ಇನೋವಾ ಕ್ರಿಸ್ಟಾ ಗ್ರಾಹಕರಿಗೆ ನಿರಾಶೆ: ಡೀಸೆಲ್ ವೆರಿಯೆಂಟ್ ಬುಕಿಂಗ್ ನಿಲ್ಲಿಸಿದ ಟೊಯೊಟಾ

ಟೊಯೊಟಾ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯ ಎಂಪಿವಿ ಮಾದರಿಯಾದ ಇನೋವಾ ಕ್ರಿಸ್ಟಾ ಹೊಸ ತಲೆಮಾರಿನ ಆವೃತ್ತಿ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಮಾದರಿಯ ಬಿಡುಗಡೆಗೂ ಮುನ್ನ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಯಲ್ಲಿನ ಡೀಸೆಲ್ ಎಂಜಿನ್ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದೆ.

ಇನೋವಾ ಕ್ರಿಸ್ಟಾ ಗ್ರಾಹಕರಿಗೆ ನಿರಾಶೆ: ಡೀಸೆಲ್ ವೆರಿಯೆಂಟ್ ಬುಕಿಂಗ್ ನಿಲ್ಲಿಸಿದ ಟೊಯೊಟಾ

ಹೌದು, ಎಂಪಿವಿ ವಿಭಾಗದಲ್ಲಿ ಅಗ್ರಸ್ಥಾನ ಹೊಂದಿರುವ ಇನೋವಾ ಕ್ರಿಸ್ಟಾ ಕಾರು ಮಾದರಿಯು ಶೀಘ್ರದಲ್ಲಿಯೇ ಹೊಸ ತಲೆಮಾರಿನ ಆವೃತ್ತಿಯೊಂದಿಗೆ ಮಾರುಕಟ್ಟೆ ಪ್ರವೇಶಿಸಲು ಸಿದ್ದವಾಗುತ್ತಿದ್ದು, ಹೊಸ ಆವೃತ್ತಿಯ ಬಿಡುಗಡೆಗೂ ಮುನ್ನ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಮಾದರಿಯ ಡೀಸೆಲ್ ವೆರಿಯೆಂಟ್ ಬುಕಿಂಗ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ.

ಇನೋವಾ ಕ್ರಿಸ್ಟಾ ಗ್ರಾಹಕರಿಗೆ ನಿರಾಶೆ: ಡೀಸೆಲ್ ವೆರಿಯೆಂಟ್ ಬುಕಿಂಗ್ ನಿಲ್ಲಿಸಿದ ಟೊಯೊಟಾ

ಹೊಸ ಕಾರು ಮಾದರಿಯ ಬಿಡುಗಡೆಗೂ ಇನೋವಾ ಕ್ರಿಸ್ಟಾ ಡೀಸೆಲ್ ಮಾದರಿಯನ್ನು ಸ್ಥಗಿತಗೊಳಿಸಿರುವ ಗ್ರಾಹಕರಲ್ಲಿ ನಿರಾಶೆ ಉಂಟು ಮಾಡಿದ್ದು, ಡೀಸೆಲ್ ಮಾದರಿಗಳು ಮುಂಬರುವ ಹೊಸ ತಲೆಮಾರಿನ ಮಾದರಿಯಲ್ಲಿ ಮರುಪರಿಚಯಿಸುತ್ತಾದೆ ಅಥವಾ ಶಾಶ್ವತವಾಗಿ ಡೀಸೆಲ್ ಎಂಜಿನ್ ತೆಗೆದುಹಾಕಲಾಗುತ್ತದೆ ಎನ್ನುವ ಬಗೆಗೆ ಯಾವುದೇ ಸ್ಪಷ್ಟನೆಗಳಿಲ್ಲ.

ಇನೋವಾ ಕ್ರಿಸ್ಟಾ ಗ್ರಾಹಕರಿಗೆ ನಿರಾಶೆ: ಡೀಸೆಲ್ ವೆರಿಯೆಂಟ್ ಬುಕಿಂಗ್ ನಿಲ್ಲಿಸಿದ ಟೊಯೊಟಾ

ಟೊಯೊಟಾ ಕಂಪನಿಯು ಹೊಸ ತಲೆಮಾರಿನ ಇನೋವಾ ಕ್ರಿಸ್ಟಾ ಮಾದರಿಯು 2023ರ ಆರಂಭದಲ್ಲಿ ಬಿಡುಗಡೆ ಮಾಡಬಹುದಾಗಿದ್ದು, ಅಲ್ಲಿಯ ತನಕ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಯಲ್ಲಿ ಪೆಟ್ರೋಲ್ ಮಾದರಿಗಳು ಮಾತ್ರ ಖರೀದಿಗೆ ಲಭ್ಯವಿರಲಿವೆ.

ಇನೋವಾ ಕ್ರಿಸ್ಟಾ ಗ್ರಾಹಕರಿಗೆ ನಿರಾಶೆ: ಡೀಸೆಲ್ ವೆರಿಯೆಂಟ್ ಬುಕಿಂಗ್ ನಿಲ್ಲಿಸಿದ ಟೊಯೊಟಾ

ಹೊಸ ಮಾಲಿನ್ಯ ನಿಯಂತ್ರಣ ಕಾಯ್ದೆಗಳಿಗೆ ಅನುಸಾರವಾಗಿ ಡೀಸೆಲ್ ಎಂಜಿನ್ ಕಾರುಗಳ ಉನ್ನತೀಕರಣವು ಸಾಕಷ್ಟು ದುಬಾರಿಯಾಗುವ ಕಾರಣಕ್ಕೆ ಬಹುತೇಕ ಕಾರು ಕಂಪನಿಗಳು ಹಂತ-ಹಂತವಾಗಿ ಡೀಸೆಲ್ ಮಾದರಿಗಳಿಗೆ ಗುಡ್‌ಬೈ ಹೇಳುತ್ತಿದ್ದು, ಕೇವಲ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರು ಮಾದರಿಗಳತ್ತ ಗಮನಹರಿಸುತ್ತಿವೆ.

ಇನೋವಾ ಕ್ರಿಸ್ಟಾ ಗ್ರಾಹಕರಿಗೆ ನಿರಾಶೆ: ಡೀಸೆಲ್ ವೆರಿಯೆಂಟ್ ಬುಕಿಂಗ್ ನಿಲ್ಲಿಸಿದ ಟೊಯೊಟಾ

ಇದೇ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿರುವ ಟೊಯೊಟಾ ಕಂಪನಿಯು ಕಂಪನಿಯು ಹೊಸ ತಲೆಮಾರಿನ ಇನೋವಾ ಕ್ರಿಸ್ಟಾದಲ್ಲಿ ಹೊಸ ಮಾಲಿನ್ಯ ನಿಯಂತ್ರಣ ಕಾಯ್ದೆಗಳಿಗೆ ಅನುಸಾರವಾಗಿ ದುಬಾರಿ ಬೆಲೆಯೊಂದಿಗೆ ಡೀಸೆಲ್ ಆಯ್ಕೆ ಬದಲಾಗಿ ಪೆಟ್ರೋಲ್ ಮತ್ತು ಪೆಟ್ರೋಲ್-ಹೈಬ್ರಿಡ್ ಮಾದರಿಗಳನ್ನು ಪರಿಚಯಿಸಬಹುದಾಗಿದೆ.

ಇನೋವಾ ಕ್ರಿಸ್ಟಾ ಗ್ರಾಹಕರಿಗೆ ನಿರಾಶೆ: ಡೀಸೆಲ್ ವೆರಿಯೆಂಟ್ ಬುಕಿಂಗ್ ನಿಲ್ಲಿಸಿದ ಟೊಯೊಟಾ

ಹೊಸ ತಲೆಮಾರಿನ ಮಾದರಿಯಲ್ಲಿ ಡೀಸೆಲ್ ಎಂಜಿನ್ ತೆಗೆದುಹಾಕುವ ಕುರಿತಂತೆ ಕಂಪನಿಯು ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲವಾದರೂ ಹೊಸ ಮಾಲಿನ್ಯ ನಿಯಂತ್ರಣ ಕಾಯ್ದೆ ನಿಯಮಗಳನ್ನು ಅನುಸರಿಸುವುದರಿಂದ ಡೀಸೆಲ್ ಎಂಜಿನ್ ಕಾರುಗಳ ಬೆಲೆ ಹೆಚ್ಚಳವಾಗಬಹುದಾದ ಸಾಧ್ಯತೆ ಹೆಚ್ಚಿರುವುದರಿಂದ ಡೀಸೆಲ್ ಎಂಜಿನ್ ಕೈಬಿಡಬಹುದು ಎನ್ನಲಾಗುತ್ತಿದೆ.

ಇನೋವಾ ಕ್ರಿಸ್ಟಾ ಗ್ರಾಹಕರಿಗೆ ನಿರಾಶೆ: ಡೀಸೆಲ್ ವೆರಿಯೆಂಟ್ ಬುಕಿಂಗ್ ನಿಲ್ಲಿಸಿದ ಟೊಯೊಟಾ

ಹೀಗಾಗಿ ಪೆಟ್ರೋಲ್ ಮತ್ತು ಪೆಟ್ರೋಲ್-ಹೈಬ್ರಿಡ್ ಮಾದರಿಗಳ ಮೇಲೆ ಗಮನಹರಿಸುತ್ತಿರುವ ಟೊಯೊಟಾ ಕಂಪನಿಯು ಪೆಟ್ರೋಲ್-ಹೈಬ್ರಿಡ್ ಮೂಲಕ ಡೀಸೆಲ್ ಕಾರು ಬಯಸುವ ಗ್ರಾಹಕರನ್ನು ತಲುಪುವ ಯೋಜನೆ ರೂಪಿಸುತ್ತಿದೆ.

ಇನೋವಾ ಕ್ರಿಸ್ಟಾ ಗ್ರಾಹಕರಿಗೆ ನಿರಾಶೆ: ಡೀಸೆಲ್ ವೆರಿಯೆಂಟ್ ಬುಕಿಂಗ್ ನಿಲ್ಲಿಸಿದ ಟೊಯೊಟಾ

ಪ್ರಪಂಚದಾದ್ಯಂತದ ಪ್ರಮುಖ ಆಟೋಮೊಬೈಲ್ ಕಂಪನಿಗಳು ಕಟ್ಟುನಿಟ್ಟಾದ ಮಾಲಿನ್ಯ ಹೊರಸೂಸುವಿಕೆಯ ಮಾನದಂಡಗಳನ್ನು ಅನುಸರಿಸುತ್ತಿರುವುದರಿಂದ ಪ್ರಯಾಣಿಕ ಕಾರುಗಳಲ್ಲಿ ಡೀಸೆಲ್ ಎಂಜಿನ್‌ ಆಯ್ಕೆಗಳು ಕ್ರಮೇಣವಾಗಿ ತಗ್ಗುತ್ತಿದ್ದು, ಪೆಟ್ರೋಲ್ ಮತ್ತು ಪೆಟ್ರೋಲ್-ಹೈಬ್ರಿಡ್ ಕಾರುಗಳಿಗೆ ಹೆಚ್ಚಿನ ಬೇಡಿಕೆ ಹರಿದುಬರುತ್ತಿದೆ.

ಇನೋವಾ ಕ್ರಿಸ್ಟಾ ಗ್ರಾಹಕರಿಗೆ ನಿರಾಶೆ: ಡೀಸೆಲ್ ವೆರಿಯೆಂಟ್ ಬುಕಿಂಗ್ ನಿಲ್ಲಿಸಿದ ಟೊಯೊಟಾ

ಇದರಿಂದ ಕಂಪನಿಯು ಹೊಸ ಇನೋವಾ ಕ್ರಿಸ್ಟಾ ಬಿಡುಗಡೆಗೂ ಮುನ್ನ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇನೋವಾ ಕ್ರಿಸ್ಟಾದಲ್ಲಿ ಪೆಟ್ರೋಲ್ ಮಾದರಿಯನ್ನು ಮಾತ್ರ ಮಾರಾಟ ಮಾಡಲು ನಿರ್ಧರಿಸಿದ್ದು, ಈಗಾಗಲೇ ಡೀಸೆಲ್ ಕಾರುಗಳಿಗೆ ಬುಕಿಂಗ್ ಸಲ್ಲಿಸಿರುವ ಗ್ರಾಹಕರನ್ನು ಹೊರತುಪಡಿಸಿ ಮುಂಬರುವ ದಿನಗಳಲ್ಲಿ ಬುಕಿಂಗ್ ಸಲ್ಲಿಸುವ ಗ್ರಾಹಕರಿಗೆ ಪೆಟ್ರೋಲ್ ವೆರಿಯೆಂಟ್‌ಗಳು ಮಾತ್ರ ಖರೀದಿಗೆ ಲಭ್ಯವಿರಲಿವೆ.

ಇನೋವಾ ಕ್ರಿಸ್ಟಾ ಗ್ರಾಹಕರಿಗೆ ನಿರಾಶೆ: ಡೀಸೆಲ್ ವೆರಿಯೆಂಟ್ ಬುಕಿಂಗ್ ನಿಲ್ಲಿಸಿದ ಟೊಯೊಟಾ

ಹೈಬ್ರಿಡ್ ಕಾರುಗಳ ಉತ್ಪಾದನೆಯಲ್ಲಿ ಟೊಯೊಟಾ ಕಂಪನಿಯು ಈಗಾಗಲೇ ಸಾಕಷ್ಟು ಮುನ್ನಡೆ ಕಾಯ್ದುಕೊಂಡಿದ್ದು, ಡೀಸೆಲ್ ಮಾದರಿಗಳನ್ನು ಸ್ಥಗಿತಗೊಳಿಸಿದರೂ ಸಹ ಹೈಬ್ರಿಡ್ ಮಾದರಿಗಳ ಮೂಲಕ ಡೀಸೆಲ್ ಕಾರುಗಳ ಅಲಭ್ಯತೆಯನ್ನು ಸರಿದೂಗಿಸುವ ನೀರಿಕ್ಷೆಯಲ್ಲಿದೆ.

ಇನೋವಾ ಕ್ರಿಸ್ಟಾ ಗ್ರಾಹಕರಿಗೆ ನಿರಾಶೆ: ಡೀಸೆಲ್ ವೆರಿಯೆಂಟ್ ಬುಕಿಂಗ್ ನಿಲ್ಲಿಸಿದ ಟೊಯೊಟಾ

ಪ್ರಸ್ತುತ ಮಾರುಕಟ್ಟೆಯಲ್ಲಿ ಜಿ, ಜಿ ಪ್ಲಸ್, ಜಿಎಕ್ಸ್, ವಿಎಕ್ಸ್ ಮತ್ತು ಜೆಡ್ಎಕ್ಸ್ ಎಂಬ ಐದು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರುವ ಇನೋವಾ ಕ್ರಿಸ್ಟಾ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 17.86 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 26.54 ಲಕ್ಷ ಬೆಲೆ ಹೊಂದಿದೆ.

ಇನೋವಾ ಕ್ರಿಸ್ಟಾ ಗ್ರಾಹಕರಿಗೆ ನಿರಾಶೆ: ಡೀಸೆಲ್ ವೆರಿಯೆಂಟ್ ಬುಕಿಂಗ್ ನಿಲ್ಲಿಸಿದ ಟೊಯೊಟಾ

2020ರಲ್ಲಿ ಹೊಸ ಎಮಿಷನ್ ನಂತರ ಇನೋವಾ ಕ್ರಿಸ್ಟಾದಲ್ಲಿದ್ದ 2.8-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಸ್ಥಗಿತಗೊಳಿಸಿರುವ ಟೊಯೊಟಾ ಕಂಪನಿಯು ಸದ್ಯ 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಮಾದರಿಗಳನ್ನು ಮಾತ್ರ ಮಾರಾಟ ಮಾಡುತ್ತಿದೆ.

