Just In
- 18 min ago
ಭಾರತದಲ್ಲಿ ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಎಂಜಿ ಎಲೆಕ್ಟ್ರಿಕ್ ಕಾರು
- 25 min ago
ರೈಲು ಚಾಲನೆಗೆ ಇಬ್ಬರು ಲೋಕೋ ಪೈಲಟ್ಗಳನ್ನು ಏಕೆ ನೇಮಿಸುತ್ತಾರೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
- 1 hr ago
ಆಕರ್ಷಕದ ವಿನ್ಯಾಸದಲ್ಲಿ ಹ್ಯುಂಡೈ ಐಯಾನಿಕ್ ಎಲೆಕ್ಟ್ರಿಕ್ ಕಾರು ಅನಾವರಣ
- 2 hrs ago
ಮಳೆಯಲ್ಲಿ ಬೈಕ್ ಚಾಲನೆ ಮಾಡುವ ಸವಾರರು ಸುರಕ್ಷಿತವಾಗಿರಲು ಈ ಟಿಪ್ಸ್ ಫಾಲೋ ಮಾಡಿ
Don't Miss!
- Sports
ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್: ಎಡ್ಜ್ಬಾಸ್ಟನ್ ಪಿಚ್ ವರದಿ, ಸ್ಕ್ವಾಡ್
- Education
IWST Recruitment 2022 : 13 ಪ್ರಾಜೆಕ್ಟ್ ಫೆಲೋ ಮತ್ತು ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಸುನೇತ್ರಾ ಪಂಡಿತ್: ಆಕ್ಸಿಡೆಂಟ್ ಬಳಿಕ ನಟನೆಗೆ ಮರಳಿದ ಸುನೇತ್ರಾ ಪಂಡಿತ್
- News
ಗ್ರಾಮೀಣ ರಸ್ತೆ ದುರಸ್ತಿ; ಎನ್ಎಚ್ಎಐ ಅಧಿಕಾರಿಗಳ ವಿರುದ್ಧ ಗೋಪಾಲಯ್ಯ ಗರಂ
- Finance
ಡಾಲರ್ ಎದುರು ಮತ್ತೆ ಸಾರ್ವಕಾಲಿತ ಕುಸಿತ ಕಂಡ ರೂಪಾಯಿ
- Technology
ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ನಲ್ಲಿ ಈ ಫೋನ್ಗಳಿಗೆ ಬಿಗ್ ಆಫರ್!
- Lifestyle
ಫಸ್ಟ್ ಟೈಮ್ ಪ್ರೆಗ್ನೆನ್ಸಿ?ನೀವು ತಿಳಿಯಲೇಬೇಕಾದ ಸಂಗತಿಗಳಿವು
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
ಕಾರೆನ್ಸ್‌ಗೆ ಉತ್ತಮ ಪ್ರತಿಕ್ರಿಯೆ ಬೆನ್ನಲ್ಲೇ ಕಿಯಾ ಇಂಡಿಯದಿಂದ ಗುಡ್ ನ್ಯೂಸ್ !
ಕಿಯಾ ಇಂಡಿಯಾ ಕಂಪನಿಯು ಹೊಸ ಕಾರೆನ್ಸ್ ಎಂಯುವಿ ಮಾದರಿಯನ್ನು ಬಿಡುಗಡೆಗೊಳಿಸಿ ಅತಿ ಕಡಿಮೆ ಅವಧಿಯಲ್ಲಿ ಬರೋಬ್ಬರಿ 25 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿರುವ ಬೆನ್ನಲ್ಲೇ, ಇದೀಗ ಮತ್ತೊಂದು ಶುಭ ಸುದ್ದಿಯನ್ನು ಕಿಯಾ ಇಂಡಿಯಾ ಘೋಷನೆ ಮಾಡಿದೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿನ ಕಿಯಾ ಇಂಡಿಯಾ ಕಾರ್ಖಾನೆಯಲ್ಲಿ ಈಗ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು, ಕಿಯಾ ಇಂಡಿಯಾ ವರ್ಷಕ್ಕೆ 3 ಲಕ್ಷ ಕಾರುಗಳನ್ನು ಕಾರ್ಖಾನೆಯಿಂದ ಉತ್ಪಾದಿಸುವುದಾಗಿ ಘೋಷಿಸಿದೆ.

ಇದಕ್ಕೆ ಮುಖ್ಯ ಕಾರಣವೆಂದರೆ ಭಾರತೀಯ ಮಾರುಕಟ್ಟೆಗೆ ಕೆಐಎನ ಇತ್ತೀಚಿನ ಉತ್ಪನ್ನವಾಗಿ ಬಿಡುಗಡೆಗೊಳಿಸಿದ ಕ್ಯಾರೆನ್ಸ್‌ಗೆ ಉತ್ತಮ ಪ್ರತಿಕ್ರಿಯೆ ಲಭಿಸಿರುವುದು, ಈ ನಿಟ್ಟಿನಲ್ಲಿ ಅನಂತಪುರ ಕಾರ್ಖಾನೆಯಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಸದ್ಯ ಕಿಯಾ ಭಾರತದ ಮಾರುಕಟ್ಟೆಯಲ್ಲಿ 4 ಮಾದರಿಯ ಕಾರುಗಳನ್ನು ಮಾರಾಟ ಮಾಡುತ್ತಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಉತ್ಪನ್ನವಾಗಿ ಪರಿಚಯಿಸಿದ ಎಸ್‌ಯುವಿ ಮಾದರಿಯ ಸೆಲ್ಟೋಸ್ತಾನ್, ನಂತರ ಕಿಯಾ ಕಾರ್ನಿವಲ್ ಮತ್ತು ಸೋನೆಟ್ ಅನ್ನು ಪರಿಚಯಿಸಿತು. ಇವು ಕ್ರಮವಾಗಿ ಐಷಾರಾಮಿ ಎಂಪಿವಿ ಮತ್ತು ಸಬ್-4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿ ಕಾರುಗಳು.

ಈ ಕಾರುಗಳ ನಂತರ, ಕಿಯಾ ಇತ್ತೀಚೆಗೆ ಕ್ಯಾರೆನ್ಸ್ ಕಾರನ್ನು ಬಿಡುಗಡೆ ಮಾಡಿತು. ಒಟ್ಟಾರೆ ಈ 4 ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿವೆ. ಆದ್ದರಿಂದ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಉತ್ಪಾದನೆಯನ್ನು ಹೆಚ್ಚಿಸಲಾಗಿದೆ.

ಅನಂತಪುರ ಕಾರ್ಖಾನೆಯಲ್ಲಿ ಉತ್ಪಾದನೆಯನ್ನು ಹೆಚ್ಚಿಸಿರುವುದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಕಾರುಗಳಿಗಾಗಿ ಕಾಯುವ ಅವಧಿ ಕಡಿಮೆ ಮಾಡುವ ನಿರೀಕ್ಷೆಯಿದೆ. ಆದ್ದರಿಂದ ಬುಕಿಂಗ್ ಮಾಡಿದ ಗ್ರಾಹಕರಿಗೆ ಕಿಯಾ ಕಾರುಗಳು ಹಿಂದಿಗಿಂತಲೂ ವೇಗವಾಗಿ ತಲುಪಲಿವೆ.

"ಭಾರತವು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಮಾರುಕಟ್ಟೆಗಳಲ್ಲಿ ತನ್ನನ್ನು ಗುರತಿಸಿಕೊಂಡಿದೆ. ನಮ್ಮ ಎಲ್ಲಾ ಉತ್ಪನ್ನಗಳು ಇಲ್ಲಿ ಉತ್ತಮವಾಗಿ ಸ್ವೀಕರಿಸಲ್ಪಡುತ್ತಿವೆ. ಗ್ರಾಹಕರಿಗೆ ಕಾರುಗಳನ್ನು ತ್ವರಿತವಾಗಿ ತಲುಪಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಕಿಯಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ-ಜಿನ್ ಪಾರ್ಕ್ ಹೆಳಿದರು.

" ಕಿಯಾ ಇಂಡಿಯ ತನ್ನ ಕಾರುಗಳನ್ನು ಭಾರತದ ದೇಶೀಯ ಮಾರುಕಟ್ಟೆಯಲ್ಲಿರುವ ಅನಂತಪುರ ಕಾರ್ಖಾನೆಯಲ್ಲಿ ಮಾರಾಟ ಮಾಡುವುದಲ್ಲದೆ, ಅವುಗಳನ್ನು ಬೇಡಿಕೆ ಹೆಚ್ಚಾಗಿರುವ ವಿದೇಶಗಳಿಗೆ ರಫ್ತು ಮಾಡುತ್ತಿದೆ. ಕಿಯಾ ಅನಂತಪುರ ಕಾರ್ಖಾನೆಯಿಂದ ಕಾರುಗಳನ್ನು ಮಧ್ಯಪ್ರಾಚ್ಯ, ಆಫ್ರಿಕಾ, ಮಧ್ಯ ಮತ್ತು ದಕ್ಷಿಣ ಅಮೆರಿಕ ಸೇರಿದಂತೆ ವಿವಿಧ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತಿದೆ.

ಆದ್ದರಿಂದ ಉತ್ಪಾದನೆ ಹೆಚ್ಚಳದೊಂದಿಗೆ ಅನಂತಪುರ ಕಾರ್ಖಾನೆ ವಿದೇಶಗಳಿಗೆ ಕೆಐಎನ ಪ್ರಮುಖ ರಫ್ತು ಕೇಂದ್ರವಾಗುವ ಸಾಧ್ಯತೆಯೂ ಇದೆ. ಪ್ರಸ್ತುತ ಎಲ್ಲರ ಕಣ್ಣು ಕಿಯಾ ಕ್ಯಾರೆನ್ಸ್ ಮೇಲೆ ಇದೆ. ಇದಕ್ಕೆ ಏಕಿಷ್ಟು ಪ್ರಾಮುಖ್ಯತೆ ಎಂದರೆ ಎಂಪಿವಿ ಮತ್ತು ಎಸ್‌ಯುವಿ ಕಾರುಗಳ ವಿನ್ಯಾಸವನ್ನು ಮಿಶ್ರಣ ಮಾಡುವ ಮೂಲಕ ಕಿಯಾ ಕ್ಯಾರೆನ್ಸ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

ಕಿಯಾ ಕ್ಯಾರೆನ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಎರ್ಟಿಗಾ, ಮಾರುತಿ ಸುಜುಕಿ ಎಕ್ಸ್‌ಎಲ್ 6 ಮತ್ತು ಮಹಿಂದ್ರ ಮರಸೊಗಳೊಂಗೆ ಸ್ಪರ್ಧಿಸಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯವಾಗಿರುವ ಟೊಯೊಟಾ ಇನ್ನೋವಾ ಕ್ರಿಸ್ಟಾ ಎಂಪಿವಿ ಕೂಡ ಕಿಯಾ ಕ್ಯಾರೆನ್ಸ್‌ಗೆ ಸವಾಲು ಹಾಕುವ ನಿರೀಕ್ಷೆಯಿದೆ.

ಜೊತಗೆ ಕಿಯಾ ಕ್ಯಾರೆನ್ಸ್ ಅನ್ನು ಟೊಯೊಟಾ ಇನ್ನೋವಾ ಕ್ರಿಸ್ಟಾದ ಅಗ್ಗದ ರೂಪಾಂತರಗಳಿಗೆ ಪ್ರತಿಸ್ಪರ್ಧಿ ಎಂದು ಹೇಳಬಹುದು. ಹೈದರಾಬಾದ್ ಮೂಲದ ಕಿಯಾ ಇಂಡಿಯಾ ಮಾನ್ಯತೆ ಪಡೆದ ಡೀಲರ್ಶಿಪ್ ಇತ್ತೀಚೆಗೆ ಒಂದೇ ದಿನದಲ್ಲಿ 40 ಕ್ಯಾರೆನ್ಸ್ ಕಾರುಗಳನ್ನು ವಿತರಿಸಿದೆ. ಈ ಕಾರಿನಿಂದ ಪ್ರತಿ ತಿಂಗಳು ಕಿಯಾಗೆ ಉತ್ತಮ ಮಾರಾಟದ ಸಂಖ್ಯೆಯನ್ನು ಗಳಿಸುವ ನಿರೀಕ್ಷೆಯಿದೆ.