ಇದೀಗ ಫೋರ್ಡ್ ಇಕೊಸ್ಪೋರ್ಟ್ ಬಾಡಿಗೆಗೆ ಲಭ್ಯ

Written By:

ನೀವು ಫೋರ್ಡ್ ಇಕೊಸ್ಪೋರ್ಟ್ ಖರೀದಿಸುವ ಅವಕಾಶದಿಂದ ವಂಚಿತರಾಗಿದ್ದೀರಾ? ಒಂದು ವರ್ಷದ ವರೆಗೂ ವರ್ಧಿಸಿರುವ ಕಾಯುವಿಕೆ ಅವಧಿಯಿಂದ ಬೆಸತ್ತು ಹೋಗಿದ್ದೀರಾ? ಚಿಂತೆಗೊಳಗಾಗದಿರಿ. ನಿಮ್ಮ ನೆರವಿಗೆ ಝೂಮ್ ಸಂಸ್ಥೆ ಮುಂದೆ ಬರಲಿದೆ.

ಹೌದು, ದೇಶದಲ್ಲಿ ಇದೇ ಮೊದಲ ಬಾರಿಗೆ ಇಕೊಸ್ಪೋರ್ಟ್ ಬಾಡಿಗೆಗೆ ದೊರಕಲಿದೆ. ಬೆಂಗಳೂರು ಕೇಂದ್ರಿತವಾಗಿ ಕಾರ್ಯಾಚರಿಸುತ್ತಿರುವ ಸೆಲ್ಫ್-ಡ್ರೈವ್ ಕಂಪನಿಯಾಗಿರುವ ಝೂಮ್ ಕಾರ್ ಡಾಟ್ ಇನ್ ಇಂತಹದೊಂದು ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಲಿದೆ.

To Follow DriveSpark On Facebook, Click The Like Button
ಇದೀಗ ಫೋರ್ಡ್ ಇಕೊಸ್ಪೋರ್ಟ್ ಬಾಡಿಗೆಗೆ ಲಭ್ಯ

ಈ ಮೂಲಕ ನಿಮ್ಮ ಪ್ರವಾಸವನ್ನು ಇನ್ನು ಚಂದವಾಗಿಸಬಹುದಾಗಿದೆ. ನಿಮ್ಮ ಇಷ್ಟಾನುಸಾರವಾಗಿ ಝೂಮ್ ಕಾರುಗಳನ್ನು ಗಂಟೆ, ದಿನ, ವಾರ ಅಥವಾ ತಿಂಗಳ ವರೆಗೂ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಇದೀಗ ಫೋರ್ಡ್ ಇಕೊಸ್ಪೋರ್ಟ್ ಬಾಡಿಗೆಗೆ ಲಭ್ಯ

ಝೂಮ್ ಕಾರುಗಳು ಆಲ್ ಇಂಡಿಯಾ ಪರ್ಮೀಟ್ ಪಡೆದುಕೊಂಡಿದೆ. ಆದರೆ ಸದ್ಯ ಬೆಂಗಳೂರು ಕೇಂದ್ರಿಕರಿಸಿ ಕೆಲಸ ಮಾಡುತ್ತಿದೆ. ಅಂದರೆ ಪಿಕಪ್ ಮತ್ತು ಡ್ರಾಪ್ ಸೇವೆಗಳು ಬೆಂಗಳೂರಿನಲ್ಲಿ ಮಾತ್ರ ಲಭ್ಯವಿರಲಿದೆ.

ಇದೀಗ ಫೋರ್ಡ್ ಇಕೊಸ್ಪೋರ್ಟ್ ಬಾಡಿಗೆಗೆ ಲಭ್ಯ

ಬೆಂಗಳೂರು ಸುತ್ತು ಮುತ್ತಲಿನ ಪ್ರದೇಶಕ್ಕೆ ಪ್ರವಾಸ ಹೋಗ ಬಯಸುವವರು ಝೂಮ್ ಮೂಲಕ ತಮಗಿಷ್ಟವಾದ ಕಾರುಗಳನ್ನು ಬುಕ್ ಮಾಡಬಹುದಾಗಿದೆ. ವೆರಿಯಂಟ್ ಹಾಗೂ ನೀವು ತಗೊಳ್ಳುವ ಸಮಯಕ್ಕೆ ಅನುಗುಣವಾಗಿ ಬಾಡಿಗೆ ನಿರ್ಣಯವಾಗಲಿದೆ.

ಇದೀಗ ಫೋರ್ಡ್ ಇಕೊಸ್ಪೋರ್ಟ್ ಬಾಡಿಗೆಗೆ ಲಭ್ಯ

ಸದ್ಯ ಇಕೊಸ್ಪೋರ್ಟ್ ಜತೆಗೆ ಫೋರ್ಡ್ ಫಿಗೊ, ಫೋಕ್ಸ್‌ವ್ಯಾಗನ್ ವೆಂಟೊ, ಸ್ಕಾರ್ಪಿಯೊ ಎಲ್‌ಎಕ್ಸ್, ಸ್ಕಾರ್ಪಿಯೊ ಎಸ್‌ಎಲ್‌ಇ ಮತ್ತು ಬಿಎಂಡಬ್ಲ್ಯು ದುಬಾರಿ 3 ಸಿರೀಸ್ ಕಾರುಗಳು ಲಭ್ಯವಿದೆ.

ಇದೀಗ ಫೋರ್ಡ್ ಇಕೊಸ್ಪೋರ್ಟ್ ಬಾಡಿಗೆಗೆ ಲಭ್ಯ

ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿರುವಂತೆಯೇ ಇದಕ್ಕಾಗಿ ಯಾವುದೇ ಮುಂಗಡ ವೆಚ್ಚವನ್ನು ಪಾವತಿಸಬೇಕಾಗಿಲ್ಲ. ಅಲ್ಲದೆ ಸೋಮವಾರದಿಂದ ಗುರುವಾರದ ವರೆಗೆ ಶೇಕಡಾ 40ರಷ್ಟು ರಿಯಾಯಿತಿ ಕೂಡಾ ದೊರಕಲಿದೆ.

ಇದೀಗ ಫೋರ್ಡ್ ಇಕೊಸ್ಪೋರ್ಟ್ ಬಾಡಿಗೆಗೆ ಲಭ್ಯ

ನಗರದ ಪ್ರದಾನ ಕೇಂದ್ರಗಳಾದ ಕೋರಮಂಗಲ, ಮಲ್ಲೇಶ್ವರಂ, ಜೆ.ಪಿ ನಗರ, ಹೆಬ್ಬಾಳ ಮುಂತಾದ ಪ್ರದೇಶಗಳಲ್ಲಿ ಝೂಮ್ ಸೇವೆ ಲಭ್ಯವಿರಲಿದೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ 080-67684475 ಅಥವಾ ಭೇಟಿ ಕೊಡಿರಿ http://www.zoomcar.in/

Story first published: Tuesday, January 28, 2014, 16:42 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark