Just In
- 7 hrs ago
ಕ್ರ್ಯಾಶ್ ಟೆಸ್ಟ್ನಲ್ಲಿ ಗರಿಷ್ಠ ರೇಟಿಂಗ್ ಪಡೆದುಕೊಂಡ ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು
- 8 hrs ago
ಕೇವಲ 40 ಸಾವಿರ ರೂ. ಬೆಲೆಗೆ ಬಿಡುಗಡೆಯಾಗಿದೆ 100 ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್
- 9 hrs ago
ಎರ್ಟಿಗಾದಲ್ಲಿ ಹೊಸ ಸಿಎನ್ಜಿ ರೂಪಾಂತರಗಳನ್ನು ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
- 9 hrs ago
ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್
Don't Miss!
- Sports
IPL 2022: ಕೆಎಲ್ ರಾಹುಲ್ ಹೋರಾಟ ವ್ಯರ್ಥ, ಲಕ್ನೋಗೆ ಮಣ್ಣು ಮುಕ್ಕಿಸಿದ ಆರ್ಸಿಬಿ ಟ್ರೋಫಿ ಕನಸು ಜೀವಂತ
- News
ವಿಮಾನ ಇಂಧನ ತೆರಿಗೆ ಕಡಿತ ಮಾಡುತ್ತಾ ಕೇಂದ್ರ ಸರ್ಕಾರ?
- Movies
ಹಿಜಾಬ್ ಧರಿಸಿ ಮುಸ್ಲಿಂ ಮಹಿಳೆಯರ ಪಾತ್ರ ಮಾಡುತ್ತಿರುವ ಸ್ಟಾರ್ ನಟಿಯರಿವರು
- Lifestyle
12 ಲಕ್ಷ ಖರ್ಚು ಮಾಡಿದ ನಾಯಿಯಾದ ಜಪಾನಿನ ವ್ಯಕ್ತಿ!
- Finance
ಮೇ 25ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Technology
ಅಪ್ಲಿಕೇಶನ್ ಡೆವಲಪರ್ಗಳಿಗೆ ಮತ್ತೊಮ್ಮೆ ಸಂದೇಶ ಕಳುಹಿಸಿದ ಆಪಲ್ ಕಂಪೆನಿ!
- Education
ESIC MTS 2022 : ಫೇಸ್ I ಫಲಿತಾಂಶ ಮತ್ತು ಫೇಸ್ II ಪ್ರವೇಶ ಪತ್ರ ಪ್ರಕಟ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಸುರಕ್ಷಾ ಫೀಚರ್ಸ್‌ಗಳೊಂದಿಗೆ ಉನ್ನತೀಕರಣಗೊಂಡ ಕಿಯಾ ಸೆಲ್ಟೊಸ್ ಡೀಸೆಲ್ ಐಎಂಟಿ ವರ್ಷನ್
ಕಿಯಾ ಇಂಡಿಯಾ(Kia India) ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿ ಮಾದರಿಯಾದ ಸೆಲ್ಟೊಸ್ ಹೈ ಎಂಡ್ ಮಾದರಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಪರಿಚಯಿಸಿದ್ದು, ಸೆಲ್ಟೊಸ್ ಡೀಸೆಲ್ ಐಎಂಟಿ ಮಾದರಿಯನ್ನು ಹೊಸ ಸುರಕ್ಷಾ ವೈಶಿಷ್ಟ್ಯತೆಗಳೊಂದಿಗೆ ಉನ್ನತೀಕರಿಸಿದೆ.

ಸೆಲ್ಟೊಸ್ ಡೀಸೆಲ್ ಐಎಂಟಿ ಮಾದರಿಯಲ್ಲಿ ಕಿಯಾ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಹೊಸ ಸುರಕ್ಷಾ ಫೀಚರ್ಸ್‌ಗಳನ್ನು ಉನ್ನತೀಕರಿಸುವುದರ ಜೊತೆಗೆ ಗ್ರಾಹಕರ ಬೇಡಿಕೆ ಆಧರಿಸಿ ಮಧ್ಯಂತರ ಆವೃತ್ತಿಯಾದ ಹೆಚ್‌ಟಿಎಕ್ಸ್ ಪ್ಲಸ್ ಡೀಸೆಲ್ ಆಟೋಮ್ಯಾಟಿಕ್ ಮಾದರಿಯನ್ನು ಸ್ಥಗಿತಗೊಳಿಸಲಾಗಿದೆ.

ಹೆಚ್‌ಟಿಎಕ್ಸ್ ಪ್ಲಸ್ ಡೀಸೆಲ್ ಆಟೋಮ್ಯಾಟಿಕ್ ಮಾದರಿಯನ್ನು ಸ್ಥಗಿತದ ನಂತರ ಕಂಪನಿಯು ಡೀಸೆಲ್ ಐಎಂಟಿ ವರ್ಷನ್ ಮಾದರಿಯನ್ನು ಉನ್ನತೀಕರಿಸುತ್ತಿದ್ದು, ಹೆಚ್‌ಟಿಎಕ್ಸ್ ಪ್ಲಸ್ ಡೀಸೆಲ್ ಆಟೋಮ್ಯಾಟಿಕ್ ಸ್ಧಗಿತದ ನಂತರ ಡೀಸೆಲ್ ಆಟೋಮ್ಯಾಟಿಕ್ ಬಯಸುವ ಗ್ರಾಹಕರು ಈಗ ಟಾಪ್-ಸ್ಪೆಕ್ ಜಿಟಿಎಕ್ಸ್ ಪ್ಲಸ್ ಮಾದರಿಯನ್ನು ಆಯ್ದುಕೊಳ್ಳಬೇಕಾಗುತ್ತದೆ.

ಸ್ಥಗಿತಗೊಳಿಸಲಾದ ಹೆಚ್‌ಟಿಎಕ್ಸ್ ಪ್ಲಸ್ ಡೀಸೆಲ್ ಆಟೋಮ್ಯಾಟಿಕ್ ಮಾದರಿಯ ಎಕ್ಸ್‌ಶೋರೂಂ ಪ್ರಕಾರ ರೂ.14.25 ಲಕ್ಷ ಹೊಂದಿದ್ದರೆ ಟಾಪ್-ಸ್ಪೆಕ್ ಜಿಟಿಎಕ್ಸ್ ಪ್ಲಸ್ ಮಾದರಿಯು ಎಕ್ಸ್ ಶೋ ರೂಂ ಬೆಲೆ ರೂ. 17.95 ಲಕ್ಷ ಆಗುತ್ತದೆ.

ಹೀಗಾಗಿ ಈ ಎರಡು ಮಾದರಿಗಳ ನಡುವಿನ ಸ್ಥಾನ ತುಂಬುವ ಡೀಸೆಲ್ ಐಎಂಟಿ ಮಾದರಿಯು ಉತ್ತಮ ಬೆಲೆ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದ್ದು, ಇದೇ ಮಾದರಿಗಾಗಿ ಕಂಪನಿಯು ಇದೀಗ ಸ್ಟ್ಯಾಂಡರ್ಡ್ ಆಗಿ ಆರು ಏರ್‌ಬ್ಯಾಗ್‌ಗಳನ್ನು ಜೋಡಣೆ ಮಾಡುತ್ತಿದೆ.

ಹೊಸ ಸುರಕ್ಷಾ ಫೀಚರ್ಸ್ ಹೊಂದಿರುವ ಡೀಸೆಲ್ ಐಎಂಟಿ ಮಾದರಿಯು ಶೀಘ್ರದಲ್ಲಿಯೇ ಖರೀದಿಗೆ ಲಭ್ಯವಾಗಲಿದ್ದು, ಸ್ಟ್ಯಾಂಡರ್ಡ್ ಮಾದರಿಗಳೊಂದಿಗೆ ಸೆಲ್ಟೊಸ್ ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.9.95 ಲಕ್ಷ ಆರಂಭಿಕ ಬೆಲೆಯೊಂದಿಗೆ ಟಾಪ್ ಎಂಡ್ ಮಾದರಿಯು ರೂ. 18.19 ಲಕ್ಷ ಬೆಲೆ ಹೊಂದಿದೆ.

ಸೆಲ್ಟೊಸ್ ಮಾದರಿಯು ಪ್ರಮುಖವಾಗಿ ಹೆಚ್‌ಟಿ ಮತ್ತು ಜಿಟಿ ಎನ್ನುವ ಎರಡು ಮಾದರಿಗಳೊಂದಿಗೆ ವಿವಿಧ ಎಂಜಿನ್ ಆಯ್ಕೆಯೊಂದಿಗೆ ಬರೋಬ್ಬರಿ 18 ವೆರಿಯೆಂಟ್‌ಗಳನ್ನು ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ಮೂರು ಎಂಜಿನ್ ಆಯ್ಕೆ ಹೊಂದಿದೆ.

ಭಾರತದಲ್ಲಿ ಕಾರು ಮಾರಾಟ ಆರಂಭಿಸಿದ ಕೆಲವೇ ವರ್ಷಗಳಲ್ಲಿ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವ ಮೂಲಕ ಭಾರೀ ಪ್ರಮಾಣದಲ್ಲಿ ಬೇಡಿಕೆ ಪಡೆದುಕೊಂಡಿದ್ದು, ಕಂಪನಿಯು ಮುಂದಿನ ಕೆಲವೇ ದಿನಗಳಲ್ಲಿ ಮತ್ತಷ್ಟು ಹೊಸ ಕಾರು ಉತ್ಪನ್ನಗಳೊಂದಿಗೆ ಪ್ರತಿಸ್ಪರ್ಧಿಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

2019ರಲ್ಲಿ ಭಾರತದಲ್ಲಿ ತನ್ನ ಮೊದಲ ಕಾರು ಮಾದರಿಯನ್ನ ಬಿಡುಗಡೆ ಮಾಡಿದ ನಂತರ ಕಿಯಾ ಕಂಪನಿಯು ಹಲವಾರು ಹೊಸ ದಾಖಲೆಗಳನ್ನು ತನ್ನದಾಗಿಸಿಕೊಂಡಿದ್ದು, ಮೊದಲ ಕಾರು ಮಾದರಿಯಾದ ಸೆಲ್ಟೊಸ್ ಎಸ್‌ಯುವಿ, ಎರಡನೇ ಕಾರು ಮಾದರಿಯಾಗಿ ಕಾರ್ನಿವಾಲ್ ಎಂಪಿವಿ, ಮೂರನೇ ಕಾರು ಮಾದರಿಯಾಗಿ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಹೊಸ ಕಾರೆನ್ಸ್ ಎಂಯುವಿ ಮಾದರಿಯನ್ನು ಬಿಡುಗಡೆ ಮಾಡಿದೆ.

ಕಿಯಾ ಕಂಪನಿಯು ಕಾರು ಮಾರಾಟ ಆರಂಭದಲ್ಲಿ ದಿನಗಳಲ್ಲಿ ಕೆಲವೇ ಕೆಲವು ನಗರಗಳಲ್ಲಿ ಮಾರಾಟ ಸೌಲಭ್ಯವನ್ನು ಹೊಂದಿತ್ತು. ಇದುವರೆಗೆ ಕಂಪನಿಯು ವಿವಿಧ ಹಂತದ ಹೂಡಿಕೆಯೊಂದಿಗೆ ಸುಮಾರು 110 ನಗರಗಳಲ್ಲಿ 200ಕ್ಕೂ ಹೆಚ್ಚು ಕಾರು ಮಾರಾಟ ಮಳಿಗೆಗಳನ್ನು ತೆರೆದಿದೆ.

ಪ್ರೀಮಿಯಂ ಕಾರುಗಳ ಮಾರಾಟ ಹೆಚ್ಚುತ್ತಿರುವುದರಿಂದ ಕಂಪನಿಯು ಮುಂದಿನ ಕೆಲವೇ ದಿನಗಳಲ್ಲಿ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ತೆರೆಯುವ ಯೋಜನೆಯಲ್ಲಿದ್ದು, 2022ರ ಕೊನೆಯಲ್ಲಿ ಕಂಪನಿಯು 225 ಮಾರಾಟ ಮಳಿಗೆಗಳನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದು, ಕೇವಲ ಮಹಾನಗರಗಳಲ್ಲಿ ಮಾತ್ರವಲ್ಲ ಟೈರ್ 1 ಮತ್ತು ಟೈರ್ 2 ನಗರಗಳಲ್ಲೂ ಹೆಚ್ಚಿನ ಮಾರಾಟ ಮಳಿಗೆಗಳನ್ನು ವಿಸ್ತರಿಸುವುದಾಗಿ ಹೇಳಿಕೊಂಡಿದೆ.

ಕಿಯಾ ಕಂಪನಿಯ ಕಾರು ಮಾರಾಟ ಆರಂಭಿಸಿದ ನಂತರ ಇದುವರೆಗೆ ಭಾರತದಲ್ಲಿ 4.50 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ್ದು, ಹೊಸ ಮಾರಾಟ ಮಳಿಗೆಗಳನ್ನು ಹೆಚ್ಚಿಸುವ ಮೂಲಕ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಕಿಯಾ ಕಂಪನಿಯು ಭಾರತದಲ್ಲಿ ಸುಮಾರು ರೂ. 8 ಸಾವಿರ ಕೋಟಿ ಹೂಡಿಕೆಯೊಂದಿಗೆ ಕಾರು ಉತ್ಪಾದನೆಯನ್ನು ಆರಂಭಿಸಿದ್ದು, ವಾರ್ಷಿಕವಾಗಿ ಮೂರು ಲಕ್ಷ ಕಾರುಗಳ ಉತ್ಪಾದನಾ ಸಾಮರ್ಥ್ಯದ ಉತ್ಪಾದನಾ ಘಟಕವನ್ನು ತೆರೆದಿದೆ.

ಸದ್ಯ ಕಿಯಾ ಕಂಪನಿಯು ಭಾರತದಲ್ಲಿ ಉತ್ಪಾದನೆ ಮಾಡಲಾಗುತ್ತಿರುವ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ಮಾತ್ರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೇಡಿಕೆ ಪೂರೈಸುತ್ತಿದ್ದು, ಹೊಸ ಕಾರೆನ್ಸ್ ಕಾರು ಮತ್ತಷ್ಟು ಬೇಡಿಕೆ ತಂದುಕೊಡಲಿವೆ.

ಕಿಯಾ ಕಂಪನಿಯು ಸದ್ಯ ಸೆಲ್ಟೊಸ್, ಸೊನೆಟ್, ಕಾರ್ನಿವಾಲ್ ಮತ್ತು ಕಾರೆನ್ಸ್ ಕಾರುಗಳೊಂದಿಗೆ ಕಾರು ಮಾರಾಟದಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದು, ಮುಂಬರುವ ಮಾರ್ಚ್ ವೇಳೆಗೆ ಪ್ರಮುಖ ಕಾರುಗಳಲ್ಲಿ 2022ರ ಆವೃತ್ತಿಗಳನ್ನು ಸಹ ಬಿಡುಗಡೆ ಮಾಡಲು ಸಿದ್ದಗೊಳ್ಳುತ್ತಿದೆ.