ಆಟೋ ಎಕ್ಸ್‌ಪೋದಲ್ಲಿ ಬರೋಬ್ಬರಿ 700 ಕಿ.ಮೀ ಮೈಲೇಜ್ ನೀಡುವ BYD ಎಲೆಕ್ಟ್ರಿಕ್ ಸೆಡಾನ್ ಪ್ರದರ್ಶನ

ಚೀನಾದ ಪ್ರಮುಖ ಇವಿ ಬ್ರ್ಯಾಂಡ್ BYD ಅಥವಾ ಬಿಲ್ಡ್ ಯುವರ್ ಡ್ರೀಮ್ಸ್, ದೆಹಲಿಯಲ್ಲಿ ನಡೆಯಲಿರುವ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಹೊಸ ಸೀಲ್ ಸೆಡಾನ್ ಅನ್ನು ಪ್ರದರ್ಶಿಸಲಿದೆ. BYD ಸೀಲ್ ಯುರೋಪ್ ಮತ್ತು ಚೀನಾದಂತಹ ಮಾರುಕಟ್ಟೆಗಳಲ್ಲಿ ಜನಪ್ರಿಯ ಟೆಸ್ಲಾ ಮಾಡೆಲ್ 3ಗೆ ಭಾರೀ ಪೈಪೋಟಿ ನೀಡುತ್ತಿದೆ.

BYD ಸೀಲ್ 4,800ಎಂಎಂ ಉದ್ದ, 1875ಎಂಎಂ ಅಗಲ, 1460ಎಂಎಂ ಎತ್ತರ ಹಾಗೂ 2,920ಎಂಎಂ ವೀಲ್‌ಬೇಸ್ ಹೊಂದಿದೆ. ಇದು ಟೆಸ್ಲಾದ ಮಾಡೆಲ್ 3ಕ್ಕೆ ಹೋಲಿಸಿದರೆ, 106ಎಂಎಂ ಉದ್ದ, 17ಎಂಎಂ ಎತ್ತರ, ವೀಲ್‌ಬೇಸ್ 45ಎಂಎಂ ಹೆಚ್ಚಾಗಿದೆ. ವಿನ್ಯಾಸದ ವಿಷಯದಲ್ಲಿ ಸೀಲ್ 2021ರಿಂದ ಓಷನ್ ಎಕ್ಸ್ ಪರಿಕಲ್ಪನೆಯನ್ನು ಆಧರಿಸಿದ್ದು, ಕೂಪ್ ತರಹದ ಗಾಜಿನ ಮೇಲ್ಛಾವಣಿ, ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು, ನಾಲ್ಕು ಬೂಮರಾಂಗ್-ಆಕಾರದ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳು, ಸ್ಪ್ಲಿಟ್ ಹೆಡ್‌ಲ್ಯಾಂಪ್ ವಿನ್ಯಾಸ ಮತ್ತು ಹಿಂಭಾಗದಲ್ಲಿ ಫುಲ್-ವಿಡ್ತ್ ಎಲ್ಇಡಿ ಲೈಟ್ ಬಾರ್‌ನಂತಹ ವಿನ್ಯಾಸವನ್ನು ಹೊಂದಿದೆ.

Atto 3 ಮತ್ತು e6ನಂತೆ, BYD ಸೀಲ್, ಸೆಂಟ್ರಲ್ ಕನ್ಸೋಲ್‌ನಲ್ಲಿ ತಿರುಗುವ 15.6-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇಯನ್ನು ಸಹ ಪಡೆದಿದ್ದು, 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೆಡ್-ಅಪ್ ಡಿಸ್ಪ್ಲೇಯನ್ನು ಹೊಂದಿದೆ. ಫ್ಲೋಟಿಂಗ್ ಟಚ್‌ಸ್ಕ್ರೀನ್ ಸೆಂಟ್ರಲ್ AC ವೇಟ್ ಗಳಿಂದ ಸುತ್ತುವರೆದಿದ್ದು, ಡ್ರೈವ್ ಸೆಲೆಕ್ಟರ್ ಮತ್ತು ಅದರ ಕೆಳಗಿನ ವಿವಿಧ ಡ್ರೈವ್ ಮೋಡ್‌ಗಳನ್ನು ಆಯ್ಕೆ ಮಾಡಲು ಸ್ಕ್ರಾಲ್ ವೀಲ್ ಹೊಂದಿದೆ. ಸೆಂಟರ್ ಕನ್ಸೋಲ್ ಬಿಸಿಯಾದ ವಿಂಡ್‌ಸ್ಕ್ರೀನ್, ಆಡಿಯೊ ಸಿಸ್ಟಮ್‌ಗಾಗಿ ವಾಲ್ಯೂಮ್ ಕಂಟ್ರೋಲ್ ಮತ್ತು ಎರಡು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಸೀಲ್ ಕಾರಿನಲ್ಲಿ BYD ಕಂಪನಿ ಬ್ಲೇಡ್ ಬ್ಯಾಟರಿ ತಂತ್ರಜ್ಞಾನವನ್ನು ಬಳಸುತ್ತಿದೆ. ಇದು ಭಾರತದಲ್ಲಿ ಮಾರುತಿ ಸುಜುಕಿ ಮತ್ತು ಟೊಯೊಟಾ ಸೇರಿದಂತೆ ಇತರೆ ಸಾಗರೋತ್ತರದಲ್ಲಿ ಇವಿಗಳಲ್ಲಿ ಬಳಕೆಯಲ್ಲಿದೆ. ಸೀಲ್ BYDಯ ಇ-ಪ್ಲಾಟ್‌ಫಾರ್ಮ್ 3.0 ಅನ್ನು ಆಧರಿಸಿದ್ದು, ಎರಡು ಬ್ಯಾಟರಿ ಪ್ಯಾಕ್‌ಗಳೊಂದಿಗೆ ಬರುತ್ತದೆ. ಅವುಗಳೆಂದರೆ, 61.4kWh ಯುನಿಟ್ ಮತ್ತು 82.5kWh ಯುನಿಟ್. ಮೊದಲನೆಯದು ಚೀನಾ ಲೈಟ್-ಡ್ಯೂಟಿ ವೆಹಿಕಲ್ ಟೆಸ್ಟ್ ಸೈಕಲ್‌ನಲ್ಲಿ (CLTC-ಸೈಕಲ್) 550 ಕಿ.ಮೀ ರೇಂಜ್ ಹೊಂದಿದೆ. ಆದರೆ, ಎರಡನೆಯದು ಅದೇ 700 ಕಿ.ಮೀ ರೇಂಜ್ ನೀಡಲಿದೆ.

ಸೀಲ್ ಸೆಡಾನ್ ಸಿಂಗಲ್-ಮೋಟರ್ ಮತ್ತು ಡ್ಯುಯಲ್-ಮೋಟಾರ್ ಪವರ್‌ಟ್ರೇನ್‌ಗಳ ಆಯ್ಕೆಯನ್ನು ಹೊಂದಿದೆ. ಸಿಂಗಲ್ ಮೋಟರ್ ಅನ್ನು ಎರಡು ಬ್ಯಾಟರಿಗಳಿಗೆ ಜೋಡಿಸಬಹುದಾದರೂ, ಎರಡನೆಯದನ್ನು ದೊಡ್ಡ ಬ್ಯಾಟರಿಯೊಂದಿಗೆ ಮಾತ್ರ ಅಳವಡಿಕೆ ಮಾಡಬಹುದು. ರೇರ್-ವೀಲ್ ಡ್ರೈವ್, ಸಿಂಗಲ್-ಮೋಟಾರ್ ಹೊಂದಿರುವ ಸೀಲ್ 204hp ಪವರ್ ಉತ್ಪಾದಿಸುತ್ತದೆ. ಚಿಕ್ಕ ಬ್ಯಾಟರಿ ಕೇವಲ 5.7 ಸೆಕೆಂಡ್‌ಗಳಲ್ಲಿ 0-100kph ವೇಗವನ್ನು ಪಡೆದುಕೊಳ್ಳಲಿದೆ. ದೊಡ್ಡ ಬ್ಯಾಟರಿ ಸೆಟಪ್ 312hp ಪವರ್ ಉತ್ಪಾದಿಸುತ್ತದೆ. 5.9 ಸೆಕೆಂಡ್ ಗಳಲ್ಲಿ 0-100kph ವೇಗ ಹೊಂದಿದೆ.

ಡ್ಯುಯಲ್-ಮೋಟಾರ್ ರೂಪಾಂತರವು ಆಲ್-ವೀಲ್ ಡ್ರೈವ್ ಸೆಟ್-ಅಪ್ ಅನ್ನು ಹೊಂದಿದ್ದು, ಅಲ್ಲಿ ಮುಂಭಾಗದಲ್ಲಿ ಅಳವಡಿಸಲಾದ ಮೋಟಾರ್ 218 hp ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಿಂಭಾಗದಲ್ಲಿ 312 hp ಗರಿಷ್ಠ ಪವರ್ ಉತ್ಪಾದಿಸಲಿದೆ. ಇದು 3.8 ಸೆಕೆಂಡ್‌ಗಳಲ್ಲಿ 0-100kph ವೇಗವನ್ನು ಪಡೆಯಲಿದೆ. ಈ ಸೆಟ್ಅಪ್ ಹೊಂದಿರುವ 82.5kWh ಬ್ಯಾಟರಿಯು ಬರೋಬ್ಬರಿ 650 km (CLTC-ಸೈಕಲ್) ರೇಂಜ್ ನೀಡಲಿದೆ. ಇದರಿಂದ ವಿದೇಶಗಳಲ್ಲಿ ಈ ಕಾರಿಗೆ ಬಾರಿ ಬೇಡಿಕೆಯಿದೆ ಎಂದು ಹೇಳಬಹುದು.

ಸೀಲ್‌ನ ಹೊರತಾಗಿ, BYD ಅಟ್ಟೊ 3 ಇವಿಯನ್ನು ಪ್ರದರ್ಶಿಸುತ್ತದೆ. ಇದು ಭಾರತದಲ್ಲಿ ರೂ.33.99 ಲಕ್ಷದಿಂದ ಮತ್ತು ರೂ.29.15 ಲಕ್ಷ ಬೆಲೆಯನ್ನು ಹೊಂದಿದೆ (ಎರಡು ಬೆಲೆಗಳು ಎಕ್ಸ್ ಶೋರೂಂ, ಭಾರತ). BYD Atto 3 ಇವಿ, 7.3 ಸೆಕೆಂಡ್‌ಗಳಲ್ಲಿ 0-100kmph ವೇಗವನ್ನು ತಲುಪಬಲ್ಲದು. ಒಂದೇ ಚಾರ್ಜ್‌ನಲ್ಲಿ 521km ರೇಂಜ್ ಹಿಂದಿರುಗಿಸುತ್ತದೆ. ಈ ಕಾರಿನ ಪ್ರಮುಖ ವೈಶಿಷ್ಟ್ಯಗಳನ್ನು ನೋಡುವುದಾದರೆ LED ಲೈಟಿಂಗ್, 18-ಇಂಚಿನ ಅಲಾಯ್ ವೀಲ್‌ಗಳು, 12.8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪನಾರಮಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ, ಆಂಬಿಯೆಂಟ್ ಲೈಟಿಂಗ್, ಐದು ಇಂಚಿನ ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕನ್ಸೋಲ್ ಪಡೆದುಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Byd electric sedan with 700 km mileage showcased at auto expo
Story first published: Thursday, January 5, 2023, 12:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X