ಅತಿ ಕಡಿಮೆ ಅವಧಿಯಲ್ಲಿ ಕಿಯಾ ಸೆಲ್ಟೋಸ್ ಹೊಸ ಮೈಲಿಗಲ್ಲು: ದೇಶದಲ್ಲಿ ದಾಖಲೆಯ ಮಾರಾಟ

ಕಿಯಾ ಇಂಡಿಯಾ ತನ್ನ ಪ್ರಮುಖ ಮಧ್ಯಮ ಗಾತ್ರದ ಎಸ್‌ಯುವಿಯಾದ ಕಿಯಾ ಸೆಲ್ಟೋಸ್, ದೇಶದಲ್ಲಿ 3 ಲಕ್ಷ ಮಾರಾಟದ ಮೈಲಿಗಲ್ಲನ್ನು ದಾಟಿದೆ ಎಂದು ಘೋಷಿಸಿದೆ. ಈ ಮೈಲಿಗಲ್ಲನ್ನು ಸಾಧಿಸಲು 3 ವರ್ಷಗಳಿಗಿಂತ ಕಡಿಮೆ ಸಮಯವನ್ನು ತೆಗೆದುಕೊಂಡಿದ್ದು, ಸೆಲ್ಟೋಸ್ ಈ ಸಾಧನೆಯನ್ನು ಸಾಧಿಸಿದ ಅತ್ಯಂತ ವೇಗದ SUV ಎಂದು ಕಂಪನಿ ತಿಳಿಸಿದೆ.

ಅತಿ ಕಡಿಮೆ ಅವಧಿಯಲ್ಲಿ ಕಿಯಾ ಸೆಲ್ಟೋಸ್ ಹೊಸ ಮೈಲಿಗಲ್ಲು: ದೇಶದಲ್ಲಿ ದಾಖಲೆಯ ಮಾರಾಟ

ಭಾರತದಲ್ಲಿ ತನ್ನ 3 ನೇ ವಾರ್ಷಿಕೋತ್ಸವವನ್ನು ಆಗಸ್ಟ್22 ರಂದು ಆಚರಿಸಲು ಕಿಯಾ ಇಂಡಿಯಾ ಸಿದ್ಧವಾಗಿದೆ, ಇದು ಭಾರತದಲ್ಲಿ ಸೆಲ್ಟೋಸ್ ಅನ್ನು ಬಿಡುಗಡೆ ಮಾಡಿ ಮೂರು ವರ್ಷಗಳನ್ನು ಪೂರೈಸಿದೆ. ಕಿಯಾ ಸೆಲ್ಟೋಸ್ ಭಾರತದಲ್ಲಿ ಅತ್ಯಂತ ಜನಪ್ರಿಯ ಕಿಯಾ ಉತ್ಪನ್ನವಾಗಿದ್ದು, ದೇಶದಲ್ಲಿ ಕಂಪನಿಯ ಒಟ್ಟು ಮಾರಾಟದ ಶೇ 60 ರಷ್ಟು ಭಾಗವನ್ನು ಹೊಂದಿದೆ.

ಅತಿ ಕಡಿಮೆ ಅವಧಿಯಲ್ಲಿ ಕಿಯಾ ಸೆಲ್ಟೋಸ್ ಹೊಸ ಮೈಲಿಗಲ್ಲು: ದೇಶದಲ್ಲಿ ದಾಖಲೆಯ ಮಾರಾಟ

ದೇಶೀಯ ಮಾರುಕಟ್ಟೆಯಲ್ಲಿ ತನ್ನ ಪ್ರಯಾಣದ ಜೊತೆಗೆ, ಸೆಲ್ಟೋಸ್ ವಿದೇಶಿ ಮಾರುಕಟ್ಟೆಯಲ್ಲಿಯೂ ಸಹ ಬಲವಾದ ಬೇಡಿಕೆಯನ್ನು ಹೊಂದಿದೆ, ಕಿಯಾ ಇಂಡಿಯಾ ಅನಂತಪುರ ಸ್ಥಾವರದಿಂದ ಇಲ್ಲಿಯವರೆಗೆ 91ಕ್ಕೂ ಹೆಚ್ಚು ದೇಶಗಳಿಗೆ 103,033 ಸೆಲ್ಟೋಸ್‌ಗಳನ್ನು ರಫ್ತು ಮಾಡಲಾಗಿದೆ.

