ವಿಶ್ವದ ಅತಿ ದುಬಾರಿ ಕಾರು- ಲಂಬೊರ್ಗಿನಿ ವೆನನೊ ರೊಡ್‌ಸ್ಟರ್

Posted By:

ಇಟಲಿ ಮೂಲದ ಸೂಪರ್ ಕಾರು ತಯಾರಕ ಸಂಸ್ಥೆಯಾದ ಲಂಬೊರ್ಗಿನಿ, ವಿಶ್ವದ ಅತಿ ದುಬಾರಿ ಕಾರನ್ನು ಲಾಂಚ್ ಮಾಡಿದೆ. ಆಕ್ರಮಣಕಾರಿ ವಿನ್ಯಾಸ ಹೊಂದಿರುವ ಈ ಸೂಪರ್ ಕಾರಿನ ಬೆಲೆ ಬರೋಬ್ಬರಿ 33 ಕೋಟಿ ( £3.36 million) ರುಪಾಯಿಗಳಾಗಿವೆ.

ಪ್ರಮುಖ ಅಂಶಗಳು:

  • ಕೇವಲ 3 ಸೆಕೆಂಡುಗಳಲ್ಲಿ ಗಂಟೆಗೆ 100 ಕೀ.ಮೀ. ವೇಗವರ್ಧನೆ,
  • ಈ ಹೈಪರ್ ಕಾರಿನಲ್ಲಿ 750 ಅಶ್ವಶಕ್ತಿ ಉತ್ಪಾದಿಸುವ 6.5 ಲೀಟರ್ ವಿ12 ಎಂಜಿನ್ ಬಳಕೆ,
  • ರಸ್ತೆಯಲ್ಲಿ ಓಡಾಡುವ ರೇಸ್ ಕಾರು ರೀತಿಯಲ್ಲಿ ವಿನ್ಯಾಸ ರೂಪಿಸಲಾಗಿದೆ.

ಇನ್ನು ತಯಾರಕರಿಗೆ ಈ ಟಾಪ್ ಲೆಸ್ ಸುಂದರಿಯ ರೈಡಿಂಗ್ ಅನುಭವದ ಬಗ್ಗೆ ವರ್ಣಿಸಲು ಪದಗಳೇ ಸಿಗುತ್ತಿಲ್ಲ. ಅಲ್ಲದೆ ರಸ್ತೆಯಲ್ಲಿ ಓಡಾಡುವ ಕಾರಿನ ಎಲ್ಲ ಫೀಚರ್‌ಗಳೊಂದಿಗೆ ಇದನ್ನು ಅಭಿವೃದ್ಧಿಪಡಿಸಿರುವುದು ಇನ್ನೊಂದು ಪ್ರಮುಖ ಅಂಶವಾಗಿದೆ.

ವಿಶ್ವದ ಅತ್ಯಂತ ದುಬಾರಿ ಕಾರು- ಲಂಬೊರ್ಗಿನಿ ವೆನನೊ ರೊಡ್‌ಸ್ಟರ್

33 ಕೋಟಿ ರು.ಗಿಂತಲೂ ಹೆಚ್ಚು ಬೆಲೆಬಾಳುವ ಜಗತ್ತಿನ ಅತಿ ದುಬಾರಿ ಲಂಬೊರ್ಗಿನಿ ವೆನನೊ ರೋಡ್‌ಸ್ಟರ್ ಹೈಪರ್ ಕಾರು ಸೀಮಿತ ಆವೃತಿಗಳಲ್ಲಿ ಮಾತ್ರ ಲಭ್ಯವಿರಲಿದೆ.

ವಿಶ್ವದ ಅತ್ಯಂತ ದುಬಾರಿ ಕಾರು- ಲಂಬೊರ್ಗಿನಿ ವೆನನೊ ರೊಡ್‌ಸ್ಟರ್

ಲಂಬೊರ್ಗಿನಿಯ 50ನೇ ವರ್ಷಾಚರಣೆ ಅಂಗವಾಗಿ ವಿಶ್ವದ ಅತಿ ದುಬಾರಿ ಕಾರನ್ನು ಲಾಂಚ್ ಮಾಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 4 ಮಾದರಿಗಳನ್ನಷ್ಟೇ ಹಸ್ತಾಂತರಿಸಲಾಗುವುದು. ಅಂದ ಹಾಗೆ ಒಟ್ಟು 9 ಸೀಮಿತ ಆವೃತ್ತಿಗಳು ಮಾತ್ರ ಲಭ್ಯವಾಗಲಿದೆ.

ವಿಶ್ವದ ಅತ್ಯಂತ ದುಬಾರಿ ಕಾರು- ಲಂಬೊರ್ಗಿನಿ ವೆನನೊ ರೊಡ್‌ಸ್ಟರ್

ಇನ್ನು ಗಂಟೆಗೆ 221 ಮೇಲ್ ಕೀ.ಮೀ. ವೇಗತೆಯಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುವ ಲಂಬೊರ್ಗಿನಿ ವೆನನೊ ಫೈಟರ್ ಜೆಟ್ (ಯುದ್ಧ ವಿಮಾನ) ವಿನ್ಯಾಸವನ್ನು ಪಡೆದುಕೊಂಡಿದೆ.

ಲಂಬೊರ್ಗಿನಿ ಸೂಪರ್ ಕಾರು ಅಂಕಿಯಲ್ಲಿ...

ಲಂಬೊರ್ಗಿನಿ ಸೂಪರ್ ಕಾರು ಅಂಕಿಯಲ್ಲಿ...

  • ಎಂಜಿನ್: 6.5 ಲೀಟರ್ V12 ಎಂಜಿನ್, 750 ಅಶ್ವಶಕ್ತಿ,
  • 0-62mph (100kph): 2.9 ಸೆಕೆಂಡು,
  • ಗರಿಷ್ಠ ವೇಗತೆ: 220mph,
  • ಭಾರ: 1,490kg,
  • ನಿರ್ಮಾಣ ಸಂಖ್ಯೆ: 9,
  • ದರ : 33 ಕೋಟಿ. (£3.36 ಮಿಲಿಯನ್)
ವಿಶ್ವದ ಅತ್ಯಂತ ದುಬಾರಿ ಕಾರು- ಲಂಬೊರ್ಗಿನಿ ವೆನನೊ ರೊಡ್‌ಸ್ಟರ್

ಇದರ ದರ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ದೊರಕುವ ಲಂಬೊರ್ಗಿನಿ ಅವೆಂಟಡೊರ್ ಕಾರಿಗಿಂತಲೂ ಹತ್ತು ಪಟ್ಟು ಹೆಚ್ಚಾಗಿದೆ.

ವಿಶ್ವದ ಅತ್ಯಂತ ದುಬಾರಿ ಕಾರು- ಲಂಬೊರ್ಗಿನಿ ವೆನನೊ ರೊಡ್‌ಸ್ಟರ್

ಸಾರ್ವಕಾಲಿಕ ಅತ್ಯಂತ ಅಸಾಧಾರಣ ಸೂಪರ್ ಸ್ಪೋರ್ಟ್ಸ್ ಕಾರುಗಳ ಪಟ್ಟಿಗೆ ಸೇರಿರುವ ಲಂಬೊರ್ಗಿನಿ ವೆನನೊ ರೊಡ್‌ಸ್ಟರ್, ಅದ್ಭುತ ರೈಡಿಂಗ್ ಅನುಭವವನ್ನು ನೀಡುತ್ತದೆ.

ವಿಶ್ವದ ಅತ್ಯಂತ ದುಬಾರಿ ಕಾರು- ಲಂಬೊರ್ಗಿನಿ ವೆನನೊ ರೊಡ್‌ಸ್ಟರ್

ನಇನ್ನು ವಿನ್ಯಾಸದ ಬಗ್ಗೆ ಮಾತನಾಡುವುದಾದ್ದಲ್ಲಿ, ಇಂದೊಂದು ಓಪನ್ ಟಾಪ್ ಕಾರಾಗಿದೆ. ಅಂದರೆ ಮೇಲ್ಗಡೆ ರೂಫ್ ಇರುವುದಿಲ್ಲ. ಹಾಗೆಯೇ ಏರೋಡೈನಾಮಿಕ್ ವಿನ್ಯಾಸದತ್ತ ಗಮನ ಹರಿಸಲಾಗಿದೆ.

ವಿಶ್ವದ ಅತ್ಯಂತ ದುಬಾರಿ ಕಾರು- ಲಂಬೊರ್ಗಿನಿ ವೆನನೊ ರೊಡ್‌ಸ್ಟರ್

ಹಾಗೆಯೇ ಇದರ 6.5 ಲೀಟರ್ ಎಂಜಿನ್ ಹಾಗೂ ಸೂಪರ್ ಫಾಸ್ಟ್ ಗೇರ್ ಬಾಕ್ಸ್ ಎಲ್ಲ ನಾಲ್ಕು ಚಕ್ರಗಳಿಗೂ ಪವರ್ ವರ್ಗಾಯಿಸಲು ನೆರವಾಗಲಿದೆ.

English summary
Lamborghini unveiled the world’s most expensive car - a super-aggressive model costing a staggering £3.36 million.
Please Wait while comments are loading...

Latest Photos