ಬೆಂಗಳೂರಿನಲ್ಲಿ ಲಂಬೋರ್ಗಿನಿ 3ನೇ ಶೋ ರೂಂ?

ಇಟಲಿ ಮೂಲದ ಐಷಾರಾಮಿ ಕ್ರೀಡಾ ಉತ್ಪಾದಕ ಕಾರು ತಯಾರಕ ಸಂಸ್ಥೆಯಾದ ಲಂಬೋರ್ಗಿನಿ, ಭಾರತೀಯ ಯುವ ಶ್ರೀಮಂತ ಗ್ರಾಹಕರನ್ನು ಗುರಿಯಾಗಿರಿಸಿಕೊಳ್ಳುವ ಮೂಲಕ ಮಾರಾಟ ಉತ್ತೇಜಿಸುವ ಇರಾದೆಯನ್ನು ಹೊಂದಿದೆ.

ಮುಂಬರುವ ವರ್ಷಗಳಲ್ಲಿ ದೇಶದ ಮಾರಾಟವನ್ನು ದ್ವಿಗುಣಗೊಳಿಸುವುದು ಲಂಬೋರ್ಗಿನಿ ಗುರಿಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಎರಡನೇ ಶೋ ರೂಂ ತೆರೆದುಕೊಂಡಿರುವ ಲಂಬೋರ್ಗಿನಿ ತನ್ನ ಮೂರನೇ ಶೋ ರೂಂ ಉದ್ಯಾನ ನಗರಿ ಬೆಂಗಳೂರಿನಲ್ಲಿ ತೆರೆಯುವ ಇಚ್ಛೆ ವ್ಯಕ್ತಪಡಿಸಿದೆ.

ದೇಶದ ಶ್ರೀಮಂತ ವ್ಯಕ್ತಿಗಳನ್ನು ನಮ್ಮ ಗ್ರಾಹಕರನ್ನಾಗಿ ಪರಿವರ್ತಿಸುವುದು ನಮ್ಮ ಗುರಿಯಾಗಿದೆ. ಮುಂಬರುವ ವರ್ಷಗಳಲ್ಲಿ 30ರಿಂದ 40 ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದೇವೆ ಎಂದು ಲಂಬೋರ್ಗಿನಿ ಸಿಇಒ ಸ್ಟಿಫನ್ ವಿಂಕಲ್‌ಮ್ಯಾನ್ ತಿಳಿಸಿದ್ದಾರೆ. ಕಳದೆ ವರ್ಷ ದೇಶದಲ್ಲಿ ಒಟ್ಟು 17 ಯುನಿಟ್ ಲಂಬೋರ್ಗಿನಿ ಕಾರುಗಳು ಮಾರಾಟವಾಗಿದ್ದವು. ಪ್ರಸಕ್ತ ಸಾಲಿನಲ್ಲಿ ಈ ಸಂಖ್ಯೆಯನ್ನು 20ಕ್ಕೆ ಏರಿಸುವ ನಿರೀಕ್ಷೆ ಹೊಂದಿರುವುದಾಗಿ ಕಂಪನಿ ತಿಳಿಸಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಂಬೋರ್ಗಿನಿ ನೂತನ ಶೋ ರೂಂ ಆರಂಭ

ಲಂಬೋರ್ಗಿನಿ ಗಲರ್ಡೊ ಹಾಗೂ ಅವೆಂಟಡೊರ್ ಆವೃತ್ತಿಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗುತ್ತಿದೆ. ಇವುಗಳು ದೆಹಲಿ ಎಕ್ಸ್ ಶೋ ರೂಂ ದರ 2.8 ಕೋಟಿ ರು.ಗಳಿಂದ ಆರಂಭವಾಗಿ 6.30 ಕೋಟಿ ರು.ಗಳ ವರೆಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಂಬೋರ್ಗಿನಿ ನೂತನ ಶೋ ರೂಂ ಆರಂಭ

ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ದೇಶದಲ್ಲಿ ಲಂಬೋರ್ಗಿನಿ ಯುವ ಗ್ರಾಹಕರ ಸಂಖ್ಯೆ ಜಾಸ್ತಿಯಿದೆ. ಇದು ಯರೋಪ್‌ಗಿಂತ ಹೆಚ್ಚಾಗಿದೆ ಎಂದಿದೆ. ಹಾಗಿದ್ದರೂ ಮೂಲಸೌಕರ್ಯ ಹಾಗೂ ಭಾರತೀಯ ತೆರಿಗೆ ನೀತಿ ತೊಂದರೆಯಾಗಿ ಪರಿಣಮಿಸಿದೆ ಎಂದಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಂಬೋರ್ಗಿನಿ ನೂತನ ಶೋ ರೂಂ ಆರಂಭ

ಬಹುತೇಕ ಭಾರತೀಯ ರಾಷ್ಟ್ರೀಯತೆ ಹೊಂದಿರುವ ಗ್ರಾಹಕರು ನಮ್ಮ ಕಾರುಗಳನ್ನು ಯುರೋಪ್‌ನಲ್ಲಿ ಖರೀದಿಸುತ್ತಾರೆ. ಭಾರತದಲ್ಲಿ ವಾಹನ ದಟ್ಟಣೆ ತುಂಬಾನೇ ಜಾಸ್ತಿಯಾಗಿದ್ದು, ರಸ್ತೆ ಪರಿಸ್ಥಿತಿ ಸಹ ಹದೆಗೆಟ್ಟಿದೆ ಎಂದಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಂಬೋರ್ಗಿನಿ ನೂತನ ಶೋ ರೂಂ ಆರಂಭ

ಜಾಗತಿಕವಾಗಿ 2,000 ಲಂಬೋರ್ಗಿನಿ ಕಾರುಗಳನ್ನು ಮಾರಾಟ ಮಾಡಿರುವ ಲಂಬೋರ್ಗಿನಿಯ ಟಾಪ್ ಮಾರ್ಕೆಟ್ ಅಮೆರಿಕ ಹಾಗೂ ಚೀನಾ ಆಗಿವೆ. ಇವೆರಡನ್ನು ಮಧ್ಯ ಪೂರ್ವ, ಇಂಗ್ಲೆಂಡ್ ಹಾಗೂ ಜಪಾನ್ ರಾಷ್ಟ್ರಗಳು ಹಿಂಬಾಲಿಸುತ್ತಿವೆ.

ಭಾರತದಲ್ಲಿ ಲಭ್ಯರಿರುವ ಲಂಬೋರ್ಗಿನಿ ಆವೃತ್ತಿಗಳು

ಭಾರತದಲ್ಲಿ ಲಭ್ಯರಿರುವ ಲಂಬೋರ್ಗಿನಿ ಆವೃತ್ತಿಗಳು

  • ಅವೆಂಟಡೊರ್ ರೋಡ್‌ಸ್ಟರ್ ಎಲ್‌ಪಿ 700 4,
  • ಅವೆಂಟಡೊರ್ ಎಲ್‌ಪಿ700 4,
  • ಗಲರ್ಡೊ ಕೂಪೆ,
  • ಗಲರ್ಡೊ ಸ್ಪೈಡರ್,
  • ಗಲರ್ಡೊ ಸೂಪರ್ಲೆಗೆರಾ,
  • ಗಲರ್ಡೊ ಎಲ್‌ಪಿ 560 4,
  • ಗಲರ್ಡೊ ಎಲ್‌ಪಿ 570 4 ಎಡಿಜೋನ್ ಟೆಕ್ನಿಕಾ.

Most Read Articles

Kannada
English summary
Following Mumbai, Lamborghini has set up its second shop in India, in Delhi. Also plans to add a third one in Bangalore for which it is in discussions with a local partner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X