ ಸ್ಥಾಪಿಸಿದೆ.

ದೇಶದ ಮೊದಲ 150kWh ಡಿಸಿ ಇವಿ ಫಾಸ್ಟ್ ಚಾರ್ಜರ್ ಸ್ಥಾಪಿಸಿದ ಕಿಯಾ ಇಂಡಿಯಾ

ಹೊಸ ಇವಿ6 ಮಾದರಿಯನ್ನು ಕಿಯಾ ಕಂಪನಿಯು ದೇಶದ ಪ್ರಮುಖ 12 ಡೀಲರ್ಸ್‌ಗಳಲ್ಲಿ ಮಾರಾಟ ಮಾಡುತ್ತಿದ್ದು, ಮುಂಬರುವ ಅಗಸ್ಟ್ ಅಂತ್ಯಕ್ಕೆ 12 ಡೀಲರ್ಸ್‌ಗಳಲ್ಲೂ ಕಂಪನಿಯು 150kWh ಡಿಸಿ ಇವಿ ಫಾಸ್ಟ್ ಚಾರ್ಜರ್ ಸೌಲಭ್ಯ ಒದಗಿಸುವ ಗುರಿಹೊಂದಿದೆ.

ದೇಶದ ಮೊದಲ 150kWh ಡಿಸಿ ಇವಿ ಫಾಸ್ಟ್ ಚಾರ್ಜರ್ ಸ್ಥಾಪಿಸಿದ ಕಿಯಾ ಇಂಡಿಯಾ

ಹೊಸದಾಗಿ ಅಳವಡಿಸಲಾಗಿರುವ 150kWh ಡಿಸಿ ಇವಿ ಫಾಸ್ಟ್ ಚಾರ್ಜರ್ ಸೌಲಭ್ಯದೊಂದಿಗೆ ಇವಿ6 ಕಾರು ಮಾಲೀಕರು ಕೇವಲ 42 ನಿಮಿಷಗಳಲ್ಲಿ ಸೊನ್ನೆಯಿಂದ ಶೇ.80 ರಷ್ಟು ಚಾರ್ಜಿಂಗ್ ಪಡೆದುಕೊಳ್ಳಬಹುದಾಗಿದ್ದು, ಇದು ಸಾಮಾನ್ಯ ಚಾರ್ಜಿಂಗ್ ಸೌಲಭ್ಯಗಳಿಂತಲೂ ವೇಗವಾಗಿ ಚಾರ್ಜಿಂಗ್ ಮಾಡಬಹುದಾದ ವೈಶಿಷ್ಟ್ಯತೆ ಹೊಂದಿದೆ.

ದೇಶದ ಮೊದಲ 150kWh ಡಿಸಿ ಇವಿ ಫಾಸ್ಟ್ ಚಾರ್ಜರ್ ಸ್ಥಾಪಿಸಿದ ಕಿಯಾ ಇಂಡಿಯಾ

ಕಿಯಾ ಕಂಪನಿಯ ಇವಿ6 ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಬಿಡುಗಡೆಯಾಗಿದ್ದು, ಜಿಟಿ ಲೈನ್ ಫ್ರಂಟ್ ವ್ಹೀಲ್ ಡ್ರೈವ್ ವೆರಿಯೆಂಟ್ ಎಕ್ಸ್‌ಶೋರೂಂ ಪ್ರಕಾರ ರೂ. 59.95 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ವೆರಿಯೆಂಟ್ ಜಿಟಿ ಲೈನ್ ಆಲ್ ವ್ಹೀಲ್ ಡ್ರೈವ್ ಮಾದರಿಯು ರೂ. 64.95 ಲಕ್ಷ ಬೆಲೆ ಹೊಂದಿದೆ.

ದೇಶದ ಮೊದಲ 150kWh ಡಿಸಿ ಇವಿ ಫಾಸ್ಟ್ ಚಾರ್ಜರ್ ಸ್ಥಾಪಿಸಿದ ಕಿಯಾ ಇಂಡಿಯಾ

ಹೊಸ ಇವಿ6 ಎಲೆಕ್ಟ್ರಿಕ್ ಕಾರು ಎಲೆಕ್ಟ್ರಿಕ್-ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್(E-GMP) ಅನ್ನು ಆಧರಿಸಿ ನಿರ್ಮಾಣಗೊಂಡಿದ್ದು, ಇದು ಬ್ರ್ಯಾಂಡ್‌ನ ಭವಿಷ್ಯದ ಶ್ರೇಣಿಯ ಎಲೆಕ್ಟ್ರಿಕ್ ಕೊಡುಗೆಗಳ ಆಧಾರವಾಗಿದೆ. ಹೊಸ ಕಾರಿನಲ್ಲಿ ಕಂಪನಿಯು 77.4kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಅತ್ಯಧಿಕ ಮೈಲೇಜ್ ನೀಡಿದ್ದು, ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 528 ಕಿ.ಮೀ ಮೈಲೇಜ್ ರೇಂಜ್ ಖಚಿತಪಡಿಸುತ್ತದೆ.

ದೇಶದ ಮೊದಲ 150kWh ಡಿಸಿ ಇವಿ ಫಾಸ್ಟ್ ಚಾರ್ಜರ್ ಸ್ಥಾಪಿಸಿದ ಕಿಯಾ ಇಂಡಿಯಾ

ಹೊಸ ಕಾರಿನ ಬ್ಯಾಟರಿ ಪ್ಯಾಕ್ ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದ್ದು, ಸೂಪರ್ ಚಾರ್ಜಿಂಗ್ ಮೂಲಕ ಕೇವಲ 4.5 ನಿಮಿಷಗಳ ಚಾರ್ಜಿಂಗ್ ಮೂಲಕ ಕನಿಷ್ಠ 100 ಕಿ.ಮೀ ಕ್ರಮಿಸುವಷ್ಟು ಚಾರ್ಜ್ ಮಾಡಬಹುದು. ಜೊತೆಗೆ ಹೊಸ ಕಾರಿನಲ್ಲಿ 350kW ಫಾಸ್ಟ್ ಚಾರ್ಜರ್ ಸೌಲಭ್ಯದೊಂದಿಗೆ 50kWh ಡಿಸಿ ಫಾಸ್ಟ್ ಚಾರ್ಜರ್‌ ಆಯ್ಕೆಗಳಿದ್ದು, ಇವು ಕ್ರಮವಾಗಿ 18 ನಿಮಿಷ ಮತ್ತು 73 ನಿಮಿಷಗಳಲ್ಲಿ ಶೇ. 10 ರಿಂದ ಶೇ. 80ರ ವರೆಗಿನ ಬ್ಯಾಟರಿಯನ್ನು ಚಾರ್ಜ್ ಮಾಡಬಹುದಾಗಿದೆ.

ದೇಶದ ಮೊದಲ 150kWh ಡಿಸಿ ಇವಿ ಫಾಸ್ಟ್ ಚಾರ್ಜರ್ ಸ್ಥಾಪಿಸಿದ ಕಿಯಾ ಇಂಡಿಯಾ

ಕಿಯಾ ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರಿನಲ್ಲಿ ಡ್ಯುಯಲ್ ಮೋಟಾರ್ ಸೆಟಪ್ ಅನ್ನು ಜೋಡಿಸಿದ್ದು, ರಿಯರ್ ವ್ಹೀಲ್ ಡ್ರೈವ್ ಮಾದರಿಯು 350 ಎನ್ಎಂ ಮತ್ತು 225 ಬಿಎಚ್‌ಪಿ ಉತ್ಪಾದನೆ ಮಾಡಲಿದ್ದರೆ ಆಲ್ ವ್ಹೀಲ್ ಡ್ರೈವ್ ಮಾದರಿಯು 321 ಬಿಹೆಚ್‍ಪಿ ಮತ್ತು 605 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ದೇಶದ ಮೊದಲ 150kWh ಡಿಸಿ ಇವಿ ಫಾಸ್ಟ್ ಚಾರ್ಜರ್ ಸ್ಥಾಪಿಸಿದ ಕಿಯಾ ಇಂಡಿಯಾ

ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರಿನಲ್ಲಿ ಸ್ನೋ ವೈಟ್ ಪರ್ಲ್, ಅರೋರಾ ಬ್ಲ್ಯಾಕ್ ಪರ್ಲ್, ಮೊನೊಸ್ಕೇಪ್, ರನ್ವೇ ರೆಡ್ ಮತ್ತು ಯಾಚ್ ಬ್ಲೂ ಸೇರಿದಂತೆ ಐದು ಬಾಹ್ಯ ಬಣ್ಣದ ಆಯ್ಕೆ ನೀಡಲಾಗಿದ್ದು, ಹೊಸ ಎಲೆಕ್ಟ್ರಿಕ್ ಕಾರು 4690 ಎಂಎಂ ಉದ್ದ, 1890 ಎಂಎಂ ಅಗಲ ಮತ್ತು 1550 ಎಂಎಂ ಎತ್ತರದೊಂದಿಗೆ ಅತ್ಯುತ್ತಮ ಕ್ಯಾಬಿನ್ ಸ್ಥಳವಾಕಾಶ ಹೊಂದಿದೆ.

ದೇಶದ ಮೊದಲ 150kWh ಡಿಸಿ ಇವಿ ಫಾಸ್ಟ್ ಚಾರ್ಜರ್ ಸ್ಥಾಪಿಸಿದ ಕಿಯಾ ಇಂಡಿಯಾ

ಹಾಗೆಯೇ ಹೊಸ ಕಾರಿನಲ್ಲಿ ಡ್ಯುಯಲ್ 12.3-ಇಂಚಿನ ಡಿಸ್ಪ್ಪೇ, ಡ್ಯುಯಲ್ ಜೋನ್ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, 10 ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಪವರ್ ಅಡ್ಜೆಸ್ಟ್ ಫ್ರಂಟ್ ಸೀಟ್‌ಗಳು, ಪ್ಯಾಡಲ್ ಶಿಫ್ಟರ್‌, ರೈನ್ ಸೆನ್ಸಿಂಗ್ ವೈಪರ್‌, ಮಲ್ಟಿ ಡ್ರೈವ್ ಮೋಡ್‌ಗಳು, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, 4 ಸ್ಪೀಕರ್ ಆಡಿಯೋ ಸಿಸ್ಟಂ, 60ಕ್ಕೂ ಹೆಚ್ಚು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರುವ ಕಿಯಾ ಕನೆಕ್ಟ್ ಸೌಲಭ್ಯವನ್ನು ಕೂಡಾ ಹೊಂದಿರಲಿದೆ.

ದೇಶದ ಮೊದಲ 150kWh ಡಿಸಿ ಇವಿ ಫಾಸ್ಟ್ ಚಾರ್ಜರ್ ಸ್ಥಾಪಿಸಿದ ಕಿಯಾ ಇಂಡಿಯಾ

ಹೊಸ ಕಿಯಾ ಇವಿ6 ಕಾರು 14 ಸ್ಪೀಕರ್‌ಗಳೊಂದಿಗೆ ಮೆರಿಡಿಯನ್ ಸೌಂಡ್ ಸಿಸ್ಟಂ, ವರ್ಧಿತ ರಿಯಾಲಿಟಿ ಹೆಡ್ಸ್-ಅಪ್ ಡಿಸ್ಪ್ಲೇ, ಆಟೋಮ್ಯಾಟಿಕ್ ಫ್ಲಶ್ ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು ಮತ್ತು ಚಾಲಿತ ಟೈಲ್‌ಗೇಟ್‌ನಂತಹ ಕೆಲವು ವಿಶೇಷ ವಿನ್ಯಾಸದ ಅಂಶಗಳು ಮತ್ತು ವೈಶಿಷ್ಟ್ಯಗಳೊಂದಿಗೆ ಬರಲಿದ್ದು, ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂ ಸೂಟ್ ಅನ್ನು ಒಳಗೊಂಡಿದೆ.

ದೇಶದ ಮೊದಲ 150kWh ಡಿಸಿ ಇವಿ ಫಾಸ್ಟ್ ಚಾರ್ಜರ್ ಸ್ಥಾಪಿಸಿದ ಕಿಯಾ ಇಂಡಿಯಾ

ಜೊತೆಗೆ ಹೊಸ ಕಾರಿನಲ್ಲಿ 8 ಏರ್‌ಬ್ಯಾಗ್‌ಗಳು, ಇಎಸ್‌ಸಿ, ಎಬಿಎಸ್, ಹೆಚ್‌ಎಸಿ, ಬಿಎಸ್ಎ, ವಿಎಸ್ಎಂ, ಇಎಸ್ಎಸ್, ಆಲ್ ವ್ಹೀಲ್ ಗಳಿಗೆ ಡಿಸ್ಕ್ ಬ್ರೇಕ್, ಮುಂಭಾಗ ಮತ್ತು ಹಿಂಭಾಗದಲ್ಲಿ ಪಾರ್ಕಿಂಗ್ ಸೆನ್ಸಾರ್ ಮತ್ತು ಐಸೋಫಿಕ್ಸ್ ಚೈಲ್ಡ್ ಆಂಕರ್‌ಗಳನ್ನು ಒಳಗೊಂಡಿದ್ದು, ಕ್ರ್ಯಾಶ್ ಟೆಸ್ಟಿಂಗ್ ಹೊಸ ಕಾರು ಗರಿಷ್ಠ 5 ಸ್ಟಾರ್ ರೇಟಿಂಗ್ಸ್ ಸೌಲಭ್ಯದೊಂದಿಗೆ ಉತ್ತಮ ಸುರಕ್ಷತೆಯನ್ನು ಖಚಿತಪಡಿಸುತ್ತದೆ.

ದೇಶದ ಮೊದಲ 150kWh ಡಿಸಿ ಇವಿ ಫಾಸ್ಟ್ ಚಾರ್ಜರ್ ಸ್ಥಾಪಿಸಿದ ಕಿಯಾ ಇಂಡಿಯಾ

ಹೊಸ ಕಾರು ತುಸು ದುಬಾರಿ ಬೆಲೆ ಹೊಂದಿದ್ದರೂ ಐಷಾರಾಮಿ ಫೀಚರ್ಸ್‌ಗಳೊಂದಿಗೆ ಪ್ರಮುಖ ಜರ್ಮನ್ ಕಾರು ಕಂಪನಿಗಳಿಗೆ ಉತ್ತಮ ಪೈಪೋಟಿ ನೀಡುವ ತವಕದಲ್ಲಿದ್ದು, ಸದ್ಯ ಕಂಪನಿಯು ಭಾರತದಲ್ಲಿ ಹೊಸ ಕಾರನ್ನು ಸೀಮಿತ ಸಂಖ್ಯೆಯಲ್ಲಿ ಮಾತ್ರ ಮಾರಾಟ ಮಾಡಲಿದೆ.

ದೇಶದ ಮೊದಲ 150kWh ಡಿಸಿ ಇವಿ ಫಾಸ್ಟ್ ಚಾರ್ಜರ್ ಸ್ಥಾಪಿಸಿದ ಕಿಯಾ ಇಂಡಿಯಾ

ಹೊಸ ಕಾರನ್ನು ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಂಡಿರುವುದರಿಂದ ತುಸು ದುಬಾರಿ ಎನ್ನಿಸಲಿರುವ ಹೊಸ ಕಾರು ಮುಂಬರುವ ಕೆಲವು ವರ್ಷಗಳಲ್ಲಿ ಭಾರತದಲ್ಲಿಯೇ ಜೋಡಣೆಯಾಗಲಿದ್ದು, ಇವಿ6 ಜೊತೆಗೆ ಕಂಪನಿಯು ಶೀಘ್ರದಲ್ಲಿಯೇ ತನ್ನ ಬಜೆಟ್ ಇವಿ ಮಾದರಿಯನ್ನು ಸಹ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

Most Read Articles

Kannada
English summary
Kia india installed india s first 150 kwh dc fast charger facilities
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X