ಇಕೊಸ್ಪೋರ್ಟ್ 'ರಾಕೆಟ್' ಬುಕ್ಕಿಂಗ್‌ಗೆ ಕಾರಣಗಳೇನು?

ಜೂನ್ ಮಾಸಂತ್ಯದಲ್ಲಿ ಲಾಂಚ್ ಕಂಡಿದ್ದ ಬಹುನಿರೀಕ್ಷಿತ ಫೋರ್ಡ್ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ ಕಾರು ಈಗಾಗಲೇ ಎರಡು ತಿಂಗಳು ದಾಟಿರುವಂತೆಯೇ 40,000ಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಗಿಟ್ಟಿಸಿಕೊಂಡಿದೆ. ಈ ನಡುವೆ ಗ್ರಾಹಕರಿಂದ ನಿರೀಕ್ಷೆಗಿಂತ ಮೀರಿದ ಬೇಡಿಕೆ ಕಂಡುಬಂದಿದ್ದರ ಹಿನ್ನಲೆಯಲ್ಲಿ ನಿಗದಿತ ವೆರಿಯಂಟ್‌ಗಳ ಬುಕ್ಕಿಂಗ್ ಪ್ರಕ್ರಿಯೆ ಸ್ಥಗಿತಗೊಳಿಸುವಲ್ಲಿ ಫೋರ್ಡ್ ಪ್ರೇರಿತವಾಗಿದೆ.

ಈಗಾಗಲೇ ಡಸ್ಟರ್ ಮೀರಿಸಿರುವ ಇಕೊಸ್ಪೋರ್ಟ್ ರಾಕೆಟ್ ರೀತಿಯಲ್ಲಿ ನೆಗೆತ ದಾಖಲಿಸಿಕೊಂಡಿದೆ. ಅಷ್ಟಕ್ಕೂ ಇಕೊಸ್ಪೋರ್ಟ್‌ಗೆ ವ್ಯಕ್ತವಾಗಿರುವ ಇಷ್ಟೊಂದು ಗರಿಷ್ಠ ಸಂಖ್ಯೆಯ ಬುಕ್ಕಿಂಗ್‌ಗೆ ಕಾರಣಗಳೇನು? ಎಂಬುದನ್ನು ತಿಳಿದುಕೊಳ್ಳಲು ಸ್ಲೈಡರ್‌ನತ್ತ ಮುಂದುವರಿಯಿರಿ.

ದರ ಪ್ರಮುಖ ಅಂಶ

ದರ ಪ್ರಮುಖ ಅಂಶ

ನಮಗೆ ತಿಳಿದಂತೆ ಇಕೊಸ್ಪೋರ್ಟ್ ಮಾರಾಟ ಪ್ರಗತಿಯಲ್ಲಿ ದರ ಪ್ರಮುಖ ಪಾತ್ರ ವಹಿಸುತ್ತಿದೆ. ಇಕೊಸ್ಪೋರ್ಟ್ 5.82 ಲಕ್ಷ ರು.ಗಳಿಂದ 9.37 ಲಕ್ಷ ರು.ಗಳ ಅಸುಪಾಸಿನಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ಹೆಚ್ಚಿನ ಫೀಚರ್ಸ್‌ಗಳನ್ನು ಒದಗಿಸುತ್ತಿವೆ. ಇನ್ನೊಂಡೆದೆ ಡಸ್ಟರ್ ದರ 8 ಲಕ್ಷ ರು.ಗಳಿಂದ 12.18 ಲಕ್ಷ ರು.ಗಳ ಅಸುಪಾಸಿನಲ್ಲಿದೆ. ಇದು ಇಕೊಸ್ಪೋರ್ಟ್‌ಗೆ ಹೋಲಿಸಿದಾಗ ದುಬಾರಿಯೆನಿಸುತ್ತಿದ್ದು, ಟಾಪ್ ಎಂಡ್ ವೆರಿಯಂಟ್ 2ರಿಂದ 3 ಲಕ್ಷ ರು.ಗಳಷ್ಟು ದುಬಾರಿಯೆನಿಸಿಕೊಂಡಿದೆ.

ವಿನ್ಯಾಸ

ವಿನ್ಯಾಸ

ಮೊದಲ ನೋಟದಲ್ಲಿ ಡಸ್ಟರ್ ತುಂಬಾ ಸೊಗಸಾಗಿ ಕಾಣಿಸಿಕೊಂಡರೂ ನಗರ ಪ್ರದೇಶಕ್ಕೆ ಹೊಂದಿಕೆಯಾಗುವ ಕಾಂಪಾಕ್ಟ್ ಎಸ್‌ಯುವಿ ವಿನ್ಯಾಸವನ್ನು ಇಕೊಸ್ಪೋರ್ಟ್ ಪಡೆದಿದೆ. ಹಾಗೆಯೇ ಆಕರ್ಷಕ ಎಕ್ಸ್‌ಟೀರಿಯರ್ ಸಹಿತ ಇಂಟಿರಿಯರ್ ವಿನ್ಯಾಸ ಕಾಪಾಡಿಕೊಂಡಿದೆ.

ವಿಭಿನ್ನ ವೆರಿಯಂಟ್‌ಗಳಲ್ಲಿ ಲಭ್ಯ.

ವಿಭಿನ್ನ ವೆರಿಯಂಟ್‌ಗಳಲ್ಲಿ ಲಭ್ಯ.

ಇನ್ನು ಡಸ್ಟರ್‌ಗೆ ಹೋಲಿಸಿದರೆ ಇಕೊಸ್ಫೋರ್ಟ್ ವಿಭಿನ್ನ ವೆರಿಯಂಟ್‌ಗಳಲ್ಲಿ ಲಭ್ಯವಿರುತ್ತದೆ. ಇದು ಗ್ರಾಹಕರಿಗೆ ತಮ್ಮ ಬಜೆಟ್‌ಗೆ ಅನುಸಾರವಾಗಿ ಕಾರು ಖರೀದಿಸಲು ನೆರವಾಗುತ್ತದೆ. ಅಂದ ಹಾಗೆ ಇಕೊಸ್ಪೋರ್ಟ್, 1.5 ಲೀಟರ್ ಪೆಟ್ರೋಲ್. 1.0 ಲೀಟರ್ ಟರ್ಬೊ ಇಕೊಬೂಸ್ಟ್ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್‌ಗಳಲ್ಲಿ ಲಭ್ಯವಿರುತ್ತದೆ.

ವೈಶಿಷ್ಟ್ಯ

ವೈಶಿಷ್ಟ್ಯ

ಇಕೊಸ್ಪೋರ್ಟ್‌ಗೆ ಹೋಲಿಸಿದಾಗ ಟಾಪ್ ಎಂಡ್ ವೆರಿಯಂಟ್‌ಗಳಲ್ಲಿ ಡಸ್ಟರ್ ಅತ್ಯಲ್ಪ ಫೀಚರುಗಳನ್ನು ಮಾತ್ರ ಹೊಂದಿದೆ. ಉದಾಹರಣೆಗೆ ಡಸ್ಟರ್ ಹೈಯರ್ ವೆರಿಯಂಟ್ 2 ಎರಡು ಬ್ಯಾಗ್‌ಗಳಲ್ಲಿ ಮಾತ್ರ ಲಭ್ಯವಾಗಿದ್ದರೆ ಇನ್ನೊಂದೆಡೆ ಇಕೊಸ್ಪೋರ್ಟ್ ಲೆಥರ್ ಸೀಟು, ಎಮರ್ಜನ್ಸಿ ಅಸಿಸ್ಟ್ ಸಿಸ್ಟಂಗಳಂತಹ ಆಧುನಿಕ ಸುರಕ್ಷಾ ಮಾನದಂಡಗಳನ್ನು ಹೊಂದಿದೆ.

ಮೈಲೇಜ್

ಮೈಲೇಜ್

ಇನ್ನು ಭಾರತೀಯ ರಸ್ತೆ ಪರಿಸ್ಥಿತಿಯಲ್ಲಿ ಮೈಲೇಜ್ ಅತಿದೊಡ್ಡ ಪಾತ್ರ ವಹಿಸುತ್ತದೆ. ಇಲ್ಲಿ ಡಸ್ಟರ್ ಪೆಟ್ರೋಲ್ ಮಾಡೆಲ್ 13.24 ಕೀ.ಮೀ. ನೀಡುತ್ತಿದ್ದರೆ ಇದನ್ನು ಮೀರಿಸಿರುವ ಇಕೊಸ್ಪೋರ್ಟ್‌ನ 1.5 ಪೆಟ್ರೋಲ್ ಮಾಡೆಲ್ 15.8 ಕೀಮೀ. ಮೈಲೇಜ್ ನೀಡಲು ಸಕ್ಷಮವಾಗಿದೆ. ಹಾಗೆಯೇ ಇದರ ಇಕೊಬೂಸ್ಟ್ ಪೆಟ್ರೋಲ್ ಎಂಜಿನ್ 18.9 ಲೀಟರ್ ಮೈಲೇಜ್ ನೀಡುತ್ತದೆ. ಅಷ್ಟೇ ಯಾಕೆ ಇಕೊಸ್ಪೋರ್ಟ್ ಡೀಸೆಲ್ ಎಂಜಿನ್ 22.7 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಇಎಂಐ ಆಪ್ಷನ್

ಇಎಂಐ ಆಪ್ಷನ್

ಏಳು ವರ್ಷಗಳ ಸ್ಕೀಮ್ ವಿಚಾರಕ್ಕೆ ಬಂದಾಗ ಡಸ್ಟರ್ ಬೇಸ್ ಪೆಟ್ರೋಲ್ ವೆರಿಯಂಟ್‌ಗೆ ಮಾಸಿಕ ಕಂತುಗಳಲ್ಲಿ ಪಾವತಿಸಬೇಕಾದ ಮೊತ್ತ 12,264 ರುಪಾಯಿ. ಮತ್ತೊಂದೆಡೆ ಇಕೊಸ್ಪೋರ್ಟ್ ರು. 8,614ಗಳಲ್ಲಿ ಲಭ್ಯವಿದೆ. ಈ ರೀತಿ ಎಲ್ಲ ವೆರಿಯಂಟ್‌ಗಳಲ್ಲೂ ಇಕೊಸ್ಪೋರ್ಟ್ ಕಡಿಮೆ ಇಎಐ ಆಪ್ಷನ್‌ಗಳಲ್ಲಿ ಲಭ್ಯವಿರುತ್ತದೆ.

ಗುಣಮಟ್ಟ ಕಾಯ್ದುಕೊಂಡ ಇಕೊಸ್ಪೋರ್ಟ್

ಗುಣಮಟ್ಟ ಕಾಯ್ದುಕೊಂಡ ಇಕೊಸ್ಪೋರ್ಟ್

ಈ ಮೂಲಕ ಎಲ್ಲ ಹಂತದಲ್ಲಿಯೂ ಡಸ್ಟರ್‌ಗಿಂತ ಹೆಚ್ಚು ಗುಣಮಟ್ಟ ಕಾಪಾಡಿಕೊಳ್ಳುವಲ್ಲಿ ಇಕೊಸ್ಪೋರ್ಟ್ ಯಶಸ್ವಿಯಾಗಿದೆ. ಈ ಮುಖಾಂತರ ಇತ್ತೀಚೆಗಷ್ಟೇ 23,000 ರು.ಗಳಿಂದ 50,000 ರು.ಗಳ ವರೆಗೆ ದರ ಹೆಚ್ಚಳಗೊಳಿಸಿದರೂ ಬೇಡಿಕೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

Most Read Articles

Kannada
English summary
Ford India says that the EcoSport has gathered over 40,000 bookings since its launch on June 26th this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X