Auto Expo 2023: ಹೊಸ ಬಣ್ಣದ ಆಯ್ಕೆ ಪಡೆದುಕೊಂಡ ಬಿವೈಡಿ Atto 3.. ಬರೋಬ್ಬರಿ 521 Km ಮೈಲೇಜ್ ನೀಡುತ್ತೆ!

ಚೀನಾದ ಪ್ರಮುಖ ಇವಿ ಕಂಪನಿ BYD (ಬಿಲ್ಡ್ ಯುವರ್ ಡ್ರೀಮ್ಸ್) ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ತನ್ನ 'Atto 3' ಕಾರಿನ ಸೀಮಿತ ಆವೃತ್ತಿಯನ್ನು (ಕೇವಲ 1,200 ಯೂನಿಟ್‌ಗಳು ಮಾತ್ರ) ಹೊಸ ಫಾರೆಸ್ಟ್ ಗ್ರೀನ್ ಬಣ್ಣದ ಆಯ್ಕೆಯಲ್ಲಿ ಪ್ರದರ್ಶಿಸಿದೆ. ಈ ಕಾರಿನ ಬೆಲೆ ಬರೋಬ್ಬರಿ ರೂ.34.49 ಲಕ್ಷ ಇದೆ.

Atto 3ರ ವಿಶೇಷ ಆವೃತ್ತಿಯಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಿಲ್ಲ. ಇದು, 12.8-ಇಂಚಿನ ತಿರುಗುವ ಟಚ್‌ಸ್ಕ್ರೀನ್, 6-ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ವಿಹಂಗಮ ಸನ್‌ರೂಫ್‌, Android Auto ಮತ್ತು Apple CarPlay, ಐದು-ಇಂಚಿನ ಡಿಜಿಟಲ್ ಇನ್ಸ್ರುಮೆಂಟ್ ಕ್ಲಸ್ಟರ್, ಎಂಟು-ಸ್ಪೀಕರ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಹಾಗೂ ಕೀ ಲೆಸ್ ಎಂಟ್ರಿ ಅಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಬಹುದು.

Auto Expo 2023: ಹೊಸ ಬಣ್ಣದ ಆಯ್ಕೆ ಪಡೆದುಕೊಂಡ ಬಿವೈಡಿ Atto 3

ಬ್ಯಾಟರಿ, ಎಲೆಕ್ಟ್ರಿಕ್ ಮೋಟಾರ್ ಮತ್ತು ರೇಂಜ್:
ಈ ಬಿವೈಡಿ Atto 3, 60.48kWh ಬ್ಯಾಟರಿ ಪ್ಯಾಕ್ ಹೊಂದಿದ್ದು, 204 PS ಗರಿಷ್ಠ ಪವರ್ ಮತ್ತು 310Nm ಪೀಕ್ ಟಾರ್ಕ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಚಾಲಿತವಾಗಲಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿಯು ಸಂಪೂರ್ಣ ಚಾರ್ಜ್ ನಲ್ಲಿ ಬರೋಬ್ಬರಿ 521 ಕಿ.ಮೀ ರೇಂಜ್ ನೀಡಲಿದೆ. ಫ್ರಂಟ್-ವೀಲ್ ಡ್ರೈವ್ ಆಯ್ಕೆಯನ್ನು ಹೊಂದಿದ್ದು, 7.3 ಸೆಕೆಂಡುಗಳಲ್ಲಿ 0 - 100kmph ವೇಗವನ್ನು ಪಡೆಯಲಿದೆ.

ಇದು ಮೂರು ಚಾರ್ಜಿಂಗ್ ಆಯ್ಕೆಗಳೊಂದಿಗೆ ಖರೀದಿಗೆ ಸಿಗಲಿದೆ. 7kW AC ಚಾರ್ಜರ್ ಸುಮಾರು 10 ಗಂಟೆಗಳಲ್ಲಿ ಬ್ಯಾಟರಿಯನ್ನು ಫುಲ್ ಚಾರ್ಜ್ ಮಾಡಬಲ್ಲದು. 80kW DC ಚಾರ್ಜರ್ ಬ್ಯಾಟರಿಯನ್ನು 50 ನಿಮಿಷಗಳಲ್ಲಿ ಶೇಕಡ 0 - 80 ಚಾರ್ಜ್ ಮಾಡುವ ಸಾಮರ್ಥ್ಯ ಹೊಂದಿದ್ದು, ಜೊತೆಗೆ 3kW AC ಪೋರ್ಟಬಲ್ ಚಾರ್ಜರ್ ಆಯ್ಕೆಯು ಇದೆ. ಸುರಕ್ಷತೆ ದೃಷ್ಟಿಯಿಂದ ಏಳು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ADAS, ಹಿಲ್ ಡಿಸೆಂಟ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

Auto Expo 2023: ಹೊಸ ಬಣ್ಣದ ಆಯ್ಕೆ ಪಡೆದುಕೊಂಡ ಬಿವೈಡಿ Atto 3

ಅಲ್ಲದೆ, ಆಟೋ ಎಕ್ಸ್‌ಪೋದಲ್ಲಿ ಅನಾವರಗೊಂಡಿರುವ BYD ಸೀಲ್ ಎಲೆಕ್ಟ್ರಿಕ್ ಸೆಡಾನ್ 700 km ರೇಂಜ್ ನೀಡುವ ಸಾಮರ್ಥ್ಯ ಹೊಂದಿದೆ. ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಟೆಸ್ಲಾ ಮಾಡೆಲ್ 3 ಕಾರಿಗೆ ಪ್ರತಿಸ್ಪರ್ಧಿಯಾಗಿದ್ದು, ಈ ವರ್ಷಾಂತ್ಯದೊಳಗೆ ಸೀಲ್‌ ಎಲೆಕ್ಟ್ರಿಕ್ ಸೆಡಾನ್ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಸಿಂಗಲ್-ಮೋಟಾರ್ ಹೊಂದಿರುವ ಸೀಲ್, 204 hp ಪವರ್ ಉತ್ಪಾದಿಸುತ್ತದೆ. 5.7 ಸೆಕೆಂಡ್‌ಗಳಲ್ಲಿ 0-100kph ವೇಗವನ್ನು ಪಡೆಯಲಿದೆ. ದೊಡ್ಡ ಬ್ಯಾಟರಿ 312hp ಪವರ್ ಉತ್ಪಾದಿಸುತ್ತದೆ.

Auto Expo 2023: ಹೊಸ ಬಣ್ಣದ ಆಯ್ಕೆ ಪಡೆದುಕೊಂಡ ಬಿವೈಡಿ Atto 3

BYD ಸೀಲ್, ಸೆಂಟ್ರಲ್ ಕನ್ಸೋಲ್‌ನಲ್ಲಿ ತಿರುಗುವ 15.6-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೆಡ್-ಅಪ್ ಡಿಸ್ಪ್ಲೇಯನ್ನು ಪಡೆದಿದೆ. ಫ್ಲೋಟಿಂಗ್ ಟಚ್‌ಸ್ಕ್ರೀನ್ ಸೆಂಟ್ರಲ್ AC ವೇಟ್ ಗಳಿಂದ ಸುತ್ತುವರೆದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ BYD ಇಂಡಿಯಾದ ಸಂಜಯ್ ಗೋಪಾಲಕೃಷ್ಣನ್, 'ಎಲೆಕ್ಟ್ರಿಕ್ ಸೆಡಾನ್ BYD ಸೀಲ್ ಅನ್ನು ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿದ್ದು, ಭವಿಷ್ಯದ ಇವಿ ತಂತ್ರಜ್ಞಾನಗಳೊಂದಿಗೆ ದೇಶದ ಎಲೆಕ್ಟ್ರಿಕ್ ವಾಹನ ವಿಭಾಗದ ಬೆಳವಣಿಗೆಗೆ ನಮ್ಮ ಕೊಡುಗೆ ನೀಡಲಿದ್ದೇವೆ' ಎಂದು ಹೇಳಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Auto expo 2023 byd atto 3 gets new color options details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X