ಕಿಯಾ ಕಾರುಗಳು ಈಗ 1 ಲಕ್ಷದವರೆಗೆ ದುಬಾರಿ: ಸೋನೆಟ್, ಸೆಲ್ಟೋಸ್ ಯಾವುದಕ್ಕೆ ಎಷ್ಟು?

ಮುಂಬರುವ ಕಠಿಣ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಏರುತ್ತಿರುವ ಬಿಡಿಭಾಗದ ಬೆಲೆಗಳು, ಜೊತೆಗೆ ಕಾರುಗಳನ್ನು ನವೀಕರಿಸುವ ವೆಚ್ಚವನ್ನು ಸರಿದೂಗಿಸಲು ಜನವರಿ 1, 2023ರಿಂದ ಕಿಯಾ ಇಂಡಿಯಾ ತನ್ನ ಎಲ್ಲಾ ಕಾರುಗಳ ಬೆಲೆಯನ್ನು 1 ಲಕ್ಷದವರೆಗೆ ಹೆಚ್ಚಿಸಿದೆ. ಕಾರ್ನಿವಲ್‌ಗಾಗಿ ಬಿಟ್ಟು ಭಾರತದಲ್ಲಿನ ಎಲ್ಲಾ ಇತರೆ ಕಿಯಾ ಕಾರುಗಳ ಬೆಲೆ ಏರಿಕೆಯಾಗಿದೆ.

ಕಿಯಾ ಇವಿ6 ಮಾದರಿಗಳಿಗೆ ಅತ್ಯಧಿಕ ಬೆಲೆ ಏರಿಕೆಯಾಗಿದೆ. ಇವಿ6 RWD (ರೇರ್ ವೀಲ್ ಡ್ರೈವ್) ಮತ್ತು AWD (ಆಲ್ ವೀಲ್ ಡ್ರೈವ್) ಎರಡಕ್ಕೂ ಬರೋಬ್ಬರಿ 1 ಲಕ್ಷ ರೂಪಾಯಿಗಳ ಬೆಲೆ ಏರಿಕೆಯನ್ನು ಮಾಡಲಾಗಿದೆ. ಅಂದರೆ, ಈ ಎಲೆಕ್ಟ್ರಿಕ್ ಕಾರಿನ ಬೆಲೆ ಈಗ 60.95 ಲಕ್ಷದಿಂದ ಆರಂಭವಾಗಿ 65.95 ಲಕ್ಷದವರೆಗೆ ಇರುತ್ತದೆ. ಕಾರ್ನಿವಲ್‌ ಕಾರಿನ ಬೆಲೆಯು ಯಾವುದೇ ರೀತಿ ಬದಲಾಗದೆ ಹಾಗಿಯೇ ಉಳಿದಿದೆ. ಈ ಎಂಪಿವಿಗೆ ರೂ.30.99 ಲಕ್ಷದಿಂದ ರೂ 35.49 ಲಕ್ಷದವರೆಗೆ (ಎಲ್ಲಾ ಬೆಲೆಗಳು, ಎಕ್ಸ್ ಶೋರೂಂ) ಖರೀದಿಗೆ ಲಭ್ಯವಿದೆ.

ಕಿಯಾ ಕಾರುಗಳು ಈಗ 1 ಲಕ್ಷದವರೆಗೆ ದುಬಾರಿ: ಸೋನೆಟ್, ಸೆಲ್ಟೋಸ್ ಯಾವುದಕ್ಕೆ ಎಷ್ಟು?

ಕಿಯಾ ಸೆಲ್ಟೋಸ್ 1.4L ಟರ್ಬೊ ಪೆಟ್ರೋಲ್ ರೂಪಾಂತರದ ಬೆಲೆ ಈಗ ಮೊದಲಿಗಿಂತ 40,000 ರೂ.ದುಬಾರಿಯಾಗಿದೆ. ಆದರೆ, 1.5L NA ಪೆಟ್ರೋಲ್ ರೂಪಾಂತರದರ ಬೆಲೆಯನ್ನು 20,000 ರೂ.ವರೆಗೆ ಹೆಚ್ಚಿಸಲಾಗಿದೆ. ಇದರ ಜೊತೆಗೆ, ಕಿಯಾ ಸೆಲ್ಟೋಸ್ 1.5L ಡೀಸೆಲ್ ರೂಪಾಂತರದ ಬೆಲೆಯನ್ನು 50,000 ರೂಪಾಯಿ ಏರಿಕೆ ಮಾಡಲಾಗಿದೆ. ಹ್ಯುಂಡೈ ಕ್ರೆಟಾ, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮತ್ತು ಸ್ಕೋಡಾ ಕುಶಾಕ್ ಪ್ರತಿಸ್ಪರ್ಧಿ ಈ ಎಸ್‌ಯುವಿ ಬೆಲೆ ಇದೀಗ 10.69 ಲಕ್ಷದಿಂದ 19.15 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇದೆ.

ಕಿಯಾ ಕ್ಯಾರೆನ್ಸ್ ಎಂಪಿವಿ (ಬಹುಪಯೋಗಿ ವಾಹನ) 1.5L NA ಪೆಟ್ರೋಲ್‌ ಮಾದರಿಗೆ 20,000 ರೂ. ಮತ್ತು 1.4L ಟರ್ಬೊ ಪೆಟ್ರೋಲ್ ರೂಪಾಂತರಕ್ಕೆ 25,000 ರೂ. ಹೆಚ್ಚಳ ಮಾಡಲಾಗಿದೆ. ಆದರೆ, ಡೀಸೆಲ್ ಆವೃತ್ತಿಗೆ ಈಗ 45,000 ರೂ. ಏರಿಕೆ ಮಾಡಲಾಗಿದೆ. ಇದರಿಂದ ಕ್ಯಾರೆನ್ಸ್ ಗ್ರಾಹಕರಿಗೆ ರೂ.10.20 ಲಕ್ಷದಿಂದ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಟಾಪ್ ಎಂಡ್ ಮಾದರಿ ಬೆಲೆ ರೂ.18.45 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇದೆ.

ಭಾರತದಲ್ಲಿ ಕಿಯಾದ ಅತ್ಯಂತ ಕೈಗೆಟುಕುವ ಕಾರು ಯಾವುದೆಂದರೇ ಅದು ಸೋನೆಟ್‌. ಅದರ ಬೆಲೆಯನ್ನು ಸಹ ಏರಿಕೆ ಮಾಡಲಾಗಿದೆ. 1.0L ಟರ್ಬೊ-ಪೆಟ್ರೋಲ್ ರೂಪಾಂತರದ ಬೆಲೆ ರೂ.25,000 ಹೆಚ್ಚಳವಾಗಿದೆ. ಆದರೆ, ಡೀಸೆಲ್ ರೂಪಾಂತರಗಳು ಈಗ ಮೊದಲಿಗಿಂತ 40,000 ರೂ. ಏರಿಕೆಯಾಗಿದ್ದು, 1.2L NA ಪೆಟ್ರೋಲ್ ರೂಪಾಂತರ ಮಾದರಿ ಬೆಲೆ ರೂ.20,000 ಹೆಚ್ಚು ದುಬಾರಿಯಾಗಿದೆ ಎಂದು ಹೇಳಬಹುದು. ಆದರೆ, ಕಿಯಾ ಸೋನೆಟ್‌ ಅದರ ವೈಶಿಷ್ಟ್ಯ ಹಾಗೂ ಬೆಲೆಗಳಿಂದ ಗ್ರಾಹಕರಿಗೆ ಖಂಡಿತ ಇಷ್ಟವಾಗುತ್ತದೆ.

ಕಿಯಾ ಸೋನೆಟ್‌ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಸಂಪರ್ಕದೊಂದಿಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಏರ್ ಪ್ಯೂರಿಫೈಯರ್, ಸಿಂಗಲ್-ಪೇನ್ ಎಲೆಕ್ಟ್ರಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಹೊಂದಿದೆ. ಕಿಯಾ ಸೋನೆಟ್ ಬೆಲೆ ರೂ.7.49 ಲಕ್ಷದಿಂದ ಪ್ರಾರಂಭವಾಗಿ ರೂ.13.99 ಲಕ್ಷದವರೆಗೆ ಇರುತ್ತದೆ. ಭಾರತದಲ್ಲಿನ ಸಂಪೂರ್ಣ ಕಿಯಾ ಸೋನೆಟ್ ರೂಪಾಂತರಗಳ ಆನ್-ರೋಡ್ ಬೆಲೆಯನ್ನು ಸಮೀಪದ ಡೀಲರ್ ಶಿಪ್ ಗೆ ಭೇಟಿ ನೀಡಿ, ಪರಿಶೀಲಿರಿ.

ಕಿಯಾ ಸೋನೆಟ್ ಪವರ್‌ಟ್ರೇನ್ ಆಯ್ಕೆ ಬಗ್ಗೆ ಮಾತನಾಡುವುದಾದರೆ, ಭಾರತದಲ್ಲಿ ಈ ಹೊಸ ಕಾರು, ಮೂರು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಖರೀದಿಗೆ ದೊರೆಯುತ್ತದೆ. ಅವುಗಳೆಂದರೇ, 1.2-ಲೀಟರ್ NA ಪೆಟ್ರೋಲ್ ಎಂಜಿನ್, 1.5-ಲೀಟರ್ ಡೀಸೆಲ್ ಎಂಜಿನ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್. ಡೀಸೆಲ್ ಎಂಜಿನ್ ಬರೋಬ್ಬರಿ 24.1 kmpl ಮೈಲೇಜ್ ಅನ್ನು ಹಿಂದಿರುಗಿಸುತ್ತದೆ. ಈ ಮೂಲಕ ಅತ್ಯುತ್ತಮ ಮೈಲೇಜ್ ನೀಡುವ ದೇಶದ ಪ್ರಮುಖ ಕಾರುಗಳಲ್ಲಿ ಒಂದಾಗಿದೆ ಎಂದು ಹೇಳಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
Read more on ಕಿಯಾ kia
English summary
Kia cars now expensive up to 1 lakh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X