Just In
- 8 hrs ago
ಕ್ರ್ಯಾಶ್ ಟೆಸ್ಟ್ನಲ್ಲಿ ಗರಿಷ್ಠ ರೇಟಿಂಗ್ ಪಡೆದುಕೊಂಡ ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು
- 8 hrs ago
ಕೇವಲ 40 ಸಾವಿರ ರೂ. ಬೆಲೆಗೆ ಬಿಡುಗಡೆಯಾಗಿದೆ 100 ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್
- 10 hrs ago
ಎರ್ಟಿಗಾದಲ್ಲಿ ಹೊಸ ಸಿಎನ್ಜಿ ರೂಪಾಂತರಗಳನ್ನು ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
- 10 hrs ago
ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್
Don't Miss!
- Sports
IPL 2022: ಕೆಎಲ್ ರಾಹುಲ್ ಹೋರಾಟ ವ್ಯರ್ಥ, ಲಕ್ನೋಗೆ ಮಣ್ಣು ಮುಕ್ಕಿಸಿದ ಆರ್ಸಿಬಿ ಟ್ರೋಫಿ ಕನಸು ಜೀವಂತ
- News
ವಿಮಾನ ಇಂಧನ ತೆರಿಗೆ ಕಡಿತ ಮಾಡುತ್ತಾ ಕೇಂದ್ರ ಸರ್ಕಾರ?
- Movies
ಹಿಜಾಬ್ ಧರಿಸಿ ಮುಸ್ಲಿಂ ಮಹಿಳೆಯರ ಪಾತ್ರ ಮಾಡುತ್ತಿರುವ ಸ್ಟಾರ್ ನಟಿಯರಿವರು
- Lifestyle
12 ಲಕ್ಷ ಖರ್ಚು ಮಾಡಿದ ನಾಯಿಯಾದ ಜಪಾನಿನ ವ್ಯಕ್ತಿ!
- Finance
ಮೇ 25ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Technology
ಅಪ್ಲಿಕೇಶನ್ ಡೆವಲಪರ್ಗಳಿಗೆ ಮತ್ತೊಮ್ಮೆ ಸಂದೇಶ ಕಳುಹಿಸಿದ ಆಪಲ್ ಕಂಪೆನಿ!
- Education
ESIC MTS 2022 : ಫೇಸ್ I ಫಲಿತಾಂಶ ಮತ್ತು ಫೇಸ್ II ಪ್ರವೇಶ ಪತ್ರ ಪ್ರಕಟ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದಲ್ಲಿ 2022ರ Audi Q7 ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ
ಆಡಿ ಇಂಡಿಯಾ (Audi India) ಕಂಪನಿಯು ಹೊಸ ಕ್ಯೂ7 ಫೇಸ್‌ಲಿಫ್ಟ್ ಎಸ್‍ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಆಡಿ ಕ್ಯೂ7 ಫೇಸ್‌ಲಿಫ್ಟ್ (Audi Q7 facelift) ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.79.99 ಲಕ್ಷವಾಗಿದೆ.

ಆಡಿ ಕಂಪನಿಯು 2022ರ ಕ್ಯೂ7 ಫೇಸ್‌ಲಿಫ್ಟ್ ಎಸ್‍ಯುವಿಯ ಖರೀದಿಗಾಗಿ ಈಗಾಗಲೇ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಈ ಐಷಾರಾಮಿ ಎಸ್‍ಯುವಿಯನ್ನು ಖರೀದಿಸಲು ಬಯಸುವವರು ಟೋಕನ್ ಮೊತ್ತ ರೂ.5 ಲಕ್ಷ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಆಡಿ ಕ್ಯೂ7 ಫೇಸ್‌ಲಿಫ್ಟ್ ಅನ್ನು ಪ್ರೀಮಿಯಂ ಪ್ಲಸ್ ಮತ್ತು ಟೆಕ್ನಾಲಜಿ ಸೇರಿದಂತೆ ಎರಡು ರೂಪಾಂತರಗಳಲ್ಲಿ ನೀಡಲಾಗುತ್ತದೆ. ಇದು ಸಂಪೂರ್ಣವಾಗಿ ನಾಕ್ಡ್ ಡೌನ್ (CKD) ಯುನಿಟ್ ಆಗಿ ಭಾರತಕ್ಕೆ ಬರುತ್ತದೆ ಮತ್ತು ಇದನ್ನು ಔರಂಗಾಬಾದ್‌ನಲ್ಲಿರುವ ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ (SAVWIPL) ಸ್ಥಾವರದಲ್ಲಿ ತಯಾರಿಸಲಾಗುವುದು.

ಈ ಎರಡು ರೂಪಾಂತರಗಳಲ್ಲಿ ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಒಳಗೊಂಡಿರುತ್ತದೆ. ನವೀಕರಿಸಿದ ಈ ಹೊಸ ಎಸ್‍ಯುವಿಯಲ್ಲಿ 3.0-ಲೀಟರ್, ಟ್ವಿನ್-ಟರ್ಬೋಚಾರ್ಜ್ಡ್, ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 335 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ನೊಂದಿಗೆ 8-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಹೊಸ ಕ್ಯೂ5 ನಂತೆ ಕ್ಯೂ7 ಕೂಡ ಮೈಲ್ಡ್ -ಹೈಬ್ರಿಡ್ ಸಿಸ್ಟಂ ಅನ್ನು ಪಡೆಯುತ್ತದೆ, ಇದು 48-ವೋಲ್ಟ್ ಎಲೆಕ್ಟ್ರಿಕ್ ಮೋಟಾರು, ಲಿಥಿಯಂ-ಐಯಾನ್ ಬ್ಯಾಟರಿ ಮತ್ತು ಬೆಲ್ಟ್ ಆಲ್ಟರ್ನೇಟರ್ ಸ್ಟಾರ್ಟರ್ (BAS) ಅನ್ನು ಒಳಗೊಂಡಿರುತ್ತದೆ. ಇನ್ನು ಈ ಹೊಸ ಆಡಿ ಕ್ಯೂ7 ಫೇಸ್‌ಲಿಫ್ಟ್ ಎಸ್‍ಯುವಿಯು 250 ಕಿಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ, ಬ್ರ್ಯಾಂಡ್‌ನ ಕ್ವಾಟ್ರೊ ಆಲ್-ವೀಲ್-ಡ್ರೈವ್ ಸಿಸ್ಟಂ ಸಹ ಈ ಎಸ್‍ಯುವಿಯಲ್ಲಿ ನೀಡಲಾಗಿದೆ.

ಈ ಹೊಸ ಆಡಿ ಕ್ಯೂ7 ಫೇಸ್‌ಲಿಫ್ಟ್‌ನ ಎಂಟ್ರಿ ಲೆವೆಲ್ ಪ್ರೀಮಿಯಂ ಪ್ಲಸ್ ರೂಪಾಂತರವು 19-ಇಂಚಿನ ಅಲಾಯ್ ವ್ಹೀಲ್ ಗಳು, ಎಂಟು ಏರ್‌ಬ್ಯಾಗ್‌ಗಳು, ಪನರೋಮಿಕ್ ಸನ್‌ರೂಫ್, ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಅಡಾಪ್ಟಿವ್ ಏರ್ ಸಸ್ಪೆನ್ಷನ್, ಆಂಬಿಯೆಂಟ್ ಲೈಟಿಂಗ್ ಮತ್ತು ಎಲೆಕ್ಟ್ರಿಕಲಿ-ಹೊಂದಾಣಿಕೆ ಸ್ಟೀರಿಂಗ್ ವ್ಹೀಲ್ ಅನ್ನು ಒಳಗೊಂಡಿದೆ.

ಇದರೊಂದಿಗೆ ನಾಲ್ಕು- ಮುಂಭಾಗದ ಸೀಟುಗಳಿಗೆ ಲಂಬೂರ್ ಸಂಪೂರ್ಟ್, ಪಾರ್ಕಿಂಗ್ ಅಸಿಸ್ಟ್ ಜೊತೆಗೆ ಕ್ರೂಸ್ ಕಂಟ್ರೋಲ್, ಫ್ಹೋರ್ ಜೋನ್ ಕಂಟ್ರೋಲ್, ಪವರ್-ಹೊಂದಾಣಿಕೆ ಮುಂಭಾಗದ ಸೀಟುಗಳು ಮತ್ತು ಡ್ರೈವರ್ ಸೀಟ್‌ಗಾಗಿ ಮೆಮೊರಿ ಫಂಕ್ಷನ್, ವರ್ಚುವಲ್ ಕಾಕ್‌ಪಿಟ್ ಮತ್ತು ಲೇನ್ ಡಿಪರ್ಚರ್ ಎಕ್ಸಿಟ್ ಅನ್ನು ಹೊಂದಿದೆ.

ಇದರೊಂದಿಗೆ ಡ್ಯುಯಲ್-ಸ್ಕ್ರೀನ್ ಎಂಎಂಐ ಪ್ಲಸ್, ಆಡಿ ಡ್ರೈವ್ ಆಯ್ಕೆ, ಆಡಿ ಸೌಂಡ್ ಸಿಸ್ಟಮ್, ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ ಆಡಿ ಫೋನ್ ಬಾಕ್ಸ್ ಮತ್ತು ಆಡಿ ಸ್ಮಾರ್ಟ್‌ಫೋನ್ ಇಂಟರ್ಫೇಸ್ ಅನ್ನು ಒಳಗೊಂಡಿದೆ.

ಮೇಲೆ ತಿಳಿಸಲಾದ ವೈಶಿಷ್ಟ್ಯಗಳ ಜೊತೆಗೆ, ಆಡಿ ಕ್ಯೂ7 ಫೇಸ್‌ಲಿಫ್ಟ್ ಟೆಕ್ನಾಲಜಿ ರೂಪಾಂತರವು ಅಡಾಪ್ಟಿವ್ ವಿಂಡ್‌ಶೀಲ್ಡ್ ವೈಪರ್‌ಗಳನ್ನು ಪಡೆಯುತ್ತದೆ, ಸೆನ್ಸರ್-ಕಂಟ್ರೋಲ್ಡ್ ಲಗೇಜ್ ಕಂಪಾರ್ಟ್‌ಮೆಂಟ್ ರೀಲಿಸ್ ಕಂಫರ್ಟ್ ಕೀ, ಹಿಂಭಾಗದಲ್ಲಿ ಚಾರ್ಜಿಂಗ್ ಫಂಕ್ಷನ್ ನೊಂದಿಗೆ USB ಪೋರ್ಟ್‌ಗಳು, ಆಡಿ ಪಾರ್ಕ್ ಅಸಿಸ್ಟ್ ಜೊತೆಗೆ 3D ಸರೌಂಡ್ ಕ್ಯಾಮೆರಾಗಳು, 730W ಬ್ಯಾಂಗ್ ಮತ್ತು ಒಲುಫ್‌ಸೆನ್ ಮೂಲದ ಸರೌಂಡ್ ಸೌಂಡ್ ಸಿಸ್ಟಮ್, ಮತ್ತು ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಅನ್ನು ಹೊಂದಿದೆ.

ಈ ಹೊಸ ಆಡಿ ಕ್ಯೂ7 ಎಸ್‍ಯುವಿಯು ವಿನ್ಯಾಸ ಬದಲಾವಣೆಗಳ ಬಗ್ಗೆ ಹೇಳುವುದಾದರೆ, ಈ ಹೊಸ ಎಸ್‍ಯುವಿಯಲ್ಲಿ ದೊಡ್ಡದಾದ, ಸಿಂಗಲ್ ಫ್ರೇಮ್ ಗ್ರಿಲ್ ಅನ್ನು ಹೊಂದಿದ್ದು, ನೇರವಾದ ಸ್ಲ್ಯಾಟ್‌ಗಳು, ಸ್ಪೋರ್ಟಿಯರ್ ಬಂಪರ್ ಎರಡು ಭಾಗಗಳ ಸೈಡ್ ಏರ್ ಇನ್‌ಲೆಟ್‌ಗಳು, ದಪ್ಪ ಕ್ಲಾಡಿಂಗ್ ಮತ್ತು ಎಲ್-ಆಕಾರದ ಏರ್ ಸ್ಪ್ಲಿಟರ್ ಅನ್ನು ಹೊಂದಿದೆ.

ಈ ಆಡಿ ಲೇಸರ್ ಲೈಟ್ ನೊಂದಿಗೆ HD ಮ್ಯಾಟ್ರಿಕ್ಸ್ ಎಲ್ಇಡಿ ಒಂದು ಆಯ್ಕೆಯಾಗಿ ಬರುತ್ತದೆ. ಅದರ ಕೆಲವು ಇತರೆ ವಿನ್ಯಾಸಗಳು ಹೊಸದಾಗಿ ವಿನ್ಯಾಸಗೊಳಿಸಲಾದ 19-ಇಂಚಿನ ಅಲಾಯ್ ವ್ಹೀಲ್ ನೊಂದಿಗೆ ಕ್ರೋಮ್ ಸ್ಟ್ರಿಪ್ ಮೂಲಕ ಕನೆಕ್ಟ್ ಆಗಿರುವ ಹೊಸ ಟೈಲ್‌ಲ್ಯಾಂಪ್‌ಗಳು ಮತ್ತು ನವೀಕರಿಸಿದ ರೇರ್ ಬಂಪರ್ ಅನ್ನು ಒಳಗೊಂಡಿರುತ್ತದೆ.

ಇನ್ನು ಈ ಎಸ್‍ಯುವಿಯ ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಮಾದರಿಯು 11 ಎಂಎಂ ಹೆಚ್ಚುವರಿ ಸ್ಥಳಾವಕಾಶದೊಂದಿಗೆ 5063 ಎಂಎಂ ಉದ್ದ ಹೊಂದಿದೆ. ಇದು 1970 ಎಂಎಂ ಅಗಲ ಮತ್ತು 1741 ಎಂಎಂ ಎತ್ತರವನ್ನು ಹೊಂದಿದೆ. ಕ್ಯಾಬಿನ್ ಒಳಗೂ ಆಡಿ ಕಂಪನಿಯು ಸಮಗ್ರವಾಗಿ ನವೀಕರಣಗಳನ್ನು ಪರಿಚಯಿಸಿದೆ. ಇದು ಪಿಯಾನೋ ಬ್ಲಾಕ್, ಕ್ರೋಮ್ ಮತ್ತು ಬ್ರಷ್ಡ್ ಅಲ್ಯೂಮಿನಿಯಂ ಹೈಲೈಟ್‌ಗಳ ಜೊತೆಗೆ ಸಾಕಷ್ಟು ಸುಧಾರಿತವಾಗಿದೆ.

2022ರ ಆಡಿ ಕ್ಯೂ7 ಫೇಸ್‌ಲಿಫ್ಟ್‌ನಲ್ಲಿನ ಬಣ್ಣ ಆಯ್ಕೆಗಳಲ್ಲಿ ಕ್ಯಾರಾರಾ ವೈಟ್, ಮೈಥೋಸ್ ಬ್ಲ್ಯಾಕ್, ನವರ್ರಾ ಬ್ಲೂ, ಸಮುರಾಯ್ ಗ್ರೇ ಮತ್ತು ಫ್ಲೋರೆಟ್ ಸಿಲ್ವರ್ ಬಣ್ಣಗಳು ಒಳಗೊಂಡಿವೆ. ಗ್ರಾಹಕರು ಸೈಗಾ ಬೀಜ್ ಮತ್ತು ಒಕಾಪಿ ಬ್ರೌನ್‌ನಂತಹ ಎರಡು ಆಂತರಿಕ ಥೀಮ್‌ಗಳಿಂದ ಆಯ್ಕೆ ಮಾಡಬಹುದು. ಈ ಹೊಸ ಕ್ಯೂ7 ಎಸ್‍ಯುವಿಯನ್ನು ಕೇವಲ 5.9 ಸೆಕೆಂಡ್‌ಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಈ ಆಡಿ ಕ್ಯೂ7 ಪ್ರಮುಖ ನವೀಕರಣಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಹೊಸ ಆಡಿ ಕ್ಯೂ7 ಫೇಸ್‌ಲಿಫ್ಟ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿಬಿಎಂಡಬ್ಕ್ಯು ಎಕ್ಸ್5, ಮರ್ಸಿಡಿಸ್ ಬೆಂಝ್ ಜಿಎಲ್ಇ, ವೊಲ್ವೊ ಎಕ್ಸ್‌ಸಿ90 ಮತ್ತು ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.