ಹೋಂಡಾ 4ನೇ ತಲೆಮಾರಿನ ಸಿಟಿ ಆಗಮನಕ್ಕೆ ರೆಡಿ

Written By:

ಹೋಂಡಾ ಪಾಲಿಗೆ ಅತಿ ಹೆಚ್ಚು ಯಶಸ್ಸನ್ನು ತಂದಿಕ್ಕಿರುವ ಸಿಟಿ ಸೆಡಾನ್ ಕಾರಿನ ನಾಲ್ಕನೇ ತಲೆಮಾರಿನ ಆವೃತ್ತಿ ಮುಂದಿನ ತಿಂಗಳಲ್ಲಿ ಅನಾವರಣ ಕಾಣಲಿದೆ. ನೂತನ ಸಿಟಿ ಕಾರು ತಾಜಾ ಗರಿಗರಿಯಾದ ವಿನ್ಯಾಸ ಪಡೆದುಕೊಂಡಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಆವೃತ್ತಿಗಿಂತಲೂ ದೊಡ್ಡದಾಗಿರಲಿದೆ.

ಹಾಗೆಯೇ ಹೆಚ್ಚಿನ ಪ್ರೀಮಿಯಂ ವೈಶಿಷ್ಟ್ಯಗಳನ್ನು ನೂತನ ಸಿಟಿ ಸೆಡಾನ್ ಕಾರು ಹೊಂದಿರಲಿದೆ. ಅಂದರೆ ಇದು ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಹ್ಯುಂಡೈ ವರ್ನಾಗೆ ನೇರ ಪ್ರತಿಸ್ಪರ್ಧಿ ಎನಿಸಿಕೊಳ್ಳಲಿದೆ.

To Follow DriveSpark On Facebook, Click The Like Button
ಹೋಂಡಾ 4ನೇ ತಲೆಮಾರಿನ ಗರಿಗರಿಯಾದ ಸಿಟಿ ಆಗಮನಕ್ಕೆ ರೆಡಿ

ನೂತನ ಸಿಟಿ ಸೆಡಾನ್ ಕಾರು ಡೀಸೆಲ್ ವೆರಿಯಂಟ್‌ಗಳಲ್ಲಿ ಲಭಿಸಲಿದೆ ಎಂಬುದೇ ಕಾರು ಪ್ರೇಮಿಗಳನ್ನು ಅತಿ ಹೆಚ್ಚು ಉತ್ಸಾಹಕ್ಕೆ ಕಾರಣವಾಗಿದೆ. ಅಂದರೆ ಹೋಂಡಾ ಅಮೇಜ್ ಯಶಸ್ಸನ್ನು ಸಿಟಿ ಸೆಡಾನ್ ಹಿಂಬಾಲಿಸಲಿದೆ. ಹೋಂಡಾ ಅಮೇಜ್ ಈಗಾಗಲೇ 35,000 ಯುನಿಟ್‌ಗಳನ್ನು ಮಾರಾಟಗೈದಿದೆ.

ಹೋಂಡಾ 4ನೇ ತಲೆಮಾರಿನ ಗರಿಗರಿಯಾದ ಸಿಟಿ ಆಗಮನಕ್ಕೆ ರೆಡಿ

ನಾಲ್ಕನೇ ತಲೆಮಾರಿನ ಹೋಂಡಾ ಸಿಟಿ ಸೆಡಾನ್ ಕಾರು ಆರರಿಂದ ಎಂಟು ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ಅಂದರೆ ಇದು 1.5 ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ಗಳು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ವಿ.ಸೂ: ಸಾಂದರ್ಭಿಕ ಚಿತ್ರ ಬಳಕೆ (ಹೋಂಡಾ ಕ್ರೈಡರ್)

ಹೋಂಡಾ 4ನೇ ತಲೆಮಾರಿನ ಗರಿಗರಿಯಾದ ಸಿಟಿ ಆಗಮನಕ್ಕೆ ರೆಡಿ

ನೂತನ ಸಿಟಿ ಕಾರು ಜಾಝ್ ಹ್ಯಾಚ್‌ಬ್ಯಾಕ್ ಫ್ಲ್ಯಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿದೆ. ಹಾಗೆಯೇ ಸಿ ಸೆಗ್ಮೆಂಟ್ ಗ್ರಾಹಕರನ್ನು ಹೆಚ್ಚು ಆಕರ್ಷಿಸುವ ನಿಟ್ಟಿನಲ್ಲಿ ಫ್ಯೂಯಿಡಿಕ್ ವಿನ್ಯಾಸಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ.

ವಿ.ಸೂ: ಸಾಂದರ್ಭಿಕ ಚಿತ್ರ ಬಳಕೆ (ಹೋಂಡಾ ಕ್ರೈಡರ್)

ಹೋಂಡಾ 4ನೇ ತಲೆಮಾರಿನ ಗರಿಗರಿಯಾದ ಸಿಟಿ ಆಗಮನಕ್ಕೆ ರೆಡಿ

ಶುಭ್ರವಾದ ಹೆಡ್‌ಲ್ಯಾಂಪ್ ಜತೆಗೆ ಪ್ರೊಜೆಕ್ಟರ್ ಲ್ಯಾಂಪ್ ಕಾರಿಗೆ ಸ್ವಚ್ಛ ನೋಟ ಒದಗಿಸುತ್ತದೆ. ಹಾಗೆಯೇ ಹಿಂದುಗಡೆಯ ಎಲ್‌ಇಡಿ ಟೈಲ್ ಲೈಟ್ಸ್ ಪರಿಷ್ಕೃತಗೊಳಿಸಲಾಗಿದೆ. ಇನ್ನು ಹಿಂದಿನ ಆವೃತ್ತಿಗಿಂತಲೂ ದೊಡ್ಡದಾದ ಗಾತ್ರ ಪಡೆದುಕೊಳ್ಳಲಿದೆ.

ವಿ.ಸೂ: ಸಾಂದರ್ಭಿಕ ಚಿತ್ರ ಬಳಕೆ (ಹೋಂಡಾ ಕ್ರೈಡರ್)

ಹೋಂಡಾ 4ನೇ ತಲೆಮಾರಿನ ಗರಿಗರಿಯಾದ ಸಿಟಿ ಆಗಮನಕ್ಕೆ ರೆಡಿ

ಹಾಗಿದ್ದರೂ ಇದುವರೆಗೆ ಬಿಡುಗಡೆ ದಿನಾಂಕ ಬಗ್ಗೆ ಯಾವುದೇ ಮಾಹಿತಿಗಳನ್ನು ಹೋಂಡಾ ಕಾರ್ಸ್ ಹಂಚಿಲ್ಲ. ಹಾಗಿದ್ದರೂ 2014ರಲ್ಲಿ ಭಾರತ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ.

ವಿ.ಸೂ: ಸಾಂದರ್ಭಿಕ ಚಿತ್ರ ಬಳಕೆ (ಹೋಂಡಾ ಕ್ರೈಡರ್)

English summary
Japanese car maker Honda will unveil the fourth-generation of the City sedan by next month, says reports.
Story first published: Wednesday, October 30, 2013, 12:21 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark