Just In
- 4 hrs ago
ಎಲೆಕ್ಟ್ರಿಕ್, ಹೈಬ್ರಿಡ್ ಕಾರುಗಳಲ್ಲಿ ಮಾತ್ರ ರಿಜನರೇಟಿವ್ ಬ್ರೇಕಿಂಗ್ ಏಕೆ ಲಭ್ಯವಿದೆ: ಇದರ ಉಪಯೋಗವೇನು?
- 5 hrs ago
ಹೊಸ ನವೀಕರಣಗಳೊಂದಿಗೆ ಸಿಎಫ್ಮೋಟೋ 150ಎನ್ಕೆ ಬೈಕ್ ಬಿಡುಗಡೆ
- 7 hrs ago
ಏಪ್ರಿಲ್ ತಿಂಗಳ ಟಿವಿಎಸ್ ವಾಹನ ಮಾರಾಟ ವರದಿ: ರಫ್ತಿನಲ್ಲಿ ದಾಖಲೆ ನಿರ್ಮಾಣ
- 7 hrs ago
ಎಲೆಕ್ಟ್ರಿಕ್ ಕಾರ್ ಆಗಿ ಪರಿವರ್ತನೆಗೊಂಡು ಮಿಂಚುತ್ತಿದೆ 1954ರ ಫಿಯೆಟ್ ಕಾರು
Don't Miss!
- News
ಒಂದು ಲೀ ಪೆಟ್ರೋಲ್ ಇದ್ದಿದ್ದರೆ ಶಿಶು ಪ್ರಾಣ ಉಳಿಯುತ್ತಿತ್ತಾ? ಲಂಕಾದಲ್ಲೊಂದು ದುರಂತ
- Sports
GT vs RR: ಅಂತಿಮ ಓವರ್ನಲ್ಲಿ ಅತಿ ಹೆಚ್ಚು ಬಾರಿ ರನ್ ಚೇಸ್ ಮಾಡಿದ ಗುಜರಾತ್ ಟೈಟನ್ಸ್ ದಾಖಲೆ
- Lifestyle
ಮೇ. 30ಕ್ಕೆ ಶನಿ ಜಯಂತಿ: ಶನಿ ಧೈಯ್ಯಾ, ಶನಿ ದೋಷವಿದ್ದರೆ ಈ ಪರಿಹಾರಗಳನ್ನು ಮಾಡಿ
- Finance
ಮೇ 24ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
'ಯುಗಾಂತರ' ಧಾರಾವಾಹಿಗೆ ಪ್ರಾಮಾಣಿಕ ಐಎಎಸ್ ಅಧಿಕಾರಿ ಪ್ರೇರಣೆ: ವಾಹಿನಿ ಮುಖ್ಯಸ್ಥರ ಸ್ಪಷ್ಟನೆಯೇನು?
- Technology
ಭಾರತದಲ್ಲಿ ಎಲ್ಜಿ OLED 2022 ಸ್ಮಾರ್ಟ್ ಟಿವಿ ಸರಣಿ ಅನಾವರಣ!
- Education
BSF Recruitment 2022 : 281 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮನೆಯಷ್ಟೇ ಸೌಲಭ್ಯಗಳನ್ನು ನೀಡಲಿದೆ ಮಹಿಂದ್ರಾದ ಈ ಐಷಾರಾಮಿ ಕ್ಯಾಂಪರ್ !
ಭಾರತದ ಅತಿದೊಡ್ಡ ಕಾರು ತಯಾರಿಕಾ ಕಂಪನಿಯಾದ ಮಹಿಂದ್ರಾ, ಮನೆಯನ್ನು ಹೋಲುವ ಮತ್ತು ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿರುವ ಕಾರನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಯಾವುದೇ ಭಾರತೀಯ ಕಂಪನಿ ಮಾಡದ ಪ್ರಯತ್ನಕ್ಕೆ ಮುಂದಾಗಿದ್ದು, ಈ ವಾಹನ ಬಗೆಗಿನ ಮತ್ತಷ್ಟು ಮಾಹಿತಿ ಇಲ್ಲಿದೆ.

ಪ್ರಸಿದ್ಧ ಮಹಿಂದ್ರಾ ಕಂಪನಿಯು ಮನೆಯಂತಹ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಕಾರವಾನ್ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ. ಯಾವುದೇ ಭಾರತೀಯ ಕಂಪನಿಯು ಇದುವರೆಗೆ ಪ್ರಯತ್ನಿಸದ ಹೊಸ ಪ್ರಯತ್ನವಿದು ಎನ್ನಲಾಗಿದ್ದು, ಈ ಐಷಾರಾಮಿ ಕ್ಯಾಂಪರ್ (ಆಂಪೊ) ವಾಹನವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಈ ವಾಹನವು ಮಲಗುವ ಕೋಣೆ, ಅಡುಗೆ ಮನೆ ಮುಂತಾದ ಎಲ್ಲಾ ಸೌಕರ್ಯಗಳನ್ನು ಹೊಂದಿರಲಿದೆ. ವರದಿಗಳ ಪ್ರಕಾರ ಮಹಿಂದ್ರಾ, ಶೀಘ್ರದಲ್ಲೇ ಇಂತಹ ಸೂಪಿ ವಾಹನವನ್ನು ಕೈಗೆಟುಕುವ ಬೆಲೆಗೆ ಮಾರಾಟಕ್ಕೆ ತರಲಿದೆ. ಈಗಾಗಲೇ ಇದರ ರಚನೆಗಾಗಿ ಐಐಟಿ ಮದ್ರಾಸ್‌ನಲ್ಲಿ ಕಾರವಾನ್ ತಯಾರಕ ಕ್ಯಾಂಪರ್‌ವ್ಯಾನ್ ಫ್ಯಾಕ್ಟರಿ (ಆಂಪ್ಲಾನ್ ಕ್ಯಾರಸಿಟಿ) ನೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಮಾರ್ಚ್ 4ರಂದು ಒಪ್ಪಂದದ ಸಹಿಯನ್ನು ಕೂಡ ಮಾಡಲಾಗಿದೆ. ಈ ಕ್ಯಾಂಪರ್ ಡಿಸೈನ್‌ಗಾಗಿ ಮಹಿಂದ್ರಾದ ಅತ್ಯಂತ ಜನಪ್ರಿಯ ವಾಹನ ಮಾದರಿಗಳಲ್ಲಿ ಒಂದಾದ ಬೊಲೆರೊ ಪಿಕಪ್ ಟ್ರಕ್ ಅನ್ನು ಆಯ್ಕೆ ಮಾಡಿಕೊಂಡಿದ್ದು, ಇದನ್ನೇ ಕ್ಯಾಂಪರ್ ಆಗಿ ಅಭಿವೃದ್ಧಿಪಡಿಸವ ನಿರೀಕ್ಷೆಯೂ ಇದೆ.

ಕುಟುಂಬಗಳೊಂದಿಗೆ ದೂರದ ಪ್ರವಾಸಕ್ಕೆ ಹೋಗಲು ಬಯಸುವವರಿಗೆ ಈ ವಾಹನವು ಖಂಡಿತವಾಗಿಯೂ ಹೇಳಿ ಮಾಡಿಸಿದಂತಿರಲಿದೆ ಎಂದು ಮಹಿಂದ್ರಾ ಕಂಪನಿ ವಿಶ್ವಾಸ ವ್ಯಕ್ತಪಡಿಸಿದ್ದು, ಭಾರತದಲ್ಲಿ ಇಂತಹ ಪ್ರಯತ್ನಕ್ಕೆ ಕೈ ಹಾಕಿರುವ ಮೊದಲ ವಾಹನ ತಯಾರಕಾ ಕಂಪನಿ ಎಂದು ಮಹಿಂದ್ರಾ ಹೆಸರು ಮಾಡಲಿದೆ.

ಇನ್ನು ಈ ಸುದ್ದಿಯು ಭಾರತೀಯ ಕ್ಯಾಂಪರ್ ವಾಹನ ಪ್ರೇಮಿಗಳಲ್ಲಿ ಖುಷಿ ತಂದಿದ್ದರೇ, ವಾಹನ ಅಲಂಕರಣ ಕಂಪನಿಗಳು ಮತ್ತು ವಾಹನ ಮಾರ್ಪಡಿಸುವ ಕಂಪನಿಗಳಿಗೆ ಮಾತ್ರ ಆಶ್ಚರ್ಯಗೊಳ್ಳುವಂತೆ ಮಾಡಿದೆ. ಇದಕ್ಕೆ ಕಾರಣ ಬಹುತೇಕ ಜನರು ತಮ್ಮ ವಾಹನಗಳನ್ನು ಕ್ಯಾಂಪರ್ ವಾಹನಗಳಾಗಿ ಅಭಿವೃದ್ಧಿಪಡಿಸಿಕೊಳ್ಳಲು ವಾಹನ ಅಲಂಕರಣ ಕಂಪನಿಗಳನ್ನು ಸಂಪರ್ಕಿಸುತ್ತಾರೆ.

ಆದರೆ ಇದೀಗ ಮೂಲ ಮಹಿಂದ್ರಾ ಕಂಪನಿಯೇ ಎಲ್ಲಾ ಸೌಲಭ್ಯಗಳನ್ನು ನೀಡಿ ಮನೆಯಂತೆ ನಿರ್ಮಿಸಿಕೊಡುತ್ತಿದೆ. ಹಾಗಾಗಿ ಕ್ಯಾಂಪರ್ ವಾಹನ ಅಭಿವೃದ್ಧಿಯ ಘೋಷಣೆಯು ದೊಡ್ಡ ಆಶ್ಚರ್ಯವನ್ನುಂಟು ಮಾಡಿದೆ. ಇನ್ನು ಕೆಲವರು ತಮ್ಮ ಆರ್ಥಿಕತೆಗೆ ಅನುಗುಣವಾಗಿ ಕ್ಯಾಂಪರ್ ವಾಹನಗಳನ್ನು ಮಿನಿ ವ್ಯಾನ್‌ಗಳು, ಬಸ್ಸುಗಳು ಮತ್ತು ಆಟೋಗಳಲ್ಲಿ ವಿನ್ಯಾಸಗೊಳಿಸುತ್ತಾರೆ.

ಮಹಿಂದ್ರಾ ಕಂಪನಿ ನಿರ್ಮಿಸಲಿರುವ ಕ್ಯಾಂಪರ್ ವಾಹನವು ಸ್ಮಾರ್ಟ್ ವಾಟರ್ ಸೊಲ್ಯುಷನ್, ಸುಂದರ ವಿನ್ಯಾಸ ಮತ್ತು ಆರಾಮ ಒಳಾಂಗಣವನ್ನು ಹೊಂದಿರುತ್ತದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದಲ್ಲದೆ, ನಾಲ್ಕು ಜನರು ಮಲಗಲು ಹಾಸಿಗೆ ಸೌಲಭ್ಯ, ಆಸನ ರಚನೆಗಳು, ಊಟ ಮಾಡಲು ಟೇಬಲ್‌ಗಳು ಇರಲಿವೆ.

ಇದಲ್ಲದೆ, ಸ್ನಾನದಗೃಹ, ಬಯೋ ಟಾಯ್ಲೆಟ್, ಅಡುಗೆಮನೆ, ಸಣ್ಣ ಫ್ರಿಡ್ಜ್, ರೆಫ್ರಿಜರೇಟರ್ ಮತ್ತು ಮೈಕ್ರೋಓವನ್ ಸೇರಿದಂತೆ ಹಲವು ವೈಶಿಷ್ಟ್ಯಗಳು ಇರಲಿವೆ. ಈ ಎಲ್ಲಾ ವಿಶೇಷತೆಗಳಿಂದ ಮಹಿಂದ್ರಾ ಕ್ಯಾಂಪರ್ ಯಾವುದೇ ಐಷಾರಾಮಿ ಮನೆಗೆ ಕಡಿಮೆ ಇರುವುದಿಲ್ಲ ಎಂದು ಹೇಳಲಾಗುತ್ತಿದೆ.

ಇನ್ನು ವಾಹನದಲ್ಲಿ ಇಷ್ಟಲ್ಲಾ ಸೌಲಭ್ಯವಿದ್ದಲ್ಲಿ ಚಾಲಕನ ಆಸನ ಮತ್ತು ಚಾಲನಾ ವಿಧಾನದಲ್ಲಿ ವೈಶಿಷ್ಟತಗಳು ಇರಲಿವೆಯೇ ಅಥವಾ ವಿಶೇಷ ಚಾಲನಾ ವ್ಯವಸ್ಥೆಯನ್ನು ಅಳವಡಿಸಲಾಗಿದೆಯೇ ಎಂದು ಊಹಿಸಬಹುದು, ಆದರೆ ಚಾಲಕನಿಗೆ ಮಾತ್ರ ಯಾವುದೇ ವಿಶೇಷ ಚಾಲನಾ ವ್ಯವಸ್ಥೆ ನೀಡುವುದಿಲ್ಲ. ಸಾಮಾನ್ಯ ಕಾರು ಚಾಲನೆ ಮಾಡಿದ ಅನುಭವ ವಿದ್ದರೆ ಈ ವಾಹನವನ್ನು ಸುಲಭವಾಗಿ ನಿರ್ವಹಿಸಬಹುದು.

ಅದರಲ್ಲೂ, ನಿಮಗೆ ವಾಹನ ಚಾಲನೆಯಲ್ಲಿ ಆಸಕ್ತಿ ಇದ್ದರೆ ಈ ವಾಹನದಲ್ಲಿ ಉತ್ತಮ ಆಪರೇಟಿಂಗ್ ಅನುಭವ ಪಡೆಯಬಹುದು ಎಂದು ಕಂಪನಿ ಹೇಳಿದೆ. ಈ ವಾಹನವು ತಮ್ಮ ಕುಟುಂಬದೊಂದಿಗೆ ಪ್ರವಾಸವನ್ನು ಬಯಸುವವರಿಗೆ ಆಹ್ಲಾದಕರ ಪ್ರಯಾಣದ ಅನುಭವವನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಕೆಲವೊಮ್ಮೆ ಪ್ರವಾಸಿ ಪ್ರದೇಶಗಳಲ್ಲಿ ಉಳಿಯಲು ಮತ್ತು ಸರಿಯಾದ ಆಹಾರವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅಂತಹ ಸ್ಥಳಗಳಲ್ಲಿಯೂ ಮಹಿಂದ್ರಾ ವಾಹನವು ನಿಭಾಯಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಕಂಪನಿ ತಿಳಿಸಿದೆ.