ಏಪ್ರಿಲ್ 19 ರಂದು ಅನಾವರಣಗೊಳ್ಳಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಎಸ್ ಎಸ್‌ಯುವಿ

ಜರ್ಮನ್ ಕಾರು ಉತ್ಪಾದನಾ ಕಂಪನಿಯಾಗಿರುವ ಮರ್ಸಿಡಿಸ್ ಬೆಂಝ್ ಈಗಾಗಲೇ ವಿವಿಧ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಗಳೊಂದಿಗೆ ಹಲವು ಹೊಸ ದಾಖಲೆಗಳಿಗೆ ಕಾರಣವಾಗಿದ್ದು, ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಇವಿ ಕಾರುಗಳನ್ನು ಪರಿಚಯಿಸುವ ಸಿದ್ದತೆಯಲ್ಲಿದೆ.

ಏಪ್ರಿಲ್ 19 ರಂದು ಅನಾವರಣಗೊಳ್ಳಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಎಸ್ ಎಸ್‌ಯುವಿ

ದುಬಾರಿ ಬೆಲೆ ನಡುವೆಯೂ ಹೊಸ ಇವಿ ಕಾರುಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಮರ್ಸಿಡಿಸ್ ಬೆಂಝ್ ಕಂಪನಿಯು 2023ರ ವೇಳೆಗೆ ಒಟ್ಟು 6 ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಮಾರಾಟ ಮಾಡುವ ಗುರಿಹೊಂದಿದ್ದು, 2030ರ ವೇಳೆಗೆ ಶೇ.60 ಮಾದರಿಗಳನ್ನು ವಿದ್ಯುತ್ ಮಾದರಿಗಳಿಗೆ ಪರಿವರ್ತಿಸುವ ಯೋಜನೆ ಹೊಂದಿದೆ.

ಏಪ್ರಿಲ್ 19 ರಂದು ಅನಾವರಣಗೊಳ್ಳಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಎಸ್ ಎಸ್‌ಯುವಿ

ಮರ್ಸಿಡಿಸ್ ಬೆಂಝ್ ಹೊಸ ಎಲೆಕ್ಟ್ರಿಕ್ ಕಾರುಗಳ ಪಟ್ಟಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಎಸ್‌ಯುವಿ, ಸೆಡಾನ್, ಎಂಪಿವಿ ಮತ್ತು ಸೂಪರ್ ಕಾರು ಮಾದರಿಗಳು ಸಹ ಒಳಗೊಂಡಿದ್ದು, ಕಂಪನಿಯು ಶೀಘ್ರದಲ್ಲಿಯೇ ತನ್ನ ಬಹುನೀರಿಕ್ಷಿತ ಇಕ್ಯೂಎಸ್ ಎಸ್‌ಯುವಿ ಮಾದರಿಯನ್ನು ಮುಂದಿನ ತಿಂಗಳು 19ರಂದು ಜಾಗತಿಕ ಮಾರುಕಟ್ಟೆಗಳಿಗಾಗಿ ಅನಾವರಣಗೊಳಿಸುತ್ತಿದೆ.

ಏಪ್ರಿಲ್ 19 ರಂದು ಅನಾವರಣಗೊಳ್ಳಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಎಸ್ ಎಸ್‌ಯುವಿ

ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಳ್ಳಲಿರುವ ಭವಿಷ್ಯದ ಮರ್ಸಿಡಿಸ್ ಬೆಂಝ್ ಎಲೆಕ್ಟ್ರಿಕ್ ಕಾರುಗಳು ಅತ್ಯುತ್ತಮ ಬ್ಯಾಟರಿ ಪ್ಯಾಕ್, ಸುಧಾರಿತ ತಂತ್ರಜ್ಞಾನದೊಂದಿಗೆ ಐಷಾರಾಮಿ ಕಾರು ಪ್ರಿಯರನ್ನು ಸೆಳೆಯಲಿವೆ.

ಏಪ್ರಿಲ್ 19 ರಂದು ಅನಾವರಣಗೊಳ್ಳಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಎಸ್ ಎಸ್‌ಯುವಿ

ಹೊಸ ಇಕ್ಯೂಎಸ್ ಎಸ್‌ಯುವಿ ಮಾದರಿಯು ಕಳೆದ ವರ್ಷ ಅನಾವರಣಗೊಂಡಿದ್ದ ಹೊಸ ಇಕ್ಯೂಎಸ್ ಸೆಡಾನ್ ಮಾದರಿಯನ್ನು ಆಧರಿಸಿ ನಿರ್ಮಾಣಗೊಂಡಿದ್ದು, ಕೆಲವು ಪ್ರಾಯೋಗಿಕ ಸೌಲಭ್ಯ ಗಳನ್ನು ಹೊಂದಿರುವ ಹೊಸ ಕಾರು ಮಾದರಿಯು EVA2 ಪ್ಲಾಟ್‌ಫಾರ್ಮ್ ಅಡಿ ಅಭಿವೃದ್ದಿಗೊಂಡಿದೆ.

