ಭಾರತದಲ್ಲಿನ ಟಾಪ್ 5 ಅತ್ಯಂತ ಸುರಕ್ಷಿತ ಡೀಸೆಲ್ ಕಾರುಗಳು: ಮಹೀಂದ್ರಾದಿಂದ ಟಾಟಾವರೆಗೆ...

ಹೊಸ ಕಾರು ಖರೀದಿಸುವವರು ತಾವು ಮತ್ತು ತಮ್ಮ ಕುಟುಂಬದ ರಕ್ಷಣೆಗೆ ಅದರ ಬೆಲೆಗಿಂತ ಸುರಕ್ಷತೆಗೆ ಆದ್ಯತೆ ನೀಡುತ್ತಾರೆ. ಸುರಕ್ಷತಾ ಮಾನದಂಡಗಳನ್ನು ಹೊಂದಿರುವ ಕಾರು ಅಪಘಾತಕ್ಕೆ ಒಳಗಾದರೂ ಕಡಿಮೆ ಅಪಾಯವನ್ನುಂಟುಮಾಡುತ್ತದೆ ಎಂದು ಸಮಾಧಾನ ಹೊಂದಿರುತ್ತಾರೆ. ಇಲ್ಲಿ ಅಂತಹ ಕೆಲವು ದೇಶೀಯ ಕಂಪನಿಗಳು ತಯಾರಿಸಿರುವ ಕಾರಿನ ಬಗ್ಗೆ ತಿಳಿಸಿಕೊಡಲಾಗಿದೆ.

GNCAP (ಗ್ಲೋಬಲ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ) ಭಾರತ ಸೇರಿದಂತೆ ಉದಯೋನ್ಮುಖ ಮಾರುಕಟ್ಟೆಗಳಿಂದ ಹೊಸ ಕಾರುಗಳನ್ನು ಕ್ರ್ಯಾಶ್-ಟೆಸ್ಟ್ ಮಾಡುವ ಒಂದು ಸಂಸ್ಥೆಯಾಗಿದೆ. ಇದು ಹೊಸ ಕಾರುಗಳ ಸುರಕ್ಷತೆಯನ್ನು ನಿರ್ಧರಿಸಲು ಸ್ಟಾರ್ ರೇಟಿಂಗ್ ಅನ್ನು ನೀಡುತ್ತದೆ. ಅದರಲ್ಲಿ ವಯಸ್ಕರ ರಕ್ಷಣೆ ಮತ್ತು ಮಕ್ಕಳ ರಕ್ಷಣೆಗಾಗಿ ಪ್ರತ್ಯೇಕ ರೇಟಿಂಗ್‌ಗಳನ್ನು ನೀಡುತ್ತದೆ. GNCAP ರೇಟಿಂಗ್‌ಗಳ ಪ್ರಕಾರ, ಭಾರತದ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ಟಾಪ್ 5 ಸುರಕ್ಷಿತ ಡೀಸೆಲ್ ಕಾರುಗಳು ಇಲ್ಲಿವೆ.

ಭಾರತದಲ್ಲಿನ ಅತ್ಯಂತ ಟಾಪ್ 5 ಸುರಕ್ಷಿತ ಡೀಸೆಲ್ ಕಾರುಗಳು: ಮಹೀಂದ್ರಾದಿಂದ ಟಾಟಾವರೆಗೆ...

ಮಹೀಂದ್ರಾ XUV 300:
GNCAP ನಿಂದ 5-ಸ್ಟಾರ್ ರೇಟಿಂಗ್ ಪಡೆದ ಮಹೀಂದ್ರಾದ ಮೊದಲ ಸಬ್-4-ಮೀಟರ್ ಎಸ್‌ಯುವಿ ಆಗಿದೆ. ಇದು ವಯಸ್ಕರ ರಕ್ಷಣೆಗೆ ಐದು ಸ್ಟಾರ್‌ (ಸ್ಕೋರಿಂಗ್ 16.42/17), ಮಕ್ಕಳ ರಕ್ಷಣೆಗಾಗಿ ನಾಲ್ಕು ಸ್ಟಾರ್‌ (ಸ್ಕೋರಿಂಗ್ (37.44/49) ಗಳಿಸಿದೆ. ಈ ಎಸ್‌ಯುವಿ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದ್ದು, ವಿಶೇಷವಾಗಿ ಅದರ ಪ್ರತಿಸ್ಪರ್ಧಿ ಕಾರುಗಳಿಗೆ ಹೋಲಿಸಿದರೆ. XUV 300 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ಎಂಜಿನ್‌ ಹೊಂದಿದ್ದು, ಅದು 115 bhp ಪವರ್ ಮತ್ತು 300 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊದಿದೆ.

ಮಹೀಂದ್ರಾ XUV 300 ಸುರಕ್ಷತೆಯ ಅಂಶಗಳ ಬಗ್ಗೆ ಹೇಳುವುದಾದರೆ, ಇದು ಆರು ಏರ್‌ಬ್ಯಾಗ್‌ಗಳೊಂದಿಗೆ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಎಲ್ಲಾ ನಾಲ್ಕು ಡಿಸ್ಕ್ ಬ್ರೇಕ್‌ಗಳು, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್ಸ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ABS ಮತ್ತು EBD, ಮುಂಭಾಗ ಮತ್ತು ಹಿಂಭಾಗದಲ್ಲಿ ಫಾಗ್ ಲೈಟ್ಸ್, ISOFIX ಆಂಕಾರೇಜ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಎಲ್ಲಾ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರೆಮಿಂಡರ್ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಅನ್ನು ಹೊಂದಿದೆ.

ಟಾಟಾ ಅಲ್ಟ್ರೋಜ್:
ಗ್ಲೋಬಲ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂನಿಂದ 5-ಸ್ಟಾರ್ ರೇಟಿಂಗ್ ಅನ್ನು ಪಡೆಡಿರುವ ಏಕೈಕ ಮೇಡ್ ಇನ್ ಇಂಡಿಯಾ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಟಾಟಾ ಅಲ್ಟ್ರೋಜ್ ಆಗಿದೆ. ಈ ಕಾರು ವಯಸ್ಕರ ರಕ್ಷಣೆ ವಿಭಾಗದಲ್ಲಿ 5-ಸ್ಟಾರ್ ರೇಟಿಂಗ್ ಅನ್ನು ಗಳಿಸಿದೆ. ಇದು ಗರಿಷ್ಠ 17 ಅಂಕಗಳಲ್ಲಿ 16.13 ಅಂಕಗಳನ್ನು ಪಡೆದುಕೊಂಡಿದೆ. ಆದರೆ, ಈ ಕಾರು ಮಕ್ಕಳ ರಕ್ಷಣೆಯಲ್ಲಿ ಉತ್ತಮ ಸ್ಕೋರ್ ಮಾಡಲಿಲ್ಲ. ಮೂರು ಸ್ಟಾರ್ ಪಡೆದುಕೊಂಡಿದೆ. 29/49 ಸ್ಕೋರಿಂಗ್ ಇದೆ.

ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಎರಡು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್, ಹಿಂಬದಿಯ ಕ್ಯಾಮೆರಾ, ಮುಂಭಾಗದ ಸೀಟುಗಳಿಗೆ ಸೀಟ್-ಬೆಲ್ಟ್ ರೆಮಿಂಡರ್ ಮತ್ತು Isofix ಚೈಲ್ಡ್-ಸೀಟ್ ಮೌಂಟ್‌ಗಳು ಸೇರಿವೆ. ಟಾಟಾ ಅಲ್ಟ್ರೋಜ್ 1.5-ಲೀಟರ್ ಫರ್ ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಲಿದ್ದು, ಇದು 90 bhp ಪವರ್ ಮತ್ತು 200 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ.

ಟಾಟಾ ನೆಕ್ಸಾನ್:
ಟಾಟಾದ ನೆಕ್ಸಾನ್ ಎಸ್‌ಯುವಿ, ಗ್ಲೋಬಲ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ(GNCAP)ನಿಂದ, 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದ ಮೊದಲ ಮೇಡ್ ಇನ್ ಇಂಡಿಯಾ ವಾಹನವಾಗಿದೆ. ನೆಕ್ಸಾನ್ ಆರಂಭದಲ್ಲಿ 4-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿತ್ತು. ಈ ಫಲಿತಾಂಶದ ನಂತರ ಕಾರು ತಯಾರಕರು ಮಾದರಿಯನ್ನು ನವೀಕರಿಸಿದರು. ಬಳಿಕ ಎರಡನೇ ಸುತ್ತಿನ ಪರೀಕ್ಷೆಯಲ್ಲಿ ಅದು ವಯಸ್ಕರ ರಕ್ಷಣೆ ವಿಭಾಗದಲ್ಲಿ (16.06/17) ಐದು ಸ್ಟಾರ್‌ ಪಡೆಯಿತು. ಅಲ್ಟ್ರೊಜ್‌ನಂತೆಯೇ, ನೆಕ್ಸಾನ್ ಮಕ್ಕಳ ರಕ್ಷಣೆ ವಿಭಾಗದಲ್ಲಿ ಉತ್ತಮ ಸ್ಕೋರ್ ಮಾಡಲಿಲ್ಲ. ಕೇವಲ ಮೂರು ಸ್ಟಾರ್ (25/49) ಪಡೆದುಕೊಂಡಿದೆ.

ನೆಕ್ಸಾನ್ 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ನಿಂದ ಕಾರ್ಯನಿರ್ವಹಿಸಲಿದ್ದು, ಇದು 108 bhp ಪವರ್ ಮತ್ತು 260 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಖರೀದಿಗೆ ಲಭ್ಯವಿದೆ. ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ ಎರಡು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ಸ್, ಹಿಂಬದಿಯ ಕ್ಯಾಮೆರಾ, ಹಿಲ್-ಹೋಲ್ಡ್ ಅಸಿಸ್ಟ್, ಬ್ರೇಕ್ ಡಿಸ್ಕ್ ವಿಪಿನ್ಗ್ ಮತ್ತು Isofix ಚೈಲ್ಡ್-ಸೀಟ್ ಮೌಂಟ್‌ಗಳನ್ನು ಒಳಗೊಂಡಿವೆ.

ಮಹೀಂದ್ರಾ XUV 700:
ಜಾಗತಿಕ NCAP ಕ್ರ್ಯಾಶ್ ಪರೀಕ್ಷೆಗಳಲ್ಲಿ ಮಹೀಂದ್ರಾ XUV 700, 5-ಸ್ಟಾರ್ ಸುರಕ್ಷತೆಯ ರೇಟಿಂಗ್ ಅನ್ನು ಪಡೆದುಕೊಂಡಿದೆ. ಗರಿಷ್ಠ 17 ಪಾಯಿಂಟ್‌ಗಳಲ್ಲಿ 16.03 ಅಂಕಗಳನ್ನು ಪಡೆದುಕೊಂಡಿದ್ದು, ವಯಸ್ಕರ ಸುರಕ್ಷತೆಯ ವಿಭಾಗದಲ್ಲಿ 5-ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ ಗರಿಷ್ಠ 49 ಅಂಕಗಳಲ್ಲಿ 41.66 ಅಂಕ ಪಡೆದು, 4-ಸ್ಟಾರ್ ರೇಟಿಂಗ್ ಸಾಧಿಸಲು ಯಶಸ್ವಿಯಾಗಿದೆ. ಈ ಕಾರು 2.2-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ನಿಂದ ಹೊಂದಿದೆ. ಇದು 182 bhp ಪವರ್ ಮತ್ತು 450 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅಲ್ಲದೆ, 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಅಟೋಮೆಟಿಕ್ ಅಥವಾ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಖರೀದಿಗೆ ಲಭ್ಯವಿದೆ. ಮಹೀಂದ್ರಾ XUV700ನಲ್ಲಿ ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದ್ದು, ಇದರಲ್ಲಿ ಏಳು ಏರ್‌ಬ್ಯಾಗ್‌ಗಳು ಮತ್ತು ಅಟೋಮೆಟಿಕ್ ಎಮೆರ್ಜೆನ್ಸಿ ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫಾರ್ವರ್ಡ್ ಕೊಲಿಶನ್ ವಾರ್ನಿಂಗ್, ಲೇನ್ ಕೀಪ್ಸ್ ಅಸಿಸ್ಟ್, ಸ್ಮಾರ್ಟ್ ಪೈಲಟ್ ಅಸಿಸ್ಟ್, ಆಟೋ ಹೈ-ಬೀಮ್, ಆಲ್-ಫೋರ್ ಹಾಗೂ ಡಿಸ್ಕ್ ಬ್ರೇಕ್ ಸೇರಿದಂತೆ ಇನ್ನೂ ಅನೇಕ ವೈಶಿಷ್ಟ್ಯಗಳನ್ನು ಹೊಂದಿವೆ.

ಮಹೀಂದ್ರಾ ಮರಾಜ್ಜೊ:
ವಯಸ್ಕರ ರಕ್ಷಣೆ ವಿಭಾಗದಲ್ಲಿ ಮಹೀಂದ್ರಾ ಮರಾಜ್ಜೊ 4-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಇದು ಗರಿಷ್ಠ 17 ಅಂಕಗಳಲ್ಲಿ 12.85 ಅಂಕಗಳನ್ನು ಮಾತ್ರ ಗಳಿಸಿದೆ. ಮರಾಝೊ ಎರಡು ಸ್ಟಾರ್‌ಗಳನ್ನು (22.22/49) ಪಡೆದುಕೊಳ್ಳುವ ಮೂಲಕ ಮಕ್ಕಳ ರಕ್ಷಣೆಯಲ್ಲಿ ಕಡಿಮೆ ಸ್ಕೋರ್ ಮಾಡಿದೆ. ಮಹೀಂದ್ರಾ ಮರಾಜ್ಜೊ 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ ಹೊಂದಿದ್ದು, ಇದು 120 bhp ಪವರ್ ಮತ್ತು 300 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಮರಾಜ್ಜೊ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, 4 ಡಿಸ್ಕ್ ಬ್ರೇಕ್‌ಗಳು, ISOFIX ಮೌಂಟ್‌ಗಳು, TCS, EBD ಜೊತೆಗೆ ABS ಸೇರಿದಂತೆಇನ್ನೂ ಅನೇಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿವೆ.

Most Read Articles

Kannada
English summary
Top 5 Safest diesel cars in India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X