ತನ್ನ ಹೊಂಡ ತಾನೇ ತೋಡಿದ ಇಕೊಸ್ಪೋರ್ಟ್?

By Nagaraja

ಜೂನ್ ತಿಂಗಳಲ್ಲಿ ಬಿಡುಗಡೆಯಾಗಿದ್ದ ಫೋರ್ಡ್ ಇಕೊಸ್ಪೋರ್ಟ್ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ದೇಶದಾದ್ಯಂತ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನೇ ಮೂಡಿಸಿತ್ತು. ಸ್ಪರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದ ಇಕೊಸ್ಪೋರ್ಟ್ ಕೆಲವೇ ದಿನಗಳಲ್ಲಿ ದಾಖಲೆ ಸಂಖ್ಯೆಯ ಬುಕ್ಕಿಂಗ್ ಗಿಟ್ಟಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿತ್ತು.

ಆದರೆ ಸರಿಯಾದ ಮಾರಾಟ ಯೋಜನೆ ಅನುಸರಿಸುವಲ್ಲಿ ವೈಫಲ ಕಂಡಿರುವ ಇಕೊಸ್ಪೋರ್ಟ್ ತನ್ನ ಹೊಂಡವನ್ನು ತಾನೇ ತೋಡುತ್ತಿರುವ ಶೋಚನೀಯ ಪರಿಸ್ಥಿತಿ ಎದುರಿಸುತ್ತಿದೆ. ಹೌದು, ತನ್ನದೇ ಆದ ವಿಶಿಷ್ಟ ಇಕೊಬೂಸ್ಟ್ ಎಂಜಿನ್ ಹಾಗೂ ವಿನ್ಯಾಸದ ಮೂಲಕ ನೋಡುಗರ ಕಣ್ಮಣ ಸೆಳೆದಿದ್ದ ಇಕೊಸ್ಪೋರ್ಟ್ ನಿಧಾನವಾಗಿ ಕಳೆಗುಂದುವಂತಿದೆ. ಇದಕ್ಕೆ ಕಾರಣ ಹಲವಾರು.

ಇಕೊಸ್ಪೋರ್ಟ್ ಬುಕ್ಕಿಂಗ್ ಮಾಡಿಕೊಂಡವರು ತಮ್ಮ ಕಾರಿನ ಆಗಮನಕ್ಕಾಗಿ ಒಂದು ವರ್ಷದ ತನಕ ಕಾಯಬೇಕಾಗುತ್ತದೆ. ಇನ್ನೊಂದೆಡೆ ಇತ್ತೀಚೆಗಷ್ಟೇ ದರ ಏರಿಕೆ ನೀತಿಯನ್ನು ಅನುಸರಿಸಿರುವ ಇಕೊಸ್ಪೋರ್ಟ್ ಗ್ರಾಹಕರಿಗೆ ಏಟು ನೀಡಿದೆ. ಈ ಎಲ್ಲ ವಿಚಾರಗಳನ್ನು ಸ್ಲೈಡರ್ ಮೂಲಕ ಚರ್ಚಿಸೋಣವೇ...

 ತಡವಾಗಿ ಲಾಂಚ್...

ತಡವಾಗಿ ಲಾಂಚ್...

ಒಂದು ವರ್ಷದ ಹಿಂದೆಯೇ ಜನರಲ್ಲಿ ಇಕೊಸ್ಪೋರ್ಟ್ ಕ್ರೇಜ್ ಹುಟ್ಟಿಸಿಕೊಂಡಿದ್ದ ಫೋರ್ಡ್ ಕಂಪನಿಯು ಹಲವು ಬಾರಿಯಾಗಿ ಲಾಂಚ್ ದಿನಾಂಕವನ್ನು ಮುಂದೂಡಿರುವುದು ಮೂಲಕ ಗ್ರಾಹಕರಲ್ಲಿ ತೀವ್ರ ನಿರಾಸೆಗೆ ಕಾರಣವಾಗಿತ್ತು. ಆದರೆ ಇದೀಗ ಬುಕ್ಕಿಂಗ್ ಮಾಡಿದ ಬಳಿಕವೂ ಕಾಯುವಿಕೆ ಅವಧಿ ತುಂಬಾನೇ ಜಾಸ್ತಿಯಾಗಿರುವುದು ಗ್ರಾಹಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಸ್ಟೋಕ್ ಅಭಾವ...

ಸ್ಟೋಕ್ ಅಭಾವ...