ಅತಿ ಕಡಿಮೆ ಅವಧಿಯಲ್ಲಿ ಕಿಯಾ ಸೆಲ್ಟೋಸ್ ಹೊಸ ಮೈಲಿಗಲ್ಲು: ದೇಶದಲ್ಲಿ ದಾಖಲೆಯ ಮಾರಾಟ

ಕಿಯಾ ಇಂಡಿಯಾದ ಮುಖ್ಯ ಮಾರಾಟ ಅಧಿಕಾರಿ ಮ್ಯುಂಗ್-ಸಿಕ್ ಸೊಹ್ನ್ ಮಾತನಾಡಿ, "ಭಾರತದಲ್ಲಿ ನಮ್ಮ ಮೊದಲ ಉತ್ಪನ್ನವಾಗಿರುವ ಸೆಲ್ಟೋಸ್ ಕಿಯಾ ಕಥೆಯನ್ನು ಇಲ್ಲಿ ಪಟ್ಟಿಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸೆಲ್ಟೋಸ್‌ನೊಂದಿಗೆ, ಕಿಯಾ ಇಂಡಿಯಾ ತನ್ನನ್ನು ನಿಜವಾದ ಬ್ರಾಂಡ್‌ ಆಗಿ ಸ್ಥಾಪಿಸಿಕೊಳ್ಳಲು ಸಾಧ್ಯವಾಯಿತು.

ಅತಿ ಕಡಿಮೆ ಅವಧಿಯಲ್ಲಿ ಕಿಯಾ ಸೆಲ್ಟೋಸ್ ಹೊಸ ಮೈಲಿಗಲ್ಲು: ದೇಶದಲ್ಲಿ ದಾಖಲೆಯ ಮಾರಾಟ

ದೇಶದಲ್ಲಿ ಮಾರಾಟವನ್ನು ಪ್ರಾರಂಭಿಸಿದ ಕೇವಲ ಎರಡು ತಿಂಗಳೊಳಗೆ ದೇಶದ ಅಗ್ರ 5 ಕಾರು ತಯಾರಕರಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಯಿತು. ಸೆಲ್ಟೋಸ್ ತನ್ನ ವಿಭಾಗದಲ್ಲಿ ಮಾತ್ರವಲ್ಲದೆ ಒಟ್ಟಾರೆ ಭಾರತೀಯ ವಾಹನ ಉದ್ಯಮದಲ್ಲಿ ತನ್ನ ಛಾಪು ಮೂಡಿಸಿರುವುದನ್ನು ನಾವು ಇಂದು ನೋಡಿ ಸಂತೋಷಪಡುತ್ತೇವೆ. ಇದು ಹೊಸ ಯುಗದ ಭಾರತೀಯ ಗ್ರಾಹಕರಿಂದ ಹೆಚ್ಚು ಬೇಡಿಕೆಯಿರುವ ಕಾರುಗಳಲ್ಲಿ ಒಂದಾಗಿದೆ ಎಂದರು.

