Just In
Don't Miss!
- News
ಲಾಲು ಹಿರಿಯ ಪುತ್ರ, ಸೊಸೆ ವಿಚ್ಛೇದನ ಸಮಾಲೋಚನೆಗೆ ಹಾಜರ್
- Sports
Ind vs Eng 5ನೇ ಟೆಸ್ಟ್: ಭಾರತದ ಆಡುವ 11ರ ಬಳಗದಲ್ಲಿ ಈ ಇಬ್ಬರು ವೇಗಿಗಳಿರಬೇಕು; ಅಜಿತ್ ಅಗರ್ಕರ್
- Movies
ಅಸ್ಸಾಂ ಪ್ರವಾಹ ಪೀಡಿತರ ನೆರವಿಗೆ ಬಂದ ಆಮಿರ್ ಖಾನ್: 25 ಲಕ್ಷ ರೂ. ದೇಣಿಗೆ!
- Finance
ಜೂ.28ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Lifestyle
ಆಷಾಢ ಮಾಸ 2022: ಆಷಾಢದಲ್ಲಿ ಗರ್ಭವತಿಯಾದರೆ ಅಶುಭ ಎನ್ನಲು ವೈಜ್ಞಾನಿಕ ಕಾರಣ ಇದೇ ನೋಡಿ
- Technology
Reliance Jio: ಮುಖೇಶ್ ಅಂಬಾನಿ ರಾಜೀನಾಮೆ; ಆಕಾಶ್ ಅಂಬಾನಿ ನೂತನ ಸಾರಥಿ!
- Education
Cochin Shipyard Limited Recruitment 2022 : 106 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಬನ್ನೇರುಘಟ್ಟ - ಹೈಟೆಕ್ ನಗರ ಬೆಂಗಳೂರಿನಲ್ಲಿರುವ ಒಂದು ನೈಸರ್ಗಿಕ ತಾಣ
ಶೀಘ್ರದಲ್ಲೇ ರಸ್ತೆಗಿಳಿಯಲಿದೆ ಹೈಡ್ರೋಜನ್ ಚಾಲಿತ ಟೊಯೊಟಾ ಮಿರಾಯ್!
ಭಾರತ ಸರ್ಕಾರದ ಆಟೋಮೋಟಿವ್ ಟೆಸ್ಟಿಂಗ್ ಏಜೆನ್ಸಿಯಾಗಿರುವ iCAT (ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿ), ಟೊಯೊಟಾ ಕಂಪನಿಯ ಮಿರಾಯ್ ಫ್ಯೂಲ್ ಸೆಲ್ ಎಲೆಕ್ಟ್ರಿಕ್ ವಾಹನವನ್ನು (ಎಫ್‌ಸಿಇವಿ) ಅಧ್ಯಯನ ಮಾಡಲು ಮತ್ತು ಮೌಲ್ಯಮಾಪನ ಮಾಡಲು ಟೊಯೊಟಾದೊಂದಿಗೆ ಕೈ ಜೋಡಿಸಿದೆ.

ಕೇಂದ್ರ ಸರ್ಕಾರ ಪಳೆಯುಳಿಕೆ ಇಂಧನಗಳ ಮೇಲಿನ ನಮ್ಮ ಪ್ರಸ್ತುತ ಅವಲಂಬನೆಯನ್ನು ಪರಿಗಣಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಅಲ್ಲದೇ ಹೈಡ್ರೋಜನ್ ಇಂಧನ ಸೆಲ್ ಕಾರುಗಳನ್ನು ಬಳಸಲು ಇರುವ ಬಹುತೇಕ ಸಾಧ್ಯತೆಗಳನ್ನು ಸಹ ಪರಿಶೀಲಿಸುತ್ತಿದೆ.

ಇದರ ಭಾಗವಾಗಿ ಐಸಿಎಟಿ ನಡೆಸುತ್ತಿರುವ ಪ್ರಾಯೋಗಿಕ ಯೋಜನೆಯಾದ ಎರಡನೇ ತಲೆಮಾರಿನ ಟೊಯೋಟಾ ಮಿರಾಯ್ ಫ್ಯೂಯಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್ (ಎಫ್‌ಸಿಇವಿ) ಯೋಜನೆಯನ್ನು ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಬುಧವಾರ ಉದ್ಘಾಟಿಸಿದರು. ಭವಿಷ್ಯದಲ್ಲಿ ನಮ್ಮ ದೇಶದಲ್ಲಿ ಹೈಡ್ರೋಜನ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಈ ಮೂಲಕ ಒಂದು ರೂಪಾಯಿಯಲ್ಲಿ ಎರಡು ಕಿಲೋಮೀಟರ್ ಪ್ರಯಾಣಿಸಬಹುದು ಎಂದು ಸಚಿವ ನಿತಿನ್ ಗಡ್ಕರಿ ಅವರು ಹೇಳಿದರು.

ಬ್ಯಾಟರಿ ಚಾಲಿತ ಕಾರುಗಳಿಗಿಂತ ಭಿನ್ನವಾಗಿರುವ ಎಫ್‌ಸಿಇವಿ (ಫ್ಯುಯೆಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್ಸ್) ತಮ್ಮದೇ ಆದ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುತ್ತವೆ. ಭಾರತದಲ್ಲಿ ಶೇಕಡ 50ಕ್ಕಿಂತ ಹೆಚ್ಚು ವಿದ್ಯುತ್ ಕಲ್ಲಿದ್ದಲಿನಿಂದ ಉತ್ಪಾದನೆಯಾಗುತ್ತಿದ್ದು, ಕಲ್ಲಿದ್ದಲಿಗೆ ಹೋಲಿಸಿಕೊಂಡರೆ ಫ್ಯೂಯಲ್ ಸೆಲ್ (ಇಂಧನ ಕೋಶ) ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಪರಿಸರ ಸ್ನೇಹಿಯಾಗಿವೆ.

ಪೆಟ್ರೋಲ್ ಅಥವಾ ಡೀಸೆಲ್‌ನಂತಹ ಪಳೆಯುಳಿಕೆ ಇಂಧನಗಳ ಬದಲಿಗೆ ಹೈಡ್ರೋಜನ್ ಅನ್ನು ಟ್ಯಾಂಕ್‌ಗೆ ತುಂಬುವ ಮೂಲಕ ಇಂಧನ ಕೋಶದ ಎಲೆಕ್ಟ್ರಿಕ್ ವಾಹನಗಳಿಗೆ ಸಾಂಪ್ರದಾಯಿಕ ವಾಹನಗಳಂತೆ ಬಳಸಬಹುದು. ಇಂದಿನ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳು ಅತ್ಯಂತ ಶಕ್ತಿಶಾಲಿ ಚಾರ್ಜರ್‌ಗಳನ್ನು ಬಳಸಿಯೂ ಸಂಪೂರ್ಣವಾಗಿ ಚಾರ್ಜ್ ಮಾಡಲು ಕನಿಷ್ಠ ಒಂದು ಗಂಟೆ ತೆಗೆದುಕೊಳ್ಳುತ್ತವೆ.

ಅಲ್ಲದೆ, ಬ್ಯಾಟರಿ-ಚಾಲಿತ EVಗಳು ಅವುಗಳ ಅಗಾಧ ಬ್ಯಾಟರಿ ಪ್ಯಾಕ್‌ನಿಂದ ಸಾಮಾನ್ಯವಾಗಿ ಭಾರವನ್ನು ಹೆಚ್ಚಿಸುತ್ತವೆ. ಇದರಿಂದ ಕೆಲ ಸಂದರ್ಭಗಳಲ್ಲಿ ಕಾರಿಗೆ ಹಾನಿಯನ್ನುಂಟಾಗಬಹುದು. ಆದರೆ ಹೈಡ್ರೋಜನ್ ಹಗುರವಾಗಿರುವುದರಿಂದ ವಾಹನಗಳಿಗೆ ನಿಮಿಷಗಳಲ್ಲಿ ಹೈಡ್ರೋಜನ್ ಅನ್ನು ತುಂಬಬಹುದು, ಇದು ಟ್ರಕ್ ಮತ್ತು ಬಸ್‌ಗಳಂತಹ ದೂರದ ಪ್ರಯಾಣ ಮಾಡುವ ವಾಹನಗಳಿಗೆ ಶಕ್ತಿ ತುಂಬಲು ಕಾರ್ಯಸಾಧ್ಯವಾದ ಆಯ್ಕೆಯಾಗಿದೆ.

ಹೈಡ್ರೋಜನ್‌ನ ಹೆಚ್ಚುವರಿ ಪ್ರಯೋಜನವು ಅದರ ಉತ್ಪಾದನೆಯೇ ಆಗಿದೆ, ಏಕೆಂದರೆ ಅದನ್ನು ನವೀಕರಿಸಬಹುದಾದ ಶಕ್ತಿ ಮೂಲಗಳಾದ ಬಯೋಮಾಸ್ ಅನ್ನು ಬಳಸಿ ಉತ್ಪಾದಿಸಬಹುದು, ಇದು ಮಾರುಕಟ್ಟೆಯಲ್ಲಿನ ಇತರ ಇಂಧನ ಮೂಲಗಳಿಗಿಂತ ಹೆಚ್ಚು ಸಮರ್ಥನೀಯವಾಗಿದೆ. ಅಲ್ಲದೇ ಒಂದು ಕೆ.ಜಿ ಹೈಡ್ರೋಜನ್ ಬೆಲೆ ಒಂದು ಡಾಲರ್ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ. ಹೀಗೆ ಸುಮಾರು 70 ರೂಪಾಯಿಗೆ 120 ಕಿ.ಮೀ. ದೂರವನ್ನು ಕ್ರಮಿಸಬಹುದು.

ಟೊಯೋಟಾ ಮಿರೈ ಬಗ್ಗೆ ಮಾತನಾಡುವಯದಾದರೆ, ಇದರ ಮೊದಲ ಪರಿಕಲ್ಪನೆಯನ್ನು 2011ರಲ್ಲಿ ಟೋಕಿಯೋ ಮೋಟಾರ್ ಶೋನಲ್ಲಿ ಟೊಯೋಟಾ FCV-R ಎಂದು ಅನಾವರಣಗೊಳಿಸಿತ್ತು. ಇದಕ್ಕೂ ಮುಂಚೆ ಎಫ್‌ಸಿಇವಿ ತಂತ್ರಜ್ಞಾನದ ಆರಂಭಿಕ ಅಭಿವೃದ್ಧಿಯು 1992 ರಲ್ಲಿ ಪ್ರಾರಂಭವಾಗಿತ್ತು.

ಮೊದಲ ತಲೆಮಾರಿನ ಟೊಯೊಟಾ ಮಿರಾಯ್ ಎಫ್‌ಸಿಇವಿ ಅನ್ನು 2014 ರಿಂದ 2020 ರವರೆಗೆ ಉತ್ಪಾದಿಸಲಾಯಿತು. 335Nm ಟಾರ್ಕ್‌ನೊಂದಿಗೆ 152bhp ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ನಿರ್ಮಿಸಲಾಗಿತ್ತು. ಇದು ಒಟ್ಟು 122-ಲೀಟರ್ ಸಾಮರ್ಥ್ಯದ ಎರಡು ಹೈಡ್ರೋಜನ್ ಟ್ಯಾಂಕ್‌ಗಳನ್ನು ಹೊಂದಿದೆ.

1.6kWh ಬ್ಯಾಟರಿ ಪ್ಯಾಕ್ ಜೊತೆಗೆ ಈ ಸೆಟಪ್ ಮೊದಲ ತಲೆಮಾರಿನ ಟೊಯೋಟಾ ಮಿರೈಗೆ EPA (ಪರಿಸರ ಸಂರಕ್ಷಣಾ ಸಂಸ್ಥೆ) ಅಡಿಯಲ್ಲಿ 502kms ವ್ಯಾಪ್ತಿಯನ್ನು ನೀಡಿತ್ತು. ಎಫ್‌ಸಿಇವಿಗಳು ಉಪ-ಉತ್ಪನ್ನವಾಗಿ ನೀರನ್ನು ಉತ್ಪಾದಿಸುವುದರಿಂದ, ಟೊಯೋಟಾ ಮಿರೈ ಪ್ರತಿ 4kmsಗೆ 240ml ನೀರನ್ನು ಉತ್ಪಾದಿಸುತ್ತದೆ.

ಮೊದಲ ತಲೆಮಾರಿನ ಮಾದರಿಗಿಂತ ಭಿನ್ನವಾಗಿ, ಎರಡನೇ ತಲೆಮಾರಿನ ಟೊಯೊಟಾ ಮಿರಾಯ್ ಹಿಂಬದಿ-ಚಕ್ರ-ಡ್ರೈವ್ ಆಗಿದೆ. 300Nm ಟಾರ್ಕ್‌ನೊಂದಿಗೆ ಹೆಚ್ಚು ಶಕ್ತಿಶಾಲಿ 182bhp ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಬರುತ್ತದೆ. ಈ ವಾಹನವು 141-ಲೀಟರ್ ಹೈಡ್ರೋಜನ್ ಸಂಗ್ರಹಣೆಗಾಗಿ 3 ಹೈಡ್ರೋಜನ್ ಟ್ಯಾಂಕ್‌ಗಳನ್ನು ಹೊಂದಿದೆ.

ಈ ಸೆಟಪ್ ಎರಡನೇ ತಲೆಮಾರಿನ ಟೊಯೊಟಾ ಮಿರೈಗೆ ಇಪಿಎ ಸೈಕಲ್ ಅಡಿಯಲ್ಲಿ ಒಟ್ಟು 647kms ವರೆಗೆ ಹೆಚ್ಚುವರಿ ಶ್ರೇಣಿಯನ್ನು ನೀಡುತ್ತದೆ. ಅಲ್ಲದೆ, ಎರಡನೇ ತಲೆಮಾರಿನ ಟೊಯೊಟಾ ಮಿರೈ ಯುರೋ-ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ಸುರಕ್ಷತೆಯ ರೇಟಿಂಗ್ ಅನ್ನು ಗಳಿಸಿದೆ.

ಭಾರತದಲ್ಲಿ ಹೈಡ್ರೋಜನ್ ತುಂಬುವ ಮೂಲಸೌಕರ್ಯಗಳ ಕೊರತೆಯು ದೇಶದಲ್ಲಿ ಟೊಯೋಟಾ ಮಿರಾಯ್ ಮತ್ತು ಹುಂಡೈ ನೆಕ್ಸೊದಂತಹ ಎಫ್‌ಸಿಇವಿಗಳ ಬಿಡುಗಡೆಯನ್ನು ಮುಂದೂಡಬಹುದು. ಆದರೆ ಪ್ರಾಯೋಗಿಕ ಕಾರ್ಯವು ಭಾರತದಲ್ಲಿ ಎಫ್‌ಸಿಇವಿಗಳ ಭವಿಷ್ಯದ ಸಾಧ್ಯತೆಗಳನ್ನು ವೇಗಗೊಳಿಸಲಿವೆ. ಎಫ್‌ಸಿಇವಿಗಳು ಹೆಚ್ಚು ಸಮರ್ಥನೀಯ ಸಾರಿಗೆ ವಿಧಾನವಾಗಿದ್ದು, ಇವುಗಳ ಶಕ್ತಿಯ ಮೂಲವನ್ನು ಸಹ ಸಮರ್ಥನೀಯವಾಗಿಸಬಹುದು. ಜೊತೆಗೆ ಎಫ್‌ಸಿಇವಿಗೆ ಇಂಧನ ತುಂಬುವ ಸಮಯವು ಬಹುತೇಕ ಸಾಂಪ್ರದಾಯಿಕ ಕಾರಿಗೆ ಸಮಾನವಾಗಿರುತ್ತದೆ. ಈ ಎಫ್‌ಸಿಇವಿಗಳು ಲಾಂಗ್-ಡ್ರೈವ್ ವಾಹನಗಳಿಗಿಯೂ ಹೆಸರು ಮಾಡಲಿವೆ.