ಈ ಮೊದಲೇ ತಿಳಿಸಿರುವಂತೆಯೇ ಒಂದೆಡೆ ಇಕೊಸ್ಪೋರ್ಟ್ ತನ್ನ ಲಾಂಚ್ ದಿನಾಂಕವನ್ನು ಮುಂದೂಡುತ್ತಾ ಹೋಗುವ ಸಂದರ್ಭದಲ್ಲಾದರೂ ತನ್ನ ಸ್ಟೋಕ್ ವರ್ಧನೆಯತ್ತ ಸ್ಪಲ್ವ ಗಮನ ವಹಿಸಿದ್ದರೆ ಈ ಪರಿಸ್ಥಿತಿ ಬರಲಾರದಿತ್ತು. ಅಂದರೆ ಕನಿಷ್ಠ 20,000ದಷ್ಟು ಯುನಿಟ್ ಮೊದಲೇ ಉತ್ಪಾದಿಸಿದ್ದರೆ ಗ್ರಾಹಕರಿಗೆ ಎದುರಾಗಿರುವ ತೊಂದರೆಯನ್ನು ಸ್ಪಲ್ವ ಮಟ್ಟಿಗಾದರೂ ನಿವಾರಿಸಬಹುದಿತ್ತು.

ದರ ಏರಿಕೆ ಬಿಸಿ...

ದರ ಏರಿಕೆ ಬಿಸಿ...

ಗ್ರಾಹಕರಿಗೆ ಕಾಯುವಿಕೆ ಅವಧಿ ಬಿಸಿ ಒಂದೆಡೆಯಾಗಿದ್ದರೆ ಇನ್ನೊಂದೆಡೆ ಇಕೊಸ್ಪೋರ್ಟ್ 38,000 ರು.ಗಳ ವರೆಗೆ ದರ ಏರಿಕೆಗೊಳಿಸುವ ಮೂಲಕ ಗಾಯದ ಮೇಲೆ ಬರೆ ಎಳೆದಿತ್ತು. ನಿಮ್ಮ ಗಮನಕ್ಕೆ, ಸ್ಮರ್ಧಾತ್ಮಕ ದರಗಳಲ್ಲೇ ಮಾರುಕಟ್ಟೆಗೆ ಆಗಮಿಸಿರುವುದೇ ಇಕೊಸ್ಪೋರ್ಟ್ ಕಾರನ್ನು ಜನರು ತುಂಬಾನೇ ಇಷ್ಟಪಡಲು ಕಾರಣವಾಗಿತ್ತು. ಆದರೆ ದರ ಏರಿಕೆ ಮಾಡಿರುವುದು ಇಕ್ಕಟ್ಟಿಗೆ ಸಿಲುಕಿಸುವಂತಾಗಿದೆ.

ಬುಕ್ಕಿಂಗ್ ಮಾಡಿದವರನ್ನು ಕಾಡಿದ ಸಮಸ್ಯೆ...

ಬುಕ್ಕಿಂಗ್ ಮಾಡಿದವರನ್ನು ಕಾಡಿದ ಸಮಸ್ಯೆ...

ಮೇಲೆ ತಿಳಿಸಿದ ಎಲ್ಲ ವಿಷಯಗಳನ್ನು ಅರ್ಥ ಮಾಡಿಕೊಳ್ಳಬಹುದಾದರೂ ಎರಡು ತಿಂಗಳ ಹಿಂದೆಯೇ ಬುಕ್ಕಿಂಗ್ ಮಾಡಿದವರು ಸಹ ಇಕೊಸ್ಪೋರ್ಟ್ ದರ ಏರಿಕೆ ನೀತಿಗೆ ಬಲಿಯಾಗಿರುವುದು ಗ್ರಾಹಕರಿಗೆ ದೊಡ್ಡ ಪೆಟ್ಟು ನೀಡುವಂತಾಗಿದೆ. ಅಂದರೆ ಸಮಯಕ್ಕೆ ಸರಿಯಾಗಿ ಫೋರ್ಡ್ ಕಾರುಗಳನ್ನು ವಿತರಿಸಿದ್ದರೆ ಈ ಸಮಸ್ಯೆ ಎದುರಾಗಲಾರದಿತ್ತು. ಇದೀಗ ಇಕೊಸ್ಪೋರ್ಟ್ ನೀತಿಯಿಂದಾಗಿ ಮೊದಲೇ ಬುಕ್ಕಿಂಗ್ ಮಾಡಿದವರು ಸಹ ತೊಂದೆರೆಗೆ ಸಿಲುಕಿದ್ದಾರೆ.

ಕಳಪೆ ಪ್ರಚಾರ...

ಕಳಪೆ ಪ್ರಚಾರ...

ಇನ್ನು ನಮಗೆ ಲಭಿಸಿದ ಮಾಹಿತಿಗಳ ಪ್ರಕಾರ ಡೀಲರುಗಳಲ್ಲಿ ಇಕೊಸ್ಪೋರ್ಟ್ ಬೇಸ್ ವೆರಿಯಂಟ್ ಬುಕ್ಕಿಂಗ್ ಪ್ರಕ್ರಿಯೆ ನಡೆಯುತ್ತಿಲ್ಲ. ಬದಲಾಗಿ ಟಾಪ್ ವೆರಿಯಂಟ್ ಬುಕ್ಕಿಂಗ್ ಮಾಡಲು ಒತ್ತಡ ಹೇರಲಾಗುತ್ತಿದೆ. ಅಷ್ಟೇ ಅಲ್ಲದೆ ಸುಮ್ಮ ಸುಮ್ಮನೆ ವೇಟಿಂಗ್ ಪಿರೇಡ್ ಜಾಸ್ತಿ ಹೇಳುತ್ತಿದ್ದಾರೆ. ಒಟ್ಟಾರೆಯಾಗಿ ಇಕೊಸ್ಪೋರ್ಟ್ 5.6 ಲಕ್ಷ ರು.ಗಳಿಗೆ ಸಿಗುತ್ತಿದೆ ಎಂದು ಕಳಪೆ ಪ್ರಚಾರ ಮಾಡಲಾಗುತ್ತಿದೆ. ಇನ್ನೊಂದೆಡೆ ಬೇಸ್ ವೆರಿಯಂಟ್ ಮಾರಾಟದಿಂದ ಡೀಲರುಗಳು ದೂರ ಉಳಿದುಕೊಂಡಿದ್ದಾರೆ.

ವೈಶಿಷ್ಟ್ಯಗಳ ಕೊರತೆ...

ವೈಶಿಷ್ಟ್ಯಗಳ ಕೊರತೆ...

ಇನ್ನೊಂದು ಶಾಕ್ ನೀಡುವ ಮಾಹಿತಿಯೆಂದರೆ ಇಕೊಸ್ಪೋರ್ಟ್ ಟೈಟಾನಿಯಂ ವೆರಿಯಂಟ್‌ನಿಂದ ಫುಶ್ ಬಟನ್, ಸ್ಟಾರ್ಟ್ ಕಿಲೇಸ್ ಎಂಟ್ರಿಗಳಂತಹ ನೂತನ ಫೀಚರುಗಳನ್ನು ಕೈಬಿಡಲಾಗಿದೆ. ಈ ಮೂಲಕ ಟಾಪ್ ವೆರಿಯಂಟ್ ಪಡೆದುಕೊಳ್ಳಲು ಒತ್ತಡ ಹೇರಲಾಗುತ್ತಿದ್ದು, ಟೈಟಾನಿಯಂ ವೆರಿಯಂಟ್ ಬುಕ್ ಮಾಡಿದರಿಗೆ ಶಾಕ್ ನೀಡಿದಂತಾಗಿದೆ.

ಡೀಲರುಗಳಿಂದ ಒತ್ತಡ...

ಡೀಲರುಗಳಿಂದ ಒತ್ತಡ...

ಅಷ್ಟೇ ಅಲ್ಲದೆ ಇಕೊಸ್ಪೋರ್ಟ್‌ನಲ್ಲಿ ಹೆಚ್ಚಿನ ಆಕ್ಸೆಸರಿ ಲಗತ್ತಿಸುವಂತೆ ಡೀಲರುಗಳು ಒತ್ತಡ ಹೇರುತ್ತಿದ್ದಾರೆ. ಈ ಎಲ್ಲ ಘಟಾನಾವಳಿಗಳು ಇಕೊಸ್ಪೋರ್ಟ್ ಕಾರನ್ನು ಕಳೆಗುಂದುವಂತೆ ಮಾಡುತ್ತಿದೆ.

ಬದಲಿ ವ್ಯವಸ್ಥೆ...

ಬದಲಿ ವ್ಯವಸ್ಥೆ...

ಒಟ್ಟಿನಲ್ಲಿ ಫೋರ್ಡ್ ಯೋಜನೆಯಿಂದ ಬೆಸತ್ತಿರುವ ಗ್ರಾಹಕರು ಇತರ ಬದಲಿ ಕಾರುಗಳನ್ನು ಆಯ್ಕೆ ಮಾಡುವುದರಲ್ಲಿ ಹೆಚ್ಚು ಹುಮ್ಮಸನ್ನು ತೋರಿಸುತ್ತಿದ್ದಾರೆ. ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಡಸ್ಟರ್ ಕಾಯುವಿಕೆ ಅವಧಿ ಕಡಿಮೆಯಾಗಿದ್ದು, ಹಾಗೆಯೇ ಇನ್ನಷ್ಟೇ ಆಗಮನವಾಗಬೇಕಾಗಿರುವ ನಿಸ್ಸಾನ್ ಟೆರನೊ ಆಯ್ಕೆ ಮಾಡಿಕೊಳ್ಳುವತ್ತ ಗ್ರಾಹಕರು ವಾಲುತ್ತಿದ್ದಾರೆ.

Most Read Articles

Kannada
Story first published: Thursday, September 26, 2013, 10:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X