ಏನಪ್ಪಾ ಇದು ಫೋರ್ಡ್ 'ಮಿಡ್‌ನೈಟ್ ಸಪ್ರೈಸ್' ಆಫರ್

Written By:

ಸಾಮಾನ್ಯವಾಗಿ ಡಿಸೆಂಬರ್ ತಿಂಗಳಲ್ಲಿ ಕಾರು ಮಾರಾಟ ಕುಸಿತದಲ್ಲಿರುತ್ತದೆ. ಹಾಗಿರುವಾಗ ಬಹುತೇಕ ಎಲ್ಲ ಕಾರು ಕಂಪನಿಗಳು ಅತಿ ವಿಶೇಷ ಆಫರುಗಳನ್ನು ಮುಂದಿರಿಸುವ ಮೂಲಕ ಗರಿಷ್ಠ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸುವತ್ತ ಗಮನ ಹರಿಸುತ್ತದೆ.

ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಈ ನಡುವೆ ಡಿಸೆಂಬರ್ ತಿಂಗಳಲ್ಲಿ ಆಫರುಗಳೊಂದಿಗೆ ಮುಂದೆ ಬಂದಿರುವ ಫೋರ್ಡ್, ಗ್ರಾಹಕರಿಗೆ ವಿನೂತನ 'ಮಿಡ್‌ನೈಟ್ ಸಪ್ರೈಸ್' ಆಫರ್ ಮುಂದಿಡುತ್ತಿದೆ. ಪ್ರಸ್ತುತ ಆಫರ್ ಮೂಲಕ ಗ್ರಾಹಕರು 3.5 ಕೋಟಿ ರು.ಗಳ ವರೆಗಿನ ಉಡುಗೊರೆಯನ್ನು ತಮ್ಮದಾಗಿಸಬಹುದಾಗಿದೆ.

ವಿ.ಸೂ: ಈ 16 ಗಂಟೆಗಳ ಮಿಡ್‌ನೈಟ್ ಸಪ್ರೈಸ್ ಆಫರ್ 2013ರಂದು ಡಿಸೆಂಬರ್ 5ರಂದು (ಇಂದು) ಬೆಳಗ್ಗೆ 8 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯ ವರೆಗೆ ಮಾತ್ರ ಚಾಲ್ತಿಯಲ್ಲಿರಲಿದೆ.

ಫೋರ್ಡ್ ಫಿಗೊ

ಫೋರ್ಡ್ ಫಿಗೊ

ಮಿಡ್ ನೈಟ್ ಆಫರ್‌ಗಳ ಮೂಲಕ ಫೋರ್ಡ್ ಫಿಗೊ ಸಣ್ಣ ಹ್ಯಾಚ್‌ಬ್ಯಾಕ್ ಕಾರು ಬುಕ್ಕಿಂಗ್ ಮಾಡುವ ಗ್ರಾಹಕರು ರು. 58,000 ವರೆಗೆ ಪ್ರಯೋಜನ ಪಡೆಯಬಹುದಾಗಿದೆ.

ಫೋರ್ಡ್ ಕ್ಲಾಸಿಕ್

ಫೋರ್ಡ್ ಕ್ಲಾಸಿಕ್

ಇನ್ನು ಫೋರ್ಡ್ ಕ್ಲಾಸಿಕ್ ಬುಕ್ಕಿಂಗ್ ವೇಳೆ ಮೂಲಕ ರು. 69,000 ವರೆಗೆ ಉಳಿತಾಯ ಮಾಡಬಹುದಾಗಿದೆ.

ಫೋರ್ಡ್ ಫಿಯೆಸ್ಟಾ

ಫೋರ್ಡ್ ಫಿಯೆಸ್ಟಾ

ಇನ್ನು ಹೆಚ್ಚು ಆಸಕ್ತಿದಾಯಕ ವಿಚಾರವೆಂದರೆ ಫೋರ್ಡ್ ಫಿಯೆಸ್ಟಾ ಮೂಲಕ ರು. 1,50,000 ವರೆಗೂ ಪ್ರಯೋಜನ ಪಡೆಯಬಹುದಾಗಿದೆ.

ಫೋರ್ಡ್ ಎಂಡೋವರ್

ಫೋರ್ಡ್ ಎಂಡೋವರ್

ಅದೇ ರೀತಿ ಫೋರ್ಡ್ ಎಂಡೋವರ್ ಬುಕ್ಕಿಂಗ್ ವೇಳೆ 1,87,000 ರು. ವರೆಗೂ ಪ್ರಯೋಜನ ಪಡೆಯಬಹುದು. ಪ್ರಸ್ತುತ ಎಲ್ಲ ಆಫರುಗಳು ಫೋರ್ಡ್ ಇಂಡಿಯಾ ಅಧಿಕೃತ ಡೀಲರುಗಳಲ್ಲಿ ಮಾತ್ರ ಲಭ್ಯವಿರಲಿದೆ.

ಫೋರ್ಡ್ 'ಮಿಡ್‌ನೈಟ್ ಸಪ್ರೈಸ್' ಆಫರ್

ಇದರ ಜತೆಗೆ ಎಲ್‌ಇಡಿ ಟಿವಿ, ವಾಶಿಂಗ್ ಮೆಷಿನ್, ಫ್ರಿಡ್ಜ್, ಮೈಕ್ರೋವೇವ್ ಒವೆನ್‌ಗಳಂತಹ ಉಡುಗೊರೆಗಳನ್ನು ತಮ್ಮದಾಗಿಸಬಹುದಾಗಿದೆ. ಪ್ರತಿಯೊಬ್ಬ ಗ್ರಾಹಕರಿಗೂ ಯೂನಿಕ್ ಕೋಡ್ ಇರುವ ಕೂಪನ್ ಲಭಿಸಲಿದ್ದು, ಇದು ಅನಿರೀಕ್ಷಿತ ಉಡುಗೊರೆಯ ಬಗ್ಗೆ ಮಾಹಿತಿ ಗಿಟ್ಟಿಸಿಕೊಳ್ಳಲು ನೆರವಾಗಲಿದೆ.

English summary
On December 5, Ford dealerships across the country will be operational from 8 a.m. through midnight with exciting offers and assured gifts on every booking. All customers who book a Ford Figo, Classic, Fiesta or Endeavour on December 5 will also be eligible for assured gifts such as LED TVs, washing machines, refrigerators, microwave ovens and more.
Story first published: Thursday, December 5, 2013, 5:01 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark