ಭಾರತದಲ್ಲಿ ಹೊಸ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಕಾರು ಬಿಡುಗಡೆ

ಇತ್ತೀಚಿನ ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳುತ್ತಿದೆ. ಹೆಚ್ಚಿನ ಜನರು ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ.

Recommended Video

Toyota Urban Cruiser Hyryder Kannada Walkaround | ಹೈಬ್ರಿಡ್ ಎಂಜಿನ್, ಗೇರ್ ಬಾಕ್ಸ್, ವೈಶಿಷ್ಟ್ಯತೆಗಳು..

ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಇದರ ನಡುವೆ ಇದೀಗ ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಎರಡನೇ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿದೆ.

ಭಾರತದಲ್ಲಿ ಹೊಸ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಕಾರು ಬಿಡುಗಡೆ

ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಸೆಡಾನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹೊಸ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ಆರಂಭಿಕ ಬೆಲೆಯು ರೂ.2.45 ಕೋಟಿಯಾಗಿದೆ. ಈ ಹೊಸ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಸೆಡಾನ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಆಡಿ ಇ-ಟ್ರಾನ್ ಆರ್‌ಎಸ್ ಮತ್ತು ಪೋರ್ಷೆ ಟೇಕಾನ್ ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಭಾರತದಲ್ಲಿ ಹೊಸ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಕಾರು ಬಿಡುಗಡೆ

ಹೊಸ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಸೆಡಾನ್ ಸಾಕಷ್ಟು ಸ್ಪೋರ್ಟಿ ಲುಕ್ ಅನ್ನು ಹೊಂದಿದ್ದು, ದೂರದಿಂದ ನೋಡಿದಾಗ ಪೆಟ್ರೋಲ್-ಚಾಲಿತ ಮರ್ಸಿಡಿಸ್-ಎಎಂಜಿ ಕಾರಿನಂತೆ ಕಾಣುತ್ತದೆ. ಈ ಹೊಸ ಎಲೆಕ್ಟ್ರಿಕ್ ಕಾರಿನ ಸ್ಟೈಲಿಂಗ್‌ನಲ್ಲಿ ಶಾರ್ಪ್ ಮತ್ತು ಭವ್ಯವಾದ ನಿಲುವನ್ನು ಹೊಂದಿದೆ,

ಭಾರತದಲ್ಲಿ ಹೊಸ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಕಾರು ಬಿಡುಗಡೆ

ಮುಂಭಾಗದ ತುದಿಯಲ್ಲಿ ಡಿಜಿಟಲ್ ಲೈಟ್ ಹೆಡ್‌ಲ್ಯಾಂಪ್‌ಗಳು, ಕ್ರೋಮ್‌ನಲ್ಲಿ ಲಂಬವಾದ ಸ್ಟ್ರಟ್‌ಗಳೊಂದಿಗೆ ಎಎಂಜಿ-ನಿರ್ದಿಷ್ಟ ಬ್ಲ್ಯಾಕ್ ಪ್ಯಾನೆಲ್ ಗ್ರಿಲ್, ಇಂಟಿಗ್ರೇಟೆಡ್ ಮರ್ಸಿಡಿಸ್ ಸ್ಟಾರ್ ಮತ್ತು "AMG" ಬ್ಯಾಡ್ಜ್ ಅನ್ನು ಹೊಂದಿದೆ, ಈ ಕಾರಿನ ಮುಂಭಾಗದ ಬಂಪರ್ ಬಾಡಿ ಬಣ್ಣವನ್ನು ಹೊಂದಿದೆ.

ಭಾರತದಲ್ಲಿ ಹೊಸ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಕಾರು ಬಿಡುಗಡೆ

ಇನ್ನು ಮುಂಭಾಗದ ಏಪ್ರನ್ ಹಾಲ್‌ಮಾರ್ಕ್ AMG A-ವಿಂಗ್ ವಿನ್ಯಾಸವನ್ನು ಕ್ರೋಮ್ ಟ್ರಿಮ್‌ನೊಂದಿಗೆ ಹೈ-ಗ್ಲಾಸ್ ಬ್ಲ್ಯಾಕ್ ಬಣ್ಣದಲ್ಲಿದೆ. ಹೊಸ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಸೆಡಾನ್ ವಿನ್ಯಾಸ ಅಂಶಗಳು 0.23 ಡ್ರ್ಯಾಗ್ ಗುಣಾಂಕವನ್ನು ಸಾಧಿಸಲು ಸಹಾಯ ಮಾಡುತ್ತದೆ.

ಭಾರತದಲ್ಲಿ ಹೊಸ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಕಾರು ಬಿಡುಗಡೆ

ಈ ಹೊಸ ಕಾರಿನ ಏರೋ ಅಥವಾ ಹೆರಿಟೇಜ್ ವಿನ್ಯಾಸದಲ್ಲಿ 21- ಅಥವಾ 22-ಇಂಚಿನ ಎಎಂಜಿ ಲೈಟ್-ಅಲಾಯ್ ವ್ಹೀಲ್ ಗಳ ಮೇಲೆ ಪ್ರೊಫೈಲ್ ಹೆಚ್ಚಿನ ಹೊಳಪಿನ ಬ್ಲ್ಯಾಕ್ ಬಣ್ಣದ ಎಎಂಜಿ ಸೈಡ್ ಸಿಲ್ ಪ್ಯಾನೆಲ್‌ಗಳನ್ನು ಪಡೆಯುತ್ತದೆ. ಹಿಂದಿನ ವಿಭಾಗವು ಕಾರಿನ ಬಣ್ಣದಲ್ಲಿ ಹಿಂಭಾಗದ ಏಪ್ರನ್‌ನೊಂದಿಗೆ ದೊಡ್ಡ ಹಿಂಭಾಗದ ಸ್ಪಾಯ್ಲರ್ ಅನ್ನು ಹೊಂದಿದೆ. ಈ ಹೊಸ ಎಲೆಕ್ಟ್ರಿಕ್ ಕಾರು ಆಪ್ಟಿಮೈಸ್ಡ್ ಡಿಫ್ಯೂಸರ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಕಾರು ಬಿಡುಗಡೆ

ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಸೆಡಾನ್ ಒಳಭಾಗದಲ್ಲಿ ಸ್ಪೋರ್ಟ್‌ನೆಸ್ ವಿನ್ಯಾಸದೊಂದಿಗೆ ಭವ್ಯವಾಗಿ ಕಾಣುತ್ತದೆ. ಈ ಕಾರಿನಲ್ಲಿ ವೈಯಕ್ತಿಕ ಗ್ರಾಫಿಕ್ಸ್‌ನೊಂದಿಗೆ ಎಎಂಜಿ ಸೀಟ್‌ಗಳು ಮತ್ತು ಮೈಕ್ರೋಕಟ್ ಮೈಕ್ರೋಫೈಬರ್ ಮತ್ತು ರೆಡ್ ಕಾಂಟ್ರಾಸ್ಟಿಂಗ್ ಟಾಪ್‌ಸ್ಟಿಚಿಂಗ್‌ನೊಂದಿಗೆ ಆರ್ಟಿಕೊ ಲೆದರ್ ಸೀಟ್ ಕವರ್‌ಗಳನ್ನು ಹೊಂದಿವೆ.

ಭಾರತದಲ್ಲಿ ಹೊಸ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಕಾರು ಬಿಡುಗಡೆ

ಈ ಕಾರಿನಲ್ಲಿ ಎಎಂಜಿ ನಿರ್ದಿಷ್ಟ ಸೀಟ್ ಗ್ರಾಫಿಕ್ಸ್ ಜೊತೆಗೆ ನಪ್ಪಾ ಲೆದರ್‌ನಲ್ಲಿ ಸೀಟ್ ಅಪ್ಹೋಲ್ಸ್ಟರಿ ಆಯ್ಕೆಯಾಗಿ ಲಭ್ಯವಿದೆ. MBUX ಹೈಪರ್‌ಸ್ಕ್ರೀನ್ ಹೊಸ ಎಲೆಕ್ಟ್ರಿಕ್ ಸೆಡಾನ್‌ನಲ್ಲಿ ಡ್ಯಾಶ್ ಬೋರ್ಡ್ ಮಧ್ಯದಲ್ಲಿದೆ. ಇನ್ನು ಮೂರು ಸ್ನ್ರೀನ್ ಗ್ಲಾಸ್ ಕವರ್ ನೊಂದಿಗೆ ಒಂದಾಗಿ ವಿಲೀನಗೊಳ್ಳುವಂತೆ ತೋರುತ್ತವೆ.

ಭಾರತದಲ್ಲಿ ಹೊಸ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಕಾರು ಬಿಡುಗಡೆ

ಹೊಸ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಸೆಡಾನ್ AMG.EA ಪ್ಲಾಟ್‌ಫಾರ್ಮ್‌ನಿಂದ ಆಧಾರವಾಗಿದೆ. ಇದು ಎರಡು ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಹೊಂದಿದ್ದು, ಪ್ರತಿ ಆಕ್ಸಲ್‌ನಲ್ಲಿ ಒಂದನ್ನು ಅಳವಡಿಸಲಾಗಿದೆ ಮತ್ತು ಸಂಪೂರ್ಣ ವೇರಿಯಬಲ್ ಎಎಂಜಿ ಕಾರ್ಯಕ್ಷಮತೆ 4ಮ್ಯಾಟಿಕ್+ ಆಲ್-ವೀಲ್ ಡ್ರೈವ್ (AWD) ಸಿಸ್ಟಮ್‌ಗೆ ಜೋಡಿಸಲಾಗಿದೆ.

ಭಾರತದಲ್ಲಿ ಹೊಸ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಕಾರು ಬಿಡುಗಡೆ

ಈ ಎರಡು ಮೋಟಾರ್‌ಗಳು ಒಟ್ಟಾಗಿ 750 ಬಿಹೆಚ್‍ಪಿ ಪವರ್ ಮತ್ತು 1020 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಲೆಕ್ಟ್ರಿಕ್ ಸೆಡಾನ್ ಕೇವಲ 3.8 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಕಾರು 200kW ವರೆಗೆ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರರ್ಥ ಕೇವಲ 31 ನಿಮಿಷಗಳಲ್ಲಿ 10 ಪ್ರತಿಶತದಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು. 7.4kW ಚಾರ್ಜರ್ ತನ್ನ ಪೂರ್ಣ ಸಾಮರ್ಥ್ಯಕ್ಕೆ ಚಾರ್ಜ್ ಮಾಡಲು 15 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ಕಾರು ಪೂರ್ಣ ಚಾರ್ಜ್‌ನಲ್ಲಿ 586 ಕಿ.ಮೀ ವರೆಗೂ ಚಲಿಸುತ್ತದೆ.

ಭಾರತದಲ್ಲಿ ಹೊಸ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಕಾರು ಬಿಡುಗಡೆ

ಇದು ರೈಡ್ ಆರಾಮ ಮತ್ತು ಡ್ರೈವಿಂಗ್ ಡೈನಾಮಿಕ್ಸ್‌ಗೆ ಅನ್ವಯಿಸುತ್ತದೆ ಆದರೆ ಎಎಂಜಿ ರೈಡ್ ಕಂಟ್ರೋಲ್ + ಸಸ್ಪೆಕ್ಷನ್ ಎಲೆಕ್ಟ್ರಾನಿಕ್ ನಿಯಂತ್ರಿತ ಹೊಂದಾಣಿಕೆಯ ಡ್ಯಾಂಪಿಂಗ್ ಅನ್ನು ಹಿಂಬದಿ-ಆಕ್ಸಲ್ ಸ್ಟೀರಿಂಗ್‌ನೊಂದಿಗೆ ಸಂಯೋಜಿಸುತ್ತದೆ.

ಭಾರತದಲ್ಲಿ ಹೊಸ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಕಾರು ಬಿಡುಗಡೆ

ಹೊಸ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಸೆಡಾನ್ 3.4 ಸೆಕೆಂಡುಗಳಲ್ಲಿ 0-100 ಕಿ,ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇದಕ್ಕೆ ಕನಿಷ್ಠ 80 ಪ್ರತಿಶತದಷ್ಟು ಬ್ಯಾಟರಿ ಚಾರ್ಜ್ ಮಟ್ಟದೊಂದಿಗೆ ಮಾಡುತ್ತದೆ. ಈ ಕಾರಿನ ಟಾಪ್ ಸ್ಪೀಡ್ 250 ಕಿ.ಮೀಗೆ ಸೀಮಿತವಾಗಿದೆ. ಈ ಕಾರಿನಲ್ಲಿ 107.8 kWh ಬ್ಯಾಟರಿ ಪ್ಯಾಕ್‌ನಿಂದ ಎಎಂಜಿ ನಿರ್ದಿಷ್ಟ ವೈರಿಂಗ್ ಅನ್ನು ಉನ್ನತ-ಕಾರ್ಯಕ್ಷಮತೆಯ ಸಾಮರ್ಥ್ಯಕ್ಕೆ ಅಳವಡಿಸಲಾಗಿದೆ.

ಭಾರತದಲ್ಲಿ ಹೊಸ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಕಾರು ಬಿಡುಗಡೆ

ಈ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಕಾರು ಐದು ಎಎಂಜಿ ಡೈನಾಮಿಕ್ ಸೆಲೆಕ್ಟ್ ಡ್ರೈವಿಂಗ್ ಮೋಡ್‌ಗಳೊಂದಿಗೆ ಬರುತ್ತದೆ. ಇವುಗಳು ಸ್ಲಿಪರಿ, ಕಂಫರ್ಟ್, ಸ್ಪೋರ್ಟ್, ಸ್ಪೋರ್ಟ್+ ಮತ್ತು ಇಂಡಿವಿಜುವಲ್ ಆಗಿದೆ. ಈ ಕಾರು ಸಿಸ್ಟಂ ಡೇಟಾವನ್ನು ಸಂಗ್ರಹಿಸುತ್ತದೆ ಮತ್ತು ಸ್ಪೋರ್ಟಿನೆಸ್ ಮತ್ತು ಆರಾಮದ ನಡುವೆ ಹರಡುವಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸಲು ಪ್ರತಿ ಚಕ್ರಕ್ಕೆ ಡ್ಯಾಂಪಿಂಗ್ ಫೋರ್ಸ್ ಅನ್ನು ಸರಿಹೊಂದಿಸುತ್ತದೆ.

Most Read Articles

Kannada
English summary
New mercedes amg eqs 53 4matic plus launched in india price range details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X