ದಟ್ಸನ್ ಗೊ ಪ್ಲಸ್ ಎಂಪಿವಿ ಭರ್ಜರಿ ಎಂಟ್ರಿ

Written By:

ನಿಸ್ಸಾನ್‌ನ ಕಡಿಮೆ ವೆಚ್ಚದ ಕಾರು ಬ್ರಾಂಡ್ ಆಗಿರುವ ದಟ್ಸನ್, ನೂತನ ದಟ್ಸನ್ ಗೊ ಪ್ಲಸ್ ಎಂಪಿವಿ ಕಾರನ್ನು ಭಾರತ ಮಾರುಕಟ್ಟೆಗೆ ಪರಿಚಯಿಸಿದೆ.

2014 ದೆಹಲಿ ಆಟೋ ಎಕ್ಸ್ ಪೋ

ರಾಷ್ಟ್ರ ರಾಜಧಾನಿಯಲ್ಲಿ ಸಾಗುತ್ತಿರುವ 12ನೇ ಆಟೋ ಎಕ್ಸ್ ಪೋದಲ್ಲಿ ದಟ್ಸನ್ ಗೊ ಪ್ಲಸ್ ಎಂಪಿವಿ ಪ್ರದರ್ಶನಗೊಂಡಿದೆ. ಇದಕ್ಕೂ ಮೊದಲು ಗೊ ಪ್ಲಸ್ ಮಾದರಿ ಇಂಡೋನೇಷ್ಯಾದಲ್ಲಿ ಅನಾವರಣಗೊಂಡಿತ್ತು.

ದಟ್ಸನ್ ಗೊ ಪ್ಲಸ್ ಎಂಪಿವಿ ಭರ್ಜರಿ ಎಂಟ್ರಿ

ಇದು ದಟ್ಸನ್‌ನಿಂದ ಬಂದಿರುವ ಮೊದಲ ಎಂಪಿವಿ ಸೆಗ್ಮೆಂಟ್ ಕಾರಾಗಿರಲಿದೆ. ಗೊ ಹ್ಯಾಚ್‌ಬ್ಯಾಕ್ ತಲಹದಿಯಲ್ಲಿ ಇದನ್ನು ರೂಪಿಸಲಾಗಿದೆ. ಇದೇ ಸಂದರ್ಭದಲ್ಲಿ ರೆಡಿ ಗೊ ಕ್ರಾಸೋವರ್ ಕಾನ್ಸೆಪ್ಟ್ ಸಹ ಪ್ರದರ್ಶಿಸಲಾಗಿತ್ತು.

ದಟ್ಸನ್ ಗೊ ಪ್ಲಸ್ ಎಂಪಿವಿ ಭರ್ಜರಿ ಎಂಟ್ರಿ

ದೊಡ್ಡ ಕುಟುಂಬವನ್ನು ಗುರಿಯಾಗಿರಿಸಿಕೊಂಡು ದಟ್ಸನ್ ಗೊ ಪ್ಲಸ್ ಹ್ಯಾಚ್‌ಬ್ಯಾಕ್ ಕಾರು ನಿರ್ಮಿಸಲಾಗಿದೆ. ಇದು 5+2 ಆಸನ ವ್ಯವಸ್ಥೆ ಹೊಂದಿರಲಿದೆ.

ದಟ್ಸನ್ ಗೊ ಪ್ಲಸ್ ಎಂಪಿವಿ ಭರ್ಜರಿ ಎಂಟ್ರಿ

ಪ್ರಮುಖವಾಗಿ ಮಾರುತಿ ಎರ್ಟಿಗಾ ಹಾಗೂ ಇನ್ನಷ್ಟೇ ಆಗಮನವಾಗಲಿರುವ ಹೋಂಡಾ ಮೊಬಿಲಿಯೊ ಪ್ರತಿಸ್ಪರ್ಧಿಯಾಗಲಿರುವ ದಟ್ಸನ್ ಗೊ ಪ್ಲಸ್ ಎಂಪಿವಿ, ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

ದಟ್ಸನ್ ಗೊ ಪ್ಲಸ್ ಎಂಪಿವಿ ಭರ್ಜರಿ ಎಂಟ್ರಿ

ಇದು ದಟ್ಸನ್ ಮೊಬೈಲ್ ಡಾಕಿಂಗ್ ಸ್ಟೇಷನ್ ಸ್ಮಾರ್ಟ್ ಫೋನ್ ಇಂಟೆಗ್ರೇಷನ್ ಫೀಚರ್ ಕೂಡಾ ಹೊಂದಿರಲಿದೆ.

ದಟ್ಸನ್ ಗೊ ಪ್ಲಸ್ ಎಂಪಿವಿ ಭರ್ಜರಿ ಎಂಟ್ರಿ

ಹಗುರ ಭಾರದ ದಟ್ಸನ್ ಗೊ ಪ್ಲಸ್ 1.2 ಲೀಟರ್ ಎಂಜಿನ್ ಪಡೆದುಕೊಳ್ಳಲಿದೆ. ಇದು 67 ಬಿಎಚ್‌ಪಿ ಪವರ್ (104 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ದಟ್ಸನ್ ಗೊ ಪ್ಲಸ್ ಎಂಪಿವಿ ಭರ್ಜರಿ ಎಂಟ್ರಿ

ಒಟ್ಟಿನಲ್ಲಿ ದಟ್ಸನ್ ಹ್ಯಾಚ್‌ಬ್ಯಾಕ್ ಬಳಿಕ ವರ್ಷದ ಮಧ್ಯಂತರ ಅವಧಿಯಲ್ಲಿ ದಟ್ಸನ್ ಗೊ ಪ್ಲಸ್ ಎಂಪಿವಿ ಕೂಡಾ ರಸ್ತೆ ಪ್ರವೇಶಿಸುವ ನಿರೀಕ್ಷೆಯಿದೆ.

English summary
Datsun Go Plus MPV unveiled at 2014 Auto Expo
Story first published: Thursday, February 6, 2014, 8:31 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark