ಅಧ್ಯಯನ ವರದಿ ಓದಿ: ಗುಣಮಟ್ಟದಲ್ಲಿ ಯಾವ ಕಾರು ಶ್ರೇಷ್ಠ?

By Nagaraja

ಪ್ರತಿಯೊಬ್ಬ ಕಾರು ಖರೀದಿ ಗ್ರಾಹಕರಲ್ಲೂ ಗುಣಮಟ್ಟತೆಯಲ್ಲಿ ಶ್ರೇಷ್ಠವಾಗಿರುವ ಕಾರನ್ನೇ ಖರೀದಿಸಬೇಕೆಂಬ ಹಂಬಲ ಹೊಂದಿರುತ್ತಾರೆ. ಅಂಥವರಿಗೆ ಈ ಲೇಖನ ತುಂಬಾನೇ ಉಪಯುಕ್ತವಾಗಲಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಯಾಕೆಂದರೆ ಜೆ.ಡಿ. ಪವರ್ ದೇಶದಲ್ಲಿ ನಡೆಸಿರುವ ಪ್ರಾರಂಭಿಕ ಗುಣಮಟ್ಟ ಅಧ್ಯಯನದಲ್ಲಿ (ಐಕ್ಯೂಎಸ್) ಗ್ರಾಹಕರ ಶ್ರೇಷ್ಠ ಕಾರುಗಳನ್ನು ಆಯ್ಕೆ ಮಾಡಲಾಗಿದೆ. ಪ್ರಸ್ತುತ ಅಧ್ಯಯನ ಗ್ರಾಹಕರು ಕೊಳ್ಳುವ ಮಾದರಿಯನ್ನು ಅನುಸರಿಸಿ ವಾಹನದ ಗುಣಮಟ್ಟದ ಪರಿಮಾಣವನ್ನು ಅಳೆಯಲಾಗುತ್ತದೆ.

ಕಾರು ಖರೀದಿಗೆ ಉಪಯುಕ್ತ ಮಾಹಿತಿ ಬೇಕೇ?

2013 ನವೆಂಬರ್‌ನಿಂದ 2013ರ ಜುಲೈ ವರೆಗೆ ಕಾರು ಖರೀದಿ ಮಾಡಿದ 9,070 ಮಾಲಿಕರನ್ನು ಆಧಾರವಾಗಿಟ್ಟುಕೊಂಡು ಈ ಅಧ್ಯಯನ ವರದಿ ತಯಾರಿಸಲಾಗಿದೆ. ದೇಶದ 25 ನಗರಗಳಲ್ಲಾಗಿ ನಡೆಸಲಾದ ಈ ಅಧ್ಯಯನ ವರದಿಯಲ್ಲಿ 17 ಕಾರು ತಯಾರಕ ಸಂಸ್ಥೆಗಳ ಒಟ್ಟು 74 ಮಾಡೆಲ್‌ಗಳು ಸೇರಿವೆ. ಹಾಗಿದ್ದರೆ ಬನ್ನಿ ವಿವಿಧ ಸೆಗ್ಮೆಂಟ್‌ಗಳ ಶ್ರೇಷ್ಠ ಕಾರುಗಳ ಬಗ್ಗೆ ಮಾಹಿತಿ ಪಡೆಯೋಣವೇ? ಕೆಳಗಡೆ ಕೊಡಲಾಗಿರುವ ಸ್ಲೈಡರ್‌ನಲ್ಲಿ ಪ್ರತಿ ಸೆಗ್ಮೆಂಟ್‌ನ ಟಾಪ್ 3 ಪಟ್ಟಿ ಕೊಡಲಾಗಿದೆ.

ಎಂಟ್ರಿ ಲೆವೆಲ್ ಕಾಂಪಾಕ್ಟ್ ಕಾರು

ಎಂಟ್ರಿ ಲೆವೆಲ್ ಕಾಂಪಾಕ್ಟ್ ಕಾರು

  • ಮಾರುತಿ ಸುಜುಕಿ ಆಲ್ಟೊ 800
  • ಹ್ಯುಂಡೈ ಇಯಾನ್
  • ಟಾಟಾ ನ್ಯಾನೋ
  • ಕಾಂಪಾಕ್ಟ್ ಕಾರು

    ಕಾಂಪಾಕ್ಟ್ ಕಾರು

    • ಹ್ಯುಂಡೈ ಸ್ಯಾಂಟ್ರೊ (ಸತತ ಎರಡನೇ ಬಾರಿಗೆ)
    • ಮಾರುತಿ ಸುಜುಕಿ ಎ ಸ್ಟಾರ್
    • ಮಾರುತಿ ಸುಜುಕಿ ಎಸ್ಟಿಲೊ
    • ಅಪ್ಪರ್ ಕಾಂಪಾಕ್ಟ್ ಕಾರ್ ಸೆಗ್ಮೆಂಟ್

      ಅಪ್ಪರ್ ಕಾಂಪಾಕ್ಟ್ ಕಾರ್ ಸೆಗ್ಮೆಂಟ್

      • ಹೋಂಡಾ ಬ್ರಿಯೊ
      • ನಿಸ್ಸಾನ್ ಮೈಕ್ರಾ
      • ಮಾರುತಿ ಸುಜುಕಿ ರಿಟ್ಜ್
      • ಪ್ರೀಮಿಯಂ ಕಾಂಪಾಕ್ಟ್ ಕಾರು

        ಪ್ರೀಮಿಯಂ ಕಾಂಪಾಕ್ಟ್ ಕಾರು

        • ಮಾರುತಿ ಸುಜುಕಿ ಸ್ವಿಫ್ಟ್
        • ಫೋಕ್ಸ್‌ವ್ಯಾಗನ್ ಪೊಲೊ
        • ಹ್ಯುಂಡೈ ಐ20
        • ಎಂಟ್ರಿ ಮಿಡ್‌ಸೈಜ್ ಕಾರು ಸೆಗ್ಮೆಂಟ್

          ಎಂಟ್ರಿ ಮಿಡ್‌ಸೈಜ್ ಕಾರು ಸೆಗ್ಮೆಂಟ್

          • ಹೋಂಡಾ ಅಮೇಜ್
          • ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್
          • ಟೊಯೊಟಾ ಇಟಿಯೋಸ್
          • ಮಿಡ್ ಸೈಜ್ ಕಾರು ಸೆಗ್ಮೆಂಟ್

            ಮಿಡ್ ಸೈಜ್ ಕಾರು ಸೆಗ್ಮೆಂಟ್

            • ಹೋಂಡಾ ಸಿಟಿ
            • ಫೋಕ್ಸ್‌ವ್ಯಾಗನ್ ವೆಂಟೊ
            • ಸ್ಕೋಡಾ ರಾಪಿಡ್
            • ಪ್ರೀಮಿಯಂ ಮಿಡ್ ಸೈಜ್ ಸೆಡಾನ್

              ಪ್ರೀಮಿಯಂ ಮಿಡ್ ಸೈಜ್ ಸೆಡಾನ್

              • ಟೊಯೊಟಾ ಕರೊಲ್ಲಾ ಆಲ್ಟೀಸ್
              • ಷೆವರ್ಲೆ ಕ್ರೂಜ್
              • ಹ್ಯುಂಡೈ ಎಲಂಟ್ರಾ
              • ಎಯುವಿ/ಎಂಪಿವಿ ಸೆಗ್ಮೆಂಟ್

                ಎಯುವಿ/ಎಂಪಿವಿ ಸೆಗ್ಮೆಂಟ್

                • ಟೊಯೊಟಾ ಇನ್ನೋವಾ
                • ಮಾರುತಿ ಸುಜುಕಿ ಎರ್ಟಿಗಾ
                • ಮಹೀಂದ್ರ ಕ್ಸೈಲೋ
                • ಎಸ್‌ಯುವಿ ಸೆಗ್ಮೆಂಟ್

                  ಎಸ್‌ಯುವಿ ಸೆಗ್ಮೆಂಟ್

                  • ಟೊಯೊಟಾ ಫಾರ್ಚುನರ್
                  • ರೆನೊ ಡಸ್ಟರ್
                  • ಮಹೀಂದ್ರ ಸ್ಕಾರ್ಪಿಯೊ
                  • ಇತರ ಗಮನಾರ್ಹ ಅಂಶಗಳು:

                    ಇತರ ಗಮನಾರ್ಹ ಅಂಶಗಳು:

                    • ಕ್ರಮೇಣ ಭಾರತದ ವಾಹನ ಖರೀದಿಗಾರರು ಹೆಚ್ಚಿನ ಗುಣಮಟ್ಟದ ಬ್ರಾಂಡ್‌ಗಳಿಗೆ ಸ್ಥಾನಾಂತರ ಮಾಡಿಕೊಳ್ಳುತ್ತಾರೆ.
                    • ಭಾರತದಲ್ಲಿ ಹೊಸ ವಾಹನ ಖರೀದಿದಾರರು ಹೆಚ್ಚಾಗಿ ಕಡಿಮೆ ಪ್ರಾರಂಭಿಕ ಗುಣಮಟ್ಟದ ಸಮಸ್ಯೆ ವಾಹನಗಳನ್ನು ಖರೀದಿಸಲು ಇಷ್ಟಪಡುತ್ತಾರೆ.
                    • ಒಟ್ಟಾರೆಯಾಗಿ ಪ್ರಾರಂಭಿಕ ಗುಣಮಟ್ಟತೆಯಲ್ಲಿ ಭಾರತ ವರ್ಧನೆ ದಾಖಲಿಸಿದೆ.

Most Read Articles

Kannada
English summary
Honda, Toyota, Hyundai and Maruti Suzuki. These four names have earned the top spot in the 17th annual J.D. Power 2013 India Initial Quality Study. The study is conducted to gauge the effect of vehicle quality on customers' buying pattern.
Story first published: Tuesday, December 3, 2013, 10:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X