ಅಪಘಾತ ಪರೀಕ್ಷೆಯಲ್ಲಿ ಎಡವಿದ ಫೋರ್ಡ್ ಇಕೊಸ್ಪೋರ್ಟ್

By Nagaraja

ಕಳೆದ ಜೂನ್ ತಿಂಗಳಿನಲ್ಲಷ್ಟೇ ಭಾರತ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದ ಫೋರ್ಡ್ ಇಕೊಸ್ಪೋರ್ಟ್‌ನಲ್ಲಿ ಗರಿಷ್ಠ ಸುರಕ್ಷತಾ ಮಾನದಂಡಗಳನ್ನು ಅನುಸರಿಸಲಾಗಿದೆ ಎಂಬುದು ನಮಗೆಲ್ಲರಿಗೂ ತಿಳಿದ ವಿಚಾರ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಇಷ್ಟೆಲ್ಲ ಗರಿಷ್ಠ ಸೇಫ್ಟಿ ಫೀಚರ್ಸ್ ಇರುವುದರ ಹೊರತಾಗಿಯೂ ಅಪಘಾತ ಪರೀಕ್ಷೆಯಲ್ಲಿ ಫೈವ್ ಸ್ಟಾರ್ ಗಿಟ್ಟಿಸಿಕೊಳ್ಳುವಲ್ಲಿ ಈ ಮಿನಿ ಎಸ್‌ಯುವಿ ವಿಫಲವಾಗಿರುವುದು ಅಚ್ಚರಿಗೆ ಎಡೆಮಾಡಿಕೊಟ್ಟಿದೆ.

60,000 ದಾಟಿದ ಇಕೊಸ್ಪೋರ್ಟ್ ಸುದ್ದಿಗಾಗಿ ಕ್ಲಿಕ್ಕಿಸಿ..

ಯುರೋ ಎನ್‌ಸಿಎಪಿ ಕ್ರಾಶ್ ಟೆಸ್ಟಿಂಗ್‌‌ನಲ್ಲಿ ಇದು ದಾಖಲಾಗಿದೆ. ಇಲ್ಲಿ ಮಹತ್ವದ ಅಂಶವೆಂದರೆ ಭಾರತದ ಚೆನ್ನೈ ಘಟಕದಲ್ಲಿ ನಿರ್ಮಿಸಲಾದ ಇಕೊಸ್ಪೋರ್ಟ್ ಕಾರನ್ನು ಯುರೋಪ್‌ನಲ್ಲಿ ಅಪಘಾತ ಪರೀಕ್ಷೆಗೊಳಪಡಿಸಲಾಗಿತ್ತು.

ಫೋರ್ಡ್ ಇಕೊಸ್ಪೋರ್ಟ್ ಅಪಘಾತ ಪರೀಕ್ಷೆ

ಫೋರ್ಡ್‌ನ ಚೆನ್ನೈ ಘಟಕದಲ್ಲಿ ತಯಾರಿಸಲಾದ ಇಕೊಸ್ಪೋರ್ಟ್ ಟೈಟಾನಿಯಂ ವೆರಿಯಂಟನ್ನು ಅಪಘಾತ ಪರೀಕ್ಷೆಗೊಳಪಡಿಸಲಾಗಿತ್ತು. ನಿಮ್ಮ ಮಾಹಿತಿಗಾಗಿ, ಯುರೋಪ್‌ನಲ್ಲಿ ಅಪಘಾತ ಪರೀಕ್ಷೆ ನಡೆಸುವುದು ಅತಿ ಅಗತ್ಯವಾಗಿದೆ.

ಫೋರ್ಡ್ ಇಕೊಸ್ಪೋರ್ಟ್ ಅಪಘಾತ ಪರೀಕ್ಷೆ

ಇಲ್ಲಿ ಕಂಡುಬಂದಿರುವ ಪ್ರಮುಖ ಅಂಶವೆಂದರೆ ಪಾದಚಾರಿ ಸುರಕ್ಷತೆಯನ್ನು ಒದಗಿಸುವುಲ್ಲಿ ಈ ಮಿನಿ ಎಸ್‌ಯುವಿ ಸಂಪೂರ್ಣವಾಗಿ ವಿಫಲಗೊಂಡಿದೆ.

ಫೋರ್ಡ್ ಇಕೊಸ್ಪೋರ್ಟ್ ಅಪಘಾತ ಪರೀಕ್ಷೆ

ಇನ್ನು ಪ್ರಾಪ್ತ ವಯಸ್ಕರ (adult) ಸುರಕ್ಷತೆಯಲ್ಲಿ ಶೇಕಡಾ 93 ಹಾಗೂ ಮಕ್ಕಳ ಸುರಕ್ಷತೆಯಲ್ಲಿ (child) ಶೇಕಡಾ 77ರಷ್ಟು ರೇಟಿಂಗ್ ಕಾಯ್ದುಕೊಳ್ಳುವಲ್ಲಿ ಇಕೊಸ್ಪೋರ್ಟ್ ಯಶಸ್ವಿಯಾಗಿದೆ. ಹಾಗೆಯೇ ಪಾದಚಾರಿ ಸುರಕ್ಷತೆ ಶೇಕಡಾ 58ರಷ್ಟಿತ್ತು.

ಫೋರ್ಡ್ ಇಕೊಸ್ಪೋರ್ಟ್ ಅಪಘಾತ ಪರೀಕ್ಷೆ

ವೇಗ ಮಿತಿ ಸಾಧನಗಳ ಅಭಾವ, ಹಿಂದುಗಡೆ ಪ್ರಯಾಣಿಕರಿಗೆ ಸೀಟು ಬೆಲ್ಟ್ ಧರಿಸುವಂತೆ ಎಚ್ಚರಿಸುವ ವ್ಯವಸ್ಥೆಗಳ ಕೊರತೆಯೂ ಎದ್ದು ಕಾಣಿಸುತ್ತಿದೆ.

ಫೋರ್ಡ್ ಇಕೊಸ್ಪೋರ್ಟ್ ಅಪಘಾತ ಪರೀಕ್ಷೆ

ಹಾಗಿದ್ದರೂ ಪ್ರಸ್ತುತ ವರದಿಯಲ್ಲಿ ಫೋರ್ಡ್ ಇದೇ ಮೊದಲ ಬಾರಿ ಪರಿಚಯಿಸಿರುವ ಎಮರ್ಜನ್ಸಿ ಅಸಿಸ್ಟ್ ಸೇವೆಗಳ ಕುರಿತು ಉಲ್ಲೇಖವಾಗಿಲ್ಲ.

ಫೋರ್ಡ್ ಇಕೊಸ್ಪೋರ್ಟ್ ಅಪಘಾತ ಪರೀಕ್ಷೆ

ಹಾಗೆಯೇ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಸ್ಟಾಂಡರ್ಡ್ ಆಗಿದೆ ಎಂದು ವರದಿ ತಿಳಿಸುತ್ತದೆ. ದೇಶದಲ್ಲಿ ಇಎಸ್‌ಸಿ 1.5 ಆಟೋಮ್ಯಾಟಿಕ್ ವೆರಿಯಂಟ್‌ಗಳಲ್ಲಿ ಮಾತ್ರ ಈ ಸೌಲಭ್ಯ ಲಭ್ಯವಾಗುತ್ತದೆ.

ಇಕೊಸ್ಪೋರ್ಟ್ ಟೆಸ್ಟಿಂಗ್ ವರದಿ ಇಂತಿದೆ:

ಇಕೊಸ್ಪೋರ್ಟ್ ಟೆಸ್ಟಿಂಗ್ ವರದಿ ಇಂತಿದೆ:

ಪರೀಕ್ಷೆಗೊಳಪಡಿಸಿದ ಮಾದರಿ: ಫೋರ್ಡ್ ಇಕೊಸ್ಪೋರ್ಟ್ ಟೈಟಾನಿಯಂ

ಬಾಡಿ ವಿಧ: 5 ಡೋರ್ ಹ್ಯಾಚ್‌ಬ್ಯಾಕ್

ಮಾಡೆಲ್: 2013

ಕರ್ಬ್ ಭಾರ: 1350 ಕೆ.ಜಿ

ರೇಟಿಂಗ್

ರೇಟಿಂಗ್

ಒಟ್ಟು ಐದು ಸ್ಟಾರ್‌ಗಳ ಪೈಕಿ ನಾಲ್ಕು ಸ್ಟಾರ್‌ಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಫೋರ್ಡ್ ಯಶಸ್ವಿಯಾಗಿದೆ.

  • ವಯಸ್ಕರ ಸುರಕ್ಷತೆ: ಶೇಕಡಾ 93
  • ಮಕ್ಕಳ ಸುರಕ್ಷತೆ: ಶೇಕಡಾ 77
  • ಪಾದಚಾರಿ ಸುರಕ್ಷತೆ: ಶೇಕಡಾ 58
  • ಸೇಫ್ಟಿ ಅಸಿಸ್ಟ್: ಶೇಕಡಾ 55
  • ಸುರಕ್ಷತಾ ವೈಶಿಷ್ಟ್ಯಗಳು

    ಸುರಕ್ಷತಾ ವೈಶಿಷ್ಟ್ಯಗಳು

    ಫ್ರಂಟ್ ಸೀಟು ಬೆಲ್ಟ್ ,

    ಡ್ರೈವರ್ ಫ್ರಂಟ್ ಏರ್ ಬ್ಯಾಗ್,

    ಫ್ರಂಟ್ ಪ್ಯಾಸೆಂಜರ್ ಫ್ರಂಟಲ್ ಏರ್‌ಬ್ಯಾಗ್,

    ಸೈಡ್ ಬಾಡಿ ಏರ್ ಬ್ಯಾಗ್,

    ಸೈಡ್ ಹೆಡ್ ಏರ್ ಬ್ಯಾಗ್,

    ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್,

    ಸೀಟು ಬೆಲ್ಟ್ ರಿಮೈಂಡರ್

    ಫೋರ್ಡ್ ಇಕೊಸ್ಪೋರ್ಟ್ ಅಪಘಾತ ಪರೀಕ್ಷೆ

    ಈ ನಡುವೆ ದೇಶದಲ್ಲಿ ಫೋರ್ಡ್ ಇಕೊಸ್ಪೋರ್ಟ್ 60,000ಕ್ಕೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಂಡಿದೆ. ಈ ಪೈಕಿ 25,000 ಯುನಿಟ್‌ಗಳನ್ನು ಈಗಾಗಲೇ ಗ್ರಾಹಕರಿಗೆ ಹಸ್ತಾಂತರಿಸಲಾಗಿದೆ. ಇಕೊಸ್ಪೋರ್ಟ್ ಬೇಡಿಕೆ ಹೆಚ್ಚಿದ್ದರಿಂದ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದು ನಿರ್ದಿಷ್ಟ ವೆರಿಯಂಟ್ ಅವಲಂಬಿಸಿರಲಿದೆ ಎಂದು ಕಂಪನಿ ತಿಳಿಸಿದೆ.

Most Read Articles

Kannada
English summary
Euro NCAP (New Car Assessment Program), the European organization that tests preventive safety features and crashworthiness of new vehicles has released its results for the new Ford EcoSport. The India built compact SUV has scored 4 stars out of 5.
Story first published: Thursday, November 28, 2013, 12:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X