ವರ್ಷಾಂತ್ಯದಲ್ಲೇ ಷೆವರ್ಲೆ ಹೊಸ ಎಸ್‌ಯುವಿ 'ಟ್ರೈಲ್‌ಬ್ಲೇಜರ್' ಬಿಡುಗಡೆ

Written By:

ಅಮೆರಿಕ ಮೂಲದ ಪ್ರಖ್ಯಾತ ಜನರಲ್ ಮೋಟಾರ್ಸ್ ಸಂಸ್ಥೆಯ ಕಾರು ಬ್ರಾಂಡ್ ಆಗಿರುವ ಷೆವರ್ಲೆ ಪ್ರಸಕ್ತ ಸಾಲಿನ ವರ್ಷಾಂತ್ಯದಲ್ಲೇ ನೂತನ ಎಸ್‌ಯುವಿಯೊಂದನ್ನು ದೇಶಕ್ಕೆ ಪರಿಚಯಿಸಲಿದೆ.

ವರದಿಗಳ ಪ್ರಕಾರ ಷೆವರ್ಲೆ ಟ್ರೈಲ್‌ಬ್ಲೇಜರ್ ಕ್ರೀಡಾ ಬಳಕೆಯ ವಾಹನ 2015ನೇ ಸಾಲಿನ ವರ್ಷಾಂತ್ಯದಲ್ಲಿ ಬಿಡುಗಡೆಯಾಗಲಿದೆ. ನಿರಂತರ ಅಂತರಾಳದಲ್ಲಿ ದೇಶಕ್ಕೆ ವಿವಿಧ ಶ್ರೇಣಿಯ ವಾಹನಗಳನ್ನು ಪರಿಚಯಿಸುತ್ತಿರುವ ಷೆವರ್ಲೆ ಈಗ ಅತಿ ಹೆಚ್ಚು ಬೇಡಿಕೆಯಿರುವ ಕ್ರೀಡಾ ಬಳಕೆಯ ವಾಹನಗಳತ್ತ ತನ್ನ ಗಮನ ಕೇಂದ್ರಿಕರಿಸಿದೆ.

ಷೆವರ್ಲೆ ಹೊಸ ಎಸ್‌ಯುವಿ 'ಟ್ರೈಲ್‌ಬ್ಲೇಜರ್'

ಅಷ್ಟೇ ಯಾಕೆ ಭಾರತದಲ್ಲೇ ಸ್ಥಳೀಯವಾಗಿ ಜೋಡಣೆ ಮಾಡುವ ಮೂಲಕ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳುವ ನಿರೀಕ್ಷೆಯನ್ನು ಸಂಸ್ಥೆ ಹೊಂದಿದೆ. ಈ ಮೂಲಕ ದೇಶದಲ್ಲಿ ಮಾರಾಟ ಚೇತರಿಕೆಯ ಗುರಿಯಿರಿಸಿಕೊಂಡಿದೆ.

ಷೆವರ್ಲೆ ಹೊಸ ಎಸ್‌ಯುವಿ 'ಟ್ರೈಲ್‌ಬ್ಲೇಜರ್'

ಜಾಗತಿಕವಾಗಿ ಟ್ರೈಲ್‌ಬ್ಲೇಜರ್ ಎಸ್‌ಯುವಿ 2.8 ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದರಲ್ಲಿ ಆರು ಸ್ಪೀಡ್ ಆಟೋ ಗೇರ್ ಬಾಕ್ಸ್ ಕೂಡಾ ಇದೆ. ಇದರ ಡೀಸೆಲ್ ಎಂಜಿನ್ 500 ತಿರುಗುಬಲದಲ್ಲಿ 200 ಅಶ್ವಶಕ್ತಿ ಉತ್ಪಾದಿಸುತ್ತದೆ.

ಷೆವರ್ಲೆ ಹೊಸ ಎಸ್‌ಯುವಿ 'ಟ್ರೈಲ್‌ಬ್ಲೇಜರ್'

ಇನ್ನು ಭಾರತ ಮಾದರಿಯಲ್ಲೂ ಇದಕ್ಕೆ ಸಮಾನವಾದ ಎಂಜಿನ್ ಕಂಡುಬರುವ ಸಾಧ್ಯತೆಯಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸಹ ಇರಲಿದೆ.

ಸುರಕ್ಷತೆ

ಸುರಕ್ಷತೆ

ಎಬಿಎಸ್ ಜೊತೆ ಇಬಿಡಿ,

ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ,

ಹಿಲ್ ಸ್ಟ್ಯಾರ್ಟ್ ಅಸಿಸ್ಟ್,

ಪ್ಯಾನಿಕ್ ಬ್ರೇಕ್ ಅಸಿಸ್ಟ್,

ಕಾರ್ನರಿಂಗ್ ಬ್ರೇಕ್ ಕಂಟ್ರೋಲ್,

ಹೈಡ್ರಾಲಿಕ್ ಬ್ರೇಕ್ ಫೇಡ್ ಅಸಿಸ್ಟ್,

ಸುರಕ್ಷತೆ

ಸುರಕ್ಷತೆ

ಹಿಲ್ ಡಿಸೆಂಟ್ ಕಂಟ್ರೋಲ್,

ಟ್ರಾಕ್ಷನ್ ಕಂಟ್ರೋಲ್,

ಚಾಲಕ ಮತ್ತು ಪ್ರಯಾಣಿಕ ಏರ್ ಬ್ಯಾಗ್,

ಚೈಲ್ಡ್ ನಿಯಂತ್ರಣ ಪ್ರೊವಿಷನ್,

ಎಲೆಕ್ಟ್ರಾನಿಕ್ ಕಳ್ಳತನ ನಿರೋಧಕ,

ಸೆಕ್ಯೂರಿಟಿ ಸಿಸ್ಟಂ.

ಷೆವರ್ಲೆ ಹೊಸ ಎಸ್‌ಯುವಿ 'ಟ್ರೈಲ್‌ಬ್ಲೇಜರ್'

ಭಾರತದಲ್ಲಿ ಪ್ರೀಮಿಯಂ ಎಸ್‌ಯುವಿಗಳ ಸಾಲಲ್ಲಿ ಗುರುತಿಸಿಕೊಳ್ಳಲಿರುವ ಷೆವರ್ಲೆ ಟ್ರೈಲ್‌‍ಬ್ಲೇಜರ್ ಪ್ರಮುಖವಾಗಿಯೂ ಟೊಯೊಟಾ ಫಾರ್ಚ್ಯುನರ್, ಹ್ಯುಂಡೈ ಸಾಂಟಾ ಫೆ, ಫೋರ್ಡ್ ಎಂಡೀವರ್ ಮತ್ತು ಮಿಟ್ಸುಬಿಸಿ ಪಜೆರೊ ಮಾದರಿಗಳಿಗೆ ಸ್ಪರ್ಧೆ ಒಡ್ಡಲಿದೆ.

ಷೆವರ್ಲೆ ಹೊಸ ಎಸ್‌ಯುವಿ 'ಟ್ರೈಲ್‌ಬ್ಲೇಜರ್'

ಒಟ್ಟಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಯಶಸ್ಸು ಸಾಧಿಸಬೇಕಾದರೆ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಷೆವರ್ಲೆ ನಡೆ ಕಾದು ನೋಡಬೇಕಾಗಿದೆ.

English summary
Chevrolet currently sells a wide range of products in the Indian market. The manufacturer is having a tough time selling vehicles in India. Their plan is to introduce vehicles that will attract buyers to their products. They plan on introducing an all-new SUV in India by 2015-end.
Story first published: Monday, March 9, 2015, 15:38 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark