ಇಕೊಸ್ಪೋರ್ಟ್ ಅನಧಿಕೃತ ಬುಕ್ಕಿಂಗ್ ಬಲು ಜೋರು

Posted By:

ವರ್ಷಗಳ ಹಿಂದೆಯೇ ವಿಶ್ವದ ಮುಂಚೂಣಿಯ ಕಂಪನಿಯಾದ ಫೋರ್ಡ್ ಭಾರತಕ್ಕೆ ಇಕೊಸ್ಪೋರ್ಟ್ ಪರಿಚಯಿಸುವುದಾಗಿ ಘೋಷಿಸಿತ್ತು. ಇದೀಗ ಇಕೊಸ್ಪೋರ್ಟ್ ಆಗಮನಕ್ಕೆ ಕಾಲ ಸನ್ನಿಹಿತವಾಗಿರುವಂತೆಯೇ ಅನಧಿಕೃತ ಬುಕ್ಕಿಂಗ್ ಭರಾಟೆ ಬಲು ಜೋರಾಗಿಯೇ ನಡೆಯುತ್ತಿದೆ.

ಇದು ಫೋರ್ಡ್ ಜನಪ್ರಿಯತೆಗೆ ಅದರಲ್ಲೂ ವಿಶೇಷವಾಗಿಯೂ ಇಕೊಸ್ಪೋರ್ಟ್ ದೇಶದ ಗ್ರಾಹಕರಲ್ಲಿ ಉಂಟು ಮಾಡಿರುವ ಕಾರು ಕ್ರೇಜ್‌ಗೆ ಕಾರಣವಾಗಿದೆ. ಅಂದ ಹಾಗೆ 2012 ದೆಹಲಿ ಆಟೋ ಷೋದಲ್ಲಿ ಈ ಕಾಂಪಾಕ್ಟ್ ಎಸ್‌ಯುವಿ ಮೊದಲ ಬಾರಿ ಅನಾವರಣಗೊಂಡಿತ್ತು.

ಚೆನ್ನೈನಲ್ಲಿರುವ ಬೃಹತ್ ಘಟಕದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಉತ್ಪಾದನೆ ಭರದಿಂದ ಸಾಗುತ್ತಿದೆ. ಕಂಪನಿಯು ಈ ವರೆಗೆ ಬುಕ್ಕಿಂಗ್ ದಿನಾಂಕವನ್ನು ನಿಗದಿಪಡಿಸದಿದ್ದರೂ ಫೋರ್ಡ್ ಡೀಲರ್‌ಗಳ ಬಳಿ ಅನಧಿಕೃತ ಬುಕ್ಕಿಂಗ್ ಬಲು ಜೋರಾಗಿಯೇ ನಡೆಯುತ್ತಿದೆ.

ಈಗಾಗಲೇ ಫೋರ್ಡ್ ಇಕೊಸ್ಪೋರ್ಟ್ ಟೆಸ್ಟ್ ಡ್ರೈವ್ ಯಶಸ್ವಿಯಾಗಿ ನಡೆದಿದ್ದು, ರಸ್ತೆಗಿಳಿಯಲು ಸಜ್ಜಾಗಿ ನಿಂತಿದೆ. ಒಂದು ವೇಳೆ ಸ್ಪರ್ಧಾತ್ಮಕ ದರದಲ್ಲಿ ಮಾರುಕಟ್ಟೆ ತರುವಲ್ಲಿ ಫೋರ್ಡ್ ಯಶಸ್ವಿಯಾದ್ದಲ್ಲಿ ಇಕೊಸ್ಪೋರ್ಟ್ ಎಸ್‌ಯುವಿ ಭಾರಿ ಯಶಸ್ವಿ ಗಳಿಸಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ವಿನ್ಯಾಸ, ನಿರ್ವಹಣೆ ಹಾಗೂ ಶ್ರೇಷ್ಠ ಹ್ಯಾಂಡ್ಲಿಂಗ್‌ಗೆ ಫೋರ್ಡ್ ಪ್ರಾಮುಖ್ಯತೆ ನೀಡುತ್ತಿದೆ. ಡಿಸೆಂಬರ್ ತಿಂಗಳಿನಿಂದಲೇ ಆರಂಭವಾಗಿರುವ ಮುಗಂಡ ಬುಕ್ಕಿಂಗ್‌ಗಾಗಿ 50 ಸಾವಿರ ರುಪಾಯಿಗಳ ಪಾವತಿಸಿದರೆ ಸಾಕು.

ಪೆಟ್ರೋಲ್ ಸೇರಿದಂತೆ ಡೀಸೆಲ್ ಆವೃತ್ತಿಯು ಬಿಡುಗಡೆಯಾಗುತ್ತಿರುವುದು ಗ್ರಾಹಕರನ್ನು ಇನ್ನಷ್ಟು ಖುಷಿಪಡಿಸಿದೆ. ಇದರ ಇಕೊಬೂಸ್ಟ್ ಪೆಟ್ರೋಲ್ ಎಂಜಿನ್ ಎಲ್ಲರ ಗಮನ ಸೆಳೆದಿದೆ.

ಮೂಲಗಳ ಪ್ರಕಾರ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಫೋರ್ಡ್ ಇಕೊಸ್ಪೋರ್ಟ್ ಅಧಿಕೃತ ಲಾಂಚ್ ಮಾಡಲಿದ್ದಾರೆ. ಮುಂದಿನ ಕೆಲವು ದಿನಗಳಲ್ಲೇ ಬಿಡುಗಡೆ ದಿನಾಂಕ ಕೂಡಾ ನಿಗದಿಯಾಗಲಿದೆ.

ಪ್ರಸ್ತುತ ದೇಶದ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ರೆನೊ ಡಸ್ಟರ್ ಎಸ್‌‍ಯುವಿಗೆ ಫೋರ್ಡ್ ಇಕೊಸ್ಪೋರ್ಟ್ ಯಾವ ರೀತಿ ಸೆಡ್ಡು ನೀಡಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.

To Follow DriveSpark On Facebook, Click The Like Button
ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್ಸ್ ಲಾಂಚ್ ದೇಶದ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಪ್ರಮುಖವಾಗಿಯೂ ರೆನೊ ಡಸ್ಟರ್ ಹಾಗೂ ಮಹೀಂದ್ರ ಕಾರುಗಳಿಗೆ ಇಕೊಸ್ಪೋರ್ಟ್ಸ್ ಸ್ಪರ್ದೆ ಒಡ್ಡಲಿದೆ.

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಇಕೊಸ್ಪೋರ್ಟ್ ಸ್ಟೈಲಿಷ್ ವಿನ್ಯಾಸವು ಕಾರು ಪ್ರಿಯರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ.

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್ಸ್ ಪ್ರಭಾವಿ ಫ್ರಂಟ್ ವ್ಯೂ

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಇಕೊಸ್ಪೋರ್ಟ್ಸ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜತೆಗೆ ಹಂಚಿಕೊಳ್ಳಿರಿ.

English summary
Ford is planning to launch the EcoSport in India after one year of the compact SUV being unveiled for the first time during the 2012 Delhi Auto Expo. Although there has been no confirmed date about the EcoSport's launch, Ford dealers have already started taking in bookings.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark