ಮಹಿ ಸ್ಟೈಲ್‌ನಲ್ಲಿ ಲೇಲ್ಯಾಂಡ್ ಪ್ರಯಾಣಿಕ ಕಾರು ಬಿಡುಗಡೆ

Written By:

ದೇಶದ ವಾಣಿಜ್ಯ ಮಾರುಕಟ್ಟೆಯಲ್ಲಿ ಭದ್ರ ನೆಲೆ ಸ್ಥಾಪಿಸಿರುವ ಹಿಂದೂಜಾ ಸಂಸ್ಥೆಯ ಅಶೋಕ್ ಲೇಲ್ಯಾಂಡ್, ಇದೀಗ ನೂತನ ಸ್ಟೈಲ್ ಮಲ್ಟಿ ಪರ್ಪಸ್ ವಾಹನ (ಎಂಪಿವಿ) ಬಿಡುಗಡೆಗೊಳಿಸುವ ಮೂಲಕ ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಗೆ ದಿಟ್ಟ ಹೆಜ್ಜೆಯನ್ನಿಟ್ಟಿದೆ.

ಭಾರತ ಕ್ರಿಕೆಟ್ ತಂಡದ ನಾಯಕ ಹಾಗೂ ಪ್ರಮುಖ ಪ್ರಚಾರ ರಾಯಭಾರಿ ಕೂಡಾ ಆಗಿರುವ ಮಹೀಂದ್ರ ಸಿಂಗ್ ಧೋನಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಲೇಲ್ಯಾಂಡ್ ಪ್ರಯಾಣಿಕ ಕಾರು ಬಿಡುಗಡೆ ಸಮಾರಂಭವನ್ನು ಇನ್ನಷ್ಟು ಸ್ಮರಣೀಯವಾಗಿಸಿದರು.

ನಿಮ್ಮ ಮಾಹಿತಿಗಾಗಿ, ಸ್ಟೈಲ್ ಜಪಾನ್ ಮೂಲದ ಕಾರು ತಯಾರಕ ಸಂಸ್ಥೆಯಾಗಿರುವ ನಿಸ್ಸಾನ್‌ನಿಂದ ಬಿಡುಗಡೆಯಾಗಿರುವ ನಿಸ್ಸಾನ್ ಇವಾಲಿಯಾದ ತದ್ರೂಪವಾಗಿದೆ. ಹಾಗಿದ್ದರೂ ನೂತನ ಕಾರು ಖರೀದಿ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹಲವಾರು ನೂತನ ವೈಶಿಷ್ಟ್ಯಗಳನ್ನು ಆಳವಡಿಸಲಾಗಿದೆ.

ಅಶೋಕ್ ಲೇಲ್ಯಾಂಡ್ ಸ್ಟೈಲ್ ಎಂಪಿವಿ ಬಿಡುಗಡೆ

ಅಶೋಕ್ ಲೇಲ್ಯಾಂಡ್ ಸ್ಟೈಲ್ ಪ್ರಾರಂಭಿಕ ದರ 7.49 ಲಕ್ಷ ರು.ಗಳಾಗಿವೆ. ಹಾಗೆಯೇ ಎಲ್‌ಇ, ಎಲ್‌ಎಸ್ ಹಾಗೂ ಎಲ್‌ಎಕ್ಸ್‌ಗಳೆಂಬ ಮೂರು ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ. ಟಾಪ್ ಎಂಡ್ ವೆರಿಯಂಟ್ ಎಲ್‌ಎಕ್ಸ್ ದೆಹಲಿ ಎಕ್ಸ್‌ ಶೋ ರೂಂ ದರ 9.29 ಲಕ್ಷ ರು.ಗಳಾಗಿವೆ. ಇವೆಲ್ಲವೂ 5,7 ಹಾಗೂ 8 ಸಿಟ್ಟಿಂಗ್ ವ್ಯವಸ್ಥೆಗಳಲ್ಲಿ ಆಗಮನವಾಗಲಿದೆ.

ಎಂಜಿನ್ ಹಾಗೂ ಟ್ರಾನ್ಸ್‌ಮಿಷನ್

ಎಂಜಿನ್ ಹಾಗೂ ಟ್ರಾನ್ಸ್‌ಮಿಷನ್

ಎಲ್ಲ ಮೂರು ವೆರಿಯಂಟ್‌ಗಳು 1.5 ಲೀಟರ್ ಕೆ9ಕೆ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸ್ಪಟ್ಟಿದೆ. ಇದು 75 ಅಶ್ವಶಕ್ತಿ (185ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ಅಶೋಕ್ ಲೇಲ್ಯಾಂಡ್ ಸ್ಟೈಲ್ ಎಂಪಿವಿ ಬಿಡುಗಡೆ

ಸದ್ಯದಲ್ಲೇ ಅಶೋಕ್ ಲೇಲ್ಯಾಂಡ್ ಸ್ಟೈಲ್ ಸಿಎನ್‌ಜಿ ವೆರಿಯಂಟ್ ಕೂಡಾ ಆಗಮನವಾಗಲಿದೆ. ಈ ಮಲ್ಟಿ ಪರ್ಪಸ್ ವೆಹಿಕಲ್ ಪ್ರತಿ ಲೀಟರ್‌ಗೆ 19.5 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ವೈಶಿಷ್ಟ್ಯ

ವೈಶಿಷ್ಟ್ಯ

ನಿಸ್ಸಾನ್ ಇವಾಲಿಯಾದಿಂದ ಬೇರ್ಪಡಿಸುವ ನಿಟ್ಟಿನಲ್ಲಿ ವೈಶಿಷ್ಟ್ಯಗಳಲ್ಲಿ ಅನೇಕ ಬದಲಾವಣೆ ತರಲಾಗಿದೆ. ಬೇಸ್ ವೆರಿಯಂಟ್‌ನಲ್ಲೇ ಪವರ್ ಸ್ಟೀರಿಂಗ್, ಹೊಂದಾಣಿಸಬಹುದಾದ ಸ್ಟೀರಿಂಗ್ ಹಾಗೂ ಎಸಿ ಸೌಲಭ್ಯಗಳು ಸ್ಟಾಂಡರ್ಡ್ ಮಾನದಂಡಗಳಲ್ಲಿ ಲಭಿಸಲಿದೆ.

ಅಶೋಕ್ ಲೇಲ್ಯಾಂಡ್ ಸ್ಟೈಲ್ ಎಂಪಿವಿ ಬಿಡುಗಡೆ

ಆಧುನಿಕ ಜಾಗತಿಕ ವಿನ್ಯಾಸವನ್ನು ಪ್ರತಿನಿಧಿಸುತ್ತಿರುವ ಸ್ಟೈಲ್, ನಿಸ್ಸಾನ್ ಇವಾಲಿಯಾ ಮಾರಾಟವನ್ನು ಹೇಗೆ ಮೀರಿಸಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.

English summary
Nissan Evalia MPV proved to be a poor performer. One way to give a push to the unpopular platform was with the launch of a low cost model and Ashok Leyland's Stile MPV has been given that responsibility. The Stile is a badge engineered, stripped out Evalia, with a starting price that is INR 1.2 lakhs less than the latter.
Story first published: Tuesday, October 8, 2013, 13:54 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more