Just In
Don't Miss!
- Sports
ಐರ್ಲೆಂಡ್ನ ಹ್ಯಾರಿ ಟೆಕ್ಟರ್ಗೆ ಬ್ಯಾಟ್ ಗಿಫ್ಟ್ ನೀಡಿದ ಹಾರ್ದಿಕ್ ಪಾಂಡ್ಯ
- Movies
ಸಿಧು ಮೂಸೆವಾಲಾ ಹಾಡಿದ್ದ ಕೊನೆಯ ಹಾಡು ಬಿಡುಗಡೆ ಆದ ಮೂರೇ ದಿನಕ್ಕೆ ಡಿಲೀಟ್!
- News
Breaking; ತುರ್ತಾಗಿ ಬನ್ನಿ, ಸಿದ್ದರಾಮಯ್ಯ, ಡಿಕೆಶಿಗೆ ಹೈಕಮಾಂಡ್ ಕರೆ
- Lifestyle
ನಿಮ್ಮಿಬ್ಬರ ಸಂಬಂಧ ಹೀಗಿದ್ದರೆ ಒಟ್ಟಿಗಿದ್ದು ಪಡುವ ನರಕಕ್ಕಿಂತ ಗುಡ್ಬೈ ಹೇಳುವುದೇ ಬೆಸ್ಟ್!
- Finance
ಜೂ.27ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Education
UAS Dharwad Recruitment 2022 : ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ಜು.2ಕ್ಕೆ ನೇರ ಸಂದರ್ಶನ
- Technology
‘ಫಾಸ್ಟ್ಯಾಗ್' ನಲ್ಲಿರುವ ಹಣವನ್ನು ಕದಿಯಬಹುದಾ? ವೈರಲ್ ವೀಡಿಯೊದ ಅಸಲಿಯತೆ ಏನು?
- Travel
ನಾಡ ಹಬ್ಬ ಮೈಸೂರು ದಸರಾ - ನವರಾತ್ರಿ ಉತ್ಸವ 2022
ಪ್ರತಿ ಚಾರ್ಜ್‌ಗೆ 154 ಕಿ.ಮೀ ಮೈಲೇಜ್ ಪ್ರೇರಿತ ಟಾಟಾ ಏಸ್ ಎಲೆಕ್ಟ್ರಿಕ್ ಕಾರ್ಗೋ ಬಿಡುಗಡೆ
ಪ್ರಯಾಣಿಕರ ಬಳಕೆಯ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್(Tata Motors) ಕಂಪನಿಯು ಇದೀಗ ಏಸ್ ಇವಿ(Ace EV) ಮೂಲಕ ವಾಣಿಜ್ಯ ವಾಹನಗಳ ವಿಭಾಗದಲ್ಲೂ ಹೊಸ ಅಧ್ಯಾಯ ಆರಂಭಿಸಿದೆ.

ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ವಿಭಾಗದಲ್ಲಿನ ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಏಸ್ ಲಘು ವಾಣಿಜ್ಯ ವಾಹನವನ್ನು ಎಲೆಕ್ಟ್ರಿಕ್ ಮಾದರಿಯಲ್ಲಿ ಬಿಡುಗಡೆ ಮಾಡಿದ್ದು, ಹೊಸ ಎಲೆಕ್ಟ್ರಿಕ್ ವಾಣಿಜ್ಯ ವಾಹನವು ಕಂಪನಿಯ ಸುಧಾರಿತ ತಂತ್ರಜ್ಞಾನ ಪ್ರೇರಿತ ಇವೊಜೆನ್(Evogen) ಪ್ಲಾಟ್‌ಫಾರ್ಮ್ ಆಧರಿಸಿ ಅಭಿವೃದ್ದಿಗೊಂಡಿದೆ.

ಭಾರತದಲ್ಲಿ ಮೊದಲ ಬಾರಿಗೆ 2005ರಲ್ಲಿ ಬಿಡುಗಡೆಗೊಂಡಿದ್ದ ಏಸ್ ವಾಣಿಜ್ಯ ವಾಹನವು ಇದುವರೆಗೆ 19 ಲಕ್ಷ ಗ್ರಾಹಕರನ್ನು ಹೊಂದಿದ್ದು, ಇದೀಗ ಎಲೆಕ್ಟ್ರಿಕ್ ಮಾದರಿಯ ಮೂಲಕ ಮತ್ತೊಂದು ಕ್ರಾಂತಿಕಾರಕ ಬದಲಾವಣೆಗೆ ಸಿದ್ದವಾಗಿದೆ.

