ಬಹುನಿರೀಕ್ಷಿತ ಟಾಟಾ ಆಲ್ಟ್ರೋಜ್ ಸ್ಪೋರ್ಟ್ ಆಟೋ ಎಕ್ಸ್‌ಪೋದಲ್ಲಿ ಅನಾವರಣ: ವಿಶೇಷತೆಗಳೇನು?

ಟಾಟಾ ಮೋಟಾರ್ಸ್ ಮುಂದಿನ ವಾರ ಆಟೋ ಎಕ್ಸ್‌ಪೋದಲ್ಲಿ ಆಲ್ಟ್ರೋಜ್ ಸ್ಪೋರ್ಟ್‌ ರೂಪಾಂತರವನ್ನು ಅನಾವರಣ ಮಾಡುತ್ತಿದೆ. ಟಾಟಾ ಈಗಾಗಲೇ ಭಾರತದಲ್ಲಿ ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಐ-ಟರ್ಬೊ ರೂಪಾಂತರವನ್ನು ಮಾರಾಟ ಮಾಡುತ್ತಿದ್ದು, ಇದು 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 110 PS ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮುಂಬರುವ ಟಾಟಾ ಆಲ್ಟ್ರೊಜ್ ಸ್ಪೋರ್ಟ್ ಹಿಂದಿನ ಮಾದರಿಗೆ ಹೋಲಿಸಿದರೇ ಹೆಚ್ಚು ಶಕ್ತಿಶಾಲಿಯಾಗಿರಲಿದೆ ಎಂದು ಹೇಳಲಾಗಿದೆ. ಇದು ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‌ಯುವಿ ಹೊಂದಿರುವ ರೀತಿಯಲ್ಲೇ 1.2-ಲೀಟರ್, 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, ಇದು 120 PS ಗರಿಷ್ಠ ಪವರ್ ಮತ್ತು 170 Nm ಪೀಕ್ ಟಾರ್ಕ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ನೆಕ್ಸಾನ್‌ನಲ್ಲಿರುವಂತೆ ಇದರಲ್ಲಿಯೂ 6-ಸ್ವೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ ಆಯ್ಕೆ ಇರಲಿದೆ.

ಭಾರತದ ಮಾರುಕಟ್ಟೆಯಲ್ಲಿ ಹ್ಯುಂಡೈನ i20 Nಗೆ ಭಾರೀ ಪೈಪೋಟಿ ನೀಡಲು ಹೊಸ ಆಲ್ಟ್ರೋಜ್ ಕಾರು, ಟಾಟಾ ಕಂಪನಿಗೆ ಸಹಾಯ ಮಾಡಲಿದೆ. ಇದು ಹಿಂದಿನ ಆವೃತ್ತಿ ಐ-ಟರ್ಬೊಗಿಂತ ಇದು ಹೆಚ್ಚು ಶಕ್ತಿಶಾಲಿಯಾಗಿರುವುದರಿಂದ ಹೆಚ್ಚು ಕಾರ್ಯಕ್ಷಮತೆ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. i20 N ಮಾದರಿಯಲ್ಲಿ ಸರಿಯಾದ ಮ್ಯಾನುಯಲ್ ಟ್ರಾನ್ಸ್‌ಮಿಷನ್‌ ಆಯ್ಕೆ ಇಲ್ಲದಿರುವುದರಿಂದ, ಟಾಟಾ ಆಲ್ಟ್ರೋಜ್ ಸ್ಪೋರ್ಟ್ ಇದರ ಲಾಭವನ್ನು ಪಡೆಯುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯಬಹುದು. ಆದರೆ, ಈ ಹೊಸ ಕಾರಿನಲ್ಲಿ 6-ಸ್ವೀಡ್ AMT ಇರುವುದಿಲ್ಲ ಎಂದು ವರದಿಯಾಗಿದೆ.

ಟಾಟಾದ ಆಲ್ಟ್ರೋಜ್ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಹ್ಯುಂಡೈ i20 N ಆರು-ಸ್ವೀಡ್ iMT ಅಥವಾ 7-ಸ್ವೀಡ್ ಡ್ಯುಯಲ್-ಕ್ಲಚ್ ಆಟೋಮೆಟಿಕ್ ಟ್ರಾನ್ಸ್‌ಮಿಷನ್‌ ಹೊಂದಿದೆ. ವಿಷುಯಲ್ ಮತ್ತು ಇಂಟೀರಿಯರ್ ಎಂಹನ್ಸಮೆಂಟ್ಸ್ ಗಮನಿಸಿದಾಗ ಸಾಮಾನ್ಯ ಆಲ್ಟ್ರೊಜ್‌ಗಿಂತ ಹೊಸ ಟಾಟಾ ಆಲ್ಟ್ರೋಜ್ ಸ್ಪೋರ್ಟ್‌ ಬಹುತೇಕ ಭಿನ್ನವಾಗಿರಬಹುದು ಎಂದು ನಿರೀಕ್ಷಿಸಲಾಗಿದೆ. ಇದು ಗಟ್ಟಿಯಾದ ಸಸ್ಪೆನ್ಷನ್ ನಂತಹ ಕೆಲವು ಯಾಂತ್ರಿಕ ನವೀಕರಣಗಳನ್ನು ಪಡೆದಿರಬಹುದು. ಇದು ಗ್ರಾಹಕರಿಗೆ ಖಂಡಿತ ಇಷ್ಟವಾಗಲಿದ್ದು, ಈ ಕಾರಿನ ಖರೀದಿಯತ್ತ ಆಸಕ್ತಿ ವಹಿಸಬಹುದು ಎಂದು ಹೇಳಬಹುದು.

ನೂತನ ಆಲ್ಟ್ರೋಜ್ ಸ್ಪೋರ್ಟ್‌, ಕಾಂಟ್ರಾಸ್ಟ್ ರೆಡ್ ಬ್ರೇಕ್ ಕ್ಯಾಲಿಪರ್‌ಗಳು, ಹೊಸ ಬಣ್ಣದ ಆಯ್ಕೆಗಳು, ಸ್ಪೋರ್ಟಿಯರ್ ಕ್ಯಾಬಿನ್ ಅಪ್ಡೇಟ್, ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ವೀಲ್ಸ್, ಫ್ರಂಟ್ ಮತ್ತು ರೇರ್ ಹೊಸ ಸ್ಪೋರ್ಟ್ ಬ್ಯಾಡ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿರಬಹುದು. ಅಲ್ಲದೆ, ಆಟೋ ಎಕ್ಸ್‌ಪೋದಲ್ಲಿ ಟಾಟಾ, ಪಂಚ್ ಇವಿ, ಜೊತೆಗೆ ಫೇಸ್‌ಲಿಫ್ಟೆಡ್ ಹ್ಯಾರಿಯರ್ ಮತ್ತು ಸಫಾರಿಗಳನ್ನು ಅನಾವರಣಗೊಳಿಸಬಹುದು. ಈ ಫೇಸ್‌ಲಿಫ್ಟ್‌ಗಳು ADASನಂತಹ ಹೊಸ ವೈಶಿಷ್ಟ್ಯ, ಕಾಸ್ಮೆಟಿಕ್ ಹಾಗೂ ಕೆಲವು ಆಂತರಿಕ ಪರಿಷ್ಕರಣೆಗಳನ್ನು ಪಡೆದಿರಲಿವೆ.

ಟಾಟಾ ಆಲ್ಟ್ರೋಜ್ ಬೆಲೆ ರೂ.6.34 ಲಕ್ಷದಿಂದ ಪ್ರಾರಂಭವಾಗಲಿದ್ದು, ಟಾಪ್ ಎಂಡ್ ಮಾದರಿ ಬೆಲೆ 10.25 ಲಕ್ಷದವರೆಗೆ ಇರುತ್ತದೆ (ಎಕ್ಸ್ ಶೋರೂಂ ಪ್ರಕಾರ). ಪೆಟ್ರೋಲ್‌ ಎಂಜಿನ್ ಚಾಲಿತ ಆಲ್ಟ್ರೋಜ್ ಟಾಪ್ ಮಾಡೆಲ್ ಬೆಲೆ ರೂ.10 ಲಕ್ಷ. ಡೀಸೆಲ್‌ ಎಂಜಿನ್ ಚಾಲಿತ ಆಲ್ಟ್ರೋಜ್ ಮೂಲ ಮಾದರಿ ಬೆಲೆ ರೂ.7.90 ಲಕ್ಷ. ಆಲ್ಟ್ರೋಜ್ ಆಟೋಮೆಟಿಕ್ ಆವೃತ್ತಿಯ ಬೆಲೆ ರೂ.8.40 ಲಕ್ಷದಿಂದ ಶುರುವಾಗುತ್ತದೆ. ಆದರೆ, ಹೊಸ ಆಲ್ಟ್ರೋಜ್ ಸ್ಪೋರ್ಟ್‌ ಬೆಲೆ ಈವರೆಗೆ ಬಹಿರಂಗವಾಗಿಲ್ಲ.

ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳಲಿರುವ ಟಾಟಾದ ಪಂಚ್ ಇವಿ ಬಗ್ಗೆಯು ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿವೆ. ಈ ಪಂಚ್ ಇವಿ ಆಲ್ಫಾ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಸದ್ಯ ಆಲ್ಟ್ರೊಜ್ ಹ್ಯಾಚ್‌ಬ್ಯಾಕ್‌ಗೂ ಇದನ್ನೇ ಬಳಕೆ ಮಾಡಲಾಗುತ್ತಿದ್ದು, ಪಂಚ್ ಇವಿಯು ಜಿಪ್ಟ್ರಾನ್ ಎಲೆಕ್ಟ್ರಿಕ್ ಪವರ್‌ಟ್ರೇನ್‌ನಿಂದ ಪವರ್ ಪಡೆಯಬಹುದು. ಈ ಪಂಚ್ ಇವಿ, ಮೀಡಿಯಂ ರೇಂಜ್ ಮತ್ತು ಲಾಂಗ್ ರೇಂಜ್ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿರಲಿದೆ. ಇತರೆ ಟಾಟಾ ಇವಿಗಳಲ್ಲಿ ನೋಡಲು ಕಾಣಸಿಗುವಂತೆ ಇನ್ಸ್ಟ್ರುಮೆಂಟ್ ಪ್ಯಾನೆಲ್, AC ವೆಂಟ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆ ಇದೆ.

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಕಡಿಮೆ ಬೆಲೆಯ ಟಿಯಾಗೊ ಇವಿಯನ್ನು ಮಾರಾಟ ಮಾಡುತ್ತಿದ್ದು, ಇದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಟಾಟಾ ಪೆಟ್ರೋಲ್, ಡಿಸೇಲ್ ಚಾಲಿತ ವಾಹನಗಳ ಜೊತೆಗೆ ಇವಿ ತಯಾರಿಕೆಗೂ ಹೆಚ್ಚಿನ ಗಮನ ಹರಿಸಿದೆ. ಇದೀಗ ಮತ್ತಷ್ಟು ನವೀಕರಣಗಳೊಂದಿಗೆ ಆಲ್ಟ್ರೋಜ್ ಸ್ಪೋರ್ಟ್ ಅನ್ನು ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಿದೆ. ಸಾಮಾನ್ಯವಾಗಿಯೇ ಗ್ರಾಹಕರಿಗೆ ಇದರ ಮೇಲೆ ನಿರೀಕ್ಷೆಗಳು ಹೆಚ್ಚಾಗಿದೆ. ಅಲ್ಲದೆ, ಟಾಟಾ ದೇಶದ ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ಕಾರುಗಳನ್ನು ತಯಾರಿಸಲು ಯಾವಾಗಲು ಗಮನ ಹರಿಸುತ್ತದೆ ಎಂದು ಹೇಳಬಹುದು.

Most Read Articles

Kannada
English summary
The much awaited tata altroz sport unveiled at the auto expo
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X