ಬಿಎಂಡಬ್ಲ್ಯು ಎಲೆಕ್ಟ್ರಿಕ್ ಕಾರು ಬಿಡುಗಡೆಗೂ ಮುನ್ನ ಲಕ್ಷ ಬುಕ್ಕಿಂಗ್ಸ್

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಟು ನಿಕಟ ಭವಿಷ್ಯದಲ್ಲಿ ವಿದ್ಯುತ್ ಚಾಲಿತ ಕಾರೊಂದನ್ನು ಪರಿಚಯಿಸಲಿದೆ. ಇಲ್ಲಿ ಕುತೂಹಲಕಾರಿ ಅಂಶವೆಂದರೆ ಬಿಎಂಡಬ್ಲ್ಯು ಐ3 ಎಲೆಕ್ಟ್ರಿಕ್ ಕಾರು ಬಿಡುಗಡೆ ಮುನ್ನವೇ ಒಂದು ಲಕ್ಷ ಮುಗಂಡ ಬುಕ್ಕಿಂಗ್ಸ್ ಪಡೆದುಕೊಂಡಿದೆ.

ನಿಮ್ಮ ಮಾಹಿಗಾಗಿ, ಬಿಎಂಡಬ್ಲ್ಯು ಐ3 ಎಲೆಕ್ಟ್ರಿಕ್ ಕಾರಿನ ಉತ್ಪಾದನಾ ವರ್ಷನ್ ಜುಲೈ 29ರಂದು ಅನಾವರಣಗೊಳ್ಳಲಿದೆ. ಈ ಸಂದರ್ಭದಲ್ಲಿ ಟೀಸರ್ ವೀಡಿಯೋ ಸಹ ಬಿಡುಗಡೆಯಾಗಲಿದೆ.

ಕಳೆದ ಕೆಲವು ಸಮಯಗಳಿಂದ ಆಟೋ ಜಗತ್ತಿನಲ್ಲಿ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಕಾರಿನ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಹಾಗಿರುವಾಗ ಐ3 ಕಾನ್ಸೆಪ್ಟ್ ಆಗಮನವಾಗಿರುವುದು ವಾಹನ ಪ್ರಿಯರಲ್ಲಿ ಸಂತಸವನ್ನುಂಟು ಮಾಡಿದೆ.

ಬಿಎಂಡಬ್ಲ್ಯು ಐ3 ಎಲೆಕ್ಟ್ರಿಕ್ ಕಾರು

ಕೇವಲ 4 ಮೀಟರ್ ಉದ್ದದ ಮಿತಿಯೊಳಗೆ ಆಗಮಿಸಿರುವ ಈ ಎಲೆಕ್ಟ್ರಿಕ್ ಕಾರು, ಬಿಎಂಡಬ್ಲ್ಯುನಿಂದ ನಿರ್ಮಾಣಗೊಂಡಿರುವ ಅತಿ ಸಣ್ಣ ಕಾರಾಗಿದೆ.

ಬಿಎಂಡಬ್ಲ್ಯು ಐ3 ಎಲೆಕ್ಟ್ರಿಕ್ ಕಾರು

ಕಾರಿಗೆ ಒಟ್ಟು ನಾಲ್ಕು ಡೋರ್‌ಗಳಿವೆ. ಆದರೆ ಸಾಮಾನ್ಯ ಕಾರಿಗಿಂತಲೂ ವಿಭಿನ್ನವಾಗಿ ಹಿಂದಿನ ಡೋರ್ ರಿವರ್ಸ್ ಆಗಿ ತೆರೆದುಕೊಳ್ಳಲಿದೆ. (ಚಿತ್ರದಲ್ಲಿ ತೋರಿಸಿರುವಂತೆಯೇ)

ಬಿಎಂಡಬ್ಲ್ಯು ಐ3 ಎಲೆಕ್ಟ್ರಿಕ್ ಕಾರು

ಒಟ್ಟು ಎರಡು ವರ್ಷನ್‌ಗಳಲ್ಲಿ ಬಿಎಂಡಬ್ಲ್ಯು ಐ3 ಎಲೆಕ್ಟ್ರಿಕ್ ಕಾರು ಆಗಮನವಾಗಿದೆ. ಮೊದಲನೆಯದ್ದು ವಿದ್ಯುತ್‌ನಿಂದ ಮಾತ್ರ ಚಲಿಸಲಿದ್ದು, 125kw (167ಅಶ್ವಶಕ್ತಿ) ಎಲೆಕ್ಟ್ರಿಕ್ ಮೋಟಾರ್ ಪಡೆದುಕೊಂಡಿದೆ. ಇದು ಲಿಥಿಯಂ ಇಯಾನ್ ಬ್ಯಾಟರಿಯಿಂದ ಚಲಿಸಲಿದೆ.

ಬಿಎಂಡಬ್ಲ್ಯು ಐ3 ಎಲೆಕ್ಟ್ರಿಕ್ ಕಾರು

ಇನ್ನು ಬಿಎಂಡಬ್ಲ್ಯು ಎಲೆಕ್ಟ್ರಿಕ್ ಕಾರು ಸರಿ ಸುಮಾರು 160 ಕೀ.ಮೀ. ರೇಂಜ್ ವರೆಗೆ ಚಲಿಸಲಿದೆ.

ಬಿಎಂಡಬ್ಲ್ಯು ಐ3 ಎಲೆಕ್ಟ್ರಿಕ್ ಕಾರು

ಹಾಗೆಯೇ ಇದರ ಎರಡನೇ ಹೈಬ್ರಿಡ್ ವರ್ಷನ್ ಕೂಡಾ 167 ಅಶ್ವಶಕ್ತಿ ಉತ್ಪಾದಿಸುವ ಮೋಟಾರ್ ಪಡೆದುಕೊಳ್ಳಲಿದ್ದು, ಇದು ಅವಳಿ ಸಿಲಿಂಡರ್ ಮೋಟಾರ್ ಸೈಕಲ್ ಎಂಜಿನ್ ಹೊಂದಿರಲಿದೆ. ಇದು ಜನರೇಟರ್ ಮಾದರಿಯಲ್ಲಿ ಕೆಲಸ ಮಾಡಲಿದೆ.

ಬಿಎಂಡಬ್ಲ್ಯು ಐ3 ಎಲೆಕ್ಟ್ರಿಕ್ ಕಾರು

ಇನ್ನು ಬಿಎಂಡಬ್ಲ್ಯು ಹೈಬ್ರಿಡ್ ತಳಿ 300 ಕೀ.ಮೀ. ರೇಂಜ್ ವರೆಗೂ ಚಲಿಸಲಿದೆ. ಅದೇ ರೀತಿ ಭಾರವನ್ನು ಕಡಿಮೆ ನಿಟ್ಟಿನಲ್ಲಿ ಕಾರಿನಲ್ಲಿ ಕಾರ್ಬನ್ ಫೈಬರ್‌ಗಳಂತಹ ಹಗುರ ಸಲಕರಣೆಗಳನ್ನು ಬಳಸಲಾಗಿದೆ.

ಬಿಎಂಡಬ್ಲ್ಯು ಐ3 ಎಲೆಕ್ಟ್ರಿಕ್ ಕಾರು

ಲಿಥಿಯಂ ಬ್ಯಾಟರಿ ಒಂದು ತಾಸಿನಷ್ಟು ಚಾರ್ಜ್ ಮಾಡಿಸಿದ್ದಲ್ಲಿ ಇದರ ಸಾಮರ್ಥ್ಯದ ಶೇಕಡಾ 80ರಷ್ಟು ದೂರವನ್ನು ಕ್ರಮಿಸಬಹುದಾಗಿದೆ.

ಬಿಎಂಡಬ್ಲ್ಯು ಐ3 ಎಲೆಕ್ಟ್ರಿಕ್ ಕಾರು

ಲಾಸ್ಟ್ ಬಟ್ ಲೀಸ್ಟ್ ಎಂಬಂತೆ ಬಿಎಂಡಬ್ಲ್ಯು ವಿದ್ಯುತ್ ಚಾಲಿತ ಕಾರು 30 ಲಕ್ಷ ರುಪಾಯಿಗಳಷ್ಟು ದುಬಾರಿಯಾಗಿರಲಿದೆ ಎಂದು ಅಂದಾಜಿಸಲಾಗಿದೆ. ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

Most Read Articles

Kannada
English summary
The production version of the first of the several BMW ‘i' cars, the i3 small car, will be revealed on July 29. The Bavarian automaker has released a teaser video (a short music video, with only a glimpse of the silhouette of the i3 provided), in which it tells us "It's time to Learn a new German word: Vorfreude" That's ‘anticipation' in German.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X