ಹೆಚ್ಚಿನ ಸುರಕ್ಷತೆಯೊಂದಿಗೆ ನಿಮ್ಮ ಅಮೇಜ್ ಎಂಟ್ರಿ

Written By:

ಜಪಾನ್ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಸಿಐಎಲ್) ತನ್ನ ಜನಪ್ರಿಯ ಅಮೇಜ್ ಕಾಂಪಾಕ್ಟ್ ಸೆಡಾನ್ ಕಾರಿನ ನೂತನ 'ಎಸ್‌ಎಕ್ಸ್' ವೆರಿಯಂಟ್‌ವೊಂದನ್ನು ಲಾಂಚ್ ಮಾಡಿದೆ.

ಗುಣಮಟ್ಟದಲ್ಲಿ ಯಾವ ಕಾರು ಶ್ರೇಷ್ಠ?

ನೂತನ ಹೋಂಡಾ ಅಮೇಜ್ ವೆರಿಯಂಟ್ ಹಲವಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರಲಿದೆ. 'ಎಸ್' ವೆರಿಯಂಟ್‌ಗಿಂತಲೂ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿರುವ ಹೋಂಡಾ ಅಮೇಜ್ ಪೆಟ್ರೋಲ್ ಹಾಗೂ ಡೀಸೆಲ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗಳಲ್ಲಿ ಲಭ್ಯವಿರಲಿದೆ.

ಹೆಚ್ಚಿನ ಸುರಕ್ಷತೆಯೊಂದಿಗೆ ನಿಮ್ಮ ಅಮೇಜ್ ಎಂಟ್ರಿ

'ಎಸ್' ವೆರಿಯಂಟ್‌ಗಳಲ್ಲಿ ಲಭ್ಯವಿರುವ ವೈಶಿಷ್ಟ್ಯಗಳ ಹೊರತಾಗಿ ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್ ಸೌಲಭ್ಯವನ್ನು ನೂತನ ಎಸ್‌ಎಕ್ಸ್ ವೆರಿಯಂಟ್ ಪಡೆದುಕೊಳ್ಳಲಿದೆ. ಅಮೇಜ್‌ನ ಎಲ್ಲ ಡೀಸೆಲ್ ವೆರಿಯಂಟ್‌ಗಳಲ್ಲೂ ಎಬಿಎಸ್ ಸ್ಟಾಂಡರ್ಡ್ ಆಗಿ ದೊರಕಲಿದೆ. ಹಾಗಿದ್ದರೂ ಪೆಟ್ರೋಲ್ ಟಾಪ್ ಎಂಡ್ 'ವಿಎಕ್ಸ್' ಹೊರತಾಗಿಯೂ ನೂತನ 'ಎಸ್‌ಎಕ್ಸ್' ಪೆಟ್ರೋಲ್ ವೆರಿಯಂಟ್ ಸಹ ಎಬಿಎಸ್ ಪಡೆದುಕೊಳ್ಳಲಿದೆ.

ಹೆಚ್ಚಿನ ಸುರಕ್ಷತೆಯೊಂದಿಗೆ ನಿಮ್ಮ ಅಮೇಜ್ ಎಂಟ್ರಿ

ಒಟ್ಟಾರೆಯಾಗಿ ಒಟ್ಟು 12 ವೆರಿಯಂಟ್‌ಗಳಲ್ಲಿ ಅಮೇಜ್ ಲಭ್ಯವಿರಲಿದೆ. ಅವುಗಳೆಂದರೆ ಇ, ಇಎಕ್ಸ್, ಎಸ್, ಎಸ್‌ಎಕ್ಸ್ (ಹೊಸದು) ಮತ್ತು ವಿಎಕ್ಸ್ (ಪೆಟ್ರೋಲ್ ಮತ್ತು ಡೀಸೆಲ್) ಹಾಗೂ ಎಸ್ ಆಟೋಮ್ಯಾಟಿಕ್ ಮತ್ತು ವಿಎಕ್ಸ್ ಆಟೋಮ್ಯಾಟಿಕ್ (ಪೆಟ್ರೋಲ್ ಮಾತ್ರ).

ಹೆಚ್ಚಿನ ಸುರಕ್ಷತೆಯೊಂದಿಗೆ ನಿಮ್ಮ ಅಮೇಜ್ ಎಂಟ್ರಿ

ಈ ಹಿಂದೆ ತಿಳಿಸಿರುವಂತೆಯೇ ಹೋಂಡಾ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳು ಅತ್ಯುತ್ತಮ ಇಂಧನ ಕ್ಷಮತೆ ನೀಡಲಿದೆ. ಆಕರ್ಷಕ ವಿನ್ಯಾಸ ಪಡೆದುಕೊಂಡಿರುವ ಅಮೇಜ್ ಆರಾಮದಾಯ ಸಿಟ್ಟಿಂಗ್ ವ್ಯವಸ್ಥೆಯನ್ನು ಹೊಂದಿದೆ.

ಹೆಚ್ಚಿನ ಸುರಕ್ಷತೆಯೊಂದಿಗೆ ನಿಮ್ಮ ಅಮೇಜ್ ಎಂಟ್ರಿ

ನಿಮ್ಮ ಮಾಹಿತಿಗಾಗಿ, ಹೋಂಡಾ ಅಮೇಜ್ ಡೀಸೆಲ್ ವೆರಿಯಂಟ್ 1.5 ಲೀಟರ್ ಮುಂದುವರಿದ ಐ-ಡಿಟೆಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದೆ. ಇದು 100 ಪಿಎಸ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಹೆಚ್ಚಿನ ಸುರಕ್ಷತೆಯೊಂದಿಗೆ ನಿಮ್ಮ ಅಮೇಜ್ ಎಂಟ್ರಿ

ಇನ್ನೊಂದು ಮುಖ್ಯ ಫೀಚರ್ ಏನೆಂದರೆ ಇದರ ಮೈಲೇಜ್. ಭಾರತ ವಾಹನ ಅಧ್ಯಯನ ಸಂಸ್ಥೆ ಮಾನ್ಯತೆಯ ಪ್ರಕಾರ ಹೋಂಡಾ ಅಮೇಜ್ ಪ್ರತಿ ಲೀಟರ್‌ಗೆ 25.8 ಕೀ.ಮೀ. ಮೈಲೇಜ್ ನೀಡಲಿದೆ.

ಹೆಚ್ಚಿನ ಸುರಕ್ಷತೆಯೊಂದಿಗೆ ನಿಮ್ಮ ಅಮೇಜ್ ಎಂಟ್ರಿ

2013 ಎಪ್ರಿಲ್ ತಿಂಗಳಲ್ಲಿ ದೇಶದ ಮಾರುಕಟ್ಟೆ ಪ್ರವೇಶಿಸಿದ್ದ ಹೋಂಡಾ ಅಮೇಜ್ ಈಗಾಗಲೇ 60,000ಕ್ಕೂ ಯುನಿಟ್‌ಗಳ ಮಾರಾಟವನ್ನು ಪಡೆದಿದೆ. ಇದೀಗ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ನೂತನ ಅಮೇಜನ್ನು ಇನ್ನಷ್ಟು ಅಮೇಜಿಂಗ್‌ಗೊಳಿಸಲಿದೆ.

ಹೆಚ್ಚಿನ ಸುರಕ್ಷತೆಯೊಂದಿಗೆ ನಿಮ್ಮ ಅಮೇಜ್ ಎಂಟ್ರಿ

ನೂತನ ಹೋಂಡಾ ಎಸ್‌ಎಕ್ಸ್ ಅಮೇಜ್ ಪೆಟ್ರೋಲ್ ವೆರಿಯಂಟ್ ದೆಹಲಿ ಎಕ್ಸ್ ಶೋ ರೂಂ ದರ 6,22,640 ರು.ಗಳಾಗಿವೆ. ಅದೇ ಹೊತ್ತಿಗೆ ಡೀಸೆಲ್ ಎಸ್‌ಎಕ್ಸ್ ವೆರಿಯಂಟ್ 7,12,240 ರು.ಗಳಷ್ಟು ದುಬಾರಿಯಾಗಿದೆ.

English summary
Honda Cars India Ltd. (HCIL), leading premium car manufacturer in India, announced a new ‘SX' variant of the Honda Amaze with added safety features. The new variant will be positioned above the ‘S' variant and will be available in both Petrol and Diesel Manual Transmission.
Story first published: Thursday, January 16, 2014, 11:23 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark