ಮಹೀಂದ್ರಾ ಥಾರ್‌ ನಿರ್ಮಿಸಿದ ಅದೇ ತಂಡದಿಂದ ವಿನ್ಯಾಸಗೊಳ್ಳಲಿದೆ ಓಲಾ ಎಲೆಕ್ಟ್ರಿಕ್ ಕಾರ್

ದೇಶದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾದ ಕಾರುಗಳನ್ನು ವಿನ್ಯಾಸಗೊಳಿಸುತ್ತಿದ್ದ ರಾಮಕೃಪಾ ಅನಂತನ್ ಈಗ ಓಲಾ ಎಲೆಕ್ಟ್ರಿಕ್‌ನೊಂದಿಗೆ ಕೆಲಸ ಮಾಡಲಿದ್ದಾರೆ. ಮೂಲಗಳ ಪ್ರಕಾರ, ಓಲಾದ ಮುಂದಿನ ಯೋಜನೆಗಳಲ್ಲಿ ಎಲೆಕ್ಟ್ರಿಕ್ ಕಾರುಗಳು ಇರುವುದರಿಂದ ರಾಮಕೃಪಾ ಅನಂತನ್ ಅವರೊಂದಿಗೆ ಓಲಾ ಕಾರುಗಳ ವಿನ್ಯಾಸಕ್ಕಾಗಿ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ಮಹೀಂದ್ರಾದ ಪ್ರಮುಖ ವಾಹನಗಳ ಡಿಸೈನರ್‌ಗಳಿಂದ ವಿನ್ಯಾಸಗೊಳ್ಳಲಿದೆ ಓಲಾ ಎಲೆಕ್ಟ್ರಿಕ್ ಕಾರ್

ಎಲೆಕ್ಟ್ರಿಕ್ ಸ್ಕೂಟರ್‌ಗಳ ಯಶಸ್ಸಿನ ನಂತರ, ಈಗ ಕಂಪನಿಯು ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡುವ ತನ್ನ ಮುಂದಿನ ಯೋಜನೆಗೆ ಹೆಜ್ಜೆಯಿಟ್ಟಿದೆ. ಇದಕ್ಕೆ ರಾಮಕೃಪಾ ಅನಂತನ್ ಜತೆಗಿನ ಕಂಪನಿಯ ಪಾಲುದಾರಿಕೆ ಮಹತ್ವದ್ದಾಗಿದೆ ಎನ್ನಲಾಗಿದೆ. ಈ ಸಂಬಂಧ ಅನಂತನ್ ಇತ್ತೀಚೆಗೆ ಬೆಂಗಳೂರಿನ ಓಲಾ ಕಚೇರಿಯಲ್ಲಿ ಕಾಣಿಸಿಕೊಂಡಿದ್ದರು.

ಮಹೀಂದ್ರಾದ ಪ್ರಮುಖ ವಾಹನಗಳ ಡಿಸೈನರ್‌ಗಳಿಂದ ವಿನ್ಯಾಸಗೊಳ್ಳಲಿದೆ ಓಲಾ ಎಲೆಕ್ಟ್ರಿಕ್ ಕಾರ್

ಕ್ರಕ್ಸ್ ಸ್ಟುಡಿಯೋವನ್ನು ನಡೆಸುತ್ತಿರುವ ರಾಮಕೃಪಾ ಅನಂತನ್ ಅವರು ಮುಂಬರುವ ಎಲೆಕ್ಟ್ರಿಕ್ ವಾಹನ ಯೋಜನೆಯಲ್ಲಿನ ವಾಹನಗಳನ್ನು ವಿನ್ಯಾಸಗೊಳಿಸಲು ಭಾರತೀಯ ಎಲೆಕ್ಟ್ರಿಕ್ ವಾಹನ ತಯಾರಕ ಓಲಾ ಎಲೆಕ್ಟ್ರಿಕ್‌ನೊಂದಿಗೆ ಕೈಜೋಡಿಸಿದ್ದಾರೆ. ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಇವಿ ವಾಹನ ತಯಾರಕ ಓಲಾ ಎಲೆಕ್ಟ್ರಿಕ್ ಈಗ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.

ಮಹೀಂದ್ರಾದ ಪ್ರಮುಖ ವಾಹನಗಳ ಡಿಸೈನರ್‌ಗಳಿಂದ ವಿನ್ಯಾಸಗೊಳ್ಳಲಿದೆ ಓಲಾ ಎಲೆಕ್ಟ್ರಿಕ್ ಕಾರ್

ಇದಕ್ಕಾಗಿ ಕಂಪನಿಯು ರಾಮ್‌ಕೃಪಾ ಅನಂತನ್ ಅವರ ಕಂಪನಿಯಾದ ಕ್ರಕ್ಸ್ ಸ್ಟುಡಿಯೋ ಈ ಹಿಂದೆ ಹಲವು ಬಾರಿ ಮಾತುಕತೆ ನಡೆಸಿದ ನಂತರವೇ ಈ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಮಹೀಂದ್ರ ಥಾರ್, XUV700, XUV500 ಮತ್ತು XUV300 ನಂತಹ ಐಷಾರಾಮಿ ಕಾರುಗಳನ್ನು ವಿನ್ಯಾಸಗೊಳಿಸಿದ ಕ್ರಕ್ಸ್ ಸ್ಟುಡಿಯೋಸ್ ತಂಡವು ಈಗ ಓಲಾದ ಮುಂಬರುವ ಎಲೆಕ್ಟ್ರಿಕ್ ಕಾರನ್ನು ವಿನ್ಯಾಸಗೊಳಿಸಲಿದೆ.

ಮಹೀಂದ್ರಾದ ಪ್ರಮುಖ ವಾಹನಗಳ ಡಿಸೈನರ್‌ಗಳಿಂದ ವಿನ್ಯಾಸಗೊಳ್ಳಲಿದೆ ಓಲಾ ಎಲೆಕ್ಟ್ರಿಕ್ ಕಾರ್

ರಾಮ್‌ಕೃಪಾ ಅನಂತನ್ ಅವರು ಓಲಾ ಎಲೆಕ್ಟ್ರಿಕ್‌ನಲ್ಲಿ ವಿನ್ಯಾಸ ಸಲಹೆಗಾರರಾಗಿ ಇತ್ತಿಚೆಗೆ ತಮ್ಮ ಚೊಚ್ಚಲ ಪ್ರವೇಶ ಮಾಡಿದರು. ಓಲಾ ಕಾರುಗಳ ಡಿಸೈನ್‌ಗಾಗಿ ಕಂಪನಿ ಕೂಡ ದೇಶದ ಉತ್ತಮ ವಿನ್ಯಾಸಗಾರರಿಗಾಗಿ ಹುಡುಕಾಡಿದ್ದು, ಅನಂತನ್ ಅವರೇ ಕೊನೆಗೆ ಓಲಾದ ಉತ್ತಮ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ. ನಮ್ಮ ಮುಂದಿನ ಎಲೆಕ್ಟ್ರಿಕ್ ಕಾರಿನ ವಿನ್ಯಾಸವು ಪ್ರತಿಷ್ಟೆಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಮಹೀಂದ್ರಾದ ಪ್ರಮುಖ ವಾಹನಗಳ ಡಿಸೈನರ್‌ಗಳಿಂದ ವಿನ್ಯಾಸಗೊಳ್ಳಲಿದೆ ಓಲಾ ಎಲೆಕ್ಟ್ರಿಕ್ ಕಾರ್

Ola S1 Pro ಎಲೆಕ್ಟ್ರಿಕ್ ಸ್ಕೂಟರ್ ಗ್ರಾಹಕರಿಂದ ಅಗಾಧ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಈ ಹಿಂದೆ ದೇಶದ ಹಲವು ಭಾಗಗಳಲ್ಲಿ ಸ್ಕೂಟರ್ ದೋಷಗಳು ಕಂಡುಬಂದಿದ್ದರೂ ಓಲಾ ಇ-ಸ್ಕೂಟರ್ ಮಾರಾಟದಲ್ಲಿ ಯಾವುದೇ ಹಿನ್ನಡೆ ಕಂಡುಬಂದಿಲ್ಲ. ಪ್ರಾರಂಭವಾದ ಕೆಲವೇ ತಿಂಗಳುಗಳಲ್ಲಿ, ಓಲಾ ಎಲೆಕ್ಟ್ರಿಕ್ ಅತಿದೊಡ್ಡ ಮಾರಾಟಗಾರನಾಗಿ ಹೊಮ್ಮಿದ್ದು, ಇದೀಗ ಹೀರೋ ಎಲೆಕ್ಟ್ರಿಕ್ ಅನ್ನು ಹಿಂದಿಕ್ಕಿದೆ.

ಮಹೀಂದ್ರಾದ ಪ್ರಮುಖ ವಾಹನಗಳ ಡಿಸೈನರ್‌ಗಳಿಂದ ವಿನ್ಯಾಸಗೊಳ್ಳಲಿದೆ ಓಲಾ ಎಲೆಕ್ಟ್ರಿಕ್ ಕಾರ್

ರಾಮಕೃಪಾ ಅನಂತನ್ ಅವರು ಐಐಟಿ ಮುಂಬೈನ ಕೈಗಾರಿಕಾ ವಿನ್ಯಾಸ ಕೇಂದ್ರದಿಂದ ಪದವಿ ಪಡೆದಿದ್ದಾರೆ. ಅವರು BITS ಪಿಲಾನಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವೀಧರರಾಗಿದ್ದಾರೆ. ಅವರು ಮಹೀಂದ್ರಾ ಆಟೋಮೊಬೈಲ್ ಗ್ರೂಪ್‌ನೊಂದಿಗೆ ಒಂದು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿದ್ದಾರೆ.

ಮಹೀಂದ್ರಾದ ಪ್ರಮುಖ ವಾಹನಗಳ ಡಿಸೈನರ್‌ಗಳಿಂದ ವಿನ್ಯಾಸಗೊಳ್ಳಲಿದೆ ಓಲಾ ಎಲೆಕ್ಟ್ರಿಕ್ ಕಾರ್

ಮಹೀಂದ್ರಾದ 'XUV' ಬೇರುಗಳನ್ನು ವಿನ್ಯಾಸಗೊಳಿಸಿದ ಕೀರ್ತಿ ಅವರ ತಂಡಕ್ಕೆ ಸಲ್ಲುತ್ತದೆ. ರಾಮ್‌ಕೃಪಾ ಅನಂತನ್ ಅವರು TUV300, XUV500, XUV300, ಮರಾಝೋ ಮತ್ತು ಥಾರ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಈ ಮಾದರಿಗಳು ಮಹಿಂದ್ರಾಗೆ ಯಾವ ಮಟ್ಟಿಗೆ ಜನಪ್ರಿಯತೆ ತಂದುಕೊಟ್ಟಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.

ಮಹೀಂದ್ರಾದ ಪ್ರಮುಖ ವಾಹನಗಳ ಡಿಸೈನರ್‌ಗಳಿಂದ ವಿನ್ಯಾಸಗೊಳ್ಳಲಿದೆ ಓಲಾ ಎಲೆಕ್ಟ್ರಿಕ್ ಕಾರ್

ಹೊಸ ತಲೆಮಾರಿನ ಥಾರ್ ಹಾಗೂ ಮಹೀಂದ್ರಾದ ಮುಂಬರುವ ಹೊಸ ಸ್ಕಾರ್ಪಿಯೊ (2022 ಸ್ಕಾರ್ಪಿಯೊ) ಅನ್ನು ಅನಂತನ್ ಅವರ ತಂಡವು ವಿನ್ಯಾಸಗೊಳಿಸಿದೆ. ಈ ಕಾರನ್ನು ಅದರ ಮರೆಮಾಚುವ (ಮುಚ್ಚಿದ) ರೂಪದಲ್ಲಿ ಹಲವಾರು ಬಾರಿ ಗುರುತಿಸಲಾಗಿದೆ. ಈ ವರ್ಷ ಭಾರತದಲ್ಲಿ ಬಿಡುಗಡೆಯಾಗಲು ಸ್ಕಾರ್ಪಿಯೋ ಸಿದ್ಧವಾಗಿದೆ.

ಮಹೀಂದ್ರಾದ ಪ್ರಮುಖ ವಾಹನಗಳ ಡಿಸೈನರ್‌ಗಳಿಂದ ವಿನ್ಯಾಸಗೊಳ್ಳಲಿದೆ ಓಲಾ ಎಲೆಕ್ಟ್ರಿಕ್ ಕಾರ್

ಮಹೀಂದ್ರಾ ಮತ್ತು ಮಹೀಂದ್ರಾ ಗ್ರೂಪ್ ತನ್ನ ವಾಹನ ವ್ಯವಹಾರವನ್ನು ಮೂರು ಭಾಗಗಳಾಗಿ ವಿಭಜಿಸಲು ತಯಾರಿ ನಡೆಸುತ್ತಿದೆ. ಮಹೀಂದ್ರಾ ಗ್ರೂಪ್ ತನ್ನ ಆಟೋಮೊಬೈಲ್ ವ್ಯವಹಾರವನ್ನು ಮೂರು ಪ್ರತ್ಯೇಕ ಘಟಕಗಳಾಗಿ ವಿಭಜಿಸಲು ಪುನರ್ರಚನಾ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಮಾಹಿತಿಯ ಪ್ರಕಾರ, ತನ್ನ ಎಲೆಕ್ಟ್ರಿಕ್ ವೆಹಿಕಲ್ (ಇವಿ), ಟ್ರಾಕ್ಟರ್ ಮತ್ತು ಪ್ರಯಾಣಿಕ ವಾಹನ ವ್ಯವಹಾರಗಳನ್ನು ವಿಭಜಿಸುವ ಪ್ರಕ್ರಿಯೆಯ ಮೂಲಕ ಹೊರಹಾಕುತ್ತದೆ.

ಮಹೀಂದ್ರಾದ ಪ್ರಮುಖ ವಾಹನಗಳ ಡಿಸೈನರ್‌ಗಳಿಂದ ವಿನ್ಯಾಸಗೊಳ್ಳಲಿದೆ ಓಲಾ ಎಲೆಕ್ಟ್ರಿಕ್ ಕಾರ್

ಮಹೀಂದ್ರಾ ಗ್ರೂಪ್ ತನ್ನ EV ಘಟಕಕ್ಕಾಗಿ ಹೂಡಿಕೆಗಳನ್ನು ನಿರ್ವಹಿಸುತ್ತಿದ್ದು, ಪ್ರತ್ಯೇಕ ಕಂಪನಿಯನ್ನು ರಚಿಸಲು ಇಟಾಲಿಯನ್ ಡಿಸೈನ್ ಹೌಸ್ ಆಟೋಮೊಬಿಲಿಟಿ ಪಿನಿನ್‌ಫರಿನಾದೊಂದಿಗೆ ಒಪ್ಪಂದ ಮಾಡಿಕೊಳ್ಳಲು ನೋಡುತ್ತಿದೆ. ಪ್ರಯಾಣಿಕ, ವಾಣಿಜ್ಯ ಮತ್ತು ಕೃಷಿ ವಿಭಾಗಗಳಲ್ಲಿ ವಾಹನಗಳನ್ನು ತಯಾರಿಸುವ ದೇಶದ ಕೆಲವೇ ದೊಡ್ಡ ಕಂಪನಿಗಳಲ್ಲಿ ಮಹೀಂದ್ರಾ & ಮಹೀಂದ್ರಾ ಕೂಡ ಒಂದಾಗಿದೆ.

ಮಹೀಂದ್ರಾದ ಪ್ರಮುಖ ವಾಹನಗಳ ಡಿಸೈನರ್‌ಗಳಿಂದ ವಿನ್ಯಾಸಗೊಳ್ಳಲಿದೆ ಓಲಾ ಎಲೆಕ್ಟ್ರಿಕ್ ಕಾರ್

ಇನ್ನು ಓಲಾ ಬಗ್ಗೆ ಹೇಳುವುದಾದರೆ ಆರಂಭದಲ್ಲಿ ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಂದ ಭಾರೀ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಉತ್ತಮ ಮೈಲೇಜ್, ಶ್ರೇಣಿ, ಪರ್ಫಾಮೆನ್ಸ್‌, ಚಾರ್ಜಿಂಗ್ ಸಮಯ, ವಿನ್ಯಾಸವು ಗ್ರಾಹಕರನ್ನು ಬಹಳ ಆಕರ್ಷಿಸಿತ್ತು. ಆದರೆ ದೇಶದ ಕೆಲವೆಡೆ ಬೆಂಕಿ ಅವಘಡಗಳಿಂದ ಇತ್ತೀಚೆಗೆ ಕಂಪನಿ ಹಿನ್ನಡೆ ಅನುಭವಿಸಿದರೂ ಮಾರಾಟದಲ್ಲಿ ಹಿಂದುಳಿದಿಲ್ಲ.

ಮಹೀಂದ್ರಾದ ಪ್ರಮುಖ ವಾಹನಗಳ ಡಿಸೈನರ್‌ಗಳಿಂದ ವಿನ್ಯಾಸಗೊಳ್ಳಲಿದೆ ಓಲಾ ಎಲೆಕ್ಟ್ರಿಕ್ ಕಾರ್

ಪ್ರಸ್ತುತ ಓಲಾ ದ್ವಿಚಕ್ರ ವಾಹನಗಳ ಪ್ರಮಾಣಿತ ಬ್ಯಾಟರಿಗಳ ತಯಾರಿಯಲ್ಲಿ ಕಂಪನಿ ಕೆಲಸ ಮಾಡುತ್ತಿದ್ದು, ಇನ್ನು ಮುಂದೆ ಗ್ರಾಹಕರಿಗೆ ತಲುಪುವ ವಾಹನಗಳು ಯಾವುದೇ ಲೋಪ-ದೋಷಗಳನ್ನು ಹೊಂದಿರುವುದಿಲ್ಲ ಎಂದು ಕಂಪನಿ ಭರವಸೆ ನೀಡಿದೆ.

Most Read Articles

Kannada
English summary
Mahindra thar xuv700 designer quits to join ola electric
Story first published: Saturday, May 7, 2022, 18:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X