ಏಪ್ರಿಲ್ 19 ರಂದು ಅನಾವರಣಗೊಳ್ಳಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಎಸ್ ಎಸ್‌ಯುವಿ

ಇಕ್ಯೂಎಸ್ ಎಸ್‌ಯುವಿ ಮಾದರಿಯು 2022ರ ಬೀಜಿಂಗ್ ಮೋಟಾರ್ ಶೋ ಉದ್ಘಾಟನೆಗೆ ಕೇವಲ ಎರಡು ದಿನಗಳ ಮೊದಲು ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಅನಾವರಣಗೊಳ್ಳಲಿದ್ದು, ಸೆಡಾನ್ ಮಾದರಿಯೆಂತೆಯೇ ಹಲವು ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಹೊಸ ಕಾರು ಮೂರನೇ ಸಾಲಿನ ಆಯ್ಕೆ ಪಡೆದುಕೊಳ್ಳಲಿದೆ.

ಏಪ್ರಿಲ್ 19 ರಂದು ಅನಾವರಣಗೊಳ್ಳಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಎಸ್ ಎಸ್‌ಯುವಿ

ಜೊತೆಗೆ ಮರ್ಸಿಡಿಸ್ ಸಾಂಪ್ರದಾಯಿಕ ಎಸ್‌ಯುವಿ ಮಾದರಿಗಳಲ್ಲಿ ಕಂಡುಬರುವ 56 ಇಂಚಿನ MBUX ಹೈಪರ್‌ಸ್ಕ್ರೀನ್ ಅನ್ನು ಹೊಂದಿದ್ದು, ಅದು ಸಂಪೂರ್ಣ ಡ್ಯಾಶ್‌ಬೋರ್ಡ್ ಅನ್ನು ಒಂದೇ ಪರದೆಯಂತೆ ಡಿಜಿಟಲೀಕರಣಗೊಳಿಸಲಾಗಿದೆ.

ಏಪ್ರಿಲ್ 19 ರಂದು ಅನಾವರಣಗೊಳ್ಳಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಎಸ್ ಎಸ್‌ಯುವಿ

ಹೊಸ ಕಾರಿನ ಮುಂಭಾಗದ ಪ್ರಯಾಣಿಕರಿಗೂ ಅನುಕೂರವಾಗುವಂತೆ 12.3-ಇಂಚಿನ OLED ಡಿಸ್ಪ್ಲೇ ಹೊಂದಿಸಲಾಗಿದ್ದು, ಇದರಲ್ಲಿ ಪ್ರಯಾಣಿಕರು ಇಂಟರ್ನೆಟ್ ಬಳಸಿ ಬ್ರೌಸ್ ಮಾಡಬಹುಗಾದಿದೆ. ಇದಲ್ಲದೇ ಕಾರಿನೊಳಗೆ ಕ್ಯಾಮೆರಾ ಜೋಡಿಸಲಾಗಿದ್ದು, ಇದು ಚಾಲಕನು ಪರದೆಯತ್ತ ನೋಡುತ್ತಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಮಾಡುತ್ತದೆ ಪ್ರಯಾಣಿಕರನ್ನು ಎಚ್ಚರಗೊಳಿಸುತ್ತದೆ.

ಏಪ್ರಿಲ್ 19 ರಂದು ಅನಾವರಣಗೊಳ್ಳಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಎಸ್ ಎಸ್‌ಯುವಿ

ಇದರೊಂದಿಗೆ ಹೊಸ ಕಾರಿನ ಒಳಭಾಗದಲ್ಲಿ ಮರ್ಸಿಡಿಸ್-ಬೆಂಝ್ ಕಂಪನಿಯು ಐಷಾರಾಮಿ ಕ್ಯಾಬಿನ್ ಸೌಲಭ್ಯದೊಂದಿಗೆ ಅತ್ಯುತ್ತಮ ಲೆದರ್ ಸೀಟುಗಳು ಮತ್ತು ಫ್ಲಕ್ಸ್‌ವುಡ್‌ ಬಳಸಿದ್ದು, ಕಾರಿನ ಒಳಭಾಗಕ್ಕೆ ಮತ್ತಷ್ಟು ಐಷಾರಾಮಿ ಅನುಭವವನ್ನು ನೀಡಲು ಏಳು ವಿಭಿನ್ನ ಬಣ್ಣಗಳ ಆಂಬಿಯೆಂಟ್ ಲೈಟಿಂಗ್ಸ್, ಹಿಂಭಾಗದ ಆಸನಗಳಿಗೂ ಇನ್ಪೋಟೈನ್‌ಮೆಂಟ್ ಪ್ಯಾಕೇಜ್ ಆಯ್ಕೆಯನ್ನು ಸಹ ನೀಡಿದೆ.

ಏಪ್ರಿಲ್ 19 ರಂದು ಅನಾವರಣಗೊಳ್ಳಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಎಸ್ ಎಸ್‌ಯುವಿ

ಹೊಸ ಕಾರಿನ ಮತ್ತಷ್ಟು ತಾಂತ್ರಿಕ ಅಂಶಗಳ ಬಗೆಗೆ ಕಂಪನಿಯು ಎಪ್ರಿಲ್ 19ರಂದು ಅನಾವರಣಗೊಳಿಸಲಿದ್ದು, ಇಕ್ಯೂಎಸ್ ಸೆಡಾನ್ ಮಾದರಿಯನ್ನು ಆಧರಿಸಿರುವ ಹೊಸ ಎಸ್‌ಯುವಿ ಕಾರು ಪ್ರತಿ ಚಾರ್ಜ್‌ಗೆ ಕನಿಷ್ಠ 600 ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಧ್ಯತೆಗಳಿವೆ.

ಏಪ್ರಿಲ್ 19 ರಂದು ಅನಾವರಣಗೊಳ್ಳಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಎಸ್ ಎಸ್‌ಯುವಿ

ಇನ್ನು ಹೊಸ ಇವಿ ಕಾರುಗಳ ಯೋಜನೆಗಾಗಿ ಮರ್ಸಿಡಿಸ್ ಬೆಂಝ್ ಕಂಪನಿಯು ವಿಶ್ವಾದ್ಯಂತ ಕಾರ್ಯನಿರ್ವಹಣೆಯಲ್ಲಿರುವ ತನ್ನ ಪ್ರಮುಖ ಕಾರು ಉತ್ಪಾದನಾ ಘಟಕ ಉನ್ನತೀಕರಣಕ್ಕಾಗಿ ಅಂದಾಜು ರೂ. 3.50 ಲಕ್ಷ ಕೋಟಿ ಹೂಡಿಕೆ ಮಾಡುತ್ತಿದ್ದು, ಎಲೆಕ್ಟ್ರಿಕ್ ಪ್ಯಾಸೆಂಜರ್ ಕಾರುಗಳು, ಎಲೆಕ್ಟ್ರಿಕ್ ಸ್ಪೋರ್ಟ್ ವೆಹಿಕಲ್ ಮತ್ತು ಎಲೆಕ್ಟ್ರಿಕ್ ಕಮರ್ಷಿಯಲ್ ವೆಹಿಕಲ್ ವಿಭಾಗಗಳ ಮೇಲೆ ಪ್ರತ್ಯೇಕವಾಗಿ ಹೂಡಿಕೆ ಮಾಡುತ್ತಿದೆ.

ಏಪ್ರಿಲ್ 19 ರಂದು ಅನಾವರಣಗೊಳ್ಳಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಎಸ್ ಎಸ್‌ಯುವಿ

ಸದ್ಯ ಇಕ್ಯೂಸಿ 400, ಇಕ್ಯೂಎ ಎಲೆಕ್ಟ್ರಿಕ್ ಕಾರುಗಳ ಮೂಲಕ ಜಾಗತಿಕ ಮಾರುಕಟ್ಟೆಗಳಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ಉತ್ಪನ್ನಗಳಿಗಾಗಿ ಕಂಪನಿಯು ನಿರಂತರವಾಗಿ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಿದೆ.

ಏಪ್ರಿಲ್ 19 ರಂದು ಅನಾವರಣಗೊಳ್ಳಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಎಸ್ ಎಸ್‌ಯುವಿ

ಮರ್ಸಿಡಿಸ್ ಬೆಂಝ್ ಕಂಪನಿಯು ಮುಂದಿನ ಎಲೆಕ್ಟ್ರಿಕ್ ಕಾರು ಮಾದರಿಯಾಗಿ ಇಕ್ಯೂಎಸ್ ಸೆಡಾನ್ ಮಾದರಿಯನ್ನು ಬಿಡುಗಡೆಗೊಳಿಸುತ್ತಿದ್ದು, ತದನಂತರವಷ್ಟೇ ಎಸ್‌ಯುವಿ ಆವೃತ್ತಿಯು ಮಾರುಕಟ್ಟೆ ಪ್ರವೇಶಿಸಬಹುದಾಗಿದೆ.

Most Read Articles

Kannada
English summary
Mercedes benz eqs suv set to be unveiled on 19 april details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X