ಇನೋವಾ ಕ್ರಿಸ್ಟಾ ಗ್ರಾಹಕರಿಗೆ ನಿರಾಶೆ: ಡೀಸೆಲ್ ವೆರಿಯೆಂಟ್ ಬುಕಿಂಗ್ ನಿಲ್ಲಿಸಿದ ಟೊಯೊಟಾ

ಪ್ರತಿ ವೆರಿಯೆಂಟ್‌ನಲ್ಲೂ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಲಭ್ಯವಿದ್ದು, ಪೆಟ್ರೋಲ್ ಮಾದರಿಯು 8 ಕಿ.ಮೀ ನಿಂದ 10 ಕಿ.ಮೀ ಮೈಲೇಜ್ ಹೊಂದಿದ್ದರೆ ಡೀಸೆಲ್ ಮಾದರಿಯು 10 ಕಿ.ಮೀ ನಿಂದ 12 ಕಿ.ಮೀ ಮೈಲೇಜ್ ಹೊಂದಿವೆ.

ಇನೋವಾ ಕ್ರಿಸ್ಟಾ ಗ್ರಾಹಕರಿಗೆ ನಿರಾಶೆ: ಡೀಸೆಲ್ ವೆರಿಯೆಂಟ್ ಬುಕಿಂಗ್ ನಿಲ್ಲಿಸಿದ ಟೊಯೊಟಾ

ಇನ್ನು ಇನೋವಾ ಎಂಪಿವಿ ಆವೃತ್ತಿಯು ಭಾರತೀಯ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ 17 ವರ್ಷಗಳನ್ನು ಪೂರೈಸಿದ್ದು, ಮೊದಲ ಬಾರಿಗೆ ಬಿಡುಗಡೆಗೊಂಡಾಗ ಇದ್ದ ಬೇಡಿಕೆಯು ಇದುವರೆಗೂ ಕಡಿಮೆಯಾಗಿಲ್ಲ. ಕಾಲ ಕಾಲಕ್ಕೆ ತಕ್ಕಂತೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ಬದಲಾವಣೆಯೊಂದಿಗೆ ಮಾರಾಟವಾಗುತ್ತಿರುವ ಇನೋವಾ ಆವೃತ್ತಿಯು ಕಳೆದ 2016ರಿಂದ ಇನೋವಾ ಕ್ರಿಸ್ಟಾ ಮಾದರಿಯಾಗಿ ಮತ್ತಷ್ಟು ಜನಪ್ರಿಯತೆ ಗಳಿಸುತ್ತಿದೆ.

ಇನೋವಾ ಕ್ರಿಸ್ಟಾ ಗ್ರಾಹಕರಿಗೆ ನಿರಾಶೆ: ಡೀಸೆಲ್ ವೆರಿಯೆಂಟ್ ಬುಕಿಂಗ್ ನಿಲ್ಲಿಸಿದ ಟೊಯೊಟಾ

ಪ್ರತಿಸ್ಪರ್ಧಿ ಮಾದರಿಗಳಿಂತಲೂ ವಿನೂತನ ಸೌಲಭ್ಯಗಳೊಂದಿಗೆ ಎಂಪಿವಿ ಗ್ರಾಹಕರ ಆಯ್ಕೆಯಲ್ಲಿ ಅಗ್ರಸ್ಥಾನದಲ್ಲಿರುವ ಇನೋವಾ ಕ್ರಿಸ್ಟಾ ಕಾರು ಮಾದರಿಯು ಇದುವರೆಗೆ ಇದು ಬರೋಬ್ಬರಿ 10 ಲಕ್ಷ ಯುನಿಟ್ ಮಾರಾಟಗೊಳ್ಳುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಇನೋವಾ ಕ್ರಿಸ್ಟಾ ಹೊಸ ತಲೆಮಾರಿನ ಮಾದರಿಯು ಮತ್ತಷ್ಟು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

Most Read Articles

Kannada
English summary
Toyota innova crysta diesel variants bookings stopped in india
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X