ನಮ್ಮ ಬೆಂಗಳೂರಿನಲ್ಲಿ ಬೃಹತ್ ತ್ರಿ-ಚಕ್ರ ವಾಣಿಜ್ಯ ವಾಹನ ಉತ್ಪಾದನಾ ಘಟಕ ಆರಂಭಿಸಿದ ಒಮೆಗಾ ಸೈಕ್

ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಓಮೆಗಾ ಸೈಕ್ ಕಂಪನಿಯು ಇವಿ ತ್ರಿ-ಚಕ್ರ ವಾಹನಗಳ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಯೋಜನೆಯಲ್ಲಿದ್ದು, ಕಂಪನಿಯು ಹೊಸ ಯೋಜನೆಗೆ ಪೂರಕವಾಗಿ ಕರ್ನಾಟಕದಲ್ಲಿ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ತನ್ನ ಬೃಹತ್ ತ್ರಿ-ಚಕ್ರ ವಾಹನ ಉತ್ಪಾದನಾ ಘಟಕವನ್ನು ತೆರೆದಿದೆ.

ನಮ್ಮ ಬೆಂಗಳೂರಿನಲ್ಲಿ ಬೃಹತ್ ತ್ರಿ-ಚಕ್ರ ವಾಣಿಜ್ಯ ವಾಹನ ಉತ್ಪಾದನಾ ಘಟಕ ಆರಂಭಿಸಿದ ಓಮೆಗಾ ಸೈಕ್

ಫರಿದಾಬಾದ್‌ನಲ್ಲಿ ತಾತ್ಕಾಲಿಕ ಉತ್ಪಾದನಾ ಘಟಕದೊಂದಿಗೆ ಕಳೆದ ವರ್ಷ ಉತ್ಪಾದನೆ ಆರಂಭಿಸಿದ್ದ ಓಮೆಗಾ ಸೈಕ್ ಕಂಪನಿಯು ಇದೀಗ ಬೃಹತ್ ಬಂಡವಾಳದೊಂದಿಗೆ ಬೆಂಗಳೂರಿನ ಗ್ರಾಮಾಂತರದಲ್ಲಿ ಸುಮಾರು 250 ಎಕರೆ ವಿಸ್ತೀರ್ಣದಲ್ಲಿ ಹೊಸ ವಾಹನ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದೆ.

ನಮ್ಮ ಬೆಂಗಳೂರಿನಲ್ಲಿ ಬೃಹತ್ ತ್ರಿ-ಚಕ್ರ ವಾಣಿಜ್ಯ ವಾಹನ ಉತ್ಪಾದನಾ ಘಟಕ ಆರಂಭಿಸಿದ ಓಮೆಗಾ ಸೈಕ್

ಹೊಸ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಉತ್ಪಾದನಾ ಘಟಕದ ಉತ್ಪಾದನೆಗಾಗಿ ಕಂಪನಿಯು ಸುಮಾರು 250 ಮಿಲಿಯನ್ ಯುಎಸ್ ಡಾಲರ್(ರೂ.1,900 ಕೋಟಿ) ಹೂಡಿಕೆ ಮಾಡಿದ್ದು, ಹೊಸ ವಾಹನ ಉತ್ಪಾದನಾ ಘಟಕದಲ್ಲಿ ಕಂಪನಿಯು ಮುಂದಿನ ಮೂರು ವರ್ಷದೊಳಗಾಗಿ ವಾರ್ಷಿಕವಾಗಿ 10 ಲಕ್ಷ ಇವಿ ವಾಣಿಜ್ಯ ವಾಹನಗಳನ್ನು ಉತ್ಪಾದನೆ ಮಾಡಲಿದೆ.

ನಮ್ಮ ಬೆಂಗಳೂರಿನಲ್ಲಿ ಬೃಹತ್ ತ್ರಿ-ಚಕ್ರ ವಾಣಿಜ್ಯ ವಾಹನ ಉತ್ಪಾದನಾ ಘಟಕ ಆರಂಭಿಸಿದ ಓಮೆಗಾ ಸೈಕ್

250 ಎಕರೆ ವಿಸ್ತಾರ ಹೊಂದಿರುವ ಓಮೆಗಾ ಸೈಕ್ ಉತ್ಪಾದನಾ ಘಟಕವು ಮುಂದಿನ ಮೂರು ವರ್ಷಗಳಲ್ಲಿ ಘಟಕದ ವಿಸ್ತರಣೆಯು ಇನ್ನಷ್ಟು ಹೆಚ್ಚಲಿದ್ದು, ಕಂಪನಿಯು ಹೊಸ ಇವಿ ವಾಣಿಜ್ಯ ವಾಹನಗಳನ್ನು ಭಾರತದಲ್ಲಿ ಮಾತ್ರವಲ್ಲ ವಿದೇಶಿ ಮಾರುಕಟ್ಟೆಗಳಿಗೂ ರಫ್ತು ಕೈಗೊಳ್ಳುವ ಯೋಜನೆಯಲ್ಲಿದೆ.

ನಮ್ಮ ಬೆಂಗಳೂರಿನಲ್ಲಿ ಬೃಹತ್ ತ್ರಿ-ಚಕ್ರ ವಾಣಿಜ್ಯ ವಾಹನ ಉತ್ಪಾದನಾ ಘಟಕ ಆರಂಭಿಸಿದ ಓಮೆಗಾ ಸೈಕ್

ವಿಶ್ವ ಭೂಮಿ ದಿನ ದಿನಾಚರಣೆ ಹಿನ್ನಲೆಯಲ್ಲಿ ಈ ವಿಶೇಷ ದಿನದಂದೆ ಒಮೆಗಾ ಸೈಕ್ ಕಂಪನಿಯು ಪರಿಸರ ಸ್ನೇಹಿ ವಾಹನ ಉತ್ಪಾದನಾ ಘಟಕಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದು, ಹೊಸ ಘಟಕದೊಂದಿಗೆ ಕಂಪನಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ನಮ್ಮ ಬೆಂಗಳೂರಿನಲ್ಲಿ ಬೃಹತ್ ತ್ರಿ-ಚಕ್ರ ವಾಣಿಜ್ಯ ವಾಹನ ಉತ್ಪಾದನಾ ಘಟಕ ಆರಂಭಿಸಿದ ಓಮೆಗಾ ಸೈಕ್

ಓಮೆಗಾ ಸೈಕ್ ಕಂಪನಿಯು ಸದ್ಯ ದೇಶಾದ್ಯಂತ ಕೆಲವೇ ಕೆಲವು ನಗರಗಳಲ್ಲಿ ಮಾರಾಟ ಸೌಲಭ್ಯಕ್ಕೆ ಚಾಲನೆ ನೀಡಿದ್ದು, ಪಾಲುದಾರಿಕೆ ಯೋಜನೆಯಡಿ ಮಾರಾಟ ವಿಸ್ತರಿಸಿರುವುದರಿಂದ ವಿವಿಧ ನಗರಗಳಲ್ಲಿ 500 ಮಾರಾಟ ಮಳಿಗೆಗಳ ಮೂಲಕ ಖರೀದಿಗೆ ಲಭ್ಯವಾಗುತ್ತಿದೆ.

ನಮ್ಮ ಬೆಂಗಳೂರಿನಲ್ಲಿ ಬೃಹತ್ ತ್ರಿ-ಚಕ್ರ ವಾಣಿಜ್ಯ ವಾಹನ ಉತ್ಪಾದನಾ ಘಟಕ ಆರಂಭಿಸಿದ ಓಮೆಗಾ ಸೈಕ್

ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯು 2030 ರ ವೇಳೆಗೆ 152 ಶತಕೋಟಿ ಡಾಲರ್‌ಗಿಂತಲೂ ಹೆಚ್ಚು ತಲುಪುವ ನಿರೀಕ್ಷೆಯಿದ್ದು, ಬೆಳೆಯುತ್ತಿರುವ ಮಾರುಕಟ್ಟೆಯ ಲಾಭ ಪಡೆಯಲು ಓಮೆಗಾ ಸೈಕಿ ಮೊಬಿಲಿಟಿಯು ಕಳೆದ ವರ್ಷ ಫ್ಲೀಟ್‌ ವಿಭಾಗದಡಿಯಲ್ಲಿ 100ಕ್ಕೂ ಹೆಚ್ಚು ಡೀಲರ್‌ಶಿಪ್‌ಗಳನ್ನು ತೆರೆದಿದೆ.

ನಮ್ಮ ಬೆಂಗಳೂರಿನಲ್ಲಿ ಬೃಹತ್ ತ್ರಿ-ಚಕ್ರ ವಾಣಿಜ್ಯ ವಾಹನ ಉತ್ಪಾದನಾ ಘಟಕ ಆರಂಭಿಸಿದ ಓಮೆಗಾ ಸೈಕ್

ಓಮೆಗಾ ಸೈಕಿ ಮೊಬಿಲಿಟಿಯು ಇವಿ ವಾಹನಗಳ ಉತ್ಪಾದನೆ ಸ್ಥಳೀಯ ಬಿಡಿಭಾಗಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ರೇಜ್ ಪ್ಲಸ್ ಬ್ರ್ಯಾಂಡ್ ಅಡಿಯಲ್ಲಿ ತನ್ನದೇ ಆದ ವಿವಿಧ ಎಲೆಕ್ಟ್ರಿಕ್ ತ್ರಿ-ಚಕ್ರ ವಾಹನಗಳನ್ನು ತಯಾರಿಸುತ್ತದೆ.

ನಮ್ಮ ಬೆಂಗಳೂರಿನಲ್ಲಿ ಬೃಹತ್ ತ್ರಿ-ಚಕ್ರ ವಾಣಿಜ್ಯ ವಾಹನ ಉತ್ಪಾದನಾ ಘಟಕ ಆರಂಭಿಸಿದ ಓಮೆಗಾ ಸೈಕ್

ಕಂಪನಿಯು ರೇಜ್ ಪ್ಲಸ್ ಫ್ರಾಸ್ಟ್ ಬ್ರಾಂಡ್ ಹೆಸರಿನಲ್ಲಿ ಭಾರತದ ಮೊದಲ ರೆಫ್ರಿಜರೇಟೆಡ್ ಎಲೆಕ್ಟ್ರಿಕ್ ತ್ರಿ-ಚಕ್ರ ವಾಹನವನ್ನು ಸಹ ಬಿಡುಗಡೆ ಮಾಡಿದ್ದು, ಲಾಜಿಸ್ಟಿಕ್ ವಿಭಾಗದಲ್ಲಿ ಹೊಸ ವಾಣಿಜ್ಯ ವಾಹನಗಳಿಗೆ ಹೆಚ್ಚಿನ ಬೇಡಿಕೆಯಿದೆ.

ನಮ್ಮ ಬೆಂಗಳೂರಿನಲ್ಲಿ ಬೃಹತ್ ತ್ರಿ-ಚಕ್ರ ವಾಣಿಜ್ಯ ವಾಹನ ಉತ್ಪಾದನಾ ಘಟಕ ಆರಂಭಿಸಿದ ಓಮೆಗಾ ಸೈಕ್

ಜೊತೆಗೆ ಅತ್ಯಾಧುನಿಕ IoT-ಆಧಾರಿತ ಎಂಡ್-ಟು-ಎಂಡ್ ತಂತ್ರಜ್ಞಾನ ಮೂಲಕ ಮೂಲಸೌಕರ್ಯ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಿದ್ದು, ಇವಿ ಉತ್ಪನ್ನ ಪೋರ್ಟ್‌ಫೋಲಿಯೊಗೆ ಹೊಸ ಮೌಲ್ಯವನ್ನು ಸೇರಿಸಲಾಗಿದೆ.

ನಮ್ಮ ಬೆಂಗಳೂರಿನಲ್ಲಿ ಬೃಹತ್ ತ್ರಿ-ಚಕ್ರ ವಾಣಿಜ್ಯ ವಾಹನ ಉತ್ಪಾದನಾ ಘಟಕ ಆರಂಭಿಸಿದ ಓಮೆಗಾ ಸೈಕ್

ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ವಾಹನ ಉತ್ಪಾದನಾ ಕಂಪನಿಗಳಿಗೂ ಹಲವಾರು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗಿದೆ.

ನಮ್ಮ ಬೆಂಗಳೂರಿನಲ್ಲಿ ಬೃಹತ್ ತ್ರಿ-ಚಕ್ರ ವಾಣಿಜ್ಯ ವಾಹನ ಉತ್ಪಾದನಾ ಘಟಕ ಆರಂಭಿಸಿದ ಓಮೆಗಾ ಸೈಕ್

ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರದ ಫೇಮ್ 2 ಹೊರತುಪಡಿಸಿ ರಾಜ್ಯಗಳ ಮಟ್ಟದಲ್ಲೂ ವಿವಿಧ ರಾಜ್ಯ ಸರ್ಕಾರಗಳು ಸಹ ಹೆಚ್ಚಿನ ಮಟ್ಟದ ಪ್ರೊತ್ಸಾಹ ನೀಡುತ್ತಿದ್ದು, ಕೇಂದ್ರದ ಫೇಮ್ 2 ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಕೂಡಾ ಹೊಸ ಇವಿ ನೀತಿ ಘೋಷಣೆ ಮಾಡಿವೆ.

ನಮ್ಮ ಬೆಂಗಳೂರಿನಲ್ಲಿ ಬೃಹತ್ ತ್ರಿ-ಚಕ್ರ ವಾಣಿಜ್ಯ ವಾಹನ ಉತ್ಪಾದನಾ ಘಟಕ ಆರಂಭಿಸಿದ ಓಮೆಗಾ ಸೈಕ್

ಹಾಗೆಯೇ ಇವಿ ವಾಹನಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣವು ಇದೀಗ ಹೊಸ ಸವಾಲಾಗಿದ್ದು, ಇವಿ ವಾಹನಗಳು ಹೆಚ್ಚಿದಂತೆ ಅವುಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣಕ್ಕೂ ಯೋಜನೆ ಜಾರಿಗೆ ತರಲಾಗಿದೆ.

ನಮ್ಮ ಬೆಂಗಳೂರಿನಲ್ಲಿ ಬೃಹತ್ ತ್ರಿ-ಚಕ್ರ ವಾಣಿಜ್ಯ ವಾಹನ ಉತ್ಪಾದನಾ ಘಟಕ ಆರಂಭಿಸಿದ ಓಮೆಗಾ ಸೈಕ್

ಇದಲ್ಲದೇ ಓಮೆಗಾ ಸೈಕಿ ಕಂಪನಿಯೊಂದಿಗೆ ಪಾಲುದಾರಿಕೆ ಘೋಷಣೆ ಮಾಡಿರುವ ಚಾರ್ಜರ್ ಕಂಪನಿಯು ಸಹಾ ವಿಶೇಷವಾಗಿ ವಾಣಿಜ್ಯ ವಾಹನಗಳಿಗಾಗಿಯೇ ಪ್ರತ್ಯೇಕ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುತ್ತಿದೆ.

ನಮ್ಮ ಬೆಂಗಳೂರಿನಲ್ಲಿ ಬೃಹತ್ ತ್ರಿ-ಚಕ್ರ ವಾಣಿಜ್ಯ ವಾಹನ ಉತ್ಪಾದನಾ ಘಟಕ ಆರಂಭಿಸಿದ ಓಮೆಗಾ ಸೈಕ್

ಹೆಚ್ಚಿನ ಮಟ್ಟದ ವಾಣಿಜ್ಯ ಚಟುವಟಿಕೆ ಕಂಡುಬರುವ ಮಾರುಕಟ್ಟೆಗಳ ಪಾರ್ಕಿಂಗ್ ನಿಲ್ದಾಣಗಳಲ್ಲಿ, ಉಗ್ರಾಣಗಳ ವಾಹನ ನಿಲುಗಡೆ ಪ್ರದೇಶಗಳಲ್ಲಿ ಮತ್ತು ಸೂಪರ್ ಮಾರ್ಕೆಟ್‌ಗಳ ಆವರಣಗಳಲ್ಲಿ ಚಾರ್ಜರ್ ಕಂಪನಿಯು ಓಮೆಗಾ ಸೈಕಿ ಇವಿ ವಾಣಿಜ್ಯ ವಾಹನಗಳಿಗಾಗಿ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿದೆ.

ನಮ್ಮ ಬೆಂಗಳೂರಿನಲ್ಲಿ ಬೃಹತ್ ತ್ರಿ-ಚಕ್ರ ವಾಣಿಜ್ಯ ವಾಹನ ಉತ್ಪಾದನಾ ಘಟಕ ಆರಂಭಿಸಿದ ಓಮೆಗಾ ಸೈಕ್

ಚಾರ್ಜರ್ ಕಂಪನಿಯು ಗ್ರಾಹಕರ ಬೇಡಿಕೆ ಆಧಾರದ ಮೇಲೆ 3.3kW ಸಾಮರ್ಥ್ಯದ ಚಾರ್ಜರ್ ಲೈಟ್ ಮತ್ತು 22kW ಸಾಮರ್ಥ್ಯದ ಚಾರ್ಜರ್ ಟೆರಾ ನಿಲ್ದಾಣಗಳನ್ನು ನಿರ್ಮಾಣ ಮಾಡಲಿದ್ದು, ಇದರಲ್ಲಿ ಚಾರ್ಜರ್ ಲೈಟ್ ಚಾರ್ಜಿಂಗ್ ಸೌಲಭ್ಯವನ್ನು ಇವಿ ವಾಹನ ಮಾಲೀಕರು ವ್ಯಯಕ್ತಿಕ ಬಳಕೆಗಾಗಿ ಅಳವಡಿಸಿಕೊಳ್ಳಬಹುದಾಗಿದೆ.

Most Read Articles

Kannada
English summary
Osm to setup world s largest electric 3w factory in karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X