2023ರ ಆಟೋ ಎಕ್ಸ್‌ಪೋ: 550 ಕಿ.ಮೀ ರೇಂಜ್ ನೀಡುವ ಮಾರುತಿ ಎಲೆಕ್ಟ್ರಿಕ್ ಕಾನ್ಸೆಪ್ಟ್ ಎಸ್‌ಯುವಿ ಅನಾವರಣ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ 2023ರ ಆಟೋ ಎಕ್ಸ್‌ಪೋದಲ್ಲಿ ತನ್ನ ಇವಿಎಕ್ಸ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಎಸ್‌ಯುವಿಯನ್ನು ಪ್ರದರ್ಶಿಸಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಬೇಡಿಕೆಯನ್ನು ಪಡೆಯುತ್ತಿರುವ ವೇಳೆಯಲ್ಲಿ ಮಾರುತಿ ಸುಜುಕಿ ಎಲೆಕ್ಟ್ರಿಕ್ ಕಾರುಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತಿದೆ.

ಮಾರುತಿ ಕಾರುಗಳು ಯಾವಾಗಲೂ ಕೈಗೆಟುಕುವ ಬೆಲೆಗಳಿಂದ ಹೆಚ್ಚು ಜನಪ್ರಿಯತೆ ಗಳಿಸಿದೆ. ಹೊಸ ಮಾರುತಿ ಎಲೆಕ್ಟ್ರಿಕ್ ಕಾರು ವೈಶಿಷ್ಟ್ಯಗಳು, ರೇಂಜ್ ಮತ್ತು ಬೆಲೆಯ ವಿಷಯದಲ್ಲಿ ಸಮತೋಲಿತ ವಿಧಾನವು ಸಾಧ್ಯತೆಯಿದೆ. 2023ರ ಮಾರುತಿ EVX ಎಲೆಕ್ಟ್ರಿಕ್ ಎಸ್‍ಯುವಿಯು 60 kWh ಬ್ಯಾಟರಿ ಪ್ಯಾಕ್‌ನೊಂದಿಗೆ 550 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಹೊಸ ಮಾರುತಿ ಎಲೆಕ್ಟ್ರಿಕ್ ಎಸ್‍ಯುವಿಯು ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಎಸ್‍ಯುವಿಗೆ ಪೈಪೋಟಿಯಾಗಿ ಬರಲಿದೆ. ಹೊಸ ಮಾರುತಿ ಇವಿಯ ಉತ್ಪಾದನೆ-ಸಿದ್ಧ ಆವೃತ್ತಿಯು 2025ರ ಆರಂಭದಲ್ಲಿ (ಬಹುಶಃ ಜನವರಿ ಅಥವಾ ಫೆಬ್ರವರಿಯಲ್ಲಿ) ಮಾರುಕಟ್ಟೆ ಬಿಡುಗಡೆಗೆಯಾಗಬಹುದು.

ಈ ಮಾದರಿಯನ್ನು ಟೊಯೊಟಾದೊಂದಿಗೆ ಸಹ-ಅಭಿವೃದ್ಧಿಪಡಿಸಲಾಗುವುದು ಮತ್ತು ಜಪಾನಿನ ವಾಹನ ತಯಾರಕರು ಭಾರತದಲ್ಲಿ ಅದರ ರಿ-ಬ್ಯಾಡ್ಜ್ ಆವೃತ್ತಿಯನ್ನು ಮಾರಾಟ ಮಾಡಲಿದ್ದಾರೆ. ಹೊಸ ಮಾರುತಿ ಎಲೆಕ್ಟ್ರಿಕ್ ಎಸ್‍ಯುವಿಯು ಮಾರುತಿ ಸುಜುಕಿಯ ಗುಜರಾತ್ ಮೂಲದ ಘಟಕದಲ್ಲಿ ತಯಾರಿಸಲಾಗುವುದು.4.2 ಮೀಟರ್‌ಗಿಂತಲೂ ಹೆಚ್ಚು ಅಳತೆಯನ್ನು ಹೊಂದಿದ್ದು, ಹೊಸ ಮಾರುತಿ ಇವಿಎಕ್ಸ್ ಎಸ್‌ಯುವಿ ಕಾನ್ಸೆಪ್ಟ್ ಮಾದರಿಯು ಹ್ಯುಂಡೈ ಕ್ರೆಟಾದಷ್ಟು ದೊಡ್ಡದಾಗಿ ಕಾಣುತ್ತದೆ. ಇದು 2700mm ಉದ್ದದ ವೀಲ್‌ಬೇಸ್ ಅನ್ನು ಹೊಂದಿದ್ದು, ಬ್ಯಾಟರಿ ಪ್ಯಾಕ್ ಅನ್ನು ಸರಿಹೊಂದಿಸಲು ಸಾಕಷ್ಟು ಜಾಗವನ್ನು ಸೃಷ್ಟಿಸುತ್ತದೆ.

eVX ಎಲೆಕ್ಟ್ರಿಕ್ ಕಾನ್ಸೆಪ್ಟ್ ಎಸ್‌ಯುವಿ ಮಾದರಿಯು ಟೊಯೊಟಾದ 40PL ಜಾಗತಿಕ ಆರ್ಕಿಟೆಕ್ಚರ್ ಪಡೆದ 27PL ಪ್ಲಾಟ್‌ಫಾರ್ಮ್‌ಗೆ ಆಧಾರವಾಗಿದೆ. ಮುಂಭಾಗದಲ್ಲಿ, ಇದು ಆಕರ್ಷಕ ಗ್ರಿಲ್ ಮತ್ತು LED DRL ಗಳೊಂದಿಗೆ ನಯವಾದ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಈ ಇವಿ ಕಾನ್ಸೆಪ್ಟ್ ಮಾದರಿಯು ಪ್ರಮುಖವಾದ ವ್ಹೀಲ್ ಅರ್ಚಾರ್ ಗಳು, ಅಲಾಯ್ ವ್ಹೀಲ್ ಗಳು, ಕೂಪ್ ತರಹದ ರೂಫ್ ಮತ್ತು ಸಣ್ಣ ಓವರ್‌ಹ್ಯಾಂಗ್‌ನೊಂದಿಗೆ ತೀಕ್ಷ್ಣವಾಗಿ ವಿನ್ಯಾಸಗೊಳಿಸಲಾದ ಹಿಂಭಾಗವನ್ನು ಸಹ ಹೊಂದಿದೆ.

ಮಾರುತಿ ಎಲೆಕ್ಟ್ರಿಕ್ ಎಸ್‌ಯುವಿಯ ಒಳಭಾಗವು ನಮಗೆ ಇನ್ನೂ ಬಹಿರಂಗವಾಗಿಲ್ಲ. ಕಾರು ತಯಾರಕರು ಕನಿಷ್ಠ ವಿನ್ಯಾಸ ವಿಧಾನವನ್ನು ಅಳವಡಿಸಿಕೊಳ್ಳುವ ಸಾಧ್ಯತೆಯಿದೆ. ಇದನ್ನು ಕೆಲವು ಸುಧಾರಿತ ಫೀಚರ್ಸ್ ಮತ್ತು ತಂತ್ರಜ್ಙಾನಗಳದಿಂದ ಕೂಡಿರುತ್ತದೆ. ಕಂಪನಿಯು ತನ್ನ ಪವರ್‌ಟ್ರೇನ್ ವಿಶೇಷಣಗಳನ್ನು ಬಹಿರಂಗಪಡಿಸಿದೆ. ಹೊಸ ಮಾರುತಿ ಎಲೆಕ್ಟ್ರಿಕ್ ಎಸ್‍ಯುವಿಯು 0kWh ಬ್ಯಾಟರಿ ಪ್ಯಾಕ್‌ನೊಂದಿಗೆ ಲಭ್ಯವಾಗಲಿದ್ದು, 550 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಮಾರುತಿ ಸುಜುಕಿ LFP (ಲಿಥಿಯಂ ಐರನ್ ಫಾಸ್ಫೇಟ್) ಬ್ಲೇಡ್ ಸೆಲ್ ಬ್ಯಾಟರಿಗಳನ್ನು ಚೀನೀ ಬ್ಯಾಟರಿ ಪೂರೈಕೆದಾರ BYD ನಿಂದ ಪಡೆಯುತ್ತದೆ.

ಬ್ಲೇಡ್ ಸೆಲ್ ತಂತ್ರಜ್ಞಾನದೊಂದಿಗೆ, ಕಾರು ತಯಾರಕರು ಅತ್ಯುತ್ತಮ ಪ್ಯಾಕೇಜಿಂಗ್, ಹೆಚ್ಚಿನ ಶ್ರೇಣಿ ಮತ್ತು ಸ್ಪರ್ಧಾತ್ಮಕ ಬೆಲೆಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ಇದನ್ನು 2WD (ಟೂ-ವೀಲ್ ಡ್ರೈವ್) ಮತ್ತು AWD (ಆಲ್-ವೀಲ್ ಡ್ರೈವ್) ವ್ಯವಸ್ಥೆಗಳೊಂದಿಗೆ ನೀಡಬಹುದು. ಇನ್ನು ಮುಂಬರುವ ಮಾರುತಿ ಎಲೆಕ್ಟ್ರಿಕ್ ಕಾರುಮೂಲ ಮಾದರಿಗೆ ಸುಮಾರು 13 ಲಕ್ಷ ರೂ ಮತ್ತು ಟಾಪ್-ಎಂಡ್ ರೂಪಾಂತರಕ್ಕೆ ರೂ 15 ಲಕ್ಷದವರೆಗೆ ಬೆಲೆಯಿರುವ ಸಾಧ್ಯತೆಯಿದೆ. ಆಟೋ ಎಕ್ಸ್‌ಪೋ 2023 ರ ಎಲ್ಲಾ ನವೀಕರಣಗಳು ಮತ್ತು ಮಾರುತಿ ಸುಜುಕಿ ಪೆವಿಲಿಯನ್‌ನಲ್ಲಿ ಪ್ರದರ್ಶಿಸಲಿದೆ.

ಗ್ರಾಹಕರ ಆದ್ಯತೆಗಳಿಗೆ ಅನುಗುಣವಾಗಿ, ಮಾರುತಿ ತನ್ನ EVX ಎಲೆಕ್ಟ್ರಿಕ್ SUV ಮತ್ತು ಇತರ ಎಲೆಕ್ಟ್ರಿಕ್ ಕಾರುಗಳಿಗಾಗಿ ಸಂಪೂರ್ಣವಾಗಿ ಹೊಸ ವಿನ್ಯಾಸದ ತತ್ವವನ್ನು ಬಳಸಿಕೊಳ್ಳುತ್ತದೆ. ಇದು ಟಾಟಾ ಮತ್ತು ಮಹೀಂದ್ರಾದಂತಹ ಪ್ರತಿಸ್ಪರ್ಧಿಗಳೊಂದಿಗೆ ಸ್ಪರ್ಧಿಸಲು ಸಹಾಯ ಮಾಡುತ್ತದೆ, ಗಮನಾರ್ಹ ಶೇಕಡಾವಾರು ಗ್ರಾಹಕರು ಯುವ ಖರೀದಿದಾರರಾಗಿರುತ್ತಾರೆ, ಅಲ್ಲಿ ವಿನ್ಯಾಸದಲ್ಲಿನ ನಾವೀನ್ಯತೆ ಹೆಚ್ಚು ಪ್ರಸ್ತುತವಾಗುತ್ತದೆ. ಏರೋಡೈನಾಮಿಕ್ಸ್ ಒಂದು ಪ್ರಮುಖ ಫೋಕಸ್ ಪ್ರದೇಶವಾಗಿದೆ, ಏಕೆಂದರೆ ಇದು ಲುಕ್ ಮತ್ತು ಒಟ್ಟಾರೆ ರೇಂಜ್ ಅನ್ನು ಹೆಚ್ಚಿಸುತ್ತದೆ.

ಇನ್ನು ದೇಶದಲ್ಲಿ ಇಂಧನ ಬೆಲೆಗಳು ಗಗನಕ್ಕೆರಿದೆ. ಏರುತ್ತಿರುವ ಇಂಧನ ಬೆಲೆಗಳಿಂದ ಪಾರಾಗಲು ಜನರು ಪರ್ಯಾಯ ಆಯ್ಕೆಗಳನ್ನು ಹುಡುಕಲು ಆರಂಭಿಸಿದ್ದಾರೆ. ಇದರಿಂದ ಜನರು ನಿಧಾನವಾಗಿ ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನಗಳು ದೇಶಿಯ ಮಾರುಕಟ್ಟೆಯಲ್ಲಿ ತಿಂಗಳಿನಿಂದ ತಿಂಗಳ ಬೆಳವಣಿಗೆಯನ್ನು ಸ್ಥಿರವಾಗಿ ದಾಖಲಿಸುತ್ತಿವೆ. ಈ ವೇಳೆ ಟಾಟಾ ಭಾರತೀಯ ಮಾರುಕಟ್ಟೆಯ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಪಾರುಪತ್ಯ ಮುಂದುವರೆಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಪೈಪೋಟಿಯಾಗಿ ಮಾರುತಿ ಸುಜುಕಿ ಎಲೆಕ್ಟ್ರಿಕ್ ಕಾರುಗಳ ವಿಭಾಗದ ಅಖಾಡಕ್ಕೆ ಇಳಿಯುತ್ತಿದೆ.

Most Read Articles

Kannada
English summary
Auto expo 2023 maruti suzuki evx concept unveiled specs range details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X