ಬಜೆಟ್ ಬೆಲೆಯಲ್ಲಿ ಸ್ಪೋರ್ಟಿ ಡಿಸೈನ್ ಹೊಂದಿರುವ ಇವಿ ಕಾರು ಬಿಡುಗಡೆ ಸುಳಿವು ನೀಡಿದ ಓಲಾ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಇವಿ ವಾಹನ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಮುಂಬರುವ ಕೆಲವೇ ದಿನಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ವಿಭಾಗಕ್ಕೆ ಲಗ್ಗೆಯಿಡುವ ಸುಳಿವು ನೀಡಿದ್ದು, ಸ್ಪೋರ್ಟಿ ವಿನ್ಯಾಸದ ಹೊಸ ಇವಿ ಕಾರು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಬಜೆಟ್ ಬೆಲೆಯಲ್ಲಿ ಸ್ಪೋರ್ಟಿ ಡಿಸೈನ್ ಹೊಂದಿರುವ ಇವಿ ಕಾರು ಬಿಡುಗಡೆ ಸುಳಿವು ನೀಡಿದ ಓಲಾ ಎಲೆಕ್ಟ್ರಿಕ್

2030ರ ವೇಳೆಗೆ ದೇಶಾದ್ಯಂತ ಶೇ.50ಕ್ಕಿಂತಲೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಮಾರಾಟ ಗುರಿಹೊಂದಲಾಗಿದ್ದು, ಕೇಂದ್ರ ಸರ್ಕಾರದ ನಿರ್ಣಯದಂತೆ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ಇವಿ ವಾಹನಗಳ ಉತ್ಪಾದನೆಯತ್ತ ವಿಶೇಷ ಗಮನಹರಿಸುತ್ತಿವೆ. ಮಾರುಕಟ್ಟೆಗೆ ಈಗಾಗಲೇ ಹಲವು ಹೊಸ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆ ಪ್ರವೇಶಿಸಿದ್ದು, ಓಲಾ ಕಂಪನಿಯು ತನ್ನ ಸಹ ಹೊಸ ಎಸ್ ಸರಣಿಯ ಇವಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದೆ.

ಬಜೆಟ್ ಬೆಲೆಯಲ್ಲಿ ಸ್ಪೋರ್ಟಿ ಡಿಸೈನ್ ಹೊಂದಿರುವ ಇವಿ ಕಾರು ಬಿಡುಗಡೆ ಸುಳಿವು ನೀಡಿದ ಓಲಾ ಎಲೆಕ್ಟ್ರಿಕ್

ಬಜೆಟ್ ಬೆಲೆಯಲ್ಲಿಯೇ ಅತ್ಯುತ್ತಮ ಡಿಸೈನ್ ಪ್ರೇರಿತ, ಧೀರ್ಘಕಾಲಿಕ ಬ್ಯಾಟರಿ ರೇಂಜ್ ಹೊಂದಿರುವ ಸ್ಕೂಟರ್ ಬಿಡುಗಡೆ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ ಓಲಾ ಕಂಪನಿಯು ಭವಿಷ್ಯದಲ್ಲಿ ಮತ್ತಷ್ಟು ಬೃಹತ್ ಯೋಜನೆಗಳೊಂದಿಗೆ ಆಟೋ ಉತ್ಪಾದನಾ ವಲಯದಲ್ಲಿ ಮುಂಚೂಣಿ ಸಾಧಿಸುವ ನೀರಿಕ್ಷೆಯಲ್ಲಿದೆ.

ಬಜೆಟ್ ಬೆಲೆಯಲ್ಲಿ ಸ್ಪೋರ್ಟಿ ಡಿಸೈನ್ ಹೊಂದಿರುವ ಇವಿ ಕಾರು ಬಿಡುಗಡೆ ಸುಳಿವು ನೀಡಿದ ಓಲಾ ಎಲೆಕ್ಟ್ರಿಕ್

ಇವಿ ವಾಹನ ಉದ್ಯಮಕ್ಕೆ ಲಗ್ಗೆಯಿಟ್ಟ ಮೊದಲ ಹಂತದಲ್ಲೇ ಬಜೆಟ್ ಬೆಲೆಯೊಂದಿಗೆ ಅತ್ಯಧಿಕ ಬ್ಯಾಟರಿ ರೇಂಜ್ ಹೊಂದಿರುವ ಸ್ಕೂಟರ್ ಬಿಡುಗಡೆ ಮಾಡಿದ ಓಲಾ ಎಲೆಕ್ಟ್ರಿರ್ ಕಂಪನಿಯು ಇದೀಗ ಪ್ರಯಾಣಿಕ ಕಾರು ವಿಭಾಗಕ್ಕೂ ಪ್ರವೇಶಿಸುವ ಯೋಜನೆಯಲ್ಲಿದ್ದು, ಹೊಸ ಇವಿ ಕಾರಿನ ಟೀಸರ್ ಚಿತ್ರವನ್ನು ಹಂಚಿಕೊಂಡಿದೆ.

ಬಜೆಟ್ ಬೆಲೆಯಲ್ಲಿ ಸ್ಪೋರ್ಟಿ ಡಿಸೈನ್ ಹೊಂದಿರುವ ಇವಿ ಕಾರು ಬಿಡುಗಡೆ ಸುಳಿವು ನೀಡಿದ ಓಲಾ ಎಲೆಕ್ಟ್ರಿಕ್

ಇವಿ ಸ್ಕೂಟರ್ ಬಿಡುಗಡೆಯ ನಂತರ ಮುಂದಿನ ಯೋಜನೆ ಕುರಿತಾಗಿ ಮಹತ್ವದ ಸುಳಿವು ನೀಡಿರುವ ಓಲಾ ಕಂಪನಿಯ ಸಿಇಒ ಭಾವಿಶ್ ಅಗರ್‌ವಾಲ್ ಅವರು ಶೀಘ್ರದಲ್ಲಿಯೇ ಎಲೆಕ್ಟ್ರಿಕ್ ಕಾರನ್ನು ಸಹ ಬಿಡುಗಡೆಯ ಮಾಹಿತಿ ನೀಡಿದ್ದು, ತಮಿಳುನಾಡಿನ ಹೊಸೂರಿನಲ್ಲಿರುವ ಓಲಾ ಫ್ಯೂಚರ್ ಫ್ಯಾಕ್ಟರಿಯಲ್ಲಿ ಗ್ರಾಹಕರ ಭೇಟಿ ಕಾರ್ಯಕ್ರಮದ ಸಂದರ್ಭದಲ್ಲಿ ಕಂಪನಿಯು ತನ್ನ ಹೊಸ ಎಲೆಕ್ಟ್ರಿಕ್ ಕಾರಿನ ವಿನ್ಯಾಸ ಕುರಿತಾದ ಒಂದೊಂದೆ ಚಿತ್ರಗಳನ್ನು ಹಂಚಿಕೊಳ್ಳುತ್ತಿದೆ.

ಬಜೆಟ್ ಬೆಲೆಯಲ್ಲಿ ಸ್ಪೋರ್ಟಿ ಡಿಸೈನ್ ಹೊಂದಿರುವ ಇವಿ ಕಾರು ಬಿಡುಗಡೆ ಸುಳಿವು ನೀಡಿದ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ಕಂಪನಿಯು ಹೊಸ ಕಾರಿನ ತಾಂತ್ರಿಕ ಮಾಹಿತಿಗಳನ್ನು ಆಗಸ್ಟ್ 15 ರಂದು ಬಹಿರಂಗಪಡಿಸುವ ಸಿದ್ದತೆಯಲ್ಲಿದ್ದು, ಇದೇ ಸಂದರ್ಭದಲ್ಲಿ ಜಾಗತಿಕ ವಿದ್ಯುದ್ದೀಕರಣದ ವಿಶ್ವ ಭೂಪಟದಲ್ಲಿ ಭಾರತವನ್ನು ಸೇರಿಸುವುದು ಮತ್ತು ತನ್ನನ್ನು ವಿಶ್ವದರ್ಜೆಯ ಕಂಪನಿಯನ್ನಾಗಿ ಮಾಡುವುದು ಕಂಪನಿಯ ಉದ್ದೇಶವಾಗಿದೆ ಎಂದು ಭಾವಿಶ್ ಅಗರ್‌ವಾಲ್ ಹೊಸ ಆಶಯ ವ್ಯಕ್ತಪಡಿಸಿದ್ದಾರೆ.

ಬಜೆಟ್ ಬೆಲೆಯಲ್ಲಿ ಸ್ಪೋರ್ಟಿ ಡಿಸೈನ್ ಹೊಂದಿರುವ ಇವಿ ಕಾರು ಬಿಡುಗಡೆ ಸುಳಿವು ನೀಡಿದ ಓಲಾ ಎಲೆಕ್ಟ್ರಿಕ್

ಸದ್ಯ ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಫಾಕ್ಟರಿ ಕಾರ್ಯಾಚರಣೆ ಕುರಿತಂತೆ ಗ್ರಾಹಕರಿಗೆ ಮಾಹಿತಿ ನೀಡಲು ಬರೋಬ್ಬರಿ 50 ಸಾವಿರ ಗ್ರಾಹಕರಿಗೆ ಆಹ್ವಾನ ನೀಡಿದ್ದು, ಮೊದಲ ಹಂತ ಫಾಕ್ಟರಿ ಭೇಟಿ ವೇಳೆ ಸುಮಾರು 4 ಸಾವಿರ ಗ್ರಾಹಕರು ಹೊಸ ಉತ್ಪಾದನಾ ಘಟಕವನ್ನು ವಿಕ್ಷೀಸಿದ್ದಾರೆ.

ಬಜೆಟ್ ಬೆಲೆಯಲ್ಲಿ ಸ್ಪೋರ್ಟಿ ಡಿಸೈನ್ ಹೊಂದಿರುವ ಇವಿ ಕಾರು ಬಿಡುಗಡೆ ಸುಳಿವು ನೀಡಿದ ಓಲಾ ಎಲೆಕ್ಟ್ರಿಕ್

ಈ ವೇಳೆ ಗ್ರಾಹಕರ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಕಂಪನಿಯ ಸಿಇಒ ಕಂಪನಿಯ ಉದ್ದೇಶ ಮತ್ತು ಭವಿಷ್ಯದ ಯೋಜನೆಗಳ ಕುರಿತಾಗಿ ಮಹತ್ವದ ಮಾಹಿತಿ ಹಂಚಿಕೊಳ್ಳಲಾಗಿದ್ದು, ನಾವು ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಇವಿ ವಾಹನ ಉದ್ಯಮದಲ್ಲಿ ಸಣ್ಣ ಪ್ರಾರಂಭವನ್ನು ಮಾಡಿದ್ದೇವೆ ಮತ್ತು ಮುಂದಿನ ಕೆಲವು ವರ್ಷಗಳಲ್ಲಿ ನಮ್ಮ ಉತ್ಪಾದನಾ ಘಟಕದಿಂದ ಇನ್ನೂ ಹೆಚ್ಚಿನ ದ್ವಿಚಕ್ರ ವಾಹನಗಳ ಜೊತೆಗೆ ಇವಿ ಕಾರುಗಳನ್ನು ನೀವು ನೋಡಬಹುದಾಗಿದೆ ಎಂದು ಭಾವಿಶ್ ಅಗರ್‌ವಾಲ್ ಮಾತನಾಡಿದ್ದರು.

ಬಜೆಟ್ ಬೆಲೆಯಲ್ಲಿ ಸ್ಪೋರ್ಟಿ ಡಿಸೈನ್ ಹೊಂದಿರುವ ಇವಿ ಕಾರು ಬಿಡುಗಡೆ ಸುಳಿವು ನೀಡಿದ ಓಲಾ ಎಲೆಕ್ಟ್ರಿಕ್

