ಪ್ರತಿ ಚಾರ್ಜ್‌ಗೆ 500 ಕಿ.ಮೀ ರೇಂಜ್ ಹೊಂದಿರುವ ಸಿಯೆರಾ ಇವಿ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ದೇಶಿಯ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್(Tata Motors) ಕಂಪನಿಯು ಭವಿಷ್ಯದಲ್ಲಿ ಮತ್ತಷ್ಟು ಹೊಸ ಇವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಟಾಟಾ ಹೊಸ ಎಲೆಕ್ಟ್ರಿಕ್ ಕಾರುಗಳ ಪಟ್ಟಿಯಲ್ಲಿ ಸಿಯೆರಾ ಇವಿ ಎಸ್‌ಯುವಿ ಮಾದರಿಯು ಕೂಡಾ ಪ್ರಮುಖವಾಗಿದೆ.

ಸಿಯೆರಾ ಇವಿ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಮಾದರಿಗಳ ಮೂಲಕ ಪ್ರಯಾಣಿಕ ಇವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಎಲೆಕ್ಟ್ರಿಕ್ ವಾಹನ ಮಾರಾಟ ಆರಂಭಿಸಿದ ನಂತರ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿದೆ. ಇವಿ ವಾಹನ ಮಾರಾಟದಲ್ಲಿ ಸದ್ಯ ಇತರೆ ಕಾರು ಕಂಪನಿಗಳನ್ನು ಹಿಂದಿಕ್ಕಿ ಶೇ.70 ರಷ್ಟು ಮಾರುಕಟ್ಟೆ ಪಾಲು ತನ್ನದಾಗಿಸಿಕೊಂಡಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಇವಿ ಕಾರುಗಳನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದೆ.

ಸಿಯೆರಾ ಇವಿ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

2020ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಾಗಿದ್ದ ಸಿಯೆರಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಮಾದರಿಯನ್ನು ಟಾಟಾ ಕಂಪನಿಯು ಇದೀಗ ಉತ್ಪಾದನೆ ಆರಂಭಿಸುತ್ತಿರುವ ಬಗೆಗೆ ಸುಳಿವು ನೀಡಿದ್ದು, ಹೊಸ ಕಾರು ಮುಂದಿನ ಕೆಲವೇ ದಿನಗಳಲ್ಲಿ ಮಾರುಕಟ್ಟೆ ಪ್ರವೇಶಿಸಬಹುದಾಗಿದೆ.

ಸಿಯೆರಾ ಇವಿ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಸಿಯೆರಾ ಕಾರು ಮಾದರಿಯು 90ರ ದಶಕದಲ್ಲಿ ಟಾಟಾ ಮೋಟಾರ್ಸ್ ನಿರ್ಮಾಣದ ಜನಪ್ರಿಯ ಕಾರು ಮಾದರಿಯಾಗಿ ಮಿಂಚಿತ್ತು. ಕಾಲಾನಂತರ ಪ್ರಮುಖ ಕಾರುಗಳ ಸ್ಪರ್ಧೆ ನಡುವೆ ಸಿಯೆರಾ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಕಂಪನಿಯು ಸಿಯೆರಾ ಕಾರು ಮಾದರಿಯನ್ನು ಎಲೆಕ್ಟ್ರಿಕ್ ರೂಪದಲ್ಲಿ ಪುನಃ ಮಾರುಕಟ್ಟೆಗೆ ಪರಿಚಯಿಸಲು ನಿರ್ಧರಿಸಿದೆ.

ಸಿಯೆರಾ ಇವಿ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಹೊಸ ಕಾರು ಮಾದರಿಯನ್ನು ಟಾಟಾ ಮೋಟಾರ್ಸ್ ಕಂಪನಿಯು ಸಿಗ್ಮಾ ಪ್ಯೂರ್ ಇವಿ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಉತ್ಪಾದನೆ ಮಾಡಲು ನಿರ್ಧರಿಸಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ಅಡಿ ನಿರ್ಮಾಣವಾಗಿರುವ ಸಿಯೆರಾ ಇವಿ ಕಾರು ಹೆಚ್ಚು ಕಾರ್ಯಕ್ಷಮತೆ ಹೊಂದಿರುವ ಎಲೆಕ್ಟ್ರಿಕ್ ಮೋಟಾರ್, ಬ್ಯಾಟರಿ ಪ್ಯಾಕ್ ಮತ್ತು ಬಲಿಷ್ಠವಾದ ವಿನ್ಯಾಸವನ್ನು ಪಡೆದುಕೊಳ್ಳಲಿದೆ.

ಸಿಯೆರಾ ಇವಿ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಸಿಯೆರಾ ಇವಿ ಕಾರು ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ನೆಕ್ಸಾನ್ ಇವಿ ಮಾದರಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಲಿದ್ದು, ಬ್ಯಾಟರಿ ರೇಂಜ್ ಸಹ ನೆಕ್ಸಾನ್ ಇವಿ ಕಾರಿಗಿಂತಲೂ ಅಧಿಕವಾಗಿರಲಿದೆ.

ಸಿಯೆರಾ ಇವಿ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಸಿಯೆರಾ ಇವಿ ಬ್ಯಾಟರಿ ಪ್ಯಾಕ್, ಎಲೆಕ್ಟ್ರಿಕ್ ಮೋಟಾರ್ ಕುರಿತಂತೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲವಾದರೂ ಸಿಯೆರಾ ಇವಿ ಕಾರು ಪ್ರತಿ ಚಾರ್ಜ್‌ಗೆ ಕನಿಷ್ಠ 500 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಸಿಯೆರಾ ಇವಿ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಜೊತೆಗೆ ಹೊಸ ಕಾರಿನಲ್ಲಿ ಸೂಪರ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಸುಧಾರಣೆಗೊಳಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು 15 ನಿಮಿಷ ಚಾರ್ಜ್ ಮೂಲಕ ಶೇ.80 ರಷ್ಟು ಚಾರ್ಜ್ ಮಾಡಬಹುದಾದ ಸೌಲಭ್ಯವನ್ನು ಈ ಕಾರಿನ ಅಳವಡಿಸುತ್ತಿದೆ.

ಸಿಯೆರಾ ಇವಿ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ನೆಕ್ಸಾನ್ ಇವಿ ಕಾರು ಮಾದರಿಯು ಸದ್ಯ ಪ್ರತಿ ಚಾರ್ಜ್‌ಗೆ 312 ಕಿ.ಮೀ ಮೈಲೇಜ್ ಹೊಂದಿದ್ದು, ಮುಂದಿನ ಬಿಡುಗಡೆಯಾಗಲಿರುವ 2022ರ ನೆಕ್ಸಾನ್ ಇವಿ ಕಾರು 420ಕಿ.ಮೀ ಮೈಲೇಜ್ ಹೊಂದಿರುವ ಬ್ಯಾಟರಿ ಪ್ಯಾಕ್ ಪಡೆದುಕೊಳ್ಳುತ್ತಿದೆ. ಹೀಗಾಗಿ ನೆಕ್ಸಾನ್ ಇವಿ ಮಾದರಿಗಿಂತಲೂ ಉನ್ನತ ಸ್ಥಾನದಲ್ಲಿ ಮಾರಾಟವಾಗಲಿರುವ ಸಿಯೆರಾ ಇವಿ ಮಾದರಿಯಲ್ಲಿ ಕಂಪನಿಯು ಕನಿಷ್ಠ 500 ಕಿ.ಮೀ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್ ನೀಡಬಹುದಾಗಿದೆ.

ಸಿಯೆರಾ ಇವಿ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಇದಲ್ಲದೆ ಟಾಟಾ ಮೋಟಾರ್ಸ್ ಕಂಪನಿಯು ಸಿಯೆರಾ ಎಲೆಕ್ಟ್ರಿಕ್ ಕಾರಿನಲ್ಲಿ 90ರ ದಶಕದ ಕಾರಿನಲ್ಲಿದ್ದ ಹಲವಾರು ವಿನ್ಯಾಸಗಳನ್ನು ಎರವಲು ಪಡೆದುಕೊಂಡಿದ್ದು, ಇವುಗಳಲ್ಲಿ ಹಿಂಭಾಗದ ಕರ್ವ್ ವಿಂಡೋಗಳು, ತ್ರಿ ಡೋರ್ ಕಾನ್ಫಿಗರೇಷನ್‍ ಜೊತೆಗೆ ಹೊಸ ಇವಿ ಕಾರಿನ ಎಡಭಾಗದಲ್ಲಿ ಸ್ಲೈಡಿಂಗ್ ಡೋರ್ ಅನ್ನು ಹೊಂದಿದೆ.

ಸಿಯೆರಾ ಇವಿ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಟಾಟಾ ಸಿಯೆರಾ ಇವಿ ಕಾನ್ಸೆಪ್ಟ್ ಕಾರಿನಲ್ಲಿ ಸೀಟುಗಳಿಗಾಗಿ ಪ್ರೀಮಿಯಂ ಅಪ್‍‍ಹೋಲೆಸ್ಟರಿ ಕ್ಯಾಬಿನ್‌ ಅನ್ನು ನೀಡಲಾಗಿದೆ. ಮುಂಭಾಗದಲ್ಲಿ ಎರಡು ತಿರುಗುವ ಸೀಟುಗಳಿದ್ದರೆ, ಹಿಂಭಾಗದಲ್ಲಿ ಬೆಂಚ್ ಸೀಟುಗಳನ್ನು ನೀಡಲಾಗಿದೆ.

ಸಿಯೆರಾ ಇವಿ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಹೊಸ ಸಿಯೆರಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರಿನಲ್ಲಿ ಸದ್ಯ ಟಾಟಾ ಮೋಟಾರ್ಸ್‍ ಕಂಪನಿಯು ಹೊಸ ಇಂಪ್ಯಾಕ್ಟ್ 2.0 ಡಿಸೈನ್ ಲ್ಯಾಂಗ್ವೇಜ್ ಅನ್ನು ಅಳವಡಿಸಿದ್ದು, ಕಾನ್ಸೆಪ್ಟ್ ಕಾರು, ಎಚ್‌ಬಿಎಕ್ಸ್ ಮಿನಿ-ಎಸ್‌ಯುವಿ ಮತ್ತು ಆಲ್ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್‍‍ಗಳಂತೆ ಟಾಟಾದ ಆಲ್ಫಾ ಆರ್ಕಿಟೆಕ್ಚರ್ ಅನ್ನು ಆಧರಿಸಿದೆ.

ಸಿಯೆರಾ ಇವಿ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಮಾಹಿತಿಗಳ ಪ್ರಕಾರ ಹೊಸ ಸಿಯೆರಾ ಇವಿ ಕಾರು 6 ಸೀಟರ್, 7 ಸೀಟರ್ ಮತ್ತು 8 ಸೀಟರ್ ಮಾದರಿಗಳಲ್ಲಿ ಬಿಡುಗಡೆಯಾಗಬಹುದಾಗಿದ್ದು, 6 ಸೀಟರ್ ಆವೃತ್ತಿಯಲ್ಲಿ 2+2+2 ಮಾದರಿಯ ಆಸನಗಳನ್ನು 7 ಸೀಟರ್ ಆವೃತ್ತಿಯಲ್ಲಿ 2+3+2 ಮಾದರಿಯ ಆಸನಗಳನ್ನು ಮತ್ತು 8 ಸೀಟರ್ ಆವೃತ್ತಿಯಲ್ಲಿ 2+3+3 ಮಾದರಿಯ ಆಸನಗಳನ್ನು ಜೋಡಿಸಲಾಗುತ್ತದೆ.

ಸಿಯೆರಾ ಇವಿ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಹಾಗೆಯೇ ಸಿಯೆರಾ ಇವಿ ಕಾರು ಅತಿ ಹೆಚ್ಚು ಸುರಕ್ಷಾ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದ್ದು, ಹೊಸ ಕಾರಿನಲ್ಲಿ ಮಲ್ಟಿ ಜೋನ್ ಕ್ಲೈಮೆಟ್ ಕಂಟ್ರೊಲ್, ಪ್ಯಾನರೋಮಿಕ್ ಸನ್‌ರೂಫ್, ಡಿಜಿಟಲ್ ಕ್ಲಸ್ಟರ್, ವೆಂಟೆಲೆಟೆಡ್ ಸೀಟುಗಳು ಸೇರಿದಂತೆ ಅಡ್ವಾನ್ಸ್ ಡ್ರೈವಿಂಗ್ ಟೆಕ್ನಾಲಜಿ ನೀಡಲಾಗಿದೆ.

ಸಿಯೆರಾ ಇವಿ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿ ಸಫಾರಿ ಕಾರು ಮಾದರಿಗಿಂತಲೂ ಹೆಚ್ಚು ಫೀಚರ್ಸ್‌ಗಳೊಂದಿಗೆ ಅಧಿಕ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್ ಹೊಂದಿರಲಿದ್ದು, ಸೂಪರ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗುತ್ತಿದೆ. ಹೀಗಾಗಿ ಹೊಸ ಕಾರು ತುಸು ದುಬಾರಿಯಾಗಿರಲಿದ್ದು, ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 25 ಲಕ್ಷ ಹೊಂದಿರಬಹುದೆಂದು ಅಂದಾಜಿಸಲಾಗಿದೆ.

ಸಿಯೆರಾ ಇವಿ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಇನ್ನು ಟಾಟಾ ಮೋಟಾರ್ಸ್ ಕಂಪನಿಯು ಇವಿ ಕಾರಿಗಳ ಭವಿಷ್ಯದ ಬೃಹತ್ ಯೋಜನೆಗಳಿಗಾಗಿ ಇದೀಗ ಪ್ರತ್ಯೇಕ ನಿಯಂತ್ರಣ ಹೊಂದಿರುವ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (TPEML) ಅಂಗಸಂಸ್ಥೆಯನ್ನು ಆರಂಭಿಸಿದ್ದು, ಹೊಸ ಅಂಗಸಂಸ್ಥೆಯ ಮೇಲೆ ಟಾಟಾ ಕಂಪನಿಯು ಸುಮಾರು ರೂ.15 ಸಾವಿರ ಕೋಟಿ ಹೂಡಿಕೆ ಮಾಡಿದೆ. ಹೊಸ ಹೂಡಿಕೆಯೊಂದಿಗೆ ಟಾಟಾ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ವಿವಿಧ ಸೆಗ್ಮೆಂಟ್‌ಗಳಲ್ಲಿ ಒಟ್ಟು ಹತ್ತು ಇವಿ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

Most Read Articles

Kannada
English summary
Tata motors is all set to bring back the sierra in electric avatar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X