ಮೈಲೇಜ್ ಬೇಟೆ; ಅಗ್ರ ಮಾರುತಿಯನ್ನೇ ಹಿಂದಿಕ್ಕಿದ ಹೋಂಡಾ

By Nagaraja

ಬದಲಾಗುತ್ತಿರುವ ಸನ್ನಿವೇಶದಂತೆ ಮಾರುಕಟ್ಟೆ ಚಿತ್ರಣದಲ್ಲೂ ವ್ಯತ್ಯಯ ಉಂಟಾಗುತ್ತಿದೆ. ಇದುವರೆಗೆ ಮಾರುತಿ ಕಾರುಗಳೆಂದರೆ ಅತ್ಯುತ್ತಮ ನಿರ್ವಹಣೆ ಹಾಗೂ ಗರಿಷ್ಠ ಇಂಧನ ಕ್ಷಮತೆಗೆ ಹೆಸರುವಾಸಿಯಾಗಿದ್ದವು.

ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚಾಗುತ್ತಿದ್ದು, ಹೋಂಡಾಗಳಂತಹ ಜಗತ್ತಿನ ಅಗ್ರಗಣ್ಯ ಕಾರುಗಳು ಮಾರುತಿಯನ್ನೇ ಮೀರಿಸುವಂತಹ ಫಲಿತಾಂಶ ನೀಡುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಕಳೆದೊಂದು ದಶಕದಲ್ಲಿ ಅತಿ ಹೆಚ್ಚು ಇಂಧನ ಕ್ಷಮತೆಯುಳ್ಳ ಕಾರೆಂಬ ಕೀರ್ತಿಗೆ ಪಾತ್ರವಾಗಿದ್ದ ಆಲ್ಟೊ ನಿಧಾನವಾಗಿ ತನ್ನ ಸ್ಥಾನವನ್ನು ಹೋಂಡಾ ಕಾರುಗಳಿಗೆ ಬಿಟ್ಟುಕೊಟ್ಟಿದೆ. ಅಷ್ಟಕ್ಕೂ ದೇಶದ ಟಾಪ್ 15 ಗರಿಷ್ಠ ಮೈಲೇಜ್ ಕಾರು ಯಾವುವು? ಇವುಗಳಲ್ಲಿ ಮಾರುತಿ ಸ್ಥಾನ ಯಾವುದು ಎಂಬಿತ್ಯಾದಿ ಮಾಹಿತಿಗಳಿಗಾಗಿ ಚಿತ್ರ ಪುಟದತ್ತ ಮುಂದುವರಿಯಿರಿ.

1. ಹೋಂಡಾ ಸಿಟಿ

1. ಹೋಂಡಾ ಸಿಟಿ

ಇಂಧನ ವಿಧ: ಡೀಸೆಲ್

ಮೈಲೇಜ್: 26 kmpl

ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಹೋಂಡಾ ಸಿಟಿ ಸೆಡಾನ್ ಕಾರು, ದೇಶದ ಗರಿಷ್ಠ ಇಂಧನ ಕ್ಷಮತೆಯ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರಲ್ಲಿರುವ ಐ-ಡಿಟೆಕ್ ಡೀಸೆಲ್ ಎಂಜಿನ್ ಸದ್ಯದ ಹಾಟ್ ಕೇಕ್.

2. ಹೋಂಡಾ ಅಮೇಜ್

2. ಹೋಂಡಾ ಅಮೇಜ್

ಇಂಧನ ವಿಧ: ಡೀಸೆಲ್

ಮೈಲೇಜ್: 25.8 kmpl

ಎರಡನೇ ಸ್ಥಾನದಲ್ಲೂ ಹೋಂಡಾ ಜನಪ್ರಿಯ ಅಮೇಜ್ ಆವೃತ್ತಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಭಾರತೀಯ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆಯ ಪ್ರಕಾರ ಪ್ರತಿ ಲೀಟರ್‌ಗೆ 25.8 ಕೀ.ಮೀ. ಮೈಲೇಜ್ ನೀಡುತ್ತಿದೆ.

 3. ಷೆವರ್ಲೆ ಬೀಟ್

3. ಷೆವರ್ಲೆ ಬೀಟ್

ಇಂಧನ ವಿಧ: ಡೀಸೆಲ್

ಮೈಲೇಜ್: 25.4 kmpl

ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಐಕಾನಿಕ್ ಬ್ರಾಂಡ್ ಆಗಿರುವ ಷೆವರ್ಲೆಯ ಬೀಟ್ ಈ ವಿಭಾಗದಲ್ಲಿ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿರುವುದು ವಿಶೇಷವೆನಿಸಿದೆ.

ಟಾಟಾ ಕಾರುಗಳು ಮತ್ತು ಮೈಲೇಜ್ ಬೇಟೆ

ಟಾಟಾ ಕಾರುಗಳು ಮತ್ತು ಮೈಲೇಜ್ ಬೇಟೆ

4. ಟಾಟಾ ಇಂಡಿಗೊ ಇಸಿಎಸ್

ಇಂಧನ ವಿಧ: ಡೀಸೆಲ್

ಮೈಲೇಜ್: 25.4 kmpl

ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್‌ನ, ಇಂಡಿಗೊ ಸಹ ಷೆವರ್ಲೆ ಬೀಟ್‌ಗೆ ಸಮಾನವಾದ ಇಂಧನ ಕ್ಷಮತೆ ನೀಡುತ್ತಿದೆ.

6. ಟಾಟಾ ಇಂಡಿಗೊ ಎಕ್ಸ್‌ಎಲ್

ಇಂಧನ ವಿಧ: ಡೀಸೆಲ್

ಮೈಲೇಜ್: 25.2 kmpl7. ಟಾಟಾ ಇಂಡಿಗೊ

ಇಂಧನ ವಿಧ: ಡೀಸೆಲ್

ಮೈಲೇಜ್: 25.2 kmpl

8. ಟಾಟಾ ಇಂಡಿಗೊ ಇವಿ2

ಇಂಧನ ವಿಧ: ಡೀಸೆಲ್

ಮೈಲೇಜ್: 25.2 kmpl

15. ಟಾಟಾ ಇಂಡಿಗೊ ಎಕ್ಸ್‌ಎಲ್ ಡಿಕಾರ್

ಇಂಧನ ವಿಧ: ಡೀಸೆಲ್

ಮೈಲೇಜ್: 23.6 kmpl

ಟಾಟಾ ನ್ಯಾನೋ ಮೈಲೇಜ್ ಸಾಧನೆ

ಟಾಟಾ ನ್ಯಾನೋ ಮೈಲೇಜ್ ಸಾಧನೆ

5. ಟಾಟಾ ನ್ಯಾನೋ ಬಿಎಸ್‌IV

ಇಂಧನ ವಿಧ: ಪೆಟ್ರೋಲ್

ಮೈಲೇಜ್: 25.4 kmpl

ಜಗತ್ತಿನ ಅತಿ ಅಗ್ಗದ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನ್ಯಾನೋ ಮೈಲೇಜ್ ವಿಚಾರದಲ್ಲಿ ಯಾವುದೇ ರಾಜಿಗೆ ತಯಾರಾಗಿಲ್ಲ ಎಂಬುದು ಇದರಿಂದಲೇ ವ್ಯಕ್ತವಾಗುತ್ತಿದೆ.

9. ಟಾಟಾ ನ್ಯಾನೋ ಬಿಎಸ್III

ಇಂಧನ ವಿಧ: ಪೆಟ್ರೋಲ್

ಮೈಲೇಜ್: 25.2 kmpl

10. ಹ್ಯುಂಡೈ ಎಕ್ಸ್‌ಸೆಂಟ್

10. ಹ್ಯುಂಡೈ ಎಕ್ಸ್‌ಸೆಂಟ್

ಇಂಧನ ವಿಧ: ಡೀಸೆಲ್

ಮೈಲೇಜ್: 24.4 kmpl

ಪ್ರಮುಖವಾಗಿಯೂ ಮಾರುತಿ ಡಿಜೈರ್ ಹಾಗೂ ಹೋಂಡಾ ಅಜೇಮ್ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿದ್ದ ಹ್ಯುಂಡೈ ಎಕ್ಸ್‌ಸೆಂಟ್ ಮೈಲೇಜ್ ವಿಚಾರದಲ್ಲೂ ಇದನ್ನು ಕಾಯ್ದುಕೊಂಡಿದೆ.

11. ಹ್ಯುಂಡೈ ಗ್ರಾಂಡ್ ಐ10

11. ಹ್ಯುಂಡೈ ಗ್ರಾಂಡ್ ಐ10

ಇಂಧನ ವಿಧ: ಡೀಸೆಲ್

ಮೈಲೇಜ್: 24 kmpl

ಕೆಲವು ತಿಂಗಳುಗಳ ಹಿಂದೆಯಷ್ಟೇ ಹ್ಯುಂಡೈ ಗ್ರಾಂಡ್ ಐ10 ಭಾರತ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿತ್ತು. ಈ ಮೂಲಕ ಗ್ರಾಹಕ ಮೆಚ್ಚುಗೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

12. ಟೊಯೊಟಾ ಎಟಿಯೋಸ್ ಕ್ರಾಸ್

12. ಟೊಯೊಟಾ ಎಟಿಯೋಸ್ ಕ್ರಾಸ್

ಇಂಧನ ವಿಧ: ಡೀಸೆಲ್

ಮೈಲೇಜ್: 23.6 kmpl

ಟೊಯೊಟಾದ ಮೊದಲ ಕ್ರಾಸೋವರ್ ಮಾದರಿಯಾಗಿರುವ ಎಟಿಯೋಸ್ ಕ್ರಾಸ್ ಕೇವಲ ಡಿಸೈನ್ ವಿಚಾರದಲ್ಲಿ ಮಾತ್ರವಲ್ಲದೆ ಇಂಧನ ಕ್ಷಮತೆಯಲ್ಲೂ ಮೇಲುಗೈ ಸಾಧಿಸಿದೆ.

13. ಟೊಯೊಟಾ ಎಟಿಯೋಸ್

13. ಟೊಯೊಟಾ ಎಟಿಯೋಸ್

ಇಂಧನ ವಿಧ: ಡೀಸೆಲ್

ಮೈಲೇಜ್: 23.6 kmpl

14. ಟೊಯೊಟಾ ಲಿವಾ

14. ಟೊಯೊಟಾ ಲಿವಾ

ಇಂಧನ ವಿಧ: ಡೀಸೆಲ್

ಮೈಲೇಜ್: 23.6 kmpl

ಮೈಲೇಜ್ ಬೇಟೆ; ಅಗ್ರ ಮಾರುತಿಯನ್ನೇ ಹಿಂದಿಕ್ಕಿದ ಹೋಂಡಾ

ಮೇಲೆ ಕೊಟ್ಟಿರುವ ಟಾಪ್ 15 ಪಟ್ಟಿಯಲ್ಲಿ ಒಂದೇ ಒಂದು ಮಾರುತಿ ಕಾರುಗಳು ಸ್ಥಾನ ಗಿಟ್ಟಿಸಿಕೊಳ್ಳದಿರುವುದು ನಿಜಕ್ಕೂ ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗಿನ ಮಾರುತಿ ಕಾರುಗಳು ಹೆಚ್ಚಿನ ಮೈಲೇಜ್ ನೀಡಲು ಶಕ್ತವಾಗಿದ್ದರೂ ಮೇಲೆ ತಿಳಿಸಲಾದ ಮಾದರಿಗಳನ್ನು ಮೀರಿಸಲು ಸಾಧ್ಯವಾಗಿಲ್ಲ ಎಂಬುದು ಕಟುಸತ್ಯ.

ಮೈಲೇಜ್ ಬೇಟೆ; ಅಗ್ರ ಮಾರುತಿಯನ್ನೇ ಹಿಂದಿಕ್ಕಿದ ಹೋಂಡಾ

ಮೈಲೇಜ್ ಕಾರುಗಳು - ಟಾಪ್ 15 ಪಟ್ಟಿ ಇಂತಿದೆ


Most Read Articles

Kannada
English summary
Maruti cars have been knocked off the list of most fuel efficient cars in India, according to a report published by ET. After several years of the Alto being the car that delivered the most mileage (more than a decade), it has been overthrown by sedans from the stables of Honda, the City and the Amaze.
Story first published: Tuesday, June 24, 2014, 10:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X