ಅತಿ ಕಡಿಮೆ ಅವಧಿಯಲ್ಲಿ ಕಿಯಾ ಸೆಲ್ಟೋಸ್ ಹೊಸ ಮೈಲಿಗಲ್ಲು: ದೇಶದಲ್ಲಿ ದಾಖಲೆಯ ಮಾರಾಟ

"ಇತ್ತೀಚೆಗೆ, ನಾವು ಸೆಲ್ಟೋಸ್‌ನಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ಪರಿಚಯಿಸಿದ್ದೇವೆ, ಇದು ಮತ್ತೊಮ್ಮೆ ಮೊದಲ ವಿಭಾಗವಾಗಿದೆ. ನಮ್ಮ ಉತ್ಪನ್ನಗಳಲ್ಲಿ ಇಂತಹ ನಿಯಮಿತ ಅಪ್‌ಡೇಟ್‌ಗಳು ಮತ್ತು ಬಲವಾದ ಗ್ರಾಹಕ ಕೇಂದ್ರಿತ ವಿಧಾನದೊಂದಿಗೆ, ನಮ್ಮ ಬೆಳವಣಿಗೆಯ ಆವೇಗವನ್ನು ಮುಂದುವರಿಸುವ ಬಗ್ಗೆ ನಾವು ತುಂಬಾ ಆಶಾವಾದಿಗಳಾಗಿದ್ದೇವೆ. ಮುಂಬರುವ ದಿನಗಳಲ್ಲಿ ಹೆಚ್ಚು ಬಲವಾದ ಬ್ರ್ಯಾಂಡ್ ಆಗಿ ಹೊರಹೊಮ್ಮುತ್ತೇವೆ.

ಅತಿ ಕಡಿಮೆ ಅವಧಿಯಲ್ಲಿ ಕಿಯಾ ಸೆಲ್ಟೋಸ್ ಹೊಸ ಮೈಲಿಗಲ್ಲು: ದೇಶದಲ್ಲಿ ದಾಖಲೆಯ ಮಾರಾಟ

ಕಿಯಾ ಇಂಡಿಯಾ ಇತ್ತೀಚೆಗೆ ದೇಶದಲ್ಲಿ 5-ಲಕ್ಷ ಮಾರಾಟದ ಮೈಲಿಗಲ್ಲನ್ನು ದಾಟಿದೆ, ಒಟ್ಟಾರೆ ಮಾರಾಟಕ್ಕೆ ಸೆಲ್ಟೋಸ್ ಶೇ60 ರಷ್ಟು ಕೊಡುಗೆ ನೀಡುತ್ತಿದೆ. ಶೇ 58 ಸೆಲ್ಟೋಸ್ ಮಾರಾಟವು ಅದರ ಉನ್ನತ ರೂಪಾಂತರಗಳಿಂದ ಬಂದಿದ್ದರೆ, ವಾಹನದ ಆಟೋಮ್ಯಾಟಿಕ್ ಆಯ್ಕೆಗಳು ಶೇ 25 ರಷ್ಟು ಕೊಡುಗೆ ನೀಡುತ್ತವೆ.

ಅತಿ ಕಡಿಮೆ ಅವಧಿಯಲ್ಲಿ ಕಿಯಾ ಸೆಲ್ಟೋಸ್ ಹೊಸ ಮೈಲಿಗಲ್ಲು: ದೇಶದಲ್ಲಿ ದಾಖಲೆಯ ಮಾರಾಟ

ಗ್ರಾಹಕರಿಗೆ ಸೆಲ್ಟೋಸ್ ಖರೀದಿಸುವಾಗ ಹೆಚ್ಚು ಜನಪ್ರಿಯವಾದ ರೂಪಾಂತರವೆಂದರೆ HTX ಪೆಟ್ರೋಲ್ ಆಗಿದ್ದು ಅದರಲ್ಲೂ ಅತ್ಯಂತ ಜನಪ್ರಿಯ ಬಣ್ಣವೆಂದರೆ ಬಿಳಿ ಬಣ್ಣವಾಗಿದೆ. ಸೆಲ್ಟೋಸ್‌ನ ಪೆಟ್ರೋಲ್ ಮತ್ತು ಡೀಸೆಲ್ ರೂಪಾಂತರದ ಬೇಡಿಕೆಯು ಸಮತೋಲಿತವಾಗಿದೆ. ಶೇ 46 ರಷ್ಟು ಗ್ರಾಹಕರು ಸೆಲ್ಟೋಸ್‌ನ ಡೀಸೆಲ್ ರೂಪಾಂತರಗಳಿಗೆ ಆದ್ಯತೆ ನೀಡುತ್ತಿರುವುದಾಗಿ ತಿಳಿಸಿದರು.

ಅತಿ ಕಡಿಮೆ ಅವಧಿಯಲ್ಲಿ ಕಿಯಾ ಸೆಲ್ಟೋಸ್ ಹೊಸ ಮೈಲಿಗಲ್ಲು: ದೇಶದಲ್ಲಿ ದಾಖಲೆಯ ಮಾರಾಟ

ಹೊಸ ಫೀಚರ್ಸ್‌ಗಳೊಂದಿಗೆ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್

ಕಿಯಾ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಫೇಸ್‌ಲಿಫ್ಟೆಡ್ ಸೆಲ್ಟೋಸ್ ಅನ್ನು ಪರಿಚಯಿಸಿದ್ದು, ಈ ವರ್ಷದ ಕೊನೆಯಲ್ಲಿ ಅಥವಾ 2023ರ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹೊಸ ಪ್ರತಿಸ್ಪರ್ಧಿಗಳು ಬರುವುದರೊಂದಿಗೆ ಅದರ ವಿಭಾಗದಲ್ಲಿ ಪೈಪೋಟಿಯು ಹೆಚ್ಚು ತೀವ್ರವಾಗುತ್ತಿದೆ. ಬೆಳೆಯುತ್ತಿರುವ ಸ್ಪರ್ಧೆಗೆ ಫೇಸ್‌ಲಿಫ್ಟ್ ಮಾದರಿಯೊಂದಿಗೆ ಪೈಪೋಟಿ ನೀಡಲು ಸಜ್ಜಾಗುತ್ತಿದೆ.

ಅತಿ ಕಡಿಮೆ ಅವಧಿಯಲ್ಲಿ ಕಿಯಾ ಸೆಲ್ಟೋಸ್ ಹೊಸ ಮೈಲಿಗಲ್ಲು: ದೇಶದಲ್ಲಿ ದಾಖಲೆಯ ಮಾರಾಟ

ದಕ್ಷಿಣ ಕೊರಿಯಾದಲ್ಲಿ ಹೊಸ ಕಿಯಾ ಸೆಲ್ಟೋಸ್ ಎಸ್‍ಯುವಿಯು ಎರಡು ಎಂಜಿನ್ ಆಯ್ಕೆಯೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಿತು. ಮೊದಲ ಎಂಜಿನ್ ಆಯ್ಕೆಯು 2.0-ಲೀಟರ್ ನ್ಯಾಚುರಲ್ ಆಸ್ಪೈರಡ್ ಪೆಟ್ರೋಲ್ ಎಂಜಿನ್ ಆಗಿದೆ. ಈ ಎಂಜಿನ್ 148 ಬಿಹೆ‍ಪಿ ಪವರ್ ಮತ್ತು 180 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಸಿವಿಟಿ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಅತಿ ಕಡಿಮೆ ಅವಧಿಯಲ್ಲಿ ಕಿಯಾ ಸೆಲ್ಟೋಸ್ ಹೊಸ ಮೈಲಿಗಲ್ಲು: ದೇಶದಲ್ಲಿ ದಾಖಲೆಯ ಮಾರಾಟ

ಈ ಹೊಸ ಕಿಯಾ ಸೆಲ್ಟೋಸ್ ಎಸ್‌ಯುವಿಯ ಫೇಸ್‌ಲಿಫ್ಟೆಡ್ ಮಾದರಿ ಈಗ ಹೊರಹೋಗುವ ಮಾದರಿಗಿಂತ ಹೆಚ್ಚು ಪ್ರೀಮಿಯಂ ಮತ್ತು ಪ್ರಬುದ್ಧವಾಗಿ ಕಾಣುತ್ತದೆ. ಹೊಸ ನವೀಕರಿಸಿದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಪೂರ್ಣ-ಅಗಲ ಲೈಟ್ ಬಾರ್‌ನೊಂದಿಗೆ ದೊಡ್ಡ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಹೊಂದಿವೆ.

ಅತಿ ಕಡಿಮೆ ಅವಧಿಯಲ್ಲಿ ಕಿಯಾ ಸೆಲ್ಟೋಸ್ ಹೊಸ ಮೈಲಿಗಲ್ಲು: ದೇಶದಲ್ಲಿ ದಾಖಲೆಯ ಮಾರಾಟ

ಎಸ್‍ಯುವಿಯಲ್ಲಿ ಸ್ಕ್ವಾರಿಶ್ ಫ್ರಂಟ್ ಗ್ರಿಲ್, ಮರುವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್, ಹೊಸ ಸ್ಕಿಡ್ ಪ್ಲೇಟ್‌ಗಳು ಮತ್ತು ಹೊಸ LED ಫಾಗ್ ಲ್ಯಾಂಪ್‌ಗಳನ್ನು ಹೊಂದಿದೆ. ಇದರ ಜೊತೆಗೆ, 2022ರ ಸೆಲ್ಟೋಸ್‌ನ ಫೇಸ್‌ಲಿಫ್ಟೆಡ್ ಆವೃತ್ತಿಯ ಎಕ್ಸಾಸ್ಟ್ ಟಿಪ್ ಹಿಂಬದಿಯ ಬಂಪರ್‌ನ ಅಡಿಯಲ್ಲಿ ಅಚ್ಚುಕಟ್ಟಾಗಿ ಹಿಡಿಯಲ್ಪಟ್ಟಂತೆ ತೋರುತ್ತಿದೆ ಮತ್ತು ಲೈಟ್ ಬಾರ್ ಮಧ್ಯದಲ್ಲಿ ಕಿಯಾ ಲೋಗೋವನ್ನು ಹೊಂದಿದೆ.

ಅತಿ ಕಡಿಮೆ ಅವಧಿಯಲ್ಲಿ ಕಿಯಾ ಸೆಲ್ಟೋಸ್ ಹೊಸ ಮೈಲಿಗಲ್ಲು: ದೇಶದಲ್ಲಿ ದಾಖಲೆಯ ಮಾರಾಟ

ಈ ಬದಲಾವಣೆಗಳ ಹೊರತಾಗಿಯೂ, 2022ರ ಕಿಯಾ ಸೆಲ್ಟೋಸ್‌ನ ಸಿಲೂಯೆಟ್ ಎಸ್‍ಯುವಿಯ ಹೊರಹೋಗುವ ಆವೃತ್ತಿಗೆ ಬಹುತೇಕ ಒಂದೇ ಆಗಿರುತ್ತದೆ. ಹೊಸ ಎಸ್‍ಯುವಿಯ ಒಳಭಾಗದಲ್ಲಿನವೀಕರಣಗಳು ಕ್ಯಾಬಿನ್ ಅನ್ನು ಹೆಚ್ಚು ದುಬಾರಿಯಾಗಿ ಕಾಣುವಂತೆ ಮಾಡಲು ಹಲವಾರು ವಿನ್ಯಾಸ ಬದಲಾವಣೆಗಳನ್ನು ಪಡೆದುಕೊಂಡಿದೆ.

ಅತಿ ಕಡಿಮೆ ಅವಧಿಯಲ್ಲಿ ಕಿಯಾ ಸೆಲ್ಟೋಸ್ ಹೊಸ ಮೈಲಿಗಲ್ಲು: ದೇಶದಲ್ಲಿ ದಾಖಲೆಯ ಮಾರಾಟ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹೊಸ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟೆಡ್ ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂದು ಕಿಯಾ ಅಧಿಕೃತವಾಗಿ ಹೇಳಿಲ್ಲ, ಆದರೆ 2023 ಆಟೋ ಎಕ್ಸ್‌ಪೋದಲ್ಲಿ ಇದು ಬಿಡುಗಡೆಯಾಗುವ ಸಾಧ್ಯತೆಗಳಿದೆ, ಪ್ರಸ್ತುತ, ಕಿಯಾ ಸೆಲ್ಟೋಸ್ ಗಿಂತ ಫೇಸ್‌ಲಿಫ್ಟೆಡ್ ಆವೃತ್ತಿ ತುಸು ದುಬಾರಿಯಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

Most Read Articles

Kannada
English summary
Kia Seltos New Milestone in Shortest Period Record Sales in Country
Story first published: Friday, August 12, 2022, 17:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X