Just In
- 1 hr ago
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- 5 hrs ago
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- 20 hrs ago
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- 21 hrs ago
ಟಾಟಾಗೆ ಸೆಡ್ಡು ಹೊಡೆಯಲು 6 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಮಾರುತಿ ಸುಜುಕಿ
Don't Miss!
- Finance
7th Pay Commission update news: ಕೇಂದ್ರ ಬಜೆಟ್ನಲ್ಲಿ 8ನೇ ವೇತನ ಆಯೋಗದ ಬಗ್ಗೆ ಘೋಷಣೆ?
- News
ಕಳಪೆ ಊಟದ ವಿರುದ್ಧ ಪ್ರತಿಭಟನೆ; ಬಳ್ಳಾರಿಯಲ್ಲಿ ಎಸ್ಟಿ ಎಸ್ಸಿ ವಿದ್ಯಾರ್ಥಿಗಳು ಹಾಸ್ಟೆಲ್ನಿಂದ ಹೊರಕ್ಕೆ, ಜೆಡಿಎಸ್ ಆಕ್ರೋಶ
- Sports
BGT 2023: ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸ್ಟಾರ್ ಆಲ್ರೌಂಡರ್ ಆಡೋದು ಅನುಮಾನ
- Movies
ಸೆಲ್ಫಿ ನೆಪದಲ್ಲಿ ಸಾನಿಯಾ ಅಯ್ಯರ್ ಕೈ ಎಳೆದ ಅಭಿಮಾನಿ! ಸಾರ್ವಜನಿಕರಿಂದ ಧರ್ಮದೇಟು
- Technology
Tech News of this Week; ಈ ವಾರ ಟೆಕ್ ವಲಯದಲ್ಲಿ ಜರುಗಿದ ಘಟನೆಗಳೇನು?, ಇಲ್ಲಿದೆ ವಿವರ!
- Lifestyle
ವಾರ ಭವಿಷ್ಯ ಜ.29-ಫೆ.4: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇವಿ ವಾಹನಗಳಲ್ಲಿ ಸುರಕ್ಷತೆಗಾಗಿ ಅಕ್ಟೋಬರ್ 1ರಿಂದ ಹೊಸ ಸುರಕ್ಷಾ ಮಾನದಂಡಗಳ ಅಳವಡಿಕೆ ಕಡ್ಡಾಯ
ದೇಶಾದ್ಯಂತ ಇವಿ ವಾಹನಗಳ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವಾಗಲೇ ಹೆಚ್ಚುತ್ತಿರುವ ಅಗ್ನಿ ಅವಘಡಗಳು ಇವಿ ವಾಹನಗಳ ಸುರಕ್ಷತೆ ವಿಚಾರವು ಗ್ರಾಹಕರಲ್ಲಿ ಗೊಂದಲ ಮೂಡಿಸುತ್ತಿವೆ.
ಇದರಿಂದ ಗ್ರಾಹಕರ ಸುರಕ್ಷತೆಗಾಗಿ ಹೊಸ ಇವಿ ವಾಹನಗಳಲ್ಲಿ ಇದೀಗ ಹಲವಾರು ಹೊಸ ಸುರಕ್ಷಾ ಮಾನದಂಡಗಳನ್ನು ಕಡ್ಡಾಯವಾಗಿ ಜಾರಿಗೆ ತರಲಾಗುತ್ತಿದೆ.

ಕಳೆದ ಕೆಲ ತಿಂಗಳ ಹಿಂದಷ್ಟೇ ದೇಶಾದ್ಯಂತ ದಾಖಲಾದ ಸರಣಿ ಇವಿ ವಾಹನಗಳಲ್ಲಿನ ಅಗ್ನಿ ಅವಘಡ ಪ್ರಕರಣಗಳು ಇವಿ ಗ್ರಾಹಕರ ಆಯ್ಕೆಯ ಮೇಲೆ ಭಾರೀ ಪರಿಣಾಮ ಬೀರಿತ್ತು. ಆದರೆ ಇದೀಗ ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಹೊಸ ಸುರಕ್ಷಾ ಮಾನದಂಡಗಳು ಹೊಸ ಇವಿ ವಾಹನಗಳಿಗೆ ಉತ್ತಮ ಸುರಕ್ಷತೆ ಖಾತ್ರಿ ಪಡಿಸಲಿದ್ದು, ಮುಖ್ಯವಾಗಿ ಬ್ಯಾಟರಿ ಸ್ಪೋಟ ಪ್ರಕರಣಗಳನ್ನು ಪರಿಣಾಮಕಾರಿ ತಗ್ಗಿಸುವತ್ತ ಗಮನಹರಿಸಲಾಗಿದೆ.

ಇವಿ ವಾಹನಗಳಲ್ಲಿ ಅಗ್ನಿ ಅವಘಡಗಳ ಕುರಿತಾಗಿ ಕುಲಂಕೂಶವಾಗಿ ಅಧ್ಯಯನ ನಡೆಸಿರುವ ತಜ್ಞರ ಸಮಿತಿಯ ಶಿಫಾರಸ್ಸು ಆಧರಿಸಿ ಕೇಂದ್ರ ಸಾರಿಗೆ ಸಚಿವಾಲಯವು ಅಕ್ಟೋಬರ್ 1ರಿಂದಲೇ ಹೊಸ ಸುರಕ್ಷಾ ಮಾನದಂಡಗಳನ್ನು ಜಾರಿಗೆ ತರಲು ಮುಂದಾಗಿದೆ.

ಇವಿಗಳಲ್ಲಿ ಸ್ಫೋಟಗಳಿಗೆ ಕೆಲವು ಬಾರಿ ಇತರೆ ತಾಂತ್ರಿಕ ದೋಷಗಳು ಕಾರಣವಾದರೆ ಇನ್ನು ಕೆಲವು ಪ್ರಕರಣಗಳಲ್ಲಿ ಬೇಸಿಗೆಯ ಉಷ್ಣತೆಯ ಹೆಚ್ಚಾಗಿರುವುದು ಕಾರಣವೆಂದು ವಾದಿಸಲಾಗಿತ್ತು. ಆದರೆ ಘಟನೆಗಳ ಕುರಿತು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸಿದ್ದ ಸಾರಿಗೆ ಸಚಿವಾಯವು ಮತ್ತು ನಿಖರ ಕಾರಣವಾಗಳು ಮತ್ತು ಪರಿಹಾರ ಕ್ರಮಗಳ ಕುರಿತು ಸಮಿತಿಗೆ ಶಿಫಾರಸುಗಳನ್ನು ನೀಡುವಂತೆ ಮನವಿ ಮಾಡಿತ್ತು.

ಕೇಂದ್ರ ಸರ್ಕಾರದ ಸಾರಿಗೆ ಸಚಿವಾಲಯದ ಸೂಚನೆ ಮೇರೆಗೆ ಎಆರ್‌ಸಿಎಲ್ ಹೈದರಾಬಾದ್ ನಿರ್ದೇಶಕ ಟಾಟಾ ನರಸಿಂಗ್ ರಾವ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಪ್ರಧಾನ ಸಂಶೋಧನಾ ವಿಜ್ಞಾನಿ ಸುಬ್ಬಾ ರೆಡ್ಡಿ, ಸೆಂಟರ್ ಫಾರ್ ಫೈರ್, ಎಕ್ಸ್‌ಪ್ಲೋಸಿವ್ ಮತ್ತು ಎನ್ವಿರಾನ್‌ಮೆಂಟ್ ಸೇಫ್ಟಿ (ಸಿಎಫ್‌ಇಇಎಸ್) ವಿಜ್ಞಾನಿ ಎಂ.ಕೆ ಜೈನ್ ಮತ್ತು ಐಐಟಿ ಮದ್ರಾಸ್ ಪ್ರೊಫೆಸರ್ ದೇವೇಂದ್ರ ಜಾಲಿಹಾಲ್ ಅವರನ್ನು ಒಳಗೊಂಡ ತಜ್ಞರ ಸಮಿತಿಯು ಘಟನೆಯನ್ನು ಕುಲಂಕೂಶವಾಗಿ ಪರಿಶೀಲನೆ ಮಾಡಿ ಬೆಂಕಿ ಅವಘಡಗಳಿಗೆ ಕಾರಣಗಳು ಮತ್ತು ಅಪಘಡಗಳನ್ನು ತಡೆಯಲು ಹಲವಾರು ಕಠಿಣ ಶಿಫಾರಸ್ಸು ಸಲ್ಲಿಸಿದ್ದಾರೆ.

ತಜ್ಞರ ಸಮಿತಿ ಶಿಫಾರಸ್ಸು ಆಧರಿಸಿ ಬ್ಯಾಟರಿ ಸುರಕ್ಷತಾ ಮಾನದಂಡಗಳಲ್ಲಿ ಹೆಚ್ಚುವರಿ ಸುರಕ್ಷತಾ ಅವಶ್ಯಕತೆಗಳನ್ನು ಪ್ರತಿಪಾದಿಸಲಾಗಿದ್ದು, ಈ ಹೊಸ ನಿಯಮಾವಳಿಗಳು ಅಕ್ಟೋಬರ್ 1 ರಿಂದ ಕಡ್ಡಾಯವಾಗಿ ಜಾರಿಗೆ ಬರಲಿವೆ.

ಕೇಂದ್ರ ಸರ್ಕಾರವು ಜಾರಿಗೆ ಮಾಡಲಾಗುತ್ತಿರುವ ತಿದ್ದುಪಡಿಗೊಳಪಡಿಸಲಾದ ಬ್ಯಾಟರಿ ಸುರಕ್ಷತಾ ಮಾನದಂಡಗಳು ಬ್ಯಾಟರಿ ಸ್ಫೋಟಗಳನ್ನು ಗಣನೀಯವಾಗಿ ತಗ್ಗಿಸಲಿದ್ದು, ಉತ್ಪಾದನೆಯ ನಂತರ ಪ್ರತಿ ಇವಿ ಮಾದರಿಯನ್ನು ವಿವಿಧ ಹಂತಗಳಲ್ಲಿ ಪರಿಕ್ಷೆಗೊಳಪಡಿಸಿ ನಂತರವೇ ಮಾರಾಟ ಮಾಡಬೇಕಾಗುತ್ತದೆ.

ಇವಿ ವಾಹನಗಳ ಬ್ಯಾಟರಿಯಲ್ಲಿ ಕಂಡುಬರುವ ಬೆಂಕಿ ಅವಘಡಗಳಿಗೆ ಇನ್ಮುಂದೆ ವಾಹನ ತಯಾರಕ ಮತ್ತು ಬ್ಯಾಟರಿ ಪೂರೈಕೆ ಸಂಸ್ಥೆಗಳೇ ಹೊಣೆಯಾಗಬೇಕಿದ್ದು, ಬ್ಯಾಟರಿಗಳಲ್ಲಿ ಸುಧಾರಿತ ಕೂಲಿಂಗ್ ತಂತ್ರಜ್ಞಾನ ಸೇರಿದಂತೆ ಪ್ರಮುಖ ಬದಲಾವಣೆಗಳಿಗೆ ಶಿಫಾರಸ್ಸು ಮಾಡಲಾಗಿದೆ.

ಜೊತೆಗೆ ಹೊಸದಾಗಿ ಹೊರಡಿಸಲಾಗುತ್ತಿರುವ ಮಾರ್ಗಸೂಚಿಗಳಲ್ಲಿ ಬ್ಯಾಟರಿ ಸೆಲ್‌ಗಳು, ಆನ್‌ಬೋರ್ಡ್ ಚಾರ್ಜರ್(ಗಳು), ಬ್ಯಾಟರಿ ಪ್ಯಾಕ್‌ಗಳ ವಿನ್ಯಾಸ (ಗಳು) ಮತ್ತು ಬೆಂಕಿಗೆ ಕಾರಣವಾಗುವ ಆಂತರಿಕ ಸೆಲ್ ಶಾರ್ಟ್ ಸರ್ಕ್ಯೂಟ್ ಸಂಭಾವ್ಯತೆಯನ್ನು ಕಡಿಮೆಗೊಳಿಸಲು ಸಾಧ್ಯವಿರುವ ಹಲವಾರು ಹೊಸ ಮಾನದಂಡಗಳನ್ನು ನೀಡಲಾಗಿದೆ.

ಇನ್ನು ಇವಿ ವಾಹನಗಳಲ್ಲಿ ಅಗ್ನಿ ಅವಘಡಗಳ ಕುರಿತಾಗಿ ಮಾತನಾಡಿದ್ದ ಪ್ರೀಮಿಯಂ ಸ್ಕೂಟರ್ ಉತ್ಪಾದನಾ ಕಂಪನಿಯಾಗಿರುವ ಎಥರ್ ಎನರ್ಜಿ ಕಂಪನಿಯ ಸಿಇಒ ತರುಣ್ ಮೆಹ್ತಾ ಅವರು ಅಗ್ನಿ ಅವಘಡ ಪ್ರಕರಣಗಳು ಇದೀಗ ಇವಿ ವಾಹನ ಉದ್ಯಮವನ್ನು ಪ್ರಬುದ್ಧಗೊಳಿಸುತ್ತಿದೆ ಎನ್ನುವ ಅಭಿಪ್ರಾಯ ಹಂಚಿಕೊಂಡಿದ್ದರು.

ಅಗ್ನಿ ಅವಘಡಗಳ ಪರಿಣಾಮವೇ ಇಂದು ಇವಿ ವಾಹನ ಉದ್ಯಮವು ಎಚ್ಚೆತ್ತುಕೊಳ್ಳಲು ಪ್ರಮುಖ ಕಾರಣವಾಗಿದ್ದು, ಇದೀಗ ಮಾರುಕಟ್ಟೆಯಲ್ಲಿರುವ ಪ್ರತಿಯೊಂದು ಇವಿ ವಾಹನ ಉತ್ಪಾದನಾ ಕಂಪನಿಗಳು ಸುರಕ್ಷತೆಯ ಮೇಲೆ ಗಮನಹರಿಸುವಂತಾಗಿದೆ ಎಂದಿದ್ದಾರೆ.

ಗ್ರಾಹಕರಲ್ಲಿ ಉಂಟಾದ ಸುರಕ್ಷತೆಯ ಅರಿವಿನ ಪರಿಣಾಮ ಉತ್ಪಾದನಾ ಕಂಪನಿಗಳು ಕೂಡಾ ಇಂದು ಗರಿಷ್ಠ ಸುರಕ್ಷತೆಯತ್ತ ಗಮನಹರಿಸಲು ಕಾರಣವಾಗಿದ್ದು, ಅಗ್ನಿ ಅವಘಡಗಳು ಸಂಭವಿಸದಂತೆ ನಾವು ಕೂಡಾ ಗರಿಷ್ಠ ಮಾನದಂಡಗಳನ್ನು ತುರ್ತಾಗಿ ಅಳವಡಿಸಿಕೊಳ್ಳಲು ಸಾಧ್ಯವಾಯಿತು ಎಂದು ತರುಣ್ ಮೆಹ್ತಾ ಸಂದರ್ಶನವೊಂದರಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಸದ್ಯ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ದೇಶಾದ್ಯಂತ ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿವೆ. ಇದರಲ್ಲಿ ಕೇಂದ್ರದ ಫೇಮ್ 2 ಸಬ್ಸಡಿ ಯೋಜನೆಯು ಪ್ರಮುಖವಾಗಿದ್ದು, ಫೇಮ್ 2 ಯೋಜನೆಯೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಇವಿ ವಾಹನಗಳ ಉತ್ತೇಜನಕ್ಕೆ ವಿವಿಧ ಸಬ್ಸಡಿ ಯೋಜನೆಗಳನ್ನು ಅಳವಡಿಸಿಕೊಂಡಿವೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರೋತ್ಸಾಹದಿಂದಾಗಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಸಬ್ಸಡಿ ಯೋಜನೆಗಳಿಂದಾಗಿ ಇವಿ ವಾಹನಗಳ ಬಳಕೆಗೆ ಸಾರ್ವಜನಿಕರು ಆದ್ಯತೆ ನೀಡುತ್ತಿದ್ದಾರೆ.

ಕರ್ನಾಟಕದಲ್ಲೂ ಸಹ ಇವಿ ವಾಹನಗಳ ಅಳವಡಿಕೆಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ಯೋಜನೆಗಳನ್ನು ಘೋಷಣೆ ಮಾಡಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಇವಿ ವಾಹನಗಳು ಸಾಕಷ್ಟು ಸಂಖ್ಯೆಯಲ್ಲಿ ರಸ್ತೆಗಿಳಿದಿವೆ.