ಹೊಸ ಎಲೆಕ್ಟ್ರಿಕ್ ಕಾರು ಮಾದರಿಗಾಗಿ ಬ್ಯಾಟರಿ ಸೆಲ್‌ಗಳಲ್ಲಿ ಕೋರ್ ತಂತ್ರಜ್ಞಾನವನ್ನು ನಿರ್ಮಿಸುತ್ತಿದ್ದೇವೆ ಎಂದಿರುವ ಭಾವಿಶ್ ಅಗರ್‌ವಾಲ್ ಅವರು ಓಲಾದ ಎಲ್ಲಾ ಹೊಸ ತಂತ್ರಜ್ಞಾನಗಳು ಭಾರತದಲ್ಲಿ ತಯಾರಿಸಲಾಗಲಿದ್ದು, ಹೊಸ ತಂತ್ರಜ್ಞಾನಗಳನ್ನು ಭಾರತೀಯರೇ ತಯಾರಿಸಿದ್ದಾರೆ ಎಂದಿದ್ದಾರೆ.

ಬಜೆಟ್ ಬೆಲೆಯಲ್ಲಿ ಸ್ಪೋರ್ಟಿ ಡಿಸೈನ್ ಹೊಂದಿರುವ ಇವಿ ಕಾರು ಬಿಡುಗಡೆ ಸುಳಿವು ನೀಡಿದ ಓಲಾ ಎಲೆಕ್ಟ್ರಿಕ್

ಸದ್ಯಕ್ಕೆ ಓಲಾ ಕಂಪನಿಯು ಬಿಡುಗಡೆ ಮಾಡಲಾಗಿರುವ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಾಗಿ ಮಾರುಕಟ್ಟೆ ಒದಗಿಸುವುದು ಉತ್ಪಾದನಾ ಘಟಕದ ವಿಸ್ತರಣೆ ಮತ್ತು ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಹೆಚ್ಚಳದ ಮೇಲೆ ಗಮನಹರಿಸುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ವಿವಿಧ ಮಾದರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳೊಂದಿಗೆ ಇವಿ ಕಾರುನ್ನು ಸಹ ನಿರ್ಮಾಣ ಮಾಡುವ ಸಿದ್ದತೆಯಲ್ಲಿದೆ.

ಬಜೆಟ್ ಬೆಲೆಯಲ್ಲಿ ಸ್ಪೋರ್ಟಿ ಡಿಸೈನ್ ಹೊಂದಿರುವ ಇವಿ ಕಾರು ಬಿಡುಗಡೆ ಸುಳಿವು ನೀಡಿದ ಓಲಾ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಕುರಿತು ಈಗಾಗಲೇ ವಿವಿಧ ಹಂತದ ಮಾರುಕಟ್ಟೆ ಅಧ್ಯಯನಗಳನ್ನು ಕೈಗೊಂಡಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಕಾರುಗಳ ವಿಭಾಗದಲ್ಲಿ ವಾಣಿಜ್ಯ ಬಳಕೆಗಾಗಿ ಮತ್ತು ವ್ಯಯಕ್ತಿಕ ಬಳಕೆ ಮಾದರಿಗಳಿಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರೆಯಲಿದೆ.

ಬಜೆಟ್ ಬೆಲೆಯಲ್ಲಿ ಸ್ಪೋರ್ಟಿ ಡಿಸೈನ್ ಹೊಂದಿರುವ ಇವಿ ಕಾರು ಬಿಡುಗಡೆ ಸುಳಿವು ನೀಡಿದ ಓಲಾ ಎಲೆಕ್ಟ್ರಿಕ್

ಭಾರತದಲ್ಲೇ ಪೂರ್ಣ ಪ್ರಮಾಣದ ಇವಿ ವಾಹನ ಉತ್ಪಾದನೆಯ ಗುರಿಹೊಂದಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಭಾರತದಿಂದಲೇ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ಇವಿ ವಾಹನಗಳನ್ನು ರಫ್ತು ಮಾಡುವ ಯೋಜನೆಯಲ್ಲಿದ್ದು, ಕಂಪನಿಯು ಬ್ಯಾಟರಿ ಸೆಲ್‌ಗಳ ಬೇಡಿಕೆಯನ್ನು ಪೂರೈಸಲು ಗಿಗಾ ಫ್ಯಾಕ್ಟರಿಯನ್ನು ಸ್ಥಾಪಿಸಲು ಯೋಜಿಸುತ್ತಿದೆ.

ಬಜೆಟ್ ಬೆಲೆಯಲ್ಲಿ ಸ್ಪೋರ್ಟಿ ಡಿಸೈನ್ ಹೊಂದಿರುವ ಇವಿ ಕಾರು ಬಿಡುಗಡೆ ಸುಳಿವು ನೀಡಿದ ಓಲಾ ಎಲೆಕ್ಟ್ರಿಕ್

ಹೊಸ ಯೋಜನೆಗಳ ಪೂರಕವಾಗಿ ಕಂಪನಿಯು ಸುಧಾರಿತ ಎಂಜಿನಿಯರಿಂಗ್ ಮತ್ತು ಅಭಿವೃದ್ಧಿಗಾಗಿ ಕಂಪನಿಯ ಜಾಗತಿಕ ಕೇಂದ್ರವಾಗಿ ಓಲಾ ಫ್ಯೂಚರ್‌ಫೌಂಡ್ರಿ ನಿರ್ಮಾಣ ಮಾಡಿದ್ದು, ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಸಹಕರಿಸಲು ಸೆಂಟರ್ ಯುಕೆಯಲ್ಲಿ ಕಂಪನಿಯು ವಿಶ್ವ ದರ್ಜೆಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ.

ಬಜೆಟ್ ಬೆಲೆಯಲ್ಲಿ ಸ್ಪೋರ್ಟಿ ಡಿಸೈನ್ ಹೊಂದಿರುವ ಇವಿ ಕಾರು ಬಿಡುಗಡೆ ಸುಳಿವು ನೀಡಿದ ಓಲಾ ಎಲೆಕ್ಟ್ರಿಕ್

ಇದರೊಂದಿಗೆ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ 200 ವಾಹನ ವಿನ್ಯಾಸಕರು ಮತ್ತು ಆಟೋಮೋಟಿವ್ ಎಂಜಿನಿಯರ್‌ಗಳನ್ನು ಹೊಂದಿರುವ ಅತ್ಯಾಧುನಿಕ ಕೇಂದ್ರದಲ್ಲಿ 100 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಯೋಜಿಸಿದ್ದು, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಹೊಸ ಇವಿ ಕಾರುಗಳನ್ನು ಅಭಿವೃದ್ದಿಪಡಿಸಲಿದೆ.

ಬಜೆಟ್ ಬೆಲೆಯಲ್ಲಿ ಸ್ಪೋರ್ಟಿ ಡಿಸೈನ್ ಹೊಂದಿರುವ ಇವಿ ಕಾರು ಬಿಡುಗಡೆ ಸುಳಿವು ನೀಡಿದ ಓಲಾ ಎಲೆಕ್ಟ್ರಿಕ್

ಹೊಸ ತಂತ್ರಜ್ಞಾನ ಪ್ರೇರಣೆ ಹೊಂದಲಿರುವ ಓಲಾ ಹೊಸ ಇವಿ ಕಾರು ಮಾದರಿಯು ಕೇವಲ ಐದು ನಿಮಿಷಗಳಲ್ಲಿ ಸೊನ್ನೆಯಿಂದ ಶೇ.100 ರಷ್ಟು ಚಾರ್ಜ್ ಮಾಡಬಹುದಾದ ಸೂಪರ್ ಚಾರ್ಜಿಂಗ್ ವೈಶಿಷ್ಟ್ಯತೆಯೊಂದಿಗೆ ನಿರ್ಮಾಣಗೊಳ್ಳುತ್ತಿದ್ದು, ಹೊಸ ಕಾರಿನ ಬ್ಯಾಟರಿ ಸಾಮರ್ಥ್ಯ, ಮೈಲೇಜ್, ಅಂದಾಜು ಬೆಲೆ ಕುರಿತು ಅಗಸ್ಟ್ 15ರಂದು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

Most Read Articles

Kannada
English summary
Ola electric car teased sportiest ev car of india details
Story first published: Saturday, July 16, 2022, 14:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X