ಹೊಸ ಎಲೆಕ್ಟ್ರಿಕ್ ವಾಣಿಜ್ಯ ವಾಹನವು ಸುಧಾರಿತ ತಂತ್ರಜ್ಞಾನ ಪ್ರೇರಿತ 27kW ಮೋಟಾರ್ ಜೋಡಣೆ ಹೊಂದಿದ್ದು, 130 ಎನ್ಎಂ ಪೀಕ್ ಟಾರ್ಕ್‌ನೊಂದಿಗೆ 208 ಎಫ್‌ಟಿ3 ಅತ್ಯಧಿಕ ಕಾರ್ಗೋ ಖಚಿತಪಡಿಸುತ್ತದೆ

ಹೊಸ ತಂತ್ರಜ್ಞಾನ ಪರಿಣಾಮ ಹೊಸ ವಾಹನದ ಕಂಟೈನರ್ ಸಾಕಷ್ಟು ಹಗುರವಾಗಿದ್ದು, ಇ-ಕಾಮರ್ಸ್ ಲಾಜಿಸ್ಟಿಕ್ಸ್ ಇದು ಲಾಭದಾಯಕ ಅಂಶವಾಗಿದೆ. ಜೊತೆಗೆ ಸಂಪೂರ್ಣವಾಗಿ ಲೋಡ್ ಮಾಡಲಾದ ಪರಿಸ್ಥಿತಿಗಳಲ್ಲೂ ಹೊಸ ಇವಿ ವಾಹನ ಸುಲಭವಾಗಿ ಚಾಲನೆಯಾಗಲಿದ್ದು, ಇದು ಪ್ರತಿ ಚಾರ್ಜ್‌ಗೆ 154 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಏಸ್ ಎಲೆಕ್ಟ್ರಿಕ್ ವಾಹನವು ಸಾಮಾನ್ಯ ಇವಿ ಚಾರ್ಜಿಂಗ್ ಮಾತ್ರವಲ್ಲದೇ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಹೊಂದಿದ್ದು, ಕೊನೆಯ ಮೈಲಿ ಸರಕು ಸಾಗಾಣಿಕೆಗೆ ಅನೂಕರವಾಗುವಂತೆ ಚಾರ್ಜಿಂಗ್ ನಿಲ್ದಾಣಗಳನ್ನು ಅಳವಡಿಸಿಕೊಳ್ಳಲು ಇದು ಗ್ರಾಹಕರಿಗೆ ನೆರವಾಗಲಿದೆ.

ಜೊತೆಗೆ ಟಾಟಾ ಮೋಟಾರ್ಸ್ ಕಂಪನಿಯು ಹೊಸ ವಾಣಿಜ್ಯ ವಾಹನ ಇವಿ ಬ್ಯಾಟರಿಯಲ್ಲಿ ಅಡ್ವಾನ್ಸ್ ಬ್ಯಾಟರಿ ಕೂಲಿಂಗ್ ಸಿಸ್ಟಂ ಜೋಡಣೆ ಮಾಡಿದ್ದು, ರಿಜನರೇಟಿವ್ ಬ್ರೇಕಿಂಗ್ ಸಿಸ್ಟಂ ಹಿನ್ನಲೆಯಲ್ಲಿ ಹೊಸ ವಾಹನ ಮೈಲೇಜ್ ಪ್ರಮಾಣವು ಗಣನೀಯವಾಗಿ ಹೆಚ್ಚಳವಾಗಲಿದೆ.

ಹೊಸ ಇವಿ ವಾಣಿಜ್ಯ ವಾಹನ ಬಿಡುಗಡೆಗೂ ಮುನ್ನ ಹಲವಾರು ಮಾರುಕಟ್ಟೆ ಅಧ್ಯಯನಗಳನ್ನು ಕೈಗೊಂಡಿದ್ದ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಗ್ರಾಹಕರ ಸ್ನೇಹಿ ಇವಿ ಮಾದರಿಯನ್ನು ಸಿದ್ದಗೊಳಿಸಿದೆ.

ಟಾಟಾ ಮೋಟಾರ್ಸ್ ಕಂಪನಿಯ ಸದ್ಯಕ್ಕೆ ಹೊಸ ಇವಿ ವಾಣಿಜ್ಯ ವಾಹನವನ್ನು ಇ-ಕಾರ್ಮಸ್ ಕಂಪನಿಗಳಿಗೆ ಮಾತ್ರ ವಿತರಣೆ ಮಾಡುವ ಯೋಜನೆ ಹೊಂದಿದ್ದು, ಉತ್ಪಾದನೆ ಹೆಚ್ಚಿದಂತೆ ಸಾಮಾನ್ಯ ಗ್ರಾಹಕರಿಗೂ ಖರೀದಿಗೆ ಅವಕಾಶ ನೀಡಲಿದೆ.

ಹೀಗಾಗಿ ಹೊಸ ವಾಹನದ ಅಧಿಕೃತ ಬೆಲೆ ಮಾಹಿತಿಯನ್ನು ಬಹಿರಂಗಪಡಿಸದ ಕಂಪನಿಯು ಮುಂಬರುವ ತ್ರೈಮಾಸಿಕ ವೇಳೆಗೆ ಬೆಲೆ ಮಾಹಿತಿ ಹಂಚಿಕೊಳ್ಳುವುದಾಗಿ ಹೇಳಿಕೊಂಡಿದ್ದು, ಸಾಮಾನ್ಯ ಡೀಸೆಲ್ ಮಾದರಿಗಿಂತಲೂ ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವುದಾಗಿ ಹೇಳಿಕೊಂಡಿದೆ.

ದುಬಾರಿ ಇಂಧನಗಳ ಪರಿಣಾಮ ಸಾರಿಗೆ ವೆಚ್ಚವು ದಿನಂಪ್ರತಿ ಹೆಚ್ಚುತ್ತಲೇ ಇದ್ದು, ನಿಗದಿತ ನಿರ್ವಹಣಾ ವೆಚ್ಚ ಹೊಂದಿರುವ ಇವಿ ಮಾದರಿಗಳು ಇ-ಕಾಮರ್ಸ್ ಕಂಪನಿಗಳು ಅತ್ಯಧಿಕ ಲಾಭ ತಂದುಕೊಡಲಿವೆ ಎನ್ನಬಹುದು.

ಹೊಸ ಏಸ್ ಇವಿ ಮಾದರಿಗಾಗಿ ಈಗಾಗಲೇ ಅಮೆಜಾನ್, ಫ್ಲಿಪ್‌ಕಾರ್ಟ್, ಬಿಗ್ ಬಾಸ್ಕೆಟ್, ಸಿಟಿ ಲಿಂಕ್, ಮೂವಿಂಗ್, ಡಾಟ್, ಲೆಟ್ಸ್‌ಟ್ರಾನ್ಸ್‌ಪೋರ್ಟ್, ಯೆಲೂ -ಕಾಮರ್ಸ್ ಕಂಪನಿಗಳು ಟಾಟಾ ಜೊತೆಗೆ ಹೊಸ ಒಡಂಬಡಿಕೆ ಮಾಡಿಕೊಂಡಿದ್ದು, ಹೊಸ ಒಡಂಬಡಿಕೆಯೊಂದಿಗೆ ಟಾಟಾ ಕಂಪನಿಯು ಈ ಎಂಟು ಕಂಪನಿಗಳಿಗೆ ಒಟ್ಟು 39 ಸಾವಿರ ಏಸ್ ಇವಿ ಮಾದರಿಗಳನ್ನು ವಿತರಿಸಲಿದೆ.

ಇ-ಕಾರ್ಮಸ್ ನಿರ್ವಹಣಾ ವೆಚ್ಚ ತಗ್ಗಿಸಲು ಪ್ರಮುಖ ಕಂಪನಿಗಳು ಡೀಸೆಲ್ ವಾಹನಗಳ ಬದಲಾಗಿ ಇವಿ ವಾಣಿಜ್ಯ ವಾಹನಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಇದೀಗ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಮಾದರಿಯ ಮೂಲಕ ಆರಂಭಿಕ ಹಂತದಲ್ಲಿಯೇ ಭಾರೀ ಬೇಡಿಕೆ ಪಡೆದುಕೊಂಡಿದೆ.