ಪೆಟ್ರೋಲ್‌ನಿಂದ ಮುಕ್ತಿ; ಇಲ್ಲಿದೆ ಟಾಪ್ 5 ಸಿಎನ್‌ಜಿ ಕಾರುಗಳು

Written By:

ದಿನದಿಂದ ದಿನಕ್ಕೆ ಪೆಟ್ರೋಲ್ ದರ ಹೆಚ್ಚಳವಾಗುತ್ತಿರುವುದರಿಂದ ಗ್ರಾಹಕರು ತೀವ್ರ ತೊಂದರೆ ಎದುರಿಸಬೇಕಾಗುತ್ತದೆ. ಅದರಲ್ಲೂ ನೂತನ ಕಾರು ಖರೀದಿ ಗ್ರಾಹಕರಂತೂ ತಮ್ಮ ಯೋಜನೆಯನ್ನು ಕೈಬಿಡುವಂತಹ ದುಸ್ಥಿತಿಗೆ ಬರುವಂತಾಗಿದೆ.

ಪೆಟ್ರೋಲ್ ದರ ಏರಿಕೆಯಿಂದಾಗಿ ಸಹಜವಾಗಿಯೇ ಕಾರು ಮಾರುಕಟ್ಟೆ ಹಿನ್ನಡೆ ಅನುಭವಿಸಿದೆ. ಈ ನಡುವೆ ಸಿಎನ್‌ಜಿ ಆವೃತ್ತಿಗಳು ಸ್ವಲ್ಪ ಉತ್ಸಾಹ ತುಂಬುವಂತಾಗಿದೆ. ಗರಿಷ್ಠ ಮೈಲೇಜ್ ನೀಡುವ ಸಿಎನ್‌ಜಿ ಕಾರುಗಳು ಪೆಟ್ರೋಲ್ ಕಾರುಗಳಿಗೆ ಉತ್ತಮ ಬದಲಿ ವ್ಯವಸ್ಥೆ ಎನಿಸಿಕೊಳ್ಳಲಿದೆ.

ಅಂತಹುದೇ ಪಟ್ಟಿಯೊಂದಿಗೆ ನಾವು ನಿಮ್ಮ ಮುಂದೆ ಹಾಜರಾಗಿದ್ದು, ದೇಶದಲ್ಲಿ ಲಭ್ಯವಿರುವ ಗರಿಷ್ಠ ಮೈಲೇಜ್ ನೀಡುವ ಟಾಪ್ 5 ಸಿಎನ್‌ಜಿ ಕಾರುಗಳ ಪಟ್ಟಿಯನ್ನು ಫೋಟೊ ಫೀಚರ್‌ನಲ್ಲಿ ಕೊಡಲಾಗಿದೆ.

To Follow DriveSpark On Facebook, Click The Like Button
ಮಾರುತಿ ಆಲ್ಟೊ 800

ದೇಶದ ಮಧ್ಯ ವರ್ಗದ ಕುಟುಂಬದವರನ್ನು ಗುರಿಯಾಗಿರಿಸಿಕೊಂಡು ಮಾರುತಿ ಆಲ್ಟೊ 800 ಸಿಎನ್‌ಜಿ ವರ್ಷನ್ ಬಿಡುಗಡೆಗೊಳಿಸಲಾಗಿತ್ತು.

ಮೈಲೇಜ್: 30.46km/kg

ದರ ಮಾಹಿತಿ

ದರ ಮಾಹಿತಿ

ಕಂಪನಿಯು ಇದರಲ್ಲಿ 700 ಸಿಸಿ ಎಂಜಿನ್ ಆಳವಡಿಸಿದೆ. ಹಾಗೆಯೇ ಗ್ರಾಹಕರ ಕೈಗೆಟಕುವ ರೀತಿಯಲ್ಲಿ ದರ ನಿಗದಿಪಡಿಸಲಾಗಿದೆ.

Metallic 3.41 ಲಕ್ಷ ರು.

Non-Metallic 3.37 ಲಕ್ಷ ರು.

ಮಾರುತಿ ಸುಜುಕಿ ಝೆನ್ ಎಸ್ಟಿಲೊ

ದೇಶದ ನಂ.1 ಕಾರು ತಯಾರಕರಾದ ಮಾರುತಿ ಸುಜುಕಿ, ಈ ಹಿಂದೆಯೇ ಜೆನ್ ಎಸ್ಟಿಲೊ ಸಿಎನ್‌ಜಿ ವರ್ಷನ್ ಬಿಡುಗಡೆಗೊಳಿಸಿತ್ತು.

ಮೈಲೇಜ್ 26.3 Km/kg

ದರ ಮಾಹಿತಿ

ದರ ಮಾಹಿತಿ

ಕಂಪನಿಯು ಇದರಲ್ಲಿ 998 ಸಿಸಿ ಎಂಜಿನ್ ಪ್ರಯೋಗಿಸಿದೆ.

Metallic 4.3 ಲಕ್ಷ ರು.

Non-Metallic 4.32 ಲಕ್ಷ ರು.

ಟಾಟಾ ನ್ಯಾನೋ ಸಿಎನ್‌ಜಿ

ಕೆಲವು ದಿನಗಳ ಹಿಂದೆಯಷ್ಟೇ ಟಾಟಾ ನ್ಯಾನೋ ಸಿಎನ್‌ಜಿ ವರ್ಷನ್ ಬಿಡುಗಡೆಗೊಳಿಸಲಾಗಿತ್ತು.

ಮೈಲೇಜ್ 36 Km/kg

ಟಾಟಾ ನ್ಯಾನೋ ಸಿಎನ್‌ಜಿ

ನೂತನ ಟಾಟಾ ನ್ಯಾನೋ ಸಿಎನ್‌ಜಿ ವರ್ಷನ್‌ನಲ್ಲಿ 624 ಸಿಸಿ ಎಂಜಿನ್ ಆಳವಡಿಸಲಾಗಿದೆ.

ಮಾರುತಿ ಸುಜುಸಿ ವ್ಯಾಗನಾರ್ ಸಿಎನ್‌ಜಿ

ಇನ್ನು ಟಾಪ್ 5 ಸಿಎನ್‌ಜಿ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಅಧಿಪತ್ಯ ಮುಂದುವರಿದಿದೆ. ಇದಕ್ಕೆ ಸೇರ್ಪಡೆಯೆಂಬಂತೆ ಮಾರುತಿ ಸುಜುಕಿ ವ್ಯಾಗನಾರ್ ಆಗಮನವಾಗಿದೆ.

ಮೈಲೇಜ್ 26.3 Km/kg

ದರ ಮಾಹಿತಿ

ದರ ಮಾಹಿತಿ

ಕಂಪನಿಯು ವ್ಯಾಗನಾರ್ ಸಿಎನ್‌ಜಿ ವರ್ಷನ್‌ನಲ್ಲಿ 998 ಸಿಸಿ ಇಂಧನ ಕ್ಷಮತೆಯ ಎಂಜಿನ್ ಆಳವಡಿಸಿದೆ.

Metallic 4.45 ಲಕ್ಷ ರು.

Non-Metallic 4.41 ಲಕ್ಷ ರು.

ಹೋಂಡಾ ಸಿಟಿ ಸಿಎನ್‌ಜಿ

ಲಾಸ್ಟ್ ಬಟ್ ಲೀಸ್ಟ್ ಎಂಬಂತೆ ಜಪಾನ್‌ನ ಪ್ರತಿಷ್ಠಿತ ಕಾರು ಕಂಪನಿಯಾದ ಹೋಂಡಾದ ಸಿಟಿ ಸಿಎನ್‌ಜಿ ವರ್ಷನ್ ಗಮನಾರ್ಹ ಎನಿಸಿಕೊಂಡಿದೆ. ಇದರಲ್ಲಿ 8ರಿಂದ 10 ಲೀಟರ್ ಸಿಎನ್‌ಜಿ ಗ್ಯಾಸ್ ತುಂಬಿಸಬಹುದಾಗಿದ್ದು, ಫುಲ್ ಟ್ಯಾಂಕ್‌ನಲ್ಲಿ 180ರಿಂದ 200 ಕೀ.ಮೀ. ತನಕ ಚಲಿಸಬಹುದಾಗಿದೆ.

ಹೋಂಡಾ ಸಿಟಿ ಸಿಎನ್‌ಜಿ

ಹೋಂಡಾ ಸಿಎನ್‌ಜಿ ವರ್ಷನ್‌ನಲ್ಲಿ 1.5 ಲೀಟರ್ ಎಂಜಿನ್ ಆಳವಡಿಸಲಾಗಿದೆ.

ದರ ಮಾಹಿತಿ: 9.73 ಲಕ್ಷ ರು.

English summary
Are you worried about petrol price hike and looking for high mileage CNG cars? Here is top 5 high mileage cng cars to beat rising petrol price.
Story first published: Monday, July 1, 2013, 10:00 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark