ಭಾರತದಲ್ಲಿ ಬೆಸ್ಟ್ ಫೀಚರ್ಸ್ ಹೊಂದಿರುವ ಟಾಪ್ 5 ಸಿಎನ್‌ಜಿ ಕಾರುಗಳು

ಪೆಟ್ರೋಲ್, ಡೀಸೆಲ್ ಬೆಲೆಗಳು ದುಬಾರಿಯಾಗಿದ್ದು, ಸಿಎನ್‌ಜಿ ಕಾರುಗಳು ಇತ್ತೀಚೆಗೆ ಅಪಾರ ಜನಪ್ರಿಯತೆಯನ್ನು ಗಳಿಸುತ್ತಿವೆ. ಇದರಿಂದಾಗಿ ವಾಹನ ತಯಾರಿಕ ಕಂಪನಿಗಳು ಗ್ರಾಹಕರಿಗೆ ಪ್ರೀಮಿಯಂ ಕಾರುಗಳು ಹೊಂದಿರುವ ಎಲ್ಲ ಫೀಚರ್ಸ್ ರೀತಿಯೇ ಸಿಎನ್‌ಜಿ ಕಾರುಗಳನ್ನು ಪರಿಚಯಿಸಿದ್ದಾರೆ. ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ 5 ಸಿಎನ್‌ಜಿ ಕಾರುಗಳು ಇಲ್ಲಿವೆ.

ಮಾರುತಿ ಸುಜುಕಿ XL6 (CNG):
ಈ ತಿಂಗಳ ಕೊನೆಯಲ್ಲಿ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಸಿಎನ್‌ಜಿ ಬೆಲೆ ಘೋಷಣೆಯಾಗುವವರೆಗೆ, ಮಾರುತಿ ಸುಜುಕಿ ಎಕ್ಸ್‌ಎಲ್ 6 ಸಿಎನ್‌ಜಿ ಭಾರತದ ಮಾರುಕಟ್ಟೆಯಲ್ಲಿ ಗ್ರಾಹಕರು ಖರೀದಿಸಬಹುದಾದ ಅತ್ಯಂತ ಪ್ರೀಮಿಯಂ ಸಿಎನ್‌ಜಿ ಕಾರಾಗಿ ಉಳಿದಿದೆ ಎಂದು ಹೇಳಬಹುದು. ಸಿಎನ್‌ಜಿ ಆಯ್ಕೆಯನ್ನು ಕಾರಿನ ಝೀಟಾ ರೂಪಾಂತರದೊಂದಿಗೆ ಮಾತ್ರ ನೀಡಲಾಗುತ್ತದೆ, ಈ ಕಾರಿನ ಬೆಲೆ ರೂ.12.24 ಲಕ್ಷ (ಎಕ್ಸ್ ಶೋ ರೂಂ) ಇದೆ.

ಭಾರತದಲ್ಲಿ ಬೆಸ್ಟ್ ಫೀಚರ್ಸ್ ಹೊಂದಿರುವ ಟಾಪ್ 5 ಸಿಎನ್‌ಜಿ ಕಾರುಗಳು

ನೂತನ ಸಿಎನ್‌ಜಿ ಚಾಲಿತ XL6 ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, ಎಂಜಿನ್ ಪುಶ್ ಸ್ಟಾರ್ಟ್/ಸ್ಟಾಪ್, ಕ್ರೂಸ್ ಕಂಟ್ರೋಲ್, ಸುಜುಕಿ ಕನೆಕ್ಟ್‌ನೊಂದಿಗೆ 7-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, 16-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್ಸ್. ಮೌಂಟೆಡ್ ಎಸಿ, ಒನ್-ಟಚ್ ರಿಕ್ಲೈನ್ ಮತ್ತು ಸ್ಲೈಡ್‌ನೊಂದಿಗೆ ಕ್ಯಾಪ್ಟನ್ ಸೀಟ್‌ಗಳು, ನಾಲ್ಕು ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ಇಎಸ್‌ಪಿ ಹಿಲ್ ಹೋಲ್ಡ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಮಾರುತಿ ಸುಜುಕಿ ಬಲೆನೊ (CNG):
ಬಲೆನೊ ಸಿಎನ್‌ಜಿಯು ಮಾರುತಿ ಸುಜುಕಿ ಕಂಪನಿಯ ಪ್ರೀಮಿಯಂ ನೆಕ್ಸಾ ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡುವ ಎರಡನೇ S-ಸಿಎನ್‌ಜಿ ಕಾರು ಆಗಿದೆ. ಮಾರುತಿ ಸುಜುಕಿಯ ಬಲೆನೊದಲ್ಲಿ ಸಿಎನ್‌ಜಿ ಆಯ್ಕೆಯು ಸದ್ಯ ಎರಡು ರೂಪಾಂತರಗಳಲ್ಲಿ ಇದೆ ಎಂದು ಹೇಳಬಹುದು. ಅವುಗಳೆಂದರೇ ಡೆಲ್ಟಾ ಮತ್ತು ಝೀಟಾ. ಕ್ರಮವಾಗಿ ರೂ.8.28 ಲಕ್ಷ ಮತ್ತು ರೂ.9.21 ಲಕ್ಷ (ಎಕ್ಸ್-ಶೋ ರೂಂ) ಬೆಲೆಯನ್ನು ಹೊಂದಿದ್ದು, ಇವುಗಳ ಲುಕ್ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಮಾರುತಿ ಸುಜುಕಿ ಬಲೆನೊ ಸಿಎನ್‌ಜಿಯ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, 7-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಸ್ಮಾರ್ಟ್‌ಫೋನ್ ಕಲೆಕ್ಷಮ್, ಸುಜುಕಿ ಕನೆಕ್ಟ್, ಪುಶ್ ಬಟನ್ ಸ್ಟಾರ್ಟ್, ಸ್ಟಾಪ್, ಸ್ಟೀರಿಂಗ್ ವೀಲ್‌ಗೆ ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಹೊಂದಾಣಿಕೆ, 4 ಸ್ಪೀಕರ್‌ಗಳು ಮತ್ತು 6 ಏರ್‌ಬ್ಯಾಗ್‌ಗಳು ಹಾಗೂ ರಿಯರ್ ವ್ಯೂ ಕ್ಯಾಮೆರಾ ಸೇರಿದಂತೆ ಬೆಸ್ಟ್ ಫೀಚರ್ಸ್ ಅನ್ನು ಹೊಂದಿದೆ ಎಂದು ಹೇಳಬಹುದು.

ಟೊಯೊಟಾ ಗ್ಲ್ಯಾನ್ಜಾ (CNG):
ಇಂಡೋ-ಜಪಾನ್ ವಾಹನ ತಯಾರಿಕ ಕಂಪನಿ ಟೊಯೊಟಾದ 'ಗ್ಲ್ಯಾನ್ಜಾ' ಸಿಎನ್‌ಜಿಯ ವೈಶಿಷ್ಟ್ಯಗಳು ಮತ್ತು ಸುರಕ್ಷತಾ ತಂತ್ರಜ್ಞಾನವು ಬಲೆನೊ ಸಿಎನ್‌ಜಿಯಂತೆಯೇ ಇರುತ್ತದೆ. ಇದರ ಬೆಲೆ ರೂ.8.43 ಲಕ್ಷದಿಂದ ರೂ.9.46 ಲಕ್ಷ (ಎಕ್ಸ್ ಶೋ ರೂಂ) ಇದೆ. ಬಲೆನೊ ಸಿಎನ್‌ಜಿಯಂತೆಯೇ, ಗ್ಲ್ಯಾನ್ಜಾ ಸಿಎನ್‌ಜಿಯನ್ನು 1.2-ಲೀಟರ್ ಎನ್‌ಎ ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಲಾಗುತ್ತದೆ. ಇದು ಸಿಎನ್‌ಜಿ ಮೋಡ್‌ನಲ್ಲಿ 77 ಪಿಎಸ್ ಗರಿಷ್ಠ ಪವರ್ ಮತ್ತು 98.5 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 30.61 ಕಿ.ಮೀ/ಕೆಜಿ ಇಂಧನ ದಕ್ಷತೆಯನ್ನು ಹೊಂದಿದೆ.

ಹ್ಯುಂಡೈ ಗ್ರಾಂಡ್ i10 ನಿಯೋಸ್ (CNG):
ಸಿಎನ್‌ಜಿ ಕಾರುಗಳ ಪಟ್ಟಿಯಲ್ಲಿ ಹುಂಡೈ ಇಲ್ಲದಿದ್ದರೆ ನಿಜವಾಗಿಯೂ ಅದು ಅಪೂರ್ಣವಾಗಿರುತ್ತದೆ. ಕೊರಿಯಾದ ಕಾರು ತಯಾರಕ ಹುಂಡೈ ಕೊಡುಗೆಗಳು ಸಾಮಾನ್ಯವಾಗಿ ಆಯಾ ಕಾರಿನ ವೈಶಿಷ್ಟ್ಯದ ವಿಚಾರದಲ್ಲಿ ಕೊಂಚ ಜಾಸ್ತಿಯೇ ಎಂದು ಹೇಳಬಹುದು. ಗ್ರಾಂಡ್ i10 ನಿಯೋಸ್ ಹ್ಯಾಚ್‌ಬ್ಯಾಕ್ ಪ್ರಸ್ತುತ ಮೂರು ವಿಭಿನ್ನ ರೂಪಾಂತರಗಳಲ್ಲಿ ಸಿಎನ್‌ಜಿ ಇಂಧನ ಚಾಲಿತವಾಗಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಮ್ಯಾಗ್ನಾ, ಸ್ಪೋರ್ಟ್ಜ್ ಮತ್ತು ಆಸ್ಟಾ, ರೂ.7.16 ಲಕ್ಷ, ರೂ.7.70 ಲಕ್ಷ ಮತ್ತು ರೂ.8.45 ಲಕ್ಷ (ಎಕ್ಸ್ ಶೋ ರೂಂ) ಇದೆ.

ಟಾಪ್-ಎಂಡ್ ಗ್ರ್ಯಾಂಡ್ i10 ನಿಯೋಸ್ ಸಿಎನ್‌ಜಿ ರೂಪಾಂತರವು ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, ಕೂಲ್ಡ್ ಗ್ಲೋವ್ ಬಾಕ್ಸ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಪುಶ್ ಬಟನ್ ಸ್ಟಾರ್ಟ್‌ನೊಂದಿಗೆ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇಷ್ಟೆ ಅಲ್ಲದೆ, ಮುಂಭಾಗ ಮತ್ತು ಹಿಂಭಾಗದ USB ಚಾರ್ಜರ್, 5.3-ಇಂಚಿನ ಡಿಜಿಟಲ್ ಸ್ಪೀಡೋಮೀಟರ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಗಳನ್ನು ಹೊಂದಿದೆ.

ಟಾಟಾ ಟಿಯಾಗೊ ಎನ್‌ಆರ್‌ಜಿ (CNG):
ಟಾಟಾ ಟಿಯಾಗೊ ಎನ್‌ಆರ್‌ಜಿ ಸಿಎನ್‌ಜಿಯನ್ನು ಕಳೆದ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ರೂ.7.40 ಲಕ್ಷದ ಮೂಲ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ (ಎಕ್ಸ್ ಶೋರೂಂ). ಟಾಪ್-ಎಂಡ್ ಟಿಯಾಗೊ NRG XZ CNG ಗಟ್ಟಿಯಾದ ಪ್ಲಾಸ್ಟಿಕ್ ಬಾಡಿ ಕ್ಲಾಡಿಂಗ್, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಎತ್ತರ-ಹೊಂದಾಣಿಕೆ ಡ್ರೈವರ್ ಸೀಟ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 15-ಇಂಚಿನ ಅಲಾಯ್ ವೀಲ್ಸ್ ಮತ್ತು ಕೂಲ್ಡ್ ಗ್ಲೋವ್‌ಬಾಕ್ಸ್ ಅನ್ನು ಹೊಂದಿದೆ ಎಂದು ಹೇಳಬಹುದು.

ಟಿಯಾಗೊ ಸಿಎನ್‌ಜಿ ಮತ್ತು ಟಿಯಾಗೊ ಎನ್‌ಆರ್‌ಜಿ ಸಿಎನ್‌ಜಿಗಳು ಒಂದೇ ರೀತಿಯ 1.2-ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಅದನ್ನು ಸಹಜವಾಗಿ ಸಿಎನ್‌ಜಿ ಕಿಟ್‌ನೊಂದಿದಗೆ ಜೋಡಿಸಲಾಗಿದೆ. ಸಿಎನ್‌ಜಿ ಮೋಡ್‌ನಲ್ಲಿ ಈ ಎಂಜಿನ್ 73.4 PS ಪವರ್ ಮತ್ತು 95 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆದರೆ, ಪೆಟ್ರೋಲ್ ಮೋಡ್‌ನಲ್ಲಿ 86 PS ಪವರ್ ಮತ್ತು 113 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಟಾಟಾ ಟಿಯಾಗೊ ಸಿಎನ್‌ಜಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದೆ.

Most Read Articles

Kannada
English summary
Top five cng cars with best features in India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X