ಭಾರತದಲ್ಲಿ ಪೊಲೊ ಲೆಜೆಂಡ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಕಂಪನಿಯು ಭಾರತದಲ್ಲಿ ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾದ ಪೊಲೊ ಮೂಲಕ ಹಲವಾರು ದಾಖಲೆಗಳಿಗೆ ಕಾರಣವಾಗಿದ್ದು, ಭಾರತದಲ್ಲಿ ಪೊಲೊ ಮೊದಲ ಮಾದರಿಯನ್ನು ಬಿಡುಗಡೆ ಮಾಡಿ ಯಶಸ್ವಿ 12 ವರ್ಷ ಪೂರೈಸಿರುವ ಕಂಪನಿಯು ಪೊಲೊ ಪ್ರಿಯರಿಗಾಗಿ ಲೆಜೆಂಡ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಪೊಲೊ ಲೆಜೆಂಡ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

ಪೊಲೊ ಲೆಜೆಂಡ್ ವಿಶೇಷ ಮಾದರಿಯನ್ನು ಫೋಕ್ಸ್‌ವ್ಯಾಗನ್ ಕಂಪನಿಯು ಸೀಮಿತ ಅವಧಿಗಾಗಿ ಮಾತ್ರ ಬಿಡುಗಡೆ ಮಾಡಿದ್ದು, ಕೇವಲ 700 ಯುನಿಟ್ ಮಾತ್ರ ಉತ್ಪಾದನೆ ಮಾಡಲು ನಿರ್ಧರಿಸಿದೆ. ಹೀಗಾಗಿ ನಿಗದಿತ ಕಾರು ಮಾರಾಟದ ನಂತರ ಲೆಜೆಂಡ್ ಎಡಿಷನ್ ಮಾರಾಟ ಮುಕ್ತಾಯಗೊಳ್ಳಲಿದೆ.

ಪೊಲೊ ಲೆಜೆಂಡ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

ಹೊಸ ಪೊಲೊ ಲೆಜೆಂಡ್ ಮಾದರಿಯು ಜಿಟಿ ಟಿಎಸ್ಐ ಟಾಪ್ ಎಂಡ್ ಮಾದರಿಯನ್ನು ಆಧರಿಸಿ ಬಿಡುಗಡೆಗೊಂಡಿದ್ದು, ಹೊಸ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 10.25 ಲಕ್ಷ ಬೆಲೆ ಹೊಂದಿದೆ.

ಪೊಲೊ ಲೆಜೆಂಡ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

ಪೊಲೊ ಲೆಜೆಂಡ್ ಮಾದರಿಯಲ್ಲಿ ಕಂಪನಿಯು ಕೆಲವು ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ನೀಡಿದ್ದು, ಕಾರಿನ ಫೆಂಡರ್ ಮತ್ತು ಹಿಂಬದಿಯಲ್ಲಿ ಲೆಜೆಂಡ್ ಬೂಟ್ ಬ್ಯಾಜ್ಡ್ ಹೊಂದಿದೆ. ಹಾಗೆಯೇ ಹೊಸ ಮಾದರಿಯಲ್ಲಿ ಸೈಡ್ ಬಾಡಿ ಗ್ರಾಫಿಕ್ಸ್, ಬ್ಲ್ಯಾಕ್ ಟ್ರಂಕ್ ಗಾರ್ನಿಶ್, ಬ್ಲ್ಯಾಕ್ ರೂಫ್ ಫಾಯ್ಲ್ ಸೌಲಭ್ಯಗಳು ಮತ್ತಷ್ಟು ಸ್ಪೋರ್ಟಿ ಲುಕ್ ನೀಡಿದ್ದು, ದೇಶಾದ್ಯಂತ ಕಾರ್ಯನಿರ್ವಹಣೆಯಲ್ಲಿ 151 ಫೋಕ್ಸ್‌ವ್ಯಾಗನ್ ಡೀಲರ್ಸ್‌ಗಳಲ್ಲೂ ಹೊಸ ಕಾರು ಖರೀದಿಗೆ ಲಭ್ಯವಿದೆ.

ಪೊಲೊ ಲೆಜೆಂಡ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

ಇನ್ನು ಫೋಕ್ಸ್‌ವ್ಯಾಗನ್ ಕಂಪನಿಯು ಪೊಲೊ ಹ್ಯಾಚ್‌ಬ್ಯಾಕ್ ಮಾದರಿಯೊಂದಿಗೆ ಜಾಗತಿಕವಾಗಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಭಾರತದಲ್ಲೂ ಉತ್ತಮ ಬೇಡಿಕೆ ಹೊಂದಿರುವ ಪೊಲೊ ಕಾರು ಇತ್ತೀಚೆಗೆ ಪ್ರತಿಸ್ಪರ್ಧಿ ಮಾದರಿಗಳ ಅಬ್ಬರದ ನಡುವೆ ಬೇಡಿಕೆಯಲ್ಲಿ ಹಿನ್ನಡೆ ಅನುಭವಿಸುತ್ತಿದೆ.

ಪೊಲೊ ಲೆಜೆಂಡ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

ಈ ನಡುವೆ ಪೊಲೊ ಹೊಸ ತಲೆಮಾರಿನ ಮಾದರಿಯನ್ನು ಫೋಕ್ಸ್‌ವ್ಯಾಗನ್ ಕಂಪನಿಯು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದರೂ ಭಾರತದಲ್ಲಿ ಸದ್ಯಕ್ಕೆ ಹಳೆಯ ಮಾದರಿಯನ್ನೇ ಮಾರಾಟ ಮಾಡುತ್ತಿದ್ದು, ಪೊಲೊ ಮಾದರಿಯನ್ನು ಭಾರತದಲ್ಲಿ ಸ್ಥಗಿತಗೊಳಿಸುವ ಸುಳಿವು ನೀಡಿದೆ.

ಪೊಲೊ ಲೆಜೆಂಡ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

2010ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದ ಪೊಲೊ ಹ್ಯಾಚ್‌ಬ್ಯಾಕ್ ಮಾದರಿಯು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸದ್ಯ 6ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರಾಟಗೊಳ್ಳುತ್ತಿದ್ದು, ಭಾರತದಲ್ಲಿ ಸದ್ಯ ಪೊಲೊ ಕಾರು 5ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರಾಟಗೊಳ್ಳುತ್ತಿದೆ.

ಪೊಲೊ ಲೆಜೆಂಡ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಕಂಪನಿಯು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಳೆದ ವರ್ಷವೇ ಪೊಲೊ ಹೊಸ ತಲೆಮಾರಿನ ಆವೃತ್ತಿಯನ್ನು ಉನ್ನತೀಕರಿಸಿದ್ದರೂ ಭಾರತದಲ್ಲಿ ಮಾತ್ರ ಹಳೆಯ ಆವೃತ್ತಿಯ ಮಾರಾಟವನ್ನೇ ಮುಂದುವರಿಸಿದ್ದು, ಹೊಸ ತಲೆಮಾರಿನ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡದಿರಲು ನಿರ್ಧರಿಸಿದೆ ಎನ್ನಲಾಗಿದೆ.

ಪೊಲೊ ಲೆಜೆಂಡ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

ವರದಿಗಳ ಪ್ರಕಾರ ಪೊಲೊ ಕಾರು ಭಾರತದಲ್ಲಿ ಮುಂದಿನ ತಿಂಗಳು ಮೇ ಹೊತ್ತಿಗೆ ಅಧಿಕೃತವಾಗಿ ಉತ್ಪಾದನೆ ಸ್ಥಗಿತಗೊಳ್ಳುವ ಸಾಧ್ಯತೆಗಳಿದ್ದು, ಇದಕ್ಕೂ ಮುನ್ನ ಕಂಪನಿಯು ಲೆಜೆಂಡ್ ಎಡಿಷನ್ ಮೂಲಕ ಪೊಲೊ ಖರೀದಿಗಾಗಿ ಕೊನೆಯ ಅವಕಾಶ ನೀಡಿದೆ ಎನ್ನಲಾಗಿದೆ.

ಪೊಲೊ ಲೆಜೆಂಡ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

ಬದಲಾಗುತ್ತಿರುವ ಮಾರುಕಟ್ಟೆ ಬೇಡಿಕೆ ಆಧರಿಸಿ ಫೋಕ್ಸ್‌ವ್ಯಾಗನ್ ಕಂಪನಿಯು ಭಾರತದಲ್ಲಿ ಎಸ್‌ಯುವಿ ಮತ್ತು ಸೆಡಾನ್ ಮಾದರಿಗಳ ಮೇಲೆ ಹೆಚ್ಚಿನ ಗಮನಹರಿಸಲು ನಿರ್ಧರಿಸಿದ್ದು, ಪೊಲೊ ಹೊಸ ತಲೆಮಾರಿನ ಆವೃತ್ತಿಯ ಬಿಡುಗಡೆಯು ಭಾರತದಲ್ಲಿ ಹೆಚ್ಚಿನ ಮಟ್ಟದ ಬೆಲೆ ಪಡೆದುಕೊಳ್ಳುವ ಕಾರಣಕ್ಕೆ ಬಿಡುಗಡೆ ಯೋಜನೆಯಿಂದ ಹಿಂದೆ ಸರಿಯಲಾಗಿದೆಯೆಂತೆ.

ಪೊಲೊ ಲೆಜೆಂಡ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

ಪ್ರತಿಸ್ಪರ್ಧಿ ಮಾದರಿಗಳಿಗೆ ಅನುಗುಣವಾಗಿ ಫೀಚರ್ಸ್, ಎಂಜಿನ್ ಆಯ್ಕೆಯೊಂದಿಗೆ ಸ್ಥಳೀಯಕರಣ ಮಾಡಿದರೂ ಸಹ ಹೊಸ ತಲೆಮಾರಿನ ಪೊಲೊ ಮಾದರಿಯೂ ದುಬಾರಿಯಾಗುತ್ತಿರುವ ಕಾರಣಕ್ಕೆ ಹೊಸ ಕಾರು ಬಿಡುಗಡೆ ಮಾಡಲಾಗುತ್ತಿಲ್ಲ ಎನ್ನಲಾಗಿದೆ.

ಪೊಲೊ ಲೆಜೆಂಡ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

ಪೊಲೊ ಮಾದರಿಯು ಸದ್ಯ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಇದರಲ್ಲಿ 1.0-ಲೀಟರ್ ಎಂಪಿಐ ನ್ಯಾಚುರಲಿ ಆಸ್ಪೆರೆಟೆಡ್ ಮತ್ತು ಹೆಚ್ಚು ಶಕ್ತಿಶಾಲಿಯುಳ್ಳ 1.0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ.

ಪೊಲೊ ಲೆಜೆಂಡ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

ಆರಂಭಿಕ ಪೊಲೊ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 74 ಬಿಎಚ್‌ಪಿ ಮತ್ತು 95 ಎನ್ಎಂ ಟಾರ್ಕ್ ಅನ್ನು ಉತ್ಪಾದನಾ ಗುಣಹೊಂದಿದ್ದರೆ ಎರಡನೆಯ ಎಂಜಿನ್ ಮಾದರಿಯಾದ ಟರ್ಬೊ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್‌ನೊಂದಿಗೆ 109 ಬಿಎಚ್‌ಪಿ ಮತ್ತು 174 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಪೊಲೊ ಲೆಜೆಂಡ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

ಪೊಲೊ ಮಾದರಿಯು ಟ್ರೆಂಡ್‌ಲೈನ್, ಕಂಫರ್ಟ್‌ಲೈನ್, ಹೈಲೈನ್ ಪ್ಲಸ್ ಮತ್ತು ಜಿಟಿ ಮಾದರಿಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.45 ಲಕ್ಷದಿಂದ ಟಾಪ್ ಎಂಡ್ ಮಾದರಿಯು 10.25 ಲಕ್ಷಕ್ಕೆ ಮಾರಾಟಗೊಳ್ಳುತ್ತಿದ್ದು, ಮಾರುತಿ ಬಲೆನೊ, ಹುಂಡೈ ಐ20, ಟಾಟಾ ಅಲ್‌ಟ್ರೊಜ್ ಮತ್ತು ಹೋಂಡಾ ಜಾಝ್ ಸೇರಿದಂತೆ ಇತರೆ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳೊಂದಿಗೆ ಸ್ಪರ್ಧಿಸುತ್ತದೆ.

ಪೊಲೊ ಲೆಜೆಂಡ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

ಆದರೆ ಹೊಸ ತಲೆಮಾರಿನ ಪೊಲೊ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದರೆ ಪ್ರಸ್ತುತ ಮಾದರಿಗಿಂತಲೂ ರೂ. 1.50 ಲಕ್ಷದಿಂದ ರೂ.2 ಲಕ್ಷದಷ್ಟು ದುಬಾರಿಯಾಗಬಹುದಾಗಿದ್ದೂ, ಪ್ರತಿಸ್ಪರ್ಧಿ ಮಾದರಿಗಿಂತೂ ಹೆಚ್ಚಿನ ದರ ಹೊಂದಿದರೆ ಸಹಜವಾಗಿ ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ಪೊಲೊ ಲೆಜೆಂಡ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

ಹೀಗಾಗಿ ಮುಂದಿನ ಕೆಲ ದಿನಗಳ ವರೆಗೆ ಹಳೆಯ ತಲೆಮಾರಿನ ಪೊಲೊ ಮಾದರಿಯನ್ನೇ ಮಾರಾಟ ಮಾಡಿ ಸ್ಥಗಿತಗೊಳಿಸಲು ನಿರ್ಧರಿಸಿರುವ ಫೋಕ್ಸ್‌ವ್ಯಾಗನ್ ಕಂಪನಿಯು ಪೊಲೊ ಜೊತೆಗೆ ವೆಂಟೊ ಮಾದರಿಯನ್ನು ಸಹ ಉತ್ಪಾದನೆಯಿಂದ ಸ್ಥಗಿತಗೊಳಿಸುತ್ತಿದೆ.

ಪೊಲೊ ಲೆಜೆಂಡ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

ವೆಂಟೊ ಬದಲಾಗಿ ಭಾರತದಲ್ಲಿ ಸ್ಕೋಡಾ ಜೊತೆಗೂಡಿ ಹೊಸ ಸೆಡಾನ್ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ವೆಂಟೊ ಬದಲಾಗಿ ವರ್ಟಸ್ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ. ವರ್ಟಸ್ ಮಾದರಿಯು ಸ್ಕೋಡಾ ಕಂಪನಿಯು ಹೊಸದಾಗಿ ಬಿಡುಗಡೆ ಮಾಡುತ್ತಿರುವ ಸ್ಲಾವಿಯಾ ಮಾದರಿಯನ್ನು ಆಧರಿಸಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ಆಧರಿಸಿರುವ ಎರಡು ಕಾರು ತಾಂತ್ರಿಕವಾಗಿ ಒಂದೇ ಆಗಿದ್ದರೂ ಬ್ರಾಂಡ್‌ಗೆ ಅನುಗುಣವಾಗಿ ಬದಲಿ ಹೆಸರಿನೊಂದಿಗೆ ಕೆಲವು ಹೊಸ ವಿನ್ಯಾಸಗಳನ್ನು ಪಡೆದುಕೊಳ್ಳಲಿವೆ.

ಪೊಲೊ ಲೆಜೆಂಡ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

ಭಾರತದಲ್ಲಿ ಹೊಸ ಯೋಜನೆ ಅಡಿ ಸ್ಕೋಡಾ ಮತ್ತು ಫೋಕ್ಸ್‌ವ್ಯಾಗನ್ ಕಂಪನಿಗಳು ಈಗಾಗಲೇ ಮೂರು ಹೊಸ ಕಾರುಗಳನ್ನು ಬಿಡುಗಡೆ ಮಾಡಿದ್ದು, ಹೊಸ ಯೋಜನೆ ಅಡಿ ಕುಶಾಕ್ ಮತ್ತು ಟೈಗುನ್ ಕಂಪ್ಯಾಕ್ಟ್ ಎಸ್‍ಯುವಿ, ಸ್ಲಾವಿಯಾ ಸೆಡಾನ್ ನಂತರ ವರ್ಟಸ್ ಸೆಡಾನ್ ಮಾದರಿಯನ್ನು ಬಿಡುಗಡೆ ಮಾಡಲಾಗುತ್ತಿದೆ.

Most Read Articles

Kannada
English summary
Volkswagen polo legend edition launched in india at rs 10 25 lakh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X