Just In
- 33 min ago
ಓಲಾ S1 ಮತ್ತು S1 Pro ನಡುವೆ ಗೊಂದಲವೇ?: ಬೆಲೆ, ಡಿಸೈನ್, ಫೀಚರ್ಸ್ ಬಗೆಗಿನ ಮಾಹಿತಿ ಇಲ್ಲಿದೆ
- 35 min ago
24.90 ಕಿ.ಮೀ ಮೈಲೇಜ್ ನೀಡುವ ಆಲ್ಟೋ ಕೆ10 ಕಾರಿನ ಟಿವಿಸಿ ಬಿಡುಗಡೆಗೊಳಿಸಿದ ಮಾರುತಿ ಸುಜುಕಿ
- 2 hrs ago
ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಾರುತಿ ಆಲ್ಟೊ ಕೆ10 ಸಿಎನ್ಜಿ
- 2 hrs ago
ಪೊಲೀಸರಿಗ್ಯಾಕೆ ಬುಲೆಟ್ ಪ್ರೂಫ್ ವಾಹನವಿಲ್ಲ: ಗಣ್ಯರಿಗಿರುವ ಭದ್ರತೆ ಆರಕ್ಷಕರಿಗಿಲ್ಲವೇ? ಕಾರಣ ಇಲ್ಲಿದೆ...
Don't Miss!
- Movies
ನನಸಾಯ್ತು ಕಾಫಿನಾಡು ಚಂದು ಕನಸು, ಎಲ್ಲಾ ಶ್ರೇಯ ಅನುಶ್ರೀಗೆ
- News
ಕದ್ದ ಹಣದಲ್ಲಿ ವಿಮಾನದಲ್ಲಿ ಪ್ರಯಾಣಿಸುವ ಹೈಟೆಕ್ ಕಳ್ಳಿ
- Technology
ವಿಶ್ವ ಛಾಯಾಗ್ರಹಣ ದಿನ: ಈ ಸ್ಮಾರ್ಟ್ಫೋನ್ಗಳು ಫೋಟೋಗ್ರಫಿಗೆ ಸೂಕ್ತ ಎನಿಸಲಿವೆ!
- Sports
ಯುಎಇ ಟಿ20 ಲೀಗ್: 14 ಆಟಗಾರರ ಬಲಿಷ್ಠ ತಂಡ ಪ್ರಕಟಿಸಿದ ದುಬೈ ಕ್ಯಾಪಿಟಲ್ಸ್
- Lifestyle
ಈ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ಕೆಲಸಕ್ಕಂತೂ ಅಲ್ಪ ವಿರಾಮ ನೀಡಲೇಬೇಕು..!
- Travel
ಮೋಜಿನ ವಾರಾಂತ್ಯದ ಪ್ರವಾಸಕ್ಕಾಗಿ ಇಲ್ಲಿಗೆ ಭೇಟಿ ನೀಡಿ
- Education
Karnataka High Court Recruitment 2022 : 129 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಫೋನ್ ಪೇ, ಗೂಗಲ್ ಪೇ, ಭೀಮ್ App ಬಳಕೆಗೆ ಪೇಮೆಂಟ್ ಶುಲ್ಕ?
ಮೇ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಸ್ಕೋಡಾ
ಭಾರತೀಯ ಮಾರುಕಟ್ಟೆಯಲ್ಲಿ, ಕಳೆದ ಕೆಲವು ವರ್ಷಗಳಲ್ಲಿ ಸೆಡಾನ್‌ಗಳು ಬಹಳಷ್ಟು ಮಾರುಕಟ್ಟೆ ಪಾಲನ್ನು ಕಳೆದುಕೊಂಡಿವೆ, ಎಸ್‍ಯುವಿಗಳ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಕೆಲವು ಕಾರು ತಯಾರಕರು ಸೆಡಾನ್ ವಿಭಾಗದಲ್ಲಿ ಪುನರುಜ್ಜೀವನವನ್ನು ನೋಡಲು ಆಶಿಸುತ್ತಿದ್ದಾರೆ.

ಸ್ಕೋಡಾ ಅಂತಹ ತಯಾರಕರಲ್ಲಿ ಒಂದಾಗಿದೆ, ಅದರ ಸೆಡಾನ್ ಕೊಡುಗೆಗಳೊಂದಿಗೆ ಭಾರತೀಯ ಖರೀದಿದಾರರನ್ನು ಆಕರ್ಷಿಸಲು ಪ್ರಯತ್ನಿಸುತ್ತಿದೆ. ಅದರಲ್ಲಿ ಇತ್ತೀಚಿನದು ಸ್ಲಾವಿಯಾ. ಕಳೆದ ತಿಂಗಳು, ಸ್ಕೋಡಾ ಸ್ಲಾವಿಯಾ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಾವಾಗಿ ಮಾರಾಟವಾಗಿದೆ. 2022ರ ಮೇ ತಿಂಗಳಿನಲ್ಲಿ ಸ್ಕೋಡಾ ಆಟೋ ಇಂಡಿಯಾ ಕಂಪನಿಯು 4,604 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸ್ಕೋಡಾ ಕಂಪನಿಯು 716 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.543 ರಷ್ಟು ಬೆಳವಣಿಗೆಯನ್ನು ಕಂಡಿದೆ.

ಸ್ಕೋಡಾ ಆಟೋ ಇಂಡಿಯಾ ಬ್ರಾಂಡ್ ನಿರ್ದೇಶಕ ಝಾಕ್ ಹೊಲಿಸ್ ಅವರು ಮಾತನಾಡಿದೆ, ಸೆಮಿಕಂಡಕ್ಟರ್ ಕೊರತೆಯಿಂದ ಎದುರಾಗಿರುವ ಸವಾಲುಗಳ ಹೊರತಾಗಿಯೂ, ನಾವು ಮಾರಾಟದೊಂದಿಗೆ ವೇಗವನ್ನು ಕಾಯ್ದುಕೊಳ್ಳುತ್ತಿದ್ದೇವೆ ಎಂಬುದು ಸ್ಕೋಡಾದಲ್ಲಿ ನಮಗೆ ಉತ್ತೇಜನಕಾರಿಯಾಗಿದೆ.

ಗ್ರಾಹಕರು ದೀರ್ಘ ಕಾಯುವ ಅವಧಿಗಳಲ್ಲಿ ಮತ್ತು ವಿತರಣೆಯನ್ನು ತೆಗೆದುಕೊಳ್ಳದಂತೆ ಖಚಿತಪಡಿಸಿಕೊಳ್ಳಲು ಕಂಪನಿಯ ನವೀನ ಪ್ರಯತ್ನಗಳು ಮಾಡುತ್ತಿದ್ದೇವೆ. ವಿತರಣೆಗಾಗಿ ಗ್ರಾಹಕರು ಹೆಚ್ಚು ಸಮಯ ಕಾಯಬೇಕಾದ ಅನಿವಾರ್ಯ ಎದುರಾಗಿತ್ತು. ಇದೀಗ ಹೊಸ ಬದಲಾವಣೆಗಳಿಂದ ಕಾಯುವ ವ್ಯವಧಿ ಕಡಿಮೆಯಾಗಲಿದೆ ಎಂದು ತಿಳಿಸಿದರು.

ಇನ್ನು ಜಾಗತಿಕವಾಗಿ ಸೆಮಿಕಂಡಕ್ಟರ್‌ಗಳ ಕೊರತೆಯಿಂದಾಗಿ, ಈಗ ಆಟೋ ಕಂಪನಿಗಳು ತಮ್ಮ ವಾಹನಗಳಲ್ಲಿ ಕೆಲವು ವೈಶಿಷ್ಟ್ಯಗಳನ್ನು ಕಡಿತಗೊಳಿಸಲು ಮುಂದಾಗಿವೆ. ಇತ್ತೀಚೆಗೆ ಸ್ಕೋಡಾ ಆಟೋ ಇಂಡಿಯಾ ಭಾರತದಲ್ಲಿ ತನ್ನ ಹೊಸ ಕಾರುಗಳ ಕೆಲವು ವೈಶಿಷ್ಟ್ಯಗಳಲ್ಲಿ ಕಡಿತವನ್ನು ಘೋಷಿಸಿದೆ.

ಸೆಮಿಕಂಡಕ್ಟರ್ ಕೊರತೆಯಿಂದಾಗಿ ಹೊಸ ಕಾರುಗಳ ಕೆಲವು ವೈಶಿಷ್ಟ್ಯಗಳನ್ನು ಡೌನ್‌ಗ್ರೇಡ್ ಮಾಡಲಾಗುವುದು ಎಂದು ಸ್ಕೋಡಾ ಇಂಡಿಯಾ ಹೇಳಿದೆ. ಕಂಪನಿಯು 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಸ್ಲಾವಿಯಾ ಮತ್ತು ಕುಶಾಕ್‌ನಿಂದ 8-ಇಂಚಿನ ಯುನಿಟ್ ಅನ್ನು ಡೌನ್‌ಗ್ರೇಡ್ ಮಡುತ್ತದೆ.

ಜಾಗತಿಕ ಮಾರುಕಟ್ಟೆಯಲ್ಲಿ ತಲೆದೊರಿರುವ ಸೆಮಿಕಂಡಕ್ಟರ್ ಕೊರತೆಯು ಕಾರು ಉತ್ಪಾದನೆಗೆ ತೀವ್ರ ಹಿನ್ನಡೆ ಉಂಟು ಮಾಡುತ್ತಿರುವ ಕುರಿತು ಮಾತನಾಡಿರುವ ಸ್ಕೋಡಾ ಇಂಡಿಯಾ ಮುಖ್ಯಸ್ಥರು ಫೋಕ್ಸ್‌ವ್ಯಾಗನ್ ಗ್ರೂಪ್ ಸೂಚಿಸಿರುವ ಮಾರ್ಗಸೂಚಿಯೆಂತೆ ಹೊಸ ಕಾರುಗಳ ಫೀಚರ್ಸ್ ನೀಡಲಾಗುತ್ತಿದೆ.

ಸದ್ಯ ಮಾರುಕಟ್ಟೆಯಲ್ಲಿ ಸೆಮಿಕಂಡಕ್ಟರ್ ಕೊರತೆಯ ಸಮಸ್ಯೆಯು ಸ್ಕೋಡಾ ಕಂಪನಿಗೆ ಮಾತ್ರವಲ್ಲದೇ ಹಲವು ಕಾರು ಕಂಪನಿಗಳು ಸೆಮಿಕಂಡಕ್ಟರ್ ಕೊರತೆ ಎದುರಿಸುತ್ತಿದೆ. ಹೊಸ ಕಾರುಗಳಿಗೆ ಬೇಡಿಕೆಯಿದ್ದರೂ ಸೆಮಿಕಂಡಕ್ಟರ್ ಪೂರೈಕೆಯಲ್ಲಿ ಆಗುತ್ತಿರುವ ವಿಳಂಬದಿಂದಾಗಿ ಕಾರು ವಿತರಣೆ ನಿಧಾನವಾಗುತ್ತಿದೆ.

ಕಾರು ವಿತರಣೆ ನಿಧಾನದಿಂದಾಗಿ ಕಂಪನಿಗಳ ಮಾರಾಟ ಪ್ರಮಾಣವು ಸಹ ಕುಸಿತದೊಂದಿಗೆ ನಷ್ಟ ಅನುಭವಸುತ್ತಿದೆ. ಈ ಹಿನ್ನಲೆ ಪ್ರಮುಖ ಕಾರು ಕಂಪನಿಯು ಸೆಮಿಕಂಡಕ್ಟರ್ ಲಭ್ಯತೆ ಆಧರಿಸಿ ಕೆಲವು ಫೀಚರ್ಸ್ ತೆಗೆದುಹಾಕಿ ಕಾರು ವಿತರಣೆ ಮಾಡುತ್ತಿವೆ.

ಸೆಮಿಕಂಡಕ್ಟರ್ ಆಧರಿಸಿರುವ ಫೀಚರ್ಸ್‌ಗಳನ್ನು ತೆಗೆದುಹಾಕಿರುವ ಕೆಲವು ಕಾರು ಕಂಪನಿಯು ಪೂರೈಕೆ ಹೆಚ್ಚಳ ನಂತರ ಹೊಸ ಫೀಚರ್ಸ್ ಸೇಪರ್ಡೆಗೊಳಿಸುವುದಾಗಿ ಭರವಸೆ ನೀಡುತ್ತಿದ್ದು, ಅವಶ್ಯಕ ಫೀಚರ್ಸ್ ಮಾತ್ರ ಜೋಡಣೆ ಮಾಡಿ ಮಾರಾಟಗೊಳಿಸುತ್ತಿವೆ. ಇದರ ಹೊರತಾಗಿ, ಸ್ಲಾವಿಯಾ ಮತ್ತು ಕುಶಾಕ್‌ನ ಮಧ್ಯಮ ಮತ್ತು ಉನ್ನತ-ಸ್ಪೆಕ್ ರೂಪಾಂತರಗಳನ್ನು ಈಗಾಗಲೇ ಬುಕ್ ಮಾಡಿದ ಗ್ರಾಹಕರಿಗೆ ಸ್ಕೋಡಾ ಇಂಡಿಯಾ ರಿಯಾಯಿತಿಯನ್ನು ನೀಡುತ್ತದೆಯೇ ಎಂದು ನೋಡಬೇಕಾಗಿದೆ.

ಸ್ಕೋಡಾ ಇಂಡಿಯಾ ಕಂಪನಿಯು ಕುಶಾಕ್ ಮಾದರಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಕುಶಾಕ್ ಮಾದರಿಯಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಕಂಪನಿಯು ಹೊಸ ಕಾರಿನಲ್ಲಿ ಇದೀಗ ಸ್ಟೈಲ್ ಮಾದರಿಯಲ್ಲಿ ಹೊಸ ವೆರಿಯೆಂಟ್ ಬಿಡುಗಡೆ ಮಾಡಿದೆ. 1.0 ಲೀಟರ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರುವ ಸ್ಟೈಲ್ ವೆರಿಯೆಂಟ್‌ನಲ್ಲಿ ಹೊಸ ರೂಪಾಂತರವನ್ನು ಬಿಡುಗಡೆ ಮಾಡಲಾಗಿದ್ದು, ಹೊಸ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 12.99 ಲಕ್ಷ ಬೆಲೆ ಹೊಂದಿದೆ. ಸನ್‌ರೂಫ್ ಹೊಂದಿರುವ ಸಾಮಾನ್ಯ ಸ್ಟೈಲ್ ವೆರಿಯೆಂಟ್‌ಗೆ ಹೋಲಿಕೆ ಮಾಡಿದರೆ ಹೊಸ ಮಾದರಿಯಲ್ಲಿ ಸ್ವಯಂಚಾಲಿತ ವೈಪರ್ ಸಿಸ್ಟಮ್ ಮತ್ತು ಒಳಭಾಗದಲ್ಲಿ ರಿಯರ್ ವ್ಯೂ ಮಿರರ್ ನೀಡಲಾಗಿದ್ದರೂ ಆಟೋ-ಡಿಮ್ಮಿಂಗ್ ವೈಶಿಷ್ಟ್ಯತೆಯನ್ನು ನೀಡಲಾಗಿಲ್ಲ.

ಜೊತೆಗೆ ಈ ಹೊಸ ಮಾದರಿಯಲ್ಲಿ ಕಂಪನಿಯು ಎಂಟು ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯನ್ನು ಸಹ ಈ ರೂಪಾಂತರದಲ್ಲಿ ತೆಗೆದುಹಾಕಲಾಗಿದ್ದು, 16-ಇಂಚಿನ ಅಲಾಯ್ ಚಕ್ರದ ಬದಲಿಗೆ 15-ಇಂಚಿನ ವ್ಹೀಲ್ ನೀಡಲಾಗಿದೆ. ಒಟ್ಟಾರೆಯಾಗಿದೆ ಸೆಮಿಕಂಡಕ್ಟರ್ ಕೊರತೆಯ ಸಮಸ್ಯೆಯ ನಡುವೆ ಸ್ಕೋಡಾ ಕಾರುಗಳು ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ.