ಫಿಯೆಟ್‌ ಲಿನಿಯಾ ಟಿ-ಜೆಟ್ ಲಾಂಚ್; ದರ, ಮೈಲೇಜ್ ಎಷ್ಟು?

Posted By:

ಕುಸಿದಿರುವ ಮಾರುಕಟ್ಟೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಫಿಯೆಟ್ ಗ್ರೂಪ್ ಆಟೋಮೊಬೈಲ್ಸ್ ಇಂಡಿಯಾ, ನೂತನ ಲಿನಿಯಾ ಟಿ-ಜೆಟ್ ಸೆಡಾನ್ ವರ್ಷನ್ ಕಾರನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಇದರ ಆರಂಭಿಕ ದರ 7.6 ಲಕ್ಷ ರು.ಗಳಾಗಿವೆ.

ಈ ಸೆಗ್ಮೆಂಟ್‌ನಲ್ಲಿ ಪೆಟ್ರೋಲ್ ಕಾರುಗಳಿಗೆ ವರ್ಧಿಸುತ್ತಿರುವ ಬೇಡಿಕೆಯನ್ನು ಪರಿಗಣಿಸಿ ಫಿಯೆಟ್, ಲಿನಿಯಾ ಟಿ-ಜೆಟ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಿದೆ. ಒಟ್ಟು ಮೂರು ವೆರಿಯಂಟ್‌ಗಳಲ್ಲಿ ಲಿನಿಯಾ ಟಿ-ಜೆಟ್ ಆಗಮನವಾಗಿದ್ದು, ದೆಹಲಿ ಎಕ್ಸ್ ಶೋ ರೂಂ ದರ 7.6 ಲಕ್ಷ ರು.ಗಳಿಂದ ಹಿಡಿದು 8.88 ಲಕ್ಷ ರು.ಗಳ ವರೆಗಿದೆ.

ವೆರಿಯಂಟ್ ಹಾಗೂ ದರ ಮಾಹಿತಿ

  • ಆಕ್ಟಿವ್: 7.6 ಲಕ್ಷ ರು.
  • ಡೈನಾಮಿಕ್: 8.4 ಲಕ್ಷ ರು.
  • ಇಮೊಷನ್: 8.8 ಲಕ್ಷ ರು.

ಫಿಯೆಟ್ ಲಿನಿಯಾ ಟಿ-ಜೆಟ್, 1.4 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 112 ಅಶ್ವಶಕ್ತಿ (207 ಎನ್‌ಎಂ ಟರ್ಕ್ಯೂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದೆ.

ಮೈಲೇಜ್...

ಇನ್ನು ಇಟಲಿ ಮೂಲದ ಕಂಪನಿಯ ಪ್ರಕಾರ ಫಿಯೆಟ್ ಲಿನಿಯಾ ಟಿ-ಜೆಟ್ ಸೆಡಾನ್ ಕಾರು ಪ್ರತಿ ಲೀಟರ್‌ಗೆ 15.7 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಫಿಯೆಟ್ ಲಿನಿಯಾ ಟಿ-ಜೆಟ್

ಇದರಲ್ಲಿ ಮಳೆ ಸಂವೇದಕ ವೈಪರ್, ಎಬಿಎಸ್ ಜತೆಗೆ ಇಬಿಡಿ, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್, ಟ್ವಿನ್ ಏರ್‌ಬ್ಯಾಗ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 6 ಸ್ಪೀಕರುಗಳ ಜತೆಗೆ ಇಂಟಿಗ್ರೇಟಡ್ ಆಡಿಯೋ ಸಿಸ್ಟಂ, ರಿಮೋಟ್ ಕಂಟ್ರೋಲ್, ಸ್ಟೀರಿಂಗ್ ವೀಲ್ ಮೌಂಟೆಡ್ ಕಂಟ್ರೋಲ್, 15 ಇಂಚು ಅಲ್ಯೂಮಿನಿಯಂ ಅಲಾಯ್ ವೀಲ್ ಹಾಗೂ ಎಲ್ಲ ನಾಲ್ಕು ವೀಲ್‌ಗಳಿಗೂ ಡಿಸ್ಕ್ ಬ್ರೇಕ್ ಸೌಲಭ್ಯವಿದೆ.

ಕಲರ್ ವೆರಿಯಂಟ್

ಕಲರ್ ವೆರಿಯಂಟ್

Oceanic Blue,

Tuscan White,

New Pearl White,

Hip Hop Black &

Minimal Grey.

Fiat Linea T-Jet

Fiat Linea T-Jet

ಆ ಬಳಿಕ ಪ್ರತಿಕ್ರಿಯಿಸಿರುವ ಫಿಯೆಟ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ನಾಗೇಶ್ ಬಸವನಹಳ್ಳಿ, ದೇಶದ ಎಂಟು ನಗರಗಳಲ್ಲಾಗಿ ಪ್ರತಿ ತಿಂಗಳು 50 ಕಾರುಗಳನ್ನು ಮಾರಾಟ ಮಾಡುವುದು ಕಂಪನಿಯ ಪ್ರಾಥಮಿಕ ಗುರಿಯಾಗಿರಲಿದೆ ಎಂದಿದ್ದಾರೆ.

Fiat Linea T-Jet

Fiat Linea T-Jet

ಮುಂದಿನ ಮೂರು ವರ್ಷಗಳಲ್ಲಿ ಒಂಬತ್ತು ಹೊಸ ಕಾರುಗಳನ್ನು ಲಾಂಚ್ ಮಾಡುವುದು ಫಿಯೆಟ್ ಯೋಜನೆಯಾಗಿದೆ. ಇದರಲ್ಲಿ ಬಹುನಿರೀಕ್ಷಿತ ಅಮೆರಿಕ ಮೂಲದ ಜೀಪ್ ಬ್ರಾಂಡ್ ಕೂಡಾ ಸೇರಿಕೊಂಡಿದೆ.

Fiat Linea T-Jet

Fiat Linea T-Jet

ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಕ್ರೀಡಾ ಬಳಕೆಯ ಉತ್ಪನ್ನಗಳಿಗೆ (ಎಸ್‌ಯುವಿ) ಬೇಡಿಕೆ ಹೆಚ್ಚುತ್ತಲೇ ಇವೆ. ಹಾಗಾಗಿ ಈ ಸೆಗ್ಮೆಂಟ್‌ನತ್ತವೂ ಫಿಯೆಟ್ ಗಮನ ಹರಿಸಿವೆ.

Fiat Linea T-Jet

Fiat Linea T-Jet

ಪ್ರಸ್ತುತ ಲಭ್ಯವಿರುವ ಮಾಹಿತಿ ಪ್ರಕಾರ ಡಿಸೆಂಬರ್ ವೇಳೆಗೆ ಜೀಪ್‌ನ ಮೂರು ಮಾಡೆಲ್‌ಗಳು ದೇಶಕ್ಕೆ ಪರಿಚಯವಾಗಲಿದೆ. ಹಾಗೆಯೇ ಒಟ್ಟು 9 ಮಾಡೆಲ್‌ಗಳ ಪೈಕಿ ತಲಾ ನಾಲ್ಕರಂತೆ ಫಿಯೆಟ್ ಹಾಗೂ ಕ್ರೈಸ್ಲರ್ ಹಾಗೂ ಒಂದು ಅಬಾರ್ತ್ ಮಾಡೆಲ್ ಸೇರಿಕೊಂಡಿರಲಿದೆ.

Fiat Linea T-Jet

Fiat Linea T-Jet

ಫಿಯೆಟ್ ಕಳೆದ ವರ್ಷವಷ್ಟೇ ಟಾಟಾ ಮೋಟಾರ್ಸ್ ಜತೆಗಿನ ಆರು ವರ್ಷಗಳ ಅವಧಿಯ ಮಾರಾಟ ಮತ್ತು ವಿತರಣಾ ಜಂಟಿ ಪಾಲುದಾರಿಕೆಗೆ ಬ್ರೇಕ್ ಹಾಕಿತ್ತು. ಜಂಟಿ ಪಾಲುದಾರಿಕೆಯಲ್ಲಿ ಕಂಪನಿಯ ನಿರೀಕ್ಷೆ ಮುಟ್ಟುವಲ್ಲಿ ವಿಫಲವಾಗಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿತ್ತು.

English summary
In a bid to expand its lineup and increase its market share the Italian automaker has introduced the 2013 Linea T-Jet petrol engine variant. Linea T-Jet has a starting price of INR 7.6 lakhs (Ex-showroom New Delhi) for the Active trim.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more