ಮಹೀಂದ್ರ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಅನಾವರಣ

Written By:

'ಹಲ್ಲೋ ಹಲ್ಲೋ ಹಲ್ಲೋ ನನ್ ಮನಸ್ಸು ಇಲ್ಲೇ ಎಲ್ಲೋ' ಈ ಹಾಡನ್ನು ಇಲ್ಲಿ ಉಲ್ಲೇಖಿಸಲು ಪ್ರಮುಖ ಕಾರಣವೊಂದಿದೆ. ಯಾಕೆಂದರೆ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಇಂಡಿಯಾ ಆಟೋ ಎಕ್ಸ್ ಪೋದಲ್ಲಿ ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರದ ಎಲೆಕ್ಟ್ರಿಕ್ ಬ್ರಾಂಡ್ ಆಗಿರುವ ರೇವಾ, ನೂತನ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಕಾನ್ಸೆಪ್ಟ್ 'ಹ್ಯಾಲೊ' ಪ್ರದರ್ಶಿಸಿದೆ.

2014 ಆಟೋ ಎಕ್ಸ್ ಪೋ

ಈ ಮೂಲಕ ಭವಿಷ್ಯದ ಹಸಿರು ಕ್ರಾಂತಿಯತ್ತ ಮಹೀಂದ್ರ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಅಷ್ಟೇ ಯಾಕೆ ಎಕ್ಸ್‌ಯುವಿ500 ಹೈಬ್ರಿಡ್ ಕೂಡಾ ವೆರಿಟೊ ವಿದ್ಯುತ್ ಚಾಲಿತ ಕಾರು ಇದರ ಭಾಗವಾಗಿರಲಿದೆ.

ಮಹೀಂದ್ರ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಅನಾವರಣ

ಮಹೀಂದ್ರ ರೇವಾ ಹ್ಯಾಲೊ ಕಾರು ಕೇವಲ ಎಂಟು ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಗಂಟೆಗೆ ಗರಿಷ್ಠ 160 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಮಹೀಂದ್ರ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಅನಾವರಣ

ನಿರ್ವಹಣೆ ವಿಚಾರದಲ್ಲಿ ಸಾಮಾನ್ಯ ಸ್ಪೋರ್ಟ್ಸ್ ಕಾರುಗಳಷ್ಟು ಪವರ್‌ಫುಲ್ ಆಗಿಲ್ಲದಿದ್ದರೂ ಹ್ಯಾಲೊ ವಿದ್ಯುತ್ ಚಾಲಿತ ವಾಹನ ಮೂಲಕ ಮಹೀಂದ್ರ ರೇವಾ ದಿಟ್ಟ ಹೆಜ್ಜೆಯನ್ನಿಟ್ಟಿದೆ.

ಮಹೀಂದ್ರ ಹ್ಯಾಲೊ ನಿರ್ವಹಣೆ

ಮಹೀಂದ್ರ ಹ್ಯಾಲೊ ನಿರ್ವಹಣೆ

ಮಹೀಂದ್ರ ಹ್ಯಾಲೊ ವಿದ್ಯುತ್ ಚಾಲಿತ ಕಾರು, 105 ಕೆಡಬ್ಲ್ಯು (140 ಅಶ್ವಶಕ್ತಿ) ಯುನಿಟ್ ಉತ್ಪಾದಿಸಬಲ್ಲ ಎಲೆಕ್ಟ್ರಿಕ್ ಮೋಟಾರು ಹೊಂದಿರಲಿದೆ.

ಮಹೀಂದ್ರ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಅನಾವರಣ

ಮಹೀಂದ್ರ ಹ್ಯಾಲೊ ಸಂಪೂರ್ಣ ಚಾರ್ಜ್ ಆಗಲು ಒಂದು ತಾಸು ತಗುಲಲಿದೆ. ಇದು 200 ಕೀ.ಮೀ. ವರೆಗೂ ಸಾಗಲು ನೆರವಾಗಲಿದೆ. ಇದರ ಮಗದೊಂದು ವರ್ಷನ್ 150 ಕೀ.ಮೀ. ವರೆಗೆ ಚಲಿಸಲಿದೆ.

ಒಳಮೈ

ಒಳಮೈ

ಇನ್ನು ಕಾರಿನೊಳಗೆ ಟ್ಯಾಬ್ಲಟ್ ಕಂಪ್ಯೂಟರ್ ಸೌಲಭ್ಯವಿರಲಿದೆ. ಇದು ಡಿಜಿಟಲ್ ಡಿಸ್‌ಪ್ಲೇ ತರಹನೂ ಕೆಲಸ ಮಾಡಲಿದೆ.

ಮಹೀಂದ್ರ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಅನಾವರಣ

ಈ ಎಲ್ಲದರ ಮೂಲಕ ತಂತ್ರಗಾರಿಕೆ ಹಾಗೂ ಭವಿಷ್ಯದ ಸಂಚಾರ ವಾಹಕ ದೃಷ್ಟಿಕೋನದಲ್ಲಿ ಮಹೀಂದ್ರ ಅಕ್ಷರಶ: ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಮಹೀಂದ್ರ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಅನಾವರಣ

ರೇವಾ ಡಿಸೈನ್ ತಲಹದಿಯಲ್ಲಿ ಮಹೀಂದ್ರ ಹ್ಯಾಲೊ ವಿನ್ಯಾಸಗೊಳಿಸಲಾಗಿದೆ. ಇದು ತಾಜಾ ಹಾಗೂ ಆಕರ್ಷಕ ವಿನ್ಯಾಸ ಪಡೆದುಕೊಂಡಿದೆ.

English summary
Mahindra's Reva electric vehicle division is taking massive strides towards a greener future with cars such as the XUV500 Hybrid and the electric version of the Verito. But you get a sense of Mahindra's ambition and its technological prowess when you come across the Halo - an all electric sports car.
Story first published: Saturday, February 8, 2014, 11:55 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark