ಈ ದೀಪಾವಳಿಗೆ ಮಹೀಂದ್ರ ರೇವಾ ಓಡಿಸಿ ಇಂಧನ ಉಳಿಸಿ

Written By:

ದೇಶದ ಮುಂಚೂಣಿಯ ಬಾಡಿಗೆ ಕಾರು ವಿತರಕ ಸಂಸ್ಥೆಯಾಗಿರುವ ಕಾರ್‌ಜೋನ್‌ರೆಂಟ್, ಈ ದೀಪಾವಳಿಗೆ ಗ್ರಾಹಕರಿಗೆ ವಿನೂತನ ಯೋಜನೆಯೊಂದನ್ನು ಮುಂದಿಟ್ಟಿದೆ.

ದೇಶದ ಪ್ರಮುಖ ಎಲೆಕ್ಟ್ರಿಕ್ ಕಾರು ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ರೇವಾ ಜತೆ ಕೈಜೋಡಿಸಿರುವ ಕಾರ್‌ಜೋನ್‌ರೆಂಟ್, ಗ್ರಾಹಕರಿಗಾಗಿ ವಿದ್ಯುತ್ ಚಾಲಿತ ರೇವಾ ಇ2ಒ ಸೆಲ್ಫ್ ಡ್ರೈವ್ ಸರ್ವೀಸ್ ಯೋಜನೆ ಮುಂದಿರಿಸಿದೆ.

ಇದರಂತೆ ಗಂಟೆಗೆ ಕೇವಲ 100 ರು. ಶುಲ್ಕ ಆಧಾರದಲ್ಲಿ ಮಹೀಂದ್ರ ರೇವಾ ಇ2ಒ ನಿಮಗೆ ಒಪ್ಪಿಸಲಾಗುವುದು. ಅಂದರೆ ಹಬ್ಬದ ಸಂದರ್ಭದಲ್ಲಿ ತಮ್ಮ ಕುಟುಂಬ ಅಥವಾ ಸ್ನೇಹಿತರ ಜತೆ ಶಾಂಪಿಂಗ್ ತೆರಳಲು ಬಯಸುವುವರು ಈ ಸದಾವಕಾಶವನ್ನು ಬಳಸಬಹುದಾಗಿದೆ.

To Follow DriveSpark On Facebook, Click The Like Button
ಈ ದೀಪಾವಳಿಗೆ ಮಹೀಂದ್ರ ರೇವಾ ಓಡಿಸಿ ಇಂಧನ ಉಳಿಸಿ

ಈ ಮೂಲಕ ಇಂಧನ ಉಳಿಸುವ ಯೋಜನೆಯನ್ನು ಕಂಪನಿ ಹೊಂದಿದೆ. ದೇಶದ ಎಲೆಕ್ಟ್ರಿಕ್ ಕಾರುಗಳ ತವರೂರು ಎಂದೆನಿಸಿಕೊಂಡಿರುವ ಬೆಂಗಳೂರಿನಲ್ಲಿ ವಿದ್ಯುತ್ ಚಾಲಿತ ಕಾರುಗಳಿಗೆ ಹೆಚ್ಚಿನ ಬೇಡಿಕೆಯಿರುವುದರಿಂದ ಈ ಯೋಜನೆ ಮೂಲಕ ಎಲೆಕ್ಟ್ರಿಕ್ ಕಾರುಗಳ ಮಹತ್ವವನ್ನು ಜನರಿಗೆ ತಲುಪಿಸುವ ಇರಾದೆಯನ್ನು ಕಂಪನಿ ಹೊಂದಿದೆ.

ಈ ದೀಪಾವಳಿಗೆ ಮಹೀಂದ್ರ ರೇವಾ ಓಡಿಸಿ ಇಂಧನ ಉಳಿಸಿ

ಯೋಜನೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಈಗಾಗಲೇ 100ರಷ್ಟು ಚಾರ್ಜಿಂಗ್ ಪಾಯಿಂಟ್ ತೆರೆಯಲಾಗಿದೆ.

ಈ ದೀಪಾವಳಿಗೆ ಮಹೀಂದ್ರ ರೇವಾ ಓಡಿಸಿ ಇಂಧನ ಉಳಿಸಿ

ಪ್ರಸ್ತುತ ಹಬ್ಬದ ಆವೃತ್ತಿಯಲ್ಲಿ ದೇಶದ ಕಾರು ಬಾಡಿಗೆ ಸೇವೆಯನ್ನು ಪರಿಷ್ಕೃತಗೊಳಿಸಲು ಹೊರಟಿರುವ ಕಾರ್‌ಜೋನ್‌ರೆಂಟ್, ಮಾಲಿನ್ಯ ರಹಿತ ಆರೋಗ್ಯಯುತವಾದ ದೀಪಾವಳಿ ಹಬ್ಬದ ಆಚರಣೆಯನ್ನು ಎದುರು ನೋಡುತ್ತಿದೆ. ಇದು ಭಾರತೀಯ ಪ್ರವಾಸ ಮಾರುಕಟ್ಟೆಯಲ್ಲಿ ಪರಿಸರ ಸ್ನೇಹಿ ಅನುಷ್ಠಾನಗೊಳಿಸುವುದರ ಅಂಗವಾಗಿ ಮಹೀಂದ್ರ ರೇವಾ ಸೆಲ್ಫ್ ಡ್ರೈವ್ ಸರ್ವೀಸ್ ಯೋಜನೆ ಜಾರಿಗೆ ತರಲಾಗಿದೆ ಎಂದು ಕಾರ್‌ಜೋನ್‌ರೆಂಟ್ ಕಾರ್ಯನಿರ್ವಾಹಕ ನಿರ್ದೇಶಕ ಸಾಕ್ಷಿ ವಿಜ್ ತಿಳಿಸಿದ್ದಾರೆ.

ಈ ದೀಪಾವಳಿಗೆ ಮಹೀಂದ್ರ ರೇವಾ ಓಡಿಸಿ ಇಂಧನ ಉಳಿಸಿ

ಚಾಲಕರಿಗೆ ಶೂನ್ಯ ಚಾಲನಾ ವೆಚ್ಚ ಒದಗಿಸುತ್ತಿರುವ ಮಹೀಂದ್ರ ರೇವಾ ಇ2ಒ ವಿದ್ಯುತ್ ಚಾಲಿತ ವಾಹನ, 100 ಕೀ.ಮೀ. ರೇಂಜ್ ವರೆಗೆ ಆರಾಮದಾಯಕವಾಗಿ ಚಲಿಸಬಹುದಾಗಿದೆ.

ಈ ದೀಪಾವಳಿಗೆ ಮಹೀಂದ್ರ ರೇವಾ ಓಡಿಸಿ ಇಂಧನ ಉಳಿಸಿ

ಹಾಗಿದ್ದಲ್ಲಿ ಇನ್ಯಾಕೆ ತಡ ಈಗಲೇ ಮಹೀಂದ್ರ ರೇವಾ ಪಡೆದುಕೊಳ್ಳಿರಿ

ಕಾರ್‌ಜೋನ್‌ರೆಂಟ್ ದೂರವಾಣಿ ಸಂಖ್ಯೆ: 0888 222 2222 ಅಥವಾ

www.carzonrent.com ವೆಬ್‌ಸೈಟ್‌ಗೆ ಭೇಟಿ ಕೊಡಿರಿ...

English summary
One of India's leading car rental service provider Carzonrent is urging you to save fuel this Diwali by opting for its Mahindra Reva e2o Self-drive Service.
Story first published: Tuesday, October 29, 2013, 